ಒಟ್ಟು 53 ಕಡೆಗಳಲ್ಲಿ , 32 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಗೆ ದರುಶನ ಪಾಲಿಸುವೆ ವಿಠ್ಠಲನೆ ಹ್ಯಾಗೆನ್ನ ಪೊರೆವೆ ವಿಠ್ಠಲನೆ ಪ. ನಾಗಶಯನನೆ ನಿನ್ನ ನೋಡಬೇಕೆಂದು ಮನ ಈಗ ತವಕಿಸುತಿಹುದು ಹ್ಯಾಗೆ ಮಾಡಲಿ ವಿಠಲ ಅ.ಪ. ಅರಿಯದಾ ದೇಶದಲಿ ಆಲ್ಪರಿದು ಅನ್ಯರಿಗೆ ಬರಿದಾಯ್ತು ಬಯಕೆ ವಿಠ್ಠಲನÉ ಪರಿ ಹರಿಯೆ ನೀನಲ್ಲದಲೆ ಪೊರೆಯುವರ ಕಾಣೆ ವಿಠ್ಠಲನÉ 1 ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ಬಲವಿಲ್ಲ ಹ್ಯಾಗೆ ಬರಲಿನ್ನು ವಿಠ್ಠಲನೆ ನ್ಯಾಯದಿಂದಲಿ ಹಿಂದಿನಾ ಭಕ್ತರಂದದಲಿ ಕಾಯಬಾರದೆ ಎನ್ನ ಪೇಳೂ ವಿಠ್ಠಲನೆ 2 ಭಕ್ತ ಸುರಧೇನೆಂಬೊ ಬಿರುದು ಕೇಳೀ ಬಂದೆ ಚಿತ್ತಕ್ಕೆ ಬರದೆ ವಿಠ್ಠಲನೆ ಭಕ್ತರಾ ಕೂಟದಲಿ ಸೇರಲಿಲ್ಲವೆ ನಾನು ಭಕ್ತವತ್ಸಲನಲ್ಲವೇನೊ ವಿಠ್ಠಲನೆ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೇಶನೆ ಕಾಯೊ ಸತತ ವಿಠ್ಠಲನೇ ಹಿಂದಿನವರನು ಪೊರೆದ ಕೀರ್ತಿ ಉಳಿಯಲು ಈಗ ಕುಂದನೆಣಿಸದೆ ಕಾಯಬೇಕೊ ವಿಠ್ಠಲನೇ 4 ಕರುಣಿ ಎನ್ನಯ್ಯ ಕಂಗೆಡಿಸದಲೆ ಕಾಪಾಡೊ ಚರಣವೇ ಗತಿ ಎಂದು ಬಂದೆ ವಿಠ್ಠಲನೆ ಗುರು ಅಂತರ್ಯಾಮಿ ಎನ್ನಭಿಮಾನ ನಿನದೈಯ್ಯ ಸಿರಿಯರಸ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ. ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | ಜ್ಞಾನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ 1 ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ 2 ವಾಕು ಪಾಲಿಸೊ ಹರೆ 3 ಮಲ್ಲಮರ್ದನ ಕೃಷ್ಣ 4 ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ 5
--------------
ವ್ಯಾಸವಿಠ್ಠಲರು
ಇರಲೇ ಬಾರದು - ಇಂಥಲ್ಲಿಇರಬಾರದಿಂದ ......... ವರೆ ಭಯಂಕರದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಉರಗಗಳು ಸೇರಿಕೊಂಡ ಸದನಗಳಲ್ಲಿಕರುಬರಿದ್ದ ಊರಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ 1ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿಅವನಿಯೊಳಗರ್ಥಪ್ರಾಪ್ತಿಇಲ್ಲದಂಥಲ್ಲಿ2ಮಾನವಲ್ಲದ ಸಭೆಯಲ್ಲಿ ಮಾತ ಕದಿವ ನ್ಯಾಯದಲ್ಲಿನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿಶ್ರೀನಾಥ ಶ್ರೀ ಪುರಂದರವಿಠಲ ರೂಪಗಳುಅನಂತಾನಂತವೆಂದು ಅರಿಯದ ಅದ್ವೆಷ್ಣವರಲ್ಲಿ 3
--------------
ಪುರಂದರದಾಸರು
ನ್ಯಾಯದ ನುಡಿ ನರಲೀಲೆಗಿದು ಬಲ್ಲವರಲಿ ಸಲ್ಲದುನ್ಯಾಯದ ನುಡಿ ನರಲೀಲೆಗಿದು ಪ.ಮಾಯಾತೀತ ಮನೋಭವತಾತ ಪರಾಯಣ ತವಗುಣನಾನೆಂತರಿವೆನುಅ.ಪ.ಬಲಿಯನು ಮೆಟ್ಟಿದಬಾಂಬೊಳೆಪುಟ್ಟಿದಪಾದಶ್ರೀದಚೆಲುವೆ ರಮಾಕರನಳಿನಾಶ್ರಯಕರಮಾದಜಲಜಭವಾದಿ ಸುರಾಳಿಗಳರ್ಚಿಪಸುಲಲಿತ ತವ ಪದದೊಲವೆಂತರಿವೆನು 1ಶರಣಾಗತಜನ ದುರಿತನಿವಾರಣ ನೀನು ಇನ್ನೇನುತರುಣೀಮಣಿಯಳ ಸೆರೆಯನು ಬಿಡಿಸುವದಿನ್ನುಕರುಣಾಕರ ನಿನ್ನ ಸ್ಮರಿಸುವಳನುದಿನಸ್ಥಿರಚರಜೀವಾಂತರ ಪರಿಪೂರ್ಣನೆ2ಆಕ್ಷೇಪಿಸದಿರು ರಕ್ಷಿಸು ರಘುಕುಲಚಂದ್ರ ರಾಜೇಂದ್ರಲಕ್ಷ್ಮೀನಾರಾಯಣ ಸದ್ಗುಣ ಗಣಸಾಂದ್ರಈಕ್ಷಿಸು ಕರುಣಾಕಟಾಕ್ಷದಿ ಪೂರ್ವದಲಕ್ಷಣ ಹೊಂದಲಿ ಲಕ್ಷ್ಮಣಾಗ್ರಜನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
--------------
ಪ್ರಾಣೇಶದಾಸರು
ಶ್ರೀರಾಮ ಜಯರಾಮ ಜಯತುಜಯತು ಸೀತಾರಾಮ ರಾಮ ಚರ-ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-ಣಾರಿ ನೀನಲ್ಲದೆ ಯಾರಿಲ್ಲಗತಿಜಯ ರಾಮ ರಾಮ1ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4ಮುಖ್ಯ ಸಚಿವ ಮಹಾ ಮುಖ್ಯಪ್ರಾಣನುಸೀತಾರಾಮ ರಾಮ ದುಷ್ಟ-ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮವಾಸವಮುಖ್ಯ ವಿಬುಧಾಸುರನುತಸೀತಾರಾಮ ರಾಮ ಸಾಧು-ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-ಜ್ಞಾನ ಭಕ್ತಿಭಾಗ್ಯ ನೀನಿತ್ತುಪೊರೆಜಯ ರಾಮ ರಾಮಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮಬತ್ತಿಹೋಗಲಿ ಮೋಹದುತ್ತುಂಗಾರ್ಣವಸೀತಾರಾಮ ರಾಮ ಪರ-ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-ಸನ್ನ ನಿನ್ನ ಸ್ಮರಣೆಯನಿತ್ತುಪೊರೆಜಯ ರಾಮ ರಾಮಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣುಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12ನಿತ್ಯನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14ಅಕುಟಿಲಗುಣಗಳ ಪ್ರಕಟಿಸೆನ್ನೊಳುಸೀತಾರಾಮ ರಾಮ ವಾಯು-ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆಸೀತಾರಾಮ ರಾಮ ಬ್ರಹ್ಮಾ-ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ