ನಿನಗಿದು ಹಿತವೇ | ಇದು ಹಿತವೇ ಪ
ಕಂಸಾರಿ ಚರಣವ ನಂಬದೇ ಕ್ಷಣಿಕದ |
ಸಂಸಾರದಲಿ ಬೆರಿಯಬೇಡಾ 1
ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ |
ಕಣ್ಣಗೆಟ್ಟಿರುವರೇ ಮೂಢಾ 2
ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ |
ಹಸಗೆಡದಿರು ವಿಷಯ ಕೂಡಾ | 3
ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ |
ಮನವೇ ನೀ ಮಥನಿಸಿ ನೋಡು 4
ದಾವನು ಗುರು ಮಹಿಪತಿ ಪ್ರಭು ಭಜಿಸನು |
ಅವಗಿಲ್ಲ ಸುಖಸುರವಾಟಾ 5