ಒಟ್ಟು 78 ಕಡೆಗಳಲ್ಲಿ , 9 ದಾಸರು , 68 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರ ಪುರುಷರಾಚರಣೆ ಬೇರೆ |ಈ ಪಾಪಿ ಜನಕೆ ಮತ್ತೊಂದು ಬಗೆದೋರೆ ಪ ಚಿಂತೆಯೆಂಬುದು ಚಿತ್ತದಲ್ಲಿಲ್ಲಾ | ಅಂತರಂಗದಿ ಆನಂದದಲಿಹರೂ | ಸಂತ ಸಮೂಹದಿ ಶಾಂತದಿ ಒಡಗೂಡಿ | ಕಂತುಹರನ ಯೋಗ ಮಾಡುತಿಹರೂ 1 ಮಾಯಾ ನಿತ್ಯ ವಸ್ತುವಿನೊಳು ಪೂರ್ಣರಾಗಿಹ 2 ಬೇಕೆಂದು ಬೇಡರು ಬೇಕೆಂದು ಮಾಡರು |ಕಾಡು ಮಂದಿಗಳೊಡನೆ ಮಾತನಾಡರು | ಲೋಕನಾಯಕ ಭವತಾರಕನ ಚರಣವ | ಏಕಾಂತದಲಿ ಪೂಜಿಸುತಿಹರು 3
--------------
ಭಾವತರಕರು
ಪರಸುಖಕರಾ ಗುರುಬೋಧಸಾರಾ ಮರಣಾ ಜರಾ ದುರಿತಾದಿ ದೂರಾ ಪ ಜೀವಭಾವವಾ ಸಟೆಯಾಗಿ ಗೈವ ದೇವಭಾವನಾ ಬಗೆಸಿನಿಲಿಸುವಾ ಸಾವಿನಂಜಿಕೆ ದೂರಾಗಿ ಮಾಳ್ಪ ಜೀವಂತಮುಕುತಿ ಕರದೀಯುವಾ 1 ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ ದೃಶ್ಯವಸ್ತುವಿಂದ ಬೇರೆನಿಸುವಾ ಶಾಶ್ವತಾದ ಆ ಪದ ತೋರಿ ಮನದ ಕಶ್ಮಲವನು ಕಳೆವ ಭವತಾರಕಾ 2 ಭೇದಭಾವವಾ ಛೇದಿಸುತ ಮನದಿ ಬೋಧನಾರಾಯಣನ ಕೃಪೆ ಪೊಂದಿದಾ ಬೋಧರೂಪ ಗುರುವು ಪೇಳಿರ್ದ ಬೋಧ ಸಾಧು ಶಂಕರಾರ್ಯ ತಾನೆನ್ನುವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ ಪ ಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ ಅ.ಪ. ಚಾರು ಚರಣ ಸರೋರುಹ ಕೆರಗುವೆ | ಚಾರುಮತಿಯ ಕೊಡೆ 1 ಮೂರು ಗುಣಾಭಿಮಾನೀ | ಮಾಳ್ಪುದುಮೂರು ಗುಣಗಳ್ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ ನೆಂದು | ಬಾರಿ ಬಾರಿಗೆ ಪೇಳ್ವ 2 ಗುರು ಗೋವಿಂದ ವಿಠಲಾ | ನಿನ್ನೊಡವೆರಸಿ ಸೃಜಿಪ ಜಗಂಗಳಾ ||ಎರಡೆರಡು ವ್ಯೂಹಕಾಗಿ | ಎರಡೆರಡು ರೂಪ ತಾಳೆಎರಡೆರಡು ನೀನು ಆಗಿ | ಹರಿ ಕಾರ್ಯಕನುವಾದೆ 3
--------------
ಗುರುಗೋವಿಂದವಿಠಲರು
ಪಾಲು ಪಾಲು ಇದು ಯಾತರ ಪಾಲು | ಪಾಲು ಹಂಚ್ಯಾನೊ ಶಿವ ಮೊದಲೇ ಪ ದೇಹ ನೋಡೆಲೂ ಮೃತ್ತಿಕೆ ಪಾಲು |ಜೀವ ನೋಡೆಲೊ ವಾಯುವಿನ ಪಾಲು 1 ಪುಣ್ಯ ನೋಡೆಲೊ ಸುಖದ ಪಾಲು | ಪಾಪ ನೋಡೆಲೊ ದುಃಖದ ಪಾಲು 2 ಭಕ್ತಿ ನೋಡೆಲೊ ಮುಕ್ತಿಯ ಪಾಲು |ಭಕ್ತ ಭವತಾರಕನ ಪಾಲು3
--------------
ಭಾವತರಕರು
ಬಂದು ನೊಂದೆನು ನಾನು | ಮುಂದೆ ರಕ್ಷಿಸು ನೀನು | ಎಂದೆಂದೂ ತಾರದಂತೆ | ತಂದೆ ಸದ್ಗುರು ನಿನ್ನ ಹೊಂದಿದೆನು | ಪರಮಾನಂದವನು ಪಾಲಿಸೀಗ ಬೇಗ ಪ ಎನ್ನವಗುಣದೋಷಗಳ | ಅರಸುವದ್ಯಾಕೆ | ನಿನ್ನ ಪಾದವ ನಂಬಿದೆ || ಚಿನ್ನಕ್ಹತ್ತಿದ ಟೆಂಕ ಭಿನ್ನವಾಗುವದುಂಟೆ | ಇನ್ನು ಬ್ಯಾರೆನ್ನಬಹುದೆ ಇಹುದೆ1 ಉರಿಯ ಮುಟ್ಟಿ ಕಾಷ್ಠವನು | ಮರಳಿ ತರಬಹುದೇ | ಪರಮ ತತ್ತ್ವವ ತಿಳಿಯದೆ || ಹರಿವ ಶರಧಿಗೆ ಜಲವು ಹಲವು ಕೂಡಿದರದರ | ವಿವರದಲಿ ನೋಡಲರಿದೇ ಜರಿದೆ 2 ಚಿತ್ತ ಕಮಲವ ನಿನ್ನ ಪಾದಕರ್ಪಿಸಿದೆನೋ | ಸತ್ಯದಲಿ ಮತ್ತೆ ಪಾತಕವು ಯಾರಿಗೆ | ಕರ್ತೃ ಭವತಾರಕನು ಕೊಟ್ಟ ಕುದುರೆಯ ಮೇಲೆ | ಎಷ್ಟೊಂದು ಹೇರಲಿಂದು ತಂದು 3
--------------
ಭಾವತರಕರು
ಬಾರಯ್ಯ ಬಾ ಬಾ ಯದುಕುಲರಾಯ | ಹೇ ಭಾಗವತಪ್ರಿಯ ಪ ಸಾರಸಾಕ್ಷ ಕರುಣಾರಸಪೂರಿತ ಮಾರಜನಕ ಭವತಾರಕ ಮುರಹರ ಅ.ಪ. ಬೃಂದಾರಕ ಬೃಂದ ಸುವಂದಿತ ಚರಣ | ಭುಜಗೇಂದ್ರಶಯನ ವಿಹಗೇಂದ್ರಗಮನ ಮಂದಹಾಸ ಬಲುಸುಂದರವದನಾ | ಶುಭಗಣಪೂರ್ಣ ಮಂದರಧರ ಗೋವಿಂದ ಭಜಕ ಜನ ಮಂದಾರನೆ ಮುಚುಕುಂದವರದ ರಾ ಕೇಂದುಕುಲಜಲಧಿ ಚಂದಮನೆನಿಸುವ ಇಂದಿರೆಯರಸ ಶ್ರೀ ಕರಿಗಿರೀಶನೇ 1
--------------
ವರಾವಾಣಿರಾಮರಾಯದಾಸರು
ಬಾರೋ ಬೇಗನೆ ರಾಮಾ ನೀ ಬಾ ಪ ಏಕೆ ಪಂತರ ಮನೆಯೊಳು ನೀರ ತಂದೆ | ಲೋಕದೊಳಗೆ ನಿನ್ನ ಮಹಿಮೆಗೆ ಕುಂದೇ1 ಅಂದು ಕಬೀರನ ಸತಿಗಾಗಿ ಹಿಂದೆ |ಛಂದಾಗಿ ಕೊತವಾಲನಾಗಿ ಬಂದೆ 2 ಗುರು ಭವತಾರಕ ಎನ್ನ ತಂದೆ |ಆರು ಮುನಿದರೂ ಏನಿಲ್ಲ ಮುಂದೆ 3
--------------
ಭಾವತರಕರು
ಬ್ರಹ್ಮಜ್ಞಾನ | ಬಿಡು ಬಿಡು ಬಿಡು ನೀ ಸಂಸಾರ ಧ್ಯಾನ |ಕಡೆಯಲ್ಲಿ ನಿನ್ನ ಕಳಹುವರಲ್ಲಿಗೆ | ಬಿಡದಿರು ಸದ್ಗುರುವಿನ ಧ್ಯಾನ ಪ ಯಾತಕೆ ಕಲಿತ್ಯೋ ಬಹು ಯುಕ್ತಿಗಳ | ಬರಿ ಮಾತಿಲಿ ಆಗದು ನಿಜ ಮುಕ್ತಿ | ನೀತಿಯಿಂದ ನೀ ಅರಿತು ನೋಡಲು | ಸ್ವಾತ್ಮದ ಜ್ಞಾನವು ಆಗುವದಿದಕೆ1 ಸತಿ ಸುತರಾ ನೀ ನೋಡಿ ಹಿಗ್ಗುತಿ | ಮಿತಿಯಿಲ್ಲದೆ ಅವರಿಗೆ ತಗ್ಗುತಿ | ಗತಿಯ ಕೊಡುವ ಸಂತರು ಬಂದರೆ | ಮೋತಿಯ ತಿರುವಿ ವ್ಯಸನಕೆ ತಗ್ಗುತಿ 2 ಸಾಧು ಪುರುಷರ ಸಂಗವ ಹಿಡಿಯೊ | ಬೋಧಾಮೃತವನು ನೀ ಕುಡಿಯೊ | ಆದಿಯಲಿ ಭವತಾರಕ ಭಜಕರು | ಹೋದ ಹಾದಿಯ ನೀ ಹಿಡಿಯೊ 3
--------------
ಭಾವತರಕರು
ಭವ | ಭಂಗವಾಗುವದು ಅಂಗವಯ್ಯೋ ಪ ಅಗ್ಗವಾದರು ಸಂತರು ಲಾಭವನು | ಮುಗ್ಗು ಜೋಳವ ಕೊಟ್ಟಿತು | ಗೊಗ್ಗಯ್ಯನೆಂಬರೇ ಕಡೆಯಲ್ಲಿ ನಿನಗೆ ಅಗ್ಗಳವದಕಿಂತ ಒಂದುಂಟು ಗಂಟು 1 ಸಕಲ ಶಾಸ್ತ್ರಗಳ ಬಲ್ಲೆ | ಮಿಕ್ಕ ಕಾಪುರುಷರಂತೇನು ಕಲ್ಲೇ | ಪ್ರಕಟಿಸುವರಾರಿಲ್ಲೆ ನಿನಗಿನ್ನು ಶಿವ ಶಿವಾನುಭವ ನೀನ್ಯಾಕ ಒಲ್ಲೆ ಇಲ್ಲೇ 2 ಹುಚ್ಚರೇ ಭವತಾರಕನ ಭಕ್ತರು ? ನೆಚ್ಚುವರೆ ಸಂಸಾರವ ? ಮೆಚ್ಚುವರೆ ಶ್ರುತಿಯುತರು ಈ ಮಾತಿಗೇ ? ಎಚ್ಚರಿಕೆ ಇನ್ನಾರ ಹಿಡಿಯೊ ಬೇಗ ಈಗ 3
--------------
ಭಾವತರಕರು
ಭವ ಕೊಳ್ಳವ ಬೀಳದಿರೊ ಪ ಹರುಷ ವಿಷಾದವು ಮನಸಿನದೆಂಬರೆ | ಮನಕೆ ತಗುಲಿತೆಂತಾ || ಸ್ಪರಿಶ ಶಬ್ದವು ರೂಪವು ರಸ ಗಂಧದಿ | ತೋರಿತು ಭ್ರಾಂತೀ1 ಹಸಿವು ತೃಷವು ಜೀವನದೆಂಬರೆ ಜೀವನಕದು ಉಂಟೇ || ವಿಷಯ ಸುಖವು ಕಳೆದಾನಂದದ ಬೋಧದೊಳಗುಂಟೇ 2 ಜರೆ ಮರಣವು ತನುವಿನದೆಂಬರೆ | ತನುವದು ಒಂದಲ್ಲಾ || ಚಿನುಮಯ ಭವತಾರಕನೊಲಿದರೆ ಶೇಡೋರ್ಮಿಗಳೇನಿಲ್ಲಾ 3
--------------
ಭಾವತರಕರು
ಮತವಿದು ಮುಚ್ಚಿ ಮುಚ್ಚಿಲ್ಲಾ | ಹುಚ್ಚರಾದರು ಈ ಜನರೆಲ್ಲಾ ಪ ಶಿವ ಹೇಳಿದನೋ ಶಾಂಭವಿಗೆ | ಜವನ ಭಯವಿಲ್ಲಾ ಅನುಭವಿಗೆ1 ನಡೆದರೆಲ್ಲಾ ಸಂತರು ಹಿಂದೆ | ಪಡೆದರು ಸದ್ಗತಿ ಇದರಲಿ ಒಂದೆ 2 ಭವಪಾತಕಿಗೆ ಅರಿವೇ ಇಲ್ಲಾ | ಭವತಾರಕ ತಾ ಮರೆ ಮಾಡಿಲ್ಲಾ 3
--------------
ಭಾವತರಕರು
ಮಾಡಿದ್ಯಾ ಇಂದಿಗೆ ಹೀಂಗ | ಆಗದ್ಹಾಂಗ || ಕೂಡಿ ದುರ್ಜನರೆಲ್ಲ ನಗುವ ಪರಿಯಲಿ ಪ ಏನು ಕಂಡು ಒಲಿದೀ ನೀ ಅವಗೆ | ಖಳನ ಘಾತಕಮನದವಗೆ | ತಾನು ದಾರೆಂದು ವಿಚಾರಿಸದಧಮಗೆ |ಸಾನುಕೂಲಾಗಿ ಸರ್ವ ಬಗೆಯಲಿ 1 ಸಾಧು ಸಂತರು ಎಂಬುದನರಿಯಾ | ಭೇದವಾದ ಕುಬುದ್ಧಿಯಮರೆಯಾ || ಕಾದಾಡಿ ಕರ್ಮದ ಹಾದೀ ಹಿಡಿಯದ | ವಾದಕಂಜದ ಜನ ಸಾಧಕನಿಗೆ 2 ಹಿಂದಿನ ಗುಣಗಳ ಬಿಟ್ಟ್ಯಾಕೋ | ಮಂದಿಗೆ ಪದವಿಯ ಕೊಟ್ಟ್ಯಾಕೋ ತಂದೆ ಸದ್ಗುರು | ಭವತಾರಕನಂಘ್ರಿಯ | ಹೊಂದಿದವರಿಗಭಿಮಾನವಿಲ್ಲದಂತೆ 3
--------------
ಭಾವತರಕರು
ಮಾಡುವುದೆಲ್ಲ ವಿವಾದಕೆ ಕಾರಣ | ಸಾಧಿಸುವದೆ ಬ್ರಹ್ಮಾ ಪ ಸಾಧು ಜನರ ಸುಸಮಾಧಿಯ ಬೋಧವು ಬಾಜಾರವೇನೋ ತಮ್ಮಾ ಅ.ಪ ಮನದೊಳು ತನದೊಳು ನಯನಗಳಿರುತಿರೆ | ಮನ ಬಯಸಿದದೊಂದು | ಘನ ಜ್ಯೋತಿಯ ತಾ ತಾರದೆ ತೋರದು | ಸನ್ಮುಖದಲಿ ನಿಂದೂ 1 ಅರಿವುದು ಕರಣದಿ ಬೆರೆವುತ ನಿನ್ನ | ಅರಿಯದಲಿರುತಿಹುದೂ | ಪರಮ ಪುರುಷರಾಚರಿಸುವ ಪರಿಯಲಿ | ಗುರುಪದ ಸಾರುವದೋ2 ತಪ್ಪದೆ ನೆಲಕೆ ಭಗುರಿಯನೆ ಎಸೆವರೆ | ಜಪ್ಪಿಸುವರೆ ಹೇಳಾ | ದಪ್ಪನೆ ಗುರು ಭವತಾರಕ ತ್ರಯ ಜಗದಪ್ಪನ ನೀ ಕೇಳಾ 3
--------------
ಭಾವತರಕರು
ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ || ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ || ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ 1 ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ | ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ2 ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ | ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ 3
--------------
ಭಾವತರಕರು
ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1 ನೇಮದಿ ಕಾರ್ಯವನು ಬಗೆದು ಭೂಮಿಜಾತೆಯ ಕಂಡವಗೊಲಿದ 2 ಕರುಣಾಮೂರುತಿಯೊಲುಮೆವಡೆದು ಪರಮಪುಣ್ಯ ವಿಭೀಷಣ ಒರದ 3 ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4 ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5
--------------
ಶಾಮಶರ್ಮರು