ಬೇಗನೆ ಪಾಲಿಸೆ ಸಾಗರಸುತೆ ನಿನ್ನ
ಈಗ ಪೂಜಿಸುವೆನೆ ನಾಗಶಯನನ ರಾಣಿ ಪ.
ಅಂದುಗೆ ಕಿರುಗೆಜ್ಜೆ ಅಂದದ ಪಿಲ್ಲೆನಿಟ್ಟು
ಇಂದು ತೋರಿ ಕಾಯೆ 1
ಜರಿಯು ಪೀತಾಂಬರ ನೆರಿಗೆ ವೈಭವಗಳು
ಕಿರುಗೆಜ್ಜೆ ವಡ್ಯಾಣ ಹರಿಯಂತೆ ನಡುವು 2
ಒಪ್ಪದಿಂದಲಿ ಜರಿ ಕುಪ್ಪಸವನೆ ತೊಟ್ಟು
ಸರ್ಪಶಯನನಿಗೆ ಒಪ್ಪಿಹ ಸತಿಯೆ 3
ಭಾರ ಕುಚದಲಿ ಮೆರೆಯೆ
ನಾರಸಿಂಹನ ರಾಣೀ ತೋರೆ ಕರುಣವ 4
ಮೆರೆವ ಮಂಗಳಸೂತ್ರ ಕರದಿ ಕಂಕಣಗಳು
ವರ ವಜ್ರದುಂಗುರ ಧರಿಸಿ ಮೆರೆಯುವಳೆ 5
ನಾಗಮುರಿಗೆಯನಿಟ್ಟು ಭೋಗಿಶಯನನ ರಾಣಿ
ಮೂಗುತಿ ಮುರವು ಮುಗುಳು ನಗೆಯವಳೆ 6
ಹೊಳೆವ ದಾಳಿಂಬ್ರದಂತೆ ಒಲಿವ ಬುಲಾಕು
ಥಳಥಳಿಪೊ ಗಲ್ಲ ಕರ್ಣಭೂಷಣ 7
ಸುರರ ಪಾಲಿಪ ದೃಷ್ಟಿ ವರ ನಯನಗಳು
ಫಣಿ ತಿಲುಕವು 8
ಹೆರಳು ಬಂಗಾರದ ಧರಿಸಿ ಶಿರೋರತ್ನ
ವರ ಕುಸುಮಂಗಳ ಧರಿಸಿಹ ಚಲುವೆ 9
ಶಿರದಿ ಕಿರೀಟವು ಸರ್ವಾಂಗ ಸುಂದರಿ
ಪರಮಾತ್ಮ ಸಹಿತದಿ ಉರದಲಿ ತೋರೆ 10
ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೊಳು
ಶ್ರೇಷ್ಠ ಭಕ್ತಿಯ ನೀಡೆ ಕೃಷ್ಣನ ಸತಿಯೆ 11