ಆವಿರ್ಭವಿಸಿದಳಾಗ ಜಗನ್ಮಾತೆ | ಅಖಿಲಾಂಡ ವಿಖ್ಯಾತೆ ಪ
ದೇವದಾನವರು ತಾವೊಡಗೂಡುತ
ಲಾವುದಧಿಯಮದಿಸÀುತ್ತಿರಲದರೊಳು ಅ.ಪ
ಪೊಳೆವ ಬೆರಳುಂಗುರ ಶೋಭಿತಪಾದ | ಧರಿಸಿದ ಸುರುಚಿರ
ರುಳಿಯು ಅಂದಿಗೆ ಗೆಜ್ಜೆಯ ನಾದ | ಕಟಿಯಲಿ ನೋಡೆ
ಥಳಥಳವಾದ ಶೃಂಗಾರವಾದ | ಒಡ್ಯಾಣದ ಮೋದ
ದಲಿ ತಾನಿಟ್ಟಿಹ ಚಲುವಿಕೆಯಿಂದಲಿ
ಸಲೆ ಬೆಳಗುತಲಿ ನಳಿನಲೋಚನೊಳು 1
ಕರಿರಾಜನ ಕರದಂತೆ ಒಪ್ಪುವ ಕರವು | ಬೆರಳಲಿ ನೋಡೆ
ಪರಿಶೋಭಿಸುತಿಹ ಮಾಣಿಕ್ಯದುಂಗುರವು | ರಾರಾಜಿಸುವ
ಹರಡಿ ಕಂಕಣಗಳು ಬಲು ಸುರುಚಿರವು | ಪರಿಕಿಸೆ ಸುಂದರವು
ಪರಿ ಸರಗಳು ಕೊರಳೊಳು ಶೋಭಿಸೆ
ತರಣಿ ಕಾಂತಿಯನು ತಿರಸ್ಕರಿಸುತ್ತಲಿ 2
ಮಂದಸ್ಮಿತ ಪರಿಶೋಭಿತ ಶುಭವದನ | ಆನಂದಸದನ
ಕುಂದಕುಟ್ಮಲದಂತಿಹ ಸಮರದನ | ಸಂತಾಪಾರ್ದನ
ಬಂಧುರ ಚಂಪಕ ನಾಸಿಕದ ಹದನ | ಏಂ ಪೇಳಲಿ ಅದನ
ಮಂದರಾದ್ರಿಧರ ಕರಿಗಿರೀಶನ
ಎಂದೆಂದಗಲದ ಸುಂದರಾಬ್ಜಮುಖಿ3