ಒಟ್ಟು 53 ಕಡೆಗಳಲ್ಲಿ , 25 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ |ಏಕೆ ಗೋಪಾಲ ಕರೆಯುತಾನೆ ? ಪಕಣ್ಣ ಸನ್ನೆ ಮಾಡುತಾನೆ - ಮತ್ತೆ ಬಗೆ ಬಗೆ |ಹಣ್ಣ ಕೈಯಲಿ ತೋರುತಾನೆ - ಎನ್ನ ಚೆಲುವಿಕೆ ||ಬಣ್ಣಿಸುತಲಿ ತಿರುಗುತಾನೆ - ಇವನೇನೆ |ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ 1ಹವಳ ಸರವ ತೋರುತಾನೆ - ದುಂಡು ಮುತ್ತಿನ - |ಧವಳಹಾರವ ನೀಡುತಾನೆ - ಹಾಸಿಗೆಯ ಮೇಲೆ ||ಪವಡಿಸಬೇಕೆನುತಾನೆ - ಇವನೊಡನಿರಲು ನ-|ಮ್ಮವರು ಸುಮ್ಮನೆ ಇಹರೇನೆ - ಎಲೆ ಸಖಿಯೆ 2ಬಟ್ಟಲ ಪಿಡಿದು ಬರುತಾನೆ - ಹಗಲೆ ಬಾ ಎಂದು -|ಬಟ್ಟ ಬಯಲೊಳು ಕರೆಯುತಾನೆ - ಎನ್ನ ಮನದೊಳು ||ದಟ್ಟು ಧಿಗಿಲು ಎನ್ನದೇನೆ - ಪುರಂದರವಿಠಲ - |ಇಟ್ಟು ಕೊರಳಾಣೆ ಈಗ ಬಾ ಎಂಬುವನೆ - ಎಲೆ ಸಖಿಯೆ 3
--------------
ಪುರಂದರದಾಸರು
ಒಂದೇ ಕೂಗಳತೆ ಭೂವೈಕುಂಠಸಂದೇಹವಿಲ್ಲವು ಸಾಧು ಸಜ್ಜನರಿಗೆ ಪಅಂಬರೀಷನು ದ್ವಾದಶಿವ್ರತ ಮಾಡಲುಡೊಂಬೆಯ ಮಾಡಿದ ದುರ್ವಾಸನು ||ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು 1ಕರಿರಾಜ ವನದಲಿ ಉಳುಹೆಂದು ಕೂಗಲುತ್ವರಿತದಿಂದಲಿ ಬಂದು ಕಾಯ್ದ ತಾನು ||ಕರುಣ ಸಾಗರ ಕೃಷ್ಣ ಕಾಯಬೇಕೆನುತಲೆತರಳ ಪ್ರಹ್ಲಾದನ ಕಂಬದಿ ಬಂದುದು2ದ್ರುಪದರಾಯನ ಪುತ್ರಿಗಾಪತ್ತು ಬರಲುಕೃಪೆಯಿಂದಲಕ್ಷಯವಿತ್ತನು ||ಕಪಟ ನಾಟಕ ಕೃಷ್ಣಪುರಂದರ ವಿಠಲನಗುಪಿತದಿ ನೆನೆವರ ಹೃದಯವೇ ವೈಕುಂಠ 3
--------------
ಪುರಂದರದಾಸರು