ಭಾಗವತರ ನೋಡುವಾ ಭಾಗ್ಯಸ್ವರೂಪಾ ಪ
ಯೋಗಜನಗಳನು ರಾಗದಿ ಧ್ಯಾನಿಪ
ಭೋಗಿಶಯನ ಸಂಪನ್ನ ಸದ್ಗುಣಪೂರ್ಣ
ಭಾರ್ಗವೀಸತಿ ಬಿಡದೆ ವರಿಸಿರುವಾ
ತಾಂಝಂ ತಂಝಂತ ತಂತಕನಾ
ತಧಿಂಗಿಣತೋಂ ತಧಿಂಗೀಣತೋಂ ತಧಿಂಗಿಣತೋಂ 1
ನಿನ್ನಮುಖಕೇ ಸರಿಬಾರದೆ ಚಂದ್ರಮನು
ಉನ್ನತ ಕಳಂಕಿಯಾಗಿರುತಿಹನೋ
ಕಣ್ಣು ಸಾಹಸ್ರಕ್ಕೂ ಸರಿಬರದೆ
ತಾಂಝಂ ತಂಝಂತ 2,ತಂಝಂ...ತಂತ 2
ಹೊಳೆವ ನಿನ್ನಯ ಕೊರಳಿಗೆ ಪಡಿಯಾಗದೆ
ನಲಿದು ನಾರಾಯಣ ಎನ್ನುತ್ತಿದೆ ಶಂಖವು
ನಳಿನಶರ ರೂಪಕ್ಕೆ ಸರಿಬರವೆ
ತಾಝಂ ತಝಂತ 2,ತಝಂ...(ತ್ವಂತ) 3
ಭಕ್ತರು ಪಡೆವತಿ ಸೌಖ್ಯಕ್ಕೆ ಹೋಲದ
ನಿತ್ಯವಾದ ಲೌಕಿದದಾಶೆ ಬಿಡಿಸಯ್ಯ
ಮುಕ್ತಿಕೊಡುತೆನ್ನನ್ನು ನಿನ್ನಡಿಯ
ತಾಝಂ ತಂಝಂತ ತಂತಕನಾ
ತಧಿಗಿಣತೋಂ ತಧಿಗಿಣತೋಂ ತಧಿಗಿಣತೋಂ 4