ಗುರುಭಕ್ತನೆವೆ ಧನ್ಯನು ಬಲು ಮಾನ್ಯನು ಪ
ಗುರುದಯ ಸಂಗಡಿಯನು ಹಿಡಿದಿಹನು |
ತರಣೋಪಾಯವ ಕೂಡಿದಾ ನಲಿದಾಡಿದಾ 1
ಅನ್ಯ ಮಾರ್ಗವ ನೋಡನು ತಾ ಕೂಡನು |
ತನ್ನ ನಿಷ್ಠೆಯೊಳಾಡುವಾ ಗತಿ ಬೇಡುವಾ 2
ಗುರು ಮಾತೇ ಮಂತ್ರ ವೆಂಬನು | ಸವಿ ದುಂಬನು |
ಗುರು ಸೇವೆಯಲಿ ಬಾಳುವಾ ಅದೇ ಕೇಳುವಾ 3
ಪುಂಡಲೀಕನ ಭಕ್ತಿಯಾ | ಆಸಕ್ತಿಯಾ |
ಕಂಡು ತಾನೆವೆ ಬಂದನು ಮುಕುಂದನು 4
ಸಾರಥಿ |
ನೆರೆ ಭಕ್ತಿ ಕೀಲ ಬೋಧನಾ ಹೇಳಿದನು 5