ಒಟ್ಟು 53 ಕಡೆಗಳಲ್ಲಿ , 26 ದಾಸರು , 52 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಮ್ಮೆಯಾ ಬಿಡು ಬಿಡು ಮನುಜಾ ಪ ಬೊಮ್ಮ ದೂರ್ವಾಸಾದಿಗಳೆಲ್ಲಾ | ಸುಮ್ಮನೆ ತಲೆವಾಗಿ ಹೋದರೆಂಬುದ ಕೇಳಿ ಅ.ಪ ಕಡಲೊಳು ಕುಳಿತಿಹ ಬಕದಾಲ್ಭ್ಯನೊಳು ಗರ್ವ | ನುಡಿಯಲಿ ತಾ ವಾಯು ವಶದಿಂದಲಿ | ತಡಿಯದೆ ಬಹುಮುಖ ಕಮಲಾಸನ ಕಂಡು | ಒಡನೆ ಲಜ್ಜಿತ ಬ್ರಹ್ಮನಾದ ನೆಂಬುದು ಕೇಳಿ 1 ತುಚ್ಛ ಮಾಡಿದ ಇಂದ್ರನೆಂಬ ಗರ್ವದಿ ಬಂದು | ಮತ್ಸರಿಸಲು ಅಂಬೃಷಿಯೊಡನೆ | ಅಚ್ಯುತನಾಯುಧ ಬೆನ್ನಟ್ಟಿ ಬರಲಾಗ | ಹುಚ್ಚಿಟ್ಟು ದೂರ್ವಾಸ ಹೋದನೆಂಬುದ ಕೇಳಿ 2 ಮೇರು ಗಿರಿಯ ಸಮವಾಗಿ ಸೂರ್ಯನ ರಥಾ | ದಾರಿ ಕಟ್ಟುವೆನೆಂದು ಬೆಳೆಯುತಲಿ | ಧೀರಗಸ್ತ್ಯನ ನುಡಿ ಕೇಳಿ ವಿಂದ್ಯಾದ್ರಿ | ಧಾರುಣಿಯೊಳಗೇ ನಾದನೆಂಬುದ ಕೇಳಿ 3 ಯಕ್ಷರಾಕ್ಷಸದೇವ ದ್ವಿಜರೊಳೆಮಗಸಮ | ಕಕ್ಷದಿ ನಿಲುವ ರರೆನುತಾ | ಭಿಕ್ಷುಕ ಯೋಗಿಯನುತಾ ಶಿವನೆಣಿಸದೆ | ದಕ್ಷ ಮನ್ಮಥರೇನಾದರೆಂಬುದ ಕೇಳಿ 4 ನಹುಷಾದಿ ರಾಯರು ಮೂಢ ಪಂಡಿತರೆಲ್ಲಾ | ಬಹುತರು ನಮ್ರವೃತ್ತಿಯ ತ್ಯಜಿಸಿ | ಮಹಿಪತಿಸುತ ಪ್ರಭು ವಲುಮೆಗೆ ದೂರಾಗಿ | ಅಹಂಕಾರ ಬಲಿಯೊಳು ಕೆಟ್ಟರೆಂಬುದ ಕೇಳಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ ಪ ಹೀನ ಯೋನಿಯ ಮುಖದಲಿ ಬಂದು ನಾನಾ ತಾಪತ್ರಯದಿ ಬಹುನೊಂದು ನೀನೆ ಗತಿಯನುತ ಬಂದೆ ನಿಂದು ನಾನು ಭವದಿಂದ ತರಿಸುವ ಉಪಾಯವ ವಂದು 1 ಕೇಳಯ್ಯಾ ನೀ ಕಂದಾ ಹೇಳುವ ನುಡಿ ಗ್ರಹಿಸಲಾನಂದಾ ಆದಿಯಲಿ ದುರ್ಜನ ಸಂಗವಳಿದು ಸಾಧುಜನಸಂಗವನೇ ಬೆರೆದು ಬೋಧೆಯಂದಲಿ ಮನನವ ಬಲಿದು ಸಾಧಕನ ಉದ್ಯೋಗಿಸ ಸಿದ್ಧಿಯಹುದು2 ಸ್ವಾಮಿ ಸಜ್ಜನ ಸಂಗವನೇ ಬಯಸಿ ಪ್ರೇಮದಿರಬೇಕು ಇದೇ ನಿತ್ಯವೆನಿಸಿ ತಾಮತ್ತರ ಘಳಿಗಿಯೊಳು ವಲಿಸಿ ಭ್ರಮಿಸುತಿಹಿದು ಅದು ಏನೆಂದು ವಿಸ್ತರಿಸಿಹೇ3 ಕೇಳಯ್ಯಾ ಲೋಕವೆಲ್ಲಾ ಛಲನೆ ಮಾಡುವುದು ವಿಕಲ್ಲುಳ್ಳದು ನೋಡುಮನವದು ನಾಕು ತೆರದೊಳಿಸಿ ಕೊಳ್ಳಲದು ಬೇಕಾದುದನು ವಸ್ತು ಇದಿರಿಡುತಲಿಹುದು4 ನಳಿನ ಜಪರಾಸುರಗಳಿಗೆ ಛಲಿಸಲಿಕೆ ಮನ ಅಂಗನಿಗೆ ಬಲಿ ವಿಡಿದು ಮೋಹಿಸಿದ ರಾಗ ಇಳಿಯೊಳಗ ವಶಯಂತಹುದು ಮನುಜಗ5 ಕೇಳಯ್ಯಾ ಶುಕನಾರದ ಭೀಷ್ಮರ ನೋಡಾ ವಿಕಳಿಗೊಳ್ಳದೆ ಮನಕೂಡಾ ಸಕಲಗೆದ್ದರು ಅತಿಗಾಢಾ ಯುಕುತಿಲೆ ಮನೊಲಿಕೊವೈರಾಗ್ಯದಿಂದ ಧೃಡಾ6 ಹೇಳೈಯ್ಯಾ ಜ್ಞಾನಸಾಧನವೆಂಬುದನರಿಯೇ ಎನಗೆಂತಹದಿಂತಿದು ಧೋರಿಯೇ ನೀನೇ ತಾರಿಸುದಯದೆನ್ನ ಸಿರಿಯೇ ನಾನು ಎಂದೆಂದು ತವಪಾದಸ್ಮರಣಿ ಮರಿಯೆ7 ಎಂದು ಬಾಗುವ ಕಂದನನು ನೋಡಿ ಕರ ನೀಡಿ ಛಂದದಲಿ ತರಿಪಂತೆ ಮಾಡಿ ಬಂದು ಧನ್ಯ ಗೈಸಿದ ಗುರು ಮಹಿಪತಿ ಕೈಯ್ಯಗೂಡಿ8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
139-2ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಜಯದಾಸರಲಿ ಗೋಪಾಲದಾಸರಲಿನಿಜ ಗುರುಭಕ್ತಿ ವರ್ಧಿಸಿ ಹರಿದಾಸನಿಜಪಂಥದಿ ತನ್ನ ಸೇರಿಸೆ ಅನುಗ್ರಹಿಸೆನಿಜಭಾವದಲಿ ಆಚಾರ್ಯ ಬೇಡಿದರು 1ನರಸಿಂಹ ದಾಸರಾಗಿಹ ತಂದೆಮುಖದಿಂದವರಗಾಯತ್ರಿ ಮಂತ್ರ ಉಪದಿಷ್ಟರಾಗಿವರದೇಂದ್ರರಲಿ ಮೂಲಟೀಕಾದಿ ಗ್ರಂಥಗಳುಮಂತ್ರೋಪದೇಶವು ಕೊಂಡವರು ಮೊದಲೇ 2ಶ್ರೀನಿವಾಸಾಚಾರ್ಯರ ಕೋರಿಕೆಯಮನ್ನಣೆಮಾಡಿದರು ದಾಸಾರ್ಯರುಘನಮಹಾಸಚ್ಛಾಸ್ತ್ರ ತತ್ತ್ವ ವಿಷಯಗಳಕನ್ನಡಮಾತಲ್ಲಿ ಬೋಧಿಸಿದರು 3ಪ್ರಣವಹರಿ ಜಾಗ್ರದಾದ್ಯವಸ್ಥಾ ಪ್ರಣಯನಕೃಷ್ಣರಾಮ ನಾರಸಿಂಹವರಾಹವಿಷ್ಣು ಪರಂಜ್ಯೋತಿ ಪರಂಬ್ರಹ್ಮವಾಸುದೇವಏನೆಂಬೆ ಶ್ರೀಶ ಗುಣಕ್ರಿಯಾ ರೂಪಮಹಿಮೆ 4ಗಾಯತ್ರಿ ನಾಮಆಮ್ನಾಯಗಾಯನ ಮಾಡಿದಯದಿ ಜಗವೆಲ್ಲ ರಕ್ಷಿಸುವ ಸ್ವಾಮಿಹಯಗ್ರೀವ ಗಾಯತ್ರಿ ಮಂತ್ರ ಪ್ರತಿಪಾದ್ಯನುನಾರಾಯಣವಾಸುದೇವವೈಕುಂಠ5ತ್ರಾತಹಯ ಶೀರ್ಷನೆ ಗಾಯತ್ರಿ ನಾಮನುಭೂತಪೂರ್ಣ ವಾಗ್ವಶಿ ಶರೀರವ್ಯಾಪ್ತಪೃಥ್ವಿ ಆಶ್ರಯ ಪ್ರಾಣಾಧಾರ ಹೃದಯನುತ್ರಿಧಾಮ ಪಾದತ್ರಯ ಜಗತ್ಪಾದ ಸದೃಶ 6ಜ್ಞಾನ ಸುಖಬಲಪೂರ್ಣ ಸರ್ವ ಆಧಾರನುದಿನಪತೇಜಃ ಪುಂಜಚೇಷ್ಟಕ ಸ್ಫೂರ್ತಿದನುವನಜಜಾಂಡದ ಸರ್ವಕರ್ತನೂ ದೇವಭಜನೀಯ ಧ್ಯಾತವ್ಯ ಶ್ರೀ ನಾರಾಯಣನು 7ವರ್ಣಗಳು ನಿತ್ಯವು ವರ್ಣಾಭಿಮಾನಿಗಳೊಳ್ವರ್ಣಪ್ರತಿಪಾದ್ಯಹರಿ ಶ್ರೀ ಸಹ ಇಹನುಪೂರ್ಣ ಸುಗುಣಾರ್ಣವನುನಿರ್ದೋಷಸರ್ವಜಗತ್ಜನ್ಮಾದಿ ಕರ್ತನು ನಿಗಮೈಕವೇದ್ಯ 8ಶಬ್ದಗಳು ಸರ್ವವೂ ಮುಖ್ಯ ವೃತ್ತಿಯಲಿಮಾಧವನ್ನಲ್ಲಿಯೇ ವಾಚಕವಾಗಿವೆಯುವೈದಿಕ ಶಬ್ದಗಳು ಹರಿಗೇವೆ ಅನ್ವಯವುಸಂಸ್ತುತ್ಯ ದ್ರಷ್ಟವ್ಯ ಅನುಪಮೈಕಾತ್ಮ 9ಸತ್ಯಜ್ಞಾನಾನಂತಆನಂದಮಯಹರಿಯೆಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯವ್ಯಾಪ್ತನು ಸರ್ವತ್ರ ಸರ್ವದಾ ಸರ್ವಕ್ಕೂಆಧಾರ ಅಕ್ಷರನು ಕ್ಷರಾಕ್ಷರೋತ್ತಮನು 10ರಾಜಿಸುತಿಹ ನಮ್ಮ ದೇಹಾಖ್ಯ ರಥದಲ್ಲಿರಾಜರಾಜೇಶ್ವರನು ಶ್ರೀ ಹ್ರೀ ಸಮೇತಯುವರಾಜ ವಾಯುದೇವನ ಸೇವೆಕೊಳ್ಳುತಿಹರಾಜೀವೇಕ್ಷಣಹರಿಪ್ರಾಣನಾಮ11ಪ್ರಸ್ಥಾನತ್ರಯ ವೈದಿಕಶಾಸ್ತ್ರ ವಿಷಯಗಳುಇತಿಹಾಸಭಾಷಾತ್ರಯಪುರಾಣಗಳುಪ್ರತಿರಹಿತ ಸರ್ವೋತ್ತಮ ಸ್ವಾಮಿ ಶ್ರೀಶನ್ನಚಿಂತಿಸಿ ಕಾಣಲುಬಗೆ ತೋರಿಸುತಿವೆ 12ಆಚರಿಸಿ ಜ್ಞಾನ ಪೂರ್ವಕವಿಹಿತಕರ್ಮಅಚ್ಚಭಕ್ತಿಯಿಂದ ಚಿಂತಿಸಿ ಸ್ತುತಿಸೆಅಚ್ಚುತ ಸ್ವತಂತ್ರನು ಮುಖ್ಯ ಕಾರಣ ವಿಷ್ಣುಪ್ರೋಚ್ಯ ಸುಖವೀವನು ತೋರಿತಾ ಒಲಿದು 13ಮಧ್ವಮತ ಸಿದ್ಧಾಂತ ಪದ್ಧತಿ ಅನುಸರಸಿಸದನು ಸಂಧಾನ ಭಕ್ತಿ ಉನ್ನಾಹದಿಮಾಧವನ ಗುಣಕ್ರಿಯಾ ರೂಪಗಳ ಕೊಂಡಾಡಿಪದವಾಕ್ಯ ಶ್ಲೋಕ ಪದ್ಯಗಳ ನುಡಿಯುವುದು 14ಒಂದೊಂದು ಕೀರ್ತನೆ ಪದ್ಯ ಗ್ರಂಥಗಳಲ್ಲೂಇಂದಿರೇಶನು ತತ್ತತ್ ಪ್ರತಿಪಾದ್ಯ ಇಹನುಪದ್ಯ ಕೀರ್ತನೆ ಗ್ರಂಥ ವಿಷಯ ಶ್ರೀಹರಿಯಮಂತ್ರ ಚಿಂತಿಸಿ ಅರ್ಪಿಸಬೇಕು ರಚನೆ 15ಬೃಹತೀ ಸಹಸ್ರಸ್ವರ ವ್ಯಂಜನಾಕ್ಷರ ವಾಚ್ಯಶ್ರೀಹರಿಅಹರ್ನಿಶಿಕಾಯುವ ದಯಾಳುಅಹರಹ ಸದುಪಾಸ್ಯ ಬ್ರಹ್ಮ ಶಿವ ಈಡ್ಯನುದೇಹ ಒಳಹೊರಗಿಪ್ಪ ಸರ್ವಾಂತರ್ಯಾಮಿ 16ಸ್ವತಃ ಅವ್ಯಕ್ತನು ಸರ್ವದಾ ಸರ್ವತ್ರಸ್ವತಂತ್ರ ಪೂರ್ಣಜ್ಞಾನ ಆನಂದರೂಪಸ್ವಪ್ರಯತ್ನದಿ ಅಲ್ಲ ಮುಮುಕ್ಷುಗಳಿಗಪರೋಕ್ಷಮೋದಮಯ ಶ್ರೀಹರಿಯ ಪ್ರಸಾದದಿಂದಲೇ 17ಜ್ಞಾನಿಗೆ ಪ್ರತ್ಯಕ್ಷ ಹರಿಯ ಅವ್ಯಕ್ತತ್ವಅನ್ಯರಿಗೆ ವೇದ್ಯ ಸೂಕ್ಷ್ಮತ್ವಾನುಮಾನದಿತನ್ಮಾತ್ರ ತೇಜಸ್ಸು ಭೌತಿಕವು ಎಂಬಂಥಅಗ್ನಿಯ ಸೂಕ್ಷ್ಮತ್ವ ಸ್ಥೂಲತ್ವವೋಲ್ಲ 18ಎಲ್ಲೆಲ್ಲೂ ಎಂದೆಂದೂ ಏಕಪ್ರಕಾರದಲ್ಲಿಳಾಳಕನು ಅವ್ಯಕ್ತರೂಪ ಇರುತಿಹನುಇಲ್ಲ ಇವಗೆ ಎಂದೂ ಎಲ್ಲೂ ಪ್ರಾಕೃತರೂಪಒಲಿದು ಕಾಣುವ ತನ್ನ ಇಚ್ಛೆಯಿಂದಲೇ 19ಮೂಲರೂಪದಿ ಸೂಕ್ಷ್ಮತ್ವ ಅವತಾರಗಳಲಿಸ್ಥೂಲತ್ವವೆಂಬುವ ವಿಶೇಷವು ಇಲ್ಲಇಳೆಯಲ್ಲಿ ಕೃಷ್ಣಾದಿ ರೂಪಗಳ ಕಂಡದ್ದುಮಾಲೋಲನಿಚ್ಛೆಯೇ ಪುರುಷಯತ್ನದಿ ಅಲ್ಲ 20ಅರೂಪಮ ಕ್ಷರಂಬ್ರಹ್ಮ ಸದಾವ್ಯಕ್ತಂಆತ್ಮಾವರೇ ದ್ರಷ್ಟವ್ಯ ಎಂದುಈ ರೀತಿ ಅವ್ಯಕ್ತತ್ವ ಅಪರೋಕ್ಷತ್ವಎರಡು ಪೇಳುವಶ್ರುತಿವಿರೋಧವು ಇಲ್ಲ21ಆರಾಧನಾದಿ ಪ್ರಯತ್ನಕ್ಕೂ ಅವ್ಯಕ್ತಉರುಸುಖಮಯಅಪ್ರಾಕೃತಅವಿಕಾರಿಪರಮಪುರುಷ ಹರಿಯ ಇಚ್ಛಾಪ್ರಸಾದದಿಂಅಪರೋಕ್ಷಮೋಕ್ಷಗಳು ಲಭ್ಯಯೋಗ್ಯರಿಗೆ22ವನಜನಾಭನರೂಪಗುಣಮಹಿಮೆಕೇಳಿಅನುಭವಕೆ ಬರುವಂಥ ಮನನ ಸುಧ್ಯಾನಅನಘಹರಿಯಲಿ ಭಕ್ತಿ ಸುಖಬಾಷ್ಪ ಸುರಿಸೆತನ್ನಿಚ್ಚೆಯಿಂದಲೆ ಅಪರೋಕ್ಷವೀವ 23ಬ್ರಹ್ಮಪುರವನರುಹವೇಷ್ಮವ್ಯೋಮಸ್ಥದೇಹ ಸರ್ವಾಂಗಸ್ಥ ಸರ್ವನಾಡಿಸ್ಥಬಹಿರಂತರ ಸರ್ವಮೂರ್ತಾ ಮೂರ್ತಸ್ಥಮಹಾಮಹಿಮ ಹರಿಯು ಸರ್ವತ್ರ ಪ್ರಸಿದ್ಧ 24ಸರ್ವತ್ರ ವ್ಯಾಪ್ತನು ಸತ್ತಾದಿ ದಾತನುಸರ್ವದೊಳು ಸದಾಪೂರ್ಣಅಖಿಳಸಚ್ಛಕ್ತಸರ್ವೇಶ ಸರ್ವಾಧಾರನಾಗಿಹ ಸ್ವಾಮಿದೇವಿ ಲಕ್ಷ್ಮೀರಮಣ ವಿಷ್ಣು ನರಸಿಂಹ 25ಉಗ್ರವೀರನು ಮಹಾವಿಷ್ಣು ತೇಜಃಪುಂಜಸುಪ್ರಕಾಶಿಪ ಸರ್ವತೋಮುಖ ನೃಸಿಂಹಅರಿಗಳಿಗೆ ಭೀಷಣನು ಭಕ್ತರಿಗೆ ಇಷ್ಟಪ್ರದಸಂರಕ್ಷಕ ನಮೋ ಮೃತ್ಯುಗೇ ಮೃತ್ಯು 26ಪ್ರೋದ್ಯರವಿನಿಭದೀಪ್ತ ವರ್ತುಲ ನೇತ್ರತ್ರಯಹಸ್ತದ್ವಯ ಆಜಾನು ಮಹಾಲಕ್ಷ್ಮಿಯುತನುಸುದರ್ಶಿನಿ ಶಂಖಿಯುತ ಕೋಟ್ಯಾರ್ಕಾಮಿತತೇಜಉತ್ಕøಷ್ಟಅಖಿಳಸಚ್ಛಕ್ತ ನರಸಿಂಹ27ಇಂಥಾ ವಿಷಯಗಳ ಜಿಜ್ಞಾಸ ಉಪದೇಶಹಿತಮಾತ ಗೋಪಾಲದಾಸಾರ್ಯರಿಂದಮುದದಿಂದ ಶ್ರೀನಿವಾಸ ಆಚಾರ್ಯರು ಕೊಂಡುಪಾದಕೆರಗಿಹರಿಅಂಕಿತ ಬೇಡಿದರು28ವಾರಿಜಾಸನ ಪಿತನ ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 29- ತೃತೀಯ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಜೋ ಜೋ ಜಾನಕಿ ಜೊ ಚಂದಿರ ಮುಖಿಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ 1ಆದಿಮಾಯಳೆ ವೇದವೇದ್ಯಳೆಆದಿತೇಯನುತೆ ಭೂಮಿಜಾತೆ 2ಮೃಗಮದಗಂಧಿನಿ ಮಾಧುರ್ಯಭಾಷಿಣಿಮಗಳೆ ಜಾನಕಿಯೆ ಕಂಬುಕಂಧರಿಯೇ 3ಕಂಜಲೋಚನಿ ಕಂಜಭವಜನನಿಕುಂಜರಗಮನಿ ಸಂಜೀವನಿ 4ವಾರಿಜನೇತ್ರೆ ವಾಸುವಸ್ತೋತ್ರೆಮಾರಜನನಿ ಲಕ್ಷ್ಮೀನಾರಾಯಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬುತ್ತಿಯ ಕಟ್ಟೊ - ಮನುಜಾ ||ಬುತ್ತಿಯ ಕಟ್ಟೊ ಪ.ಬುತ್ತಿಯನ್ನು ಕಟ್ಟಿದರೆ |ಎತ್ತಲಾದರುಣ್ಣಬಹುದು ಅಪಧರ್ಮವೆಂಬ ಮಡಿಕೆಯಲ್ಲಿ |ನಿರ್ಮಲ ಗಂಗೆಯನುತುಂಬಿ ||ಸುಮ್ಮಾನದಿಂದಲಿ ಬೇಗ |ಒಮ್ಮನಕ್ಕಿಯ ಅನ್ನಬಾಗಿ 1ಅರಿವು ಎಂಬ ಅರಿವೆಯ ಹಾಸಿ |ಗರಿಮೆ ಹಾಲ - ಮೊಸರ ತಳಿದು ||ಪರಮವೈರಾಗ್ಯದಿಂದ |ಸಿರಿಹರಿಗರ್ಪಿತವೆಂದು 2ಕರ್ತು ಪುರಂದರವಿಠಲನ |ತತ್ತ್ವವೆಂಬ ಬುತ್ತಿಯನ್ನು ||ಹತ್ತಿರ ತಂದಿಟ್ಟುಕೊಂಡು |ನಿತ್ಯವುಂಡು ತೃಪ್ತಿಪಡೆಯೊ 3
--------------
ಪುರಂದರದಾಸರು
ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿಆಡಲೇನವ ಆನಂದವಿಹ ಸುಖವಪಬಾಲ ಶಿಶುಲೇಲೆಗಳ ಬಗೆ ಬಗೆಯ ಲಾಲಿಸುತಶೂಲಧರಸುತರೀಗ ಬಂದರೆನುತ್ತಕಾಲು ಕೈ ಮೋರೆಗಳ ತೊಳೆದುಣಿಸಿ ರಕ್ಷಿಸುತಮೂಲೋಕಕೆನ್ನ ಭಾಗ್ಯ ಮಿಗಿಲು ಮಿಗಿಲೆನುತ1ಸತಿವಿನೋದವ ಮಾಡೆ ಸರಸವನೆ ಮಾಡುತ್ತಅತಿ ಆದಿವಸ್ತು ತಾನೀಕೆಯನುತಾಮತಿಭ್ರಾಂತನಾಗದಲೆ ಮಂಗಳನು ತಾನೆನುತಮತಿಯಾಟ ಬ್ರಹ್ಮವಿದು ಇದುವೆ ಎನ್ನುತ್ತ2ಬಡತನವು ಬಂದು ಕಾಡುತ್ತಲಿರೆ ನೋಡುತ್ತದೃಢಬುದ್ಧಿಯಾಗಿ ತಾನೀಗಲಿರುತಬಿಡದೆ ರಕ್ಷಿಪ ವಿಶ್ವಕುಟುಂಬಿಯಹನೆನುತಪಡದೆ ಆಯಾಸ ಸುಖವಾಸಿಯಾಗಿರುತ3ಬಡಿದಾಡುತಿಹ ಗೃಹದ ಜನರುಗಳ ನೋಡುತ್ತಬಿಡು ನಿನ್ನ ಬುದ್ಧಿಯನು ಎಂದು ಹೇಳುತ್ತಕಡೆಗಣಿಸಿದವರ ಅತ್ತಿತ್ತ ಮಾಡುತ್ತಕಡಹನಿಶ್ಚಲದಿಂದ ಮತಿಶಾಂತವಿರುತ4ನಿಂದ್ಯದೂರಪವಾದವನು ಕೇಳುತ್ತಮಂದಶ್ರವಣನೋ ಎಂಬ ತರದಲಿರುತನಿಂದುದೃಢ ಚಿತ್ತದಲಿ ನಿರ್ಲೇಪ ತಾನೆನುತಬಂಧಹರ ಚಿದಾನಂದ ತಾನಾದಗೆನುತ5
--------------
ಚಿದಾನಂದ ಅವಧೂತರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ