ಮಾನವ ಸಿರಿಯು
ನಾಕಪತಿ ಮೊದಲಾದವರಿಗಸ್ಥಿರವು ಪ
ಧನಕನಕ ವಸ್ತುವಾಹನವೊಂದು ಸ್ಥಿರವಲ್ಲ
ಕನಸಿನಂದದಿ ಭಾಳ್ವೆ ಅಭ್ರಮಿಂಚು
ತನುವಿನಲಿ ಹರಿಯ ಸೆರೆವಿಡಿದು ಕೊಂಬುದೆ ರೊಕ್ಕ
ಚಿನುಮಯನ ಪಾಡುವುದೆ ಸಕಲ ಬದುಕು 1
ಇಂದು ನೀನರಿದು ಜ್ಞಾನದಿ ನಡೆವುದೆ ಮೋಕ್ಷ
ಸಿಂಧು ಶಯನನ ನಾಮ ವೈಕುಂಠವೋ
ಕಂದರ್ಪನುಪಟಳವ ಕಟ್ಟುವುದೆ ಕೈಲಾಸ
ಮಂದರ ಧರನ ನೆನೆವುದೆ ಸಕಲವಸ್ತು 2
ಭಕ್ತವತ್ಸಲನ ನೆನವುದೆ ಸಕಲ ಸಂಪತ್ತು
ಚಿತ್ತ ಶುದ್ಧಿಯಾಗುವುದೆ ಸಕಲ ಭಾಗ್ಯ
ಉತ್ತರಿಸಿದರೆ ಭವದಸಕಲಪದವಿ3