ಒಟ್ಟು 56 ಕಡೆಗಳಲ್ಲಿ , 31 ದಾಸರು , 52 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದೆವಯ್ಯ ಶ್ರೀಕೃಷ್ಣಮೂರ್ತಿ ನಿನ್ನ ಸುಂದರಚರಣಾರವಿಂದ ನೋಡುವುದಕ್ಕೆ ಬಂದೆ ಪಮಂದರೋದ್ಧರ ಅರವಿಂದ ನೇತ್ರಗೆ ನಮ್ಮೊ-ಳಿಂದು ಕೃಪೆಯ ತೋರಿ ಸಲಹೋ ಸಚ್ಚಿದಾನಂದ ಅ.ಪಭಾವಸಂವತ್ಸರ ಪೌಷ ಬಹುಳಮವಾಸೆಮಹಾ ದೃಢದಿ ಸಮುದ್ರವ ಸ್ನಾನಗೈದುಆ ವಡಭಾಂಡೇಶ್ವರದಿಂದ ಬಲರಾಮದೇವರ ಕಂಡು ನಾವೆರಗಿ ಕೈಮುಗಿದೀಗ ಬಂದೆ 1ಮಧ್ವಸರೋವರವೆಂಬ ತೀರ್ಥದಿ ಮಿಂದುಶ್ರದ್ಧೆ ಭಕ್ತಿಯೊಳ್ ನಿನ್ನ ಕಂಡು ಬಲಬಂದುಬದ್ಧಾಂಜಲಿಯ ನೀಡಿ ಸ್ಮರಿಸಿ ವಂದನೆಗೈದುಉದ್ಧರಿಸೆಂದು ವರವ ಬೇಡುವದನೀಗ ಬಂದೆ 2ಅಷ್ಟಾವಧಾನ ಸೇವೆಯೊಳು ನಿನ್ನನುಯತಿಶ್ರೇಷ್ಠರು ಪೂಜಿಸಿ ವರವ ನೀಡಿ ಕೊಟ್ಟಮಂತ್ರಾಕ್ಷತೆ ತೀರ್ಥ ಪ್ರಸಾದವ ಪಡೆದುನಮ್ಮಯ ಭವಕಷ್ಟ ನೀಗುವುದಕ್ಕೆ ಬಂದೆ 3
--------------
ಗೋವಿಂದದಾಸ
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು
ಮನುಜ ಶರೀರವಿದೇನು ಸುಖ - ಇದನೆನೆದರೆ ಘೋರವಿದೇನು ಸುಖ ? ಪ.ಜನನ - ಮರಣ ಮಲಕೂಪದಲ್ಲಿದ್ದುಅನುಭವಿಸುವುದು ಇದೇನು ಸುಖ ?ತನುವಿದ್ದಾಗಲೇ ಹೃದಯದ ಶೌಚದಸ್ತನಗಳನುಂಬುವುದೇನು ಸುಖ ? 1ದಿನವು ಹಸಿವುತೃಷೆಘನ ರೋಗಂಗಳಅನುಭವಿಸುವುದು ಇದೇನು ಸುಖನೆನೆಯಲುನಿತ್ಯ ನೀರ್ಗುಳ್ಳೆಯಂತಿಪ್ಪತನುಮಲಭಾಂಡವಿದೇನು ಸುಖ ? 2ಪರಿಪರಿ ವಿಧದಲಿ ಪಾಪವ ಗಳಿಸುತನರಕಕೆ ಬೀಳುವುದೇನು ಸುಖ ?ಪುರಂದರವಿಠಲನ ಮನದಿ ನೆನೆದು ಸದ್ಧರುಮದೊಳ್ ನಡೆದರೆ ಆಗ ಸುಖ 3
--------------
ಪುರಂದರದಾಸರು
ವೃಥಾ ಭವದಿ ಮೆರೆದೆರಥಚರಣಧರನ ಸ್ಮøತಿಯನೆ ಮರೆದೆ ಪ.ಸತಿಸುತರೆನ್ನವರತಿಶಯ ಗೃಹಧನಪತಿಯು ನಾನೆಂಬೊ ಮಮತೆವಿಡಿದುರತಿಪತಿಪಿತನಂಘ್ರಿರತಿ ಲೇಶವಿಲ್ಲದೆಸತತ ಯಮಪುರದ ಪಥವನೆ ಪಿಡಿದು 1ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆಪೂತಿ ಮಲಭಾಂಡ ಭರಿತನಾಗಿಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ 2ಮಿತಮನರಹಿತ ದುರ್ಮತಪಂಡಿತನಾಗಿಪ್ರತಿಬೊಮ್ಮರಕ್ಕಸೋನ್ನತನೆನಿಸಿಅತಿಪ್ರಾಜÕಶಾಸ್ತ್ರದೇವತೆ ಪ್ರಸನ್ವೆಂಕಟಪತಿಯನೆ ಬಿಟ್ಟಿನ್ನಿತರವ ಭಜಿಸಿ 3
--------------
ಪ್ರಸನ್ನವೆಂಕಟದಾಸರು
ಷಡ್ವರ್ಗ ಸುಳಾದಿಝಂಪೆತಾಳಧನಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರನೆನವಿನಲಿ ಜನುಮಗಳ ತಂದೀವ ಕಾಮಕನಕಗಿರಿ ಕೈಸಾರ್ದಡಂಪರಸುದೊರೆದಡಂಇನಿತು ತೃಪುತಿಯೈದದೆನ್ನ ಮನೋಕಾಮಜನಪರ ಸಿರಿಬಯಕೆ ಜಾಣೆಯರ ಸಂಗತಿಯಕನಸಿನೊಳಗಾದಡಂ ಬಿಡದಿಹುದು ಕಾಮತನಗಲ್ಲದ್ಹವಣದಿಹ ಕಾಮಕಾಮಿನಿಭೂತಕೆನಿತಶನ ಸಾಲದಾಯಿತೈ ಪೂರ್ಣಕಾಮಮುನಿನಾರಿಯಳ ಕಲ್ಲಮೈಯನೆತ್ತಿದಪಾದವನು ಎನ್ನ ದುರ್ವಿಷಯ ಕಾಮದಲ್ಲಿಟ್ಟು ನಿನ್ನಜ್ಞಾನ ಭಕುತಿ ವೈರಾಗ್ಯ ಕಾಮವನೀಯೊದಿನಕರಕುಲೋದ್ದಾಮ ಪ್ರಸನ್ವೆಂಕಟ ರಾಮ1ಮಠ್ಯತಾಳಗುರುಹಿರಿಯರಿಗಂಜದೆ ನಿಕ್ಕರ ನುಡಿಸುವ ಕ್ರೋಧಬರಿಯಹಂಕಾರದಿ ಬೆರತಘರಾಶಿಯನೆರಹಿಸಿ ನಿರಯವನುಣಿಸುವ ಕ್ರೋಧಮರುಳನ ದುರುಳನ ಮಾಡುವ ಕ್ರೋಧಗುರುಹಿರಿಯರಿಗಂಜದೆ ಉರುಕೋಪದಲೆದ್ದ ಕಾಳುರಗನ ಪೆಡೆದುಳಿದಾ ಸಿರಿಚರಣವ ಕ್ರೋಧಾಹಿಶಿರದ ಮ್ಯಾಲಿಡು ಗಡ ಗರುಡಾದಿ ಪ್ರಸನ್ವೆಂಕಟ ತಾಂಡವ ಕೃಷ್ಣ 2ರೂಪಕತಾಳಹೀನ ಧರ್ಮನ ಮಾಡಿಸುರಋಷಿಪಿತೃ ಋಣವೇನು ಕಳಿಯಲಿಲ್ಲವೆನ್ನ ಲೋಭಜೇನನೊಣನ ವೋಲು ತಾನುಣ್ಣನೊದಗಿಸಿನಾನಾಲಾಭದಲಿ ತುಂಬದು ಲೋಭಭಾಂಡದಾನವ ಬೇಡಿಳೆಯಾಜಾಂಡವನೊಡೆದಶ್ರೀನುತಾಂಘ್ರಿಯಲೊದ್ದು ಲೋಭದ ಕೋಶವನುನೀನೆ ಸೂರೆಯ ಮಾಡೊ ಪ್ರಸನ್ವೆಂಕಟ ವಾಮನ್ನ ಉದಾರಿಶಿಖಾಮಣಿಭಾಗ್ರ್ವಾ3ಪಂಚಘಾತ ಮಠ್ಯಅನ್ನಕೆ ಉಬ್ಬಿ ಯೌವನ ರೂಪಕೆ ಕೊಬ್ಬಿಧÀನ್ನಕೆ ಮೊಬ್ಬೇರಿಸಿತೆನ್ನ ಮದವುಎನ್ನ ಸವಿಸುವ ಪರಿವಾರ ಭುಜಬಲೆಂಬುನ್ನತಿಯಿಂದುನ್ಮತ್ತನ ಮಾಳ್ಪ ಮದವುದಾನವೇಂದ್ರನ ಮೌಳಿಯನ್ನು ತುಳಿದ ಪದದಿಎನ್ನ ಮದರಾಜನ ಮೆಟ್ಟಿಯಾಳೆಲೆ ದೇವನಿನ್ನ ಧ್ಯಾನವಿರತಿ ಮದದಿಂದ ಕೊಬ್ಬಿಸು ಪ್ರಸನ್ವೆಂಕಟ ಉರುಕ್ರಮ ಧನ್ಯರೊಡೆಯ 4ತ್ರಿವಿಡಿತಾಳಉತ್ತಮರ ಅವಗುಣವೆಣಿಸುತಹೊತ್ತು ಯಮಪುರಕೊಯ್ವ ಮತ್ಸರಮತ್ತೆ ಪರಸೌಖ್ಯಕ್ಕೆ ಕುದಿಕುದಿಸಿತು ಮತ್ಸರವುಚಿತ್ತಜನ ಶರ ಮತ್ಸರಿಸುತಿರೆಮೊತ್ತ ಗೋಪೇರ ಕುಚದ ಪೀಠದಿಒತ್ತಿ ಸುಖವಿತ್ತ ಪದವೆನ್ನೆದೆಲಿಡು ಪ್ರಸನ್ವೆಂಕಟ ಕೃಷ್ಣ 5ಅಟ್ಟತಾಳಇಂದುಮುಖಿಯರ ಕಂಡಂದಗೆಡಿಪ ಮೋಹಕಂದಗಳಾಡಿಸಿ ಕರುಣ ಉಕ್ಕಿಪ ಮೋಹತಂದೆ ತಾಯಿ ಬಂಧುವರ್ಗದ ಮೋಹಮುಂದಣಗತಿಗೆ ಮೂರ್ಛೆಯನಿತ್ತ ಮೋಹಕಂದರ್ಪನ ಗೆದ್ದಯೋಗಿಜನರ ಹೃದಯಾಂಧಕಾರವ ಗೆದ್ದು ತವಪಾದನಖಪೂರ್ಣಚಂದ್ರ ಚಂದ್ರಿಕೆದೋರಿ ಅಭಿಜÕನ ಮಾಡೆನ್ನ ದಯಾಸಿಂಧುಪ್ರಸನ್ನವೆಂಕಟ ಮುನಿಜನವಂದ್ಯ6ಏಕತಾಳಎನ್ನ ಕಾಮವೆಂಬ ಗಿರಿಗ್ವಜ್ರಾಂಕಿತ ಪದಎನ್ನ ಕ್ರೋಧವೆಂಬಾಹಿಗೆ ಧ್ವಜದಂಡಾನ್ವಿತ ಪದಎನ್ನ ಮದವೆಂಬ ಗಜಕಂಕುಶಾಂಕಿತ ಪದಎನ್ನ ಮತ್ಸರಾನ್ವಯಕೆ ಗಂಗಾನ್ವಿತ ಪದಎನ್ನ ಲೋಭ ಗೆದ್ದ ಮನೋಳಿಗೆ ಅಬ್ಜಯುತ ಪದಎನ್ನ ಮೋಹಧ್ವಾಂತ ಪೂರ್ಣೇಂದು ನಖದ ಪದಎನ್ನ ಮನೋರಥ ಸಿದ್ಧಿಯನು ಕರೆದೀವ ಪ್ರಸನ್ನವೆಂಕಟನ ದಿವ್ಯಪಾದಪಾಂಕಿತ ಪದಜತೆಇಂತು ಬಾಧಿಪ ಷಡ್ವರ್ಗದಂಬನೆ ಕಿತ್ತು ಸಂತತ ಶ್ರೀಚರಣ ಸ್ಮರಣೆಮುಂತಾದೌಷಧವನಿತ್ತೆನ್ನ ರಕ್ಷಿಸು ಧನ್ವಂತರಿ ಪ್ರಸನ್ನವೆಂಕಟ ನರಹರಿಯೆ
--------------
ಪ್ರಸನ್ನವೆಂಕಟದಾಸರು
ಸತಿಗೆ ಸ್ವಾತಂತ್ರ್ಯವ ಕೊಡದಿರಿ - ನೀವುಮತಿಗೆಟ್ಟು ಭ್ರಮೆಯ ಬಡದಿರಿ ಪ.ಪತಿಗೆ ಬಣ್ಣನೆ ಮಾತನಾಡ್ಯಾಳು - ತಾನುಮತಿಯಿಲ್ಲದೆ ಮೆಚ್ಚನಾಡಳುಅತಿ ಹರುಷದಲಿ ಬಂದು ಕೂಡ್ಯಾಳು ಕೂಡಿಖತಿಕರಕರೆಯನು ಮಾಡ್ಯಾಳು1ತಂದೆ - ತಾಯ್ಗಳನೆಲ್ಲ ತೋರಿಸ್ಯಾಳು - ನೀಒಂದೆಡೆ ಬಾಯಿಂದು ಬರಿಸ್ಯಾಳುನಿಂದಿಸಿ ಬೆಯ್ಯುತ್ತ ಬೆರೆಸ್ಯಾಳು ನಿನ್ನನೊಂದಪಡಿಭತ್ತಕೆ ಬಾಯ ತೆರೆಸ್ಯಾಳು2ತಂದಿದ್ದರೊಳಗರ್ಧ ಕದ್ದಾಳು ಕದ್ದುತಂದು ಸುಳ್ಳಹೇಳಿ ಮೆದ್ದಾಳುಮುಂದಿದ್ದ ಕೂಸಿನ ಹೊದ್ದಳು - ಹತ್ತುಮಂದಿ ಮುಂದೆ ಅಡ್ಡಬಿದ್ದಾಳು 3ಉಂಡ ಊಟವನೆಲ್ಲ ನೆನೆಸ್ಯಾಳು - ತನ್ನಮಂಡೆ ಕೆದರಿಕೊಂಡು ಸೆಣಿಸ್ಯಾಳುಭಾಂಡು ಮಾಡಿ ಬಾಯಿ ತೆರಿಸ್ಯಾಳು - ನಿನ್ನಕೊಂಡಕೋತಿಯಂತೆ ಕುಣಿಸ್ಯಾಳು4ಕರೆತರೆ ಸಂಸಾರ ಸ್ಥಿರವಲ್ಲ - ಈದುರುಳ ಹೆಣ್ಣಿನ ಸಂಗ ಸುಖವಿಲ್ಲನೆರೆದೊರೆಯವರು ನಗುವರೆಲ್ಲ - ನಮ್ಮಪುರಂದರವಿಠಲನು ತಾ ಬಲ್ಲ 5
--------------
ಪುರಂದರದಾಸರು
ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
--------------
ಪುರಂದರದಾಸರು