ಒಟ್ಟು 53 ಕಡೆಗಳಲ್ಲಿ , 26 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳಗತಿಯುಂಟು ಸಂತತಿ ಸಂಪತ್ತಿಯುಂಟು ಪ.ಶ್ರೀ ಮಧ್ವಪದ್ಮನಾಭನರಹರಿಮಾಧವಆ ಮೌನಿ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜಭೂಮ ಕವೀಂದ್ರ ವಾಗೀಶರ 1ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥಮಾರನ ಗೆಲಿದ ರಘುವರ್ಯ ರಘೂತ್ತಮ ವೇದವ್ಯಾಸಘನವಿದ್ಯಾಧೀಶ ವಿದ್ಯಾನಿಧಿಗಳ2ಸತ್ಯವ್ರತ ದಯಾನಿಧಿ ಸತ್ಯನಾಥ ಅನುಪಮಸತ್ಯಾಭಿನವ ಗುರುಕರಪದ್ಮಜ ನಮ್ಮಗುರುಸತ್ಯಪೂರ್ಣ ಪ್ರಸನ್ವೆಂಕಟ ಪ್ರಿಯರ 3
--------------
ಪ್ರಸನ್ನವೆಂಕಟದಾಸರು
ಹರಿದಾಡುವಂಥ ಮನವ ನಿಲಿಸುವುದು ಬಹುಕಷ್ಟ ಪ.ಕಾಶಿಗೆ ಹೋಗಲುಬಹುದುದೇಶ ತಿರುಗಲುಬಹುದುಆಶೆ ಸುಟ್ಟು ತಾನಿರಬಹುದು 1ಜಪವ ಮಾಡಲುಬಹುದುತಪವ ಮಾಡಲುಬಹುದುಉಪವಾಸದಲ್ಲಿ ತಾನಿರಬಹುದು 2ಸ್ನಾನ ಮಾಡಲುಬಹುದುದಾನ ಮಾಡಲುಬಹುದುದ್ಯಾನದಿ ಪುರಂದರವಿಠಲನ ಚರಣದಿ 3
--------------
ಪುರಂದರದಾಸರು