ಪಯಸಾಗರ ಶಯನನೆ ಭಜಿಪೆನು ನಿನ್ನ
ಭವಸಾಗರದಾಟಿಸು ಶ್ರೀಹರಿ ಎನ್ನ ಪ.
ಹಿಂದೆ ಮುಂದೆ ಗತಿ ನೀನೆಂದು ನಂಬಿರುವೆ
ಇಂದಿರೆಯರಸನೆ ಎಂದಿಗಾದರು ಕಾಯೊ ತಂದೆ
ಬಂದು ಎನ್ನ ಬಂಧನ ಬಿಡಿಸೊ 1
ಕರುಣಾಸಾಗರ ವರದಮೂರುತಿ ನಿನ್ನ
ಸ್ಮರಣೆಯೆನಗೆ ನೀ ನಿರುತದಿ ನುಡಿಸು
ಪರಮಪಾಮರನಿಗೆ ನಿನ್ನ ಚರಣವ ತೋರೊ 2
ಪುಟ್ಟಿಸಿದವನೀ ಕಷ್ಟ ಪಡಿಸುವುದು
ಇಷ್ಟವೆ ನಿನಗದು ಕೃಷ್ಣಮೂರುತಿ
ಸೃಷ್ಟೀಶ ಶ್ರೀ ಶ್ರೀನಿವಾಸ ದೊರೆಯೆ 3