ಕಪಟನಾಟಕನೀತ ಕೃಪಾಸಿಂಧು ಸಾಕ್ಷಾತ ಧ್ರುವ
ಸಗುಣ ಸುಪಥ ದೋರಿ ನಿರ್ಗುಣನಾಗಿಹ ಶ್ರೀಹರಿ
ಅಗಣಿತ ಗುಣದೋರುವ ಅನೇಕಾಪರಿ ಜಗದೊಳು ಮುರಾರಿ 1
ಹಿಡಿದೇನೆಂದರೆ ಸಿಲುಕ ಗೂಡಿನೊಳಗೆ ಮಾಡಿಹ್ಯ ಮಲಕ
ನೋಡೇನೆಂದರೆ ಭಕ್ತಿಗೆ ನಿಲುಕ ಒಡಿಯ ಗೋಪಾಲಕ 2
ಕುಲಗಳ್ಳಗೆ ಕೊಡುವ ಮ್ಯಾಲೆ ಹುಯಲು ತಾ ಮಾಡುವ
ಬಲುಖಳ ದೈವ 3
ಭಾಷೆ ಕೊಟ್ಟರೆ ತಪ್ಪ ಋಷಿ ಮುನಿಗಳ ಪಾಲಿಪ
ಭಾಸುತ ಭಕ್ತರ ಹೃದಯದೊಳಗಿಪ್ಪ ಭಾಸ್ಕರ ಸ್ವರೂಪ 4
ಗುಹ್ಯ ಆಗೋಚರ ಸೋಹ್ಯ ತಿಳಿಯಲು ಸಾಕ್ಷಾತ್ಕಾರ
ಇಹಪರ ಸಹಕಾರ 5