ನಿನ್ನ ಪದ ಧ್ಯಾನಿಪರು ಪಗಲಿರುಳು ನಿನ್ನ ಭಕ್ತರು ಹರಿ
ನಿನ್ನ ರೂಪ ನೆನೆನೆನೆದು ಸ್ಮರಿಸಿ ಮನದಲಿ ನಿಲಿಸಿ ಸ್ತುತಿಸಿ
ಪಾದ ಧೂಳು ಶಿರದಲ್ಲಿ ಧರಿಸುವರು ಭಕ್ತರು
ನಿನ್ನ ರೂಹವ ಮನಸಿನ ಜಗಲಿಯಲಿ ನಿಲಿಸುವರು ಭಕ್ತರು
ನಿನ್ನ ನಂಬಿ ಸಕÀಲಕಾರ್ಯ ನಿರ್ವಹಿಸುವರು ಭಕ್ತರು ಹರಿ
ನಿನ್ಹೊರತು ಅನ್ಯರನು ನೆನೆಯರೊ ಪನ್ನಗಾದ್ರಿನಿವಾಸ ಶ್ರೀ ಶ್ರೀನಿವಾಸ
ನಿನ್ನ ಭಕ್ತರ ಸಂಗಕೊಡೊ ಎನಗೆ ಸರ್ವೇಶ