ಆಪನ್ನ ರಕ್ಷಕ ಎನ್ನ ಪಾಲಿಸೊ ಪ.
ಪನ್ನಗಾದ್ರಿನಿವಾಸ ಸಂಪನ್ನ ಶ್ರೀಶಾ ಶ್ರೀನಿವಾಸ ಅ.ಪ.
ಆದಿ ಮೂರುತಿ ವೇದ ವಂದ್ಯ
ಪಾದ ನಂಬಿದೆ
ಅಗಾಧರೂಪ ನಾರಸಿಂಹ ಆದರದಿಂದ
ಮೋದ ಕೊಡುತ ಎನ್ನ ಪಾಲಿಸು 1
ನೊಂದೆನಯ್ಯ ಈ ಭವದಿ ಸಿಲುಕಿ
ತಂದೆ ಎನ್ನ ಕಾವರಿಲ್ಲ
ಬಂಧ ಬಿಡಿಸಿ ಈ ಭವದಿಂದ ನಿನ್ನ
ಸಂದರುಶನವಿತ್ತು ಸಲಹಿ ಎನ್ನ 2
ನಿನ್ನ ನಂಬಿದ ಭಕ್ತರ ಪೊರೆಯೆ
ಇನ್ನು ಸಂಶಯವ್ಯಾಕೊ ದೇವಾ
ಚೆನ್ನಗಿರಿಯ ವೆಂಕಟೇಶಾ
ಮನ್ನಿಸೆನ್ನ ಶ್ರೀ ಶ್ರೀನಿವಾಸ ಎನ್ನ 3