ಮೂಳಾ ಹರಿದ್ಹಾಕೆಲೋ ಮಾಯದ ಜಾಲ
ಹಾಳುಜಗದ ಮಾತಿಗ್ವ್ಯಾಕುಲವ್ಯಾಕೆಲೋ ಪ
ಅನ್ಯಗುಣಗಳನು ಅನ್ನಗೇಡಾಗಿ ಬಲು
ಭಿನ್ನ ಭೇದದಧೋಪಾತದುರುಳತಿರು
ಕುನ್ನಿಮಾನವರ ಭಿನ್ನಭೇದಕಂಡು
ನಿನ್ನ ಗುಣವ ಬಿಟ್ಟು ಬನ್ನಬಡಲಿಬೇಡ 1
ಕರ್ಮಿಲೋಭಿಗಳ ಮೋಹದಿಂದ ದು
ಷ್ಕರ್ಮದಿ ಬಿದ್ದು ಕುಂಭೀಪಾಕಕ್ಕಿಳಿದರೇನು
ಧರ್ಮಕರ್ಮಗಳ ಮರ್ಮ ತಿಳಿದು ಸ
ದ್ಧರ್ಮದೊಳಾಡುತ ನಿರ್ಮಲನಾಗಿ ಬಾಳು 2
ಶಿಷ್ಟಪದ್ಧತಿಗಳ ಬಿಟ್ಟುಕೊಟ್ಟು ಮಂದಿ
ಕೆಟ್ಟಪದ್ಧತಿ ಸುದ್ದಿಯಾಡುವುದ್ಯಾಕೆಲೋ
ಸೃಷ್ಟಿಯೊಳಗೆ ನಮ್ಮ ಶಿಷ್ಟ ಶ್ರೀರಾಮನ
ಮುಟ್ಟಿಪೂಜಿಸಿ ಮುಕ್ತಿಪಟ್ಟಕ್ಕೆ ಕೂಡ್ರೆಲೋ 3