ಮಂಜುಳಾ ಪಾಶಾಂಕುಶದ ರಂಜಿತವರ ಬಾಹುದಂಡಮಂಜುಳಹಾರ ಕೇಯೂರಾದಿಭೂಷಮೌಂಜಿ ಕೃಷ್ಣಾಜಿನಧರನಿತ್ಯತೋಷಕಂಜ ಬಾಂಧವ ಶತರೂಪಿಸಂಕಾಶಕುಂಜರವದನಾ ಹಸೆಗೇಳು 1
ಪಾದ ಪಯೋಜರಾವಣಾಸುರಗರ್ವಹರ ಗಾನಲೋಲಪಾವನತರಸುರಕಾರ್ಯಾನುಕೂಲಗ್ರಾವತನೂಜೆಯ ಪ್ರೇಮದ ಬಾಲಶ್ರೀ ವಿಘ್ನರಾಜ ಹಸೆಗೇಳು 2
ಸೂರ್ಯ ಸು-ತ್ರಾಮಾಚ್ಯುತ ಚಂದ್ರ ವಂದ್ಯಹೇಮಾದ್ರಿಸನ್ನಿಭ ಕೋಮಲಗಾತ್ರರಾಮಣೀಯಕ ಕಾಂಚನಯಜ್ಞ ಸೂತ್ರಸೋಮಶೇಖರನ ಸಮ್ಮೋಹದ ಪುತ್ರಶ್ರೀಮದ್ಗಣೇಶ ಹಸೆಗೇಳು 3
ಕಾಮಕರ್ಮಾತೀತ ಸನ್ಮುನಿಜಾಲ ಮಾನಸರಾಜಹಂಸಬಾಲಾರ್ಕಶತರೂಪಿಕಾಂತಿ ಶರೀರಸ್ಥೂಲಕಂಧರ ದುಃಖದುರಿತವಿದೂರಫಾಲಲೋಚನ ಚಂದ್ರಗರ್ವಾಪಹಾರಬಾಲವಟುರೂಪ ಹಸೇಗೇಳು4
ಸಂತತ ಬಹುವಿಧಲೀಲಾಸಂತತ ಮುದಿತಾದ್ರಿಬಾಲಾಅಂತರಹಿತ ಶುಭಗುಣಗಣಸಾಂದ್ರದಂತದೀಧಿತಿನಿರ್ಜಿತಶರಶ್ಚಂದ್ರಕಾಂತವಿಗ್ರಹವಿಪದದ್ರಿಮಹೇಂದ್ರಚಿಂತಿತಾರ್ಥಪ್ರದನೇ ಹಸೆಗೇಳು 5