ಪರಮಯೋಗಿಯ ನೋಡಿರೊ ನೀವೆಲ್ಲರು |
ಪರಮಯೋಗಿಯ ನೋಡಿರೊ ||
ಪರಮಯೋಗಿಯ ನೋಡಿ ಪ್ರೀತಿವಂತರಾಗಿ |
ನಿರಯವ ಕಳೆದು ಆನಂದ ಬೇಡುವರೆಲ್ಲ ಪ
ವಾನರ ವೇಷವಾಗಿ ಪರ್ವತ ಸೇರಿದಾ |
ಭಾನುನಂದನ ಮನೋಬಯಕಿಯ ಸಲ್ಲಿಸಿ ||
ಏನೆಂಬೆ ಬಲು ಒಂದು ರೂಪವಾಗಿ ತೋರಿ |
ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1
ವಿಷವನುಂಡು ಮೂರು ಲೋಕದೊಳಗೆ ಮೆರೆದು |
ಅಸುರ ಬಕನ ಸೀಳಿ ಧರಿಗೆ ಬಿಸುಟು |
ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು |
ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2
ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ |
ಮತಿಹೀನ ಜನರ ಶಾಸ್ತ್ರವ ಖಂಡಿಸಿ ||
ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ-
ನಿತ್ಯ ಪರಮ 3