ಒಟ್ಟು 50 ಕಡೆಗಳಲ್ಲಿ , 24 ದಾಸರು , 49 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು
ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ ಪವಿಶೇಷ ಙ್ಞÕನ ಭಕ್ತಿ ಲೇಸಾಗಿ ಸಲಿಸಯ್ಯಾ ಅ.ಪದಾಸನಾಮಕದ್ವಿಜದೇಶಮುಖನ ಮನಿ-ಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ 1ಶ್ರೀಪಾದರಾಯರು ಈಪರಿನಿನ್ನನುಕಾಪಾಡಿ ನವವರ್ಷ ಭೂಪತಿ ಮಾಡಿದರೋ 2ವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ 3ಕಲೆಯಂತೆ ದಿನದಿನದಲಿ ವೃದ್ಧನಾದೆ ನೀ 4ಚಂಪಕತರುಮುಖ್ಯ ಕಂಪಿತ ನದಿಯುತಪಂಪಾಕ್ಷೇತ್ರದಿ ಮಹಾ ಸಂಪತ್ತಿನಿಂದಿದ್ದೆ 5ತರ್ಕಿಸಿ ಯಂತ್ರಸ್ಥ ಚಕ್ರದಿ ಬಂಧಿಸಿದೆ 6ಮಧ್ವರಾಯರ ತಂದು ಸಿದ್ಧಮಾಡಿ ಇಟ್ಟೆ 7ಮಂದಜನಕೆÀ ಸುಧಾ ಛಂದಾಗಿ ಇದರರ್ಥಪೊಂದದೆಂದು ನೀನು ಚಂದ್ರಿಕೆ ರಚಿಸಿದೆ 8ಇನಿತೆ ಮಹಾಮಹಿಮೆ ಘನವಾಗಿ ಜನರಿUಅನುಭವ ಮಾಡಿಸಿದೆ ಅನುಪಮ ಚರಿತನೆ 9ಶುಭಮಯ ಸ್ಥಳದಲ್ಲಿ ಅಭಯನಾಗಿ ನಿಂತೆ ನೀ 10ಛಂದದ ನವಶುಭವೃಂದಾವನದೊಳಿದ್ದೆ 11ಇಂದುನಿಮ್ಮಯಪಾದಪೊಂದಿ ಎನ್ನಯವೃಜಿನ-ವೃಂದ ಪೋದವು ಅರ್ಕನಿಂದ ತಿಮಿರದಂತೆ 12ವಂದಿಸಿ ಬೇಡುವೆ ನಂದದಿ ಸಲಹಯ್ಯ 13ಇಂದುರಕ್ಷಕರಿಲ್ಲವೆಂದು ನಿನ್ನನು ಸಾರ್ದೆ14ಯಿಂದ ಕರೆದು ಕಾಯೋ ನಂದಾದಾಯಕ ನೀನೆ 15ದೃಷ್ಟಿ ಪಾಲಿಸೊ ಸರ್ವೋತ್ಕøಷ್ಟ ಮಹಿಮ ನೀನೆ 16ಮಾತು ಲಾಲಿಸೊ ನಿಜತಾತ ನೀನೆ ಸೀತಾ -ನಾಥ ಗುರುಜಗನ್ನಾಥವಿಠಲನಾಣೆ 17
--------------
ಗುರುಜಗನ್ನಾಥದಾಸರು
ಶ್ರೀನಾಥ ನಿನ್ನ ನಂಬಿದರಿಗೆ ಭವಭಯಮೇಣುಂಟೆ ಭಕ್ತರ ಪ್ರಾಣ ವೆಂಕಟರನ್ನ ಪ.ಅರಸು ಒಲಿದ ಮೇಲೆ ಪಿಸುಣರ ಭಯವುಂಟೆಕರಿಗಂಜಿಹರಿಗುಹೆಯ ಪೊಗುವುದುಂಟೆ-------------------------------------------- 1ಖಗಮಂತ್ರವಿರಲಹಿಯ ವಿಷ ತಾನುಂಟೆಮಗುಳೆ ಚಂಪಕರಸವ ಅಳಿ¬ೂಂಟಿ ಉಳಿವುಂಟೆನೆಗಳುಕರಿಯನು ಹಿಡಿದು ತಾನುಳಿಯಲುಂಟೆಜಗದೀಶ ನಿನ್ನ ನೆನೆದವಗೆ ಯಮನಪುರ ಉಂಟೆ 2ಘನ್ನಪರಸುಕೈಸೇರಿದಗೆ ದಾರಿದ್ರ್ಯ ಉಂಟೆಉನ್ನತ ವ್ಯಾಘ್ರ ಕೇಸರಿಗಳ ಸೆಣೆಸುವುದುಂಟೆಪನ್ನಗಾದ್ರಿವರದ ಪ್ರಸನ್ವೆಂಕಟೇಶೋಪಾಸಕನ್ನಿಗೆಸಂಚಿತಪಾಪಾಂಕುರದೋರುವುದುಂಟೆ3
--------------
ಪ್ರಸನ್ನವೆಂಕಟದಾಸರು
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದುನೆಚ್ಚಿ ಅರ್ಚಿಸು ಗಡ ಮನುಜ ಪ.ವಿರಹ ಶಬ್ದಗಳ ಮೈಯ್ಯೊಲಿದೊಲಿದುಕೇಳಿಸತಿಯರ ಧ್ವನಿಗೆ ಮಗುಳೆ ಮೋಹಿಸುತಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರುಹರಿಕಥೆಯಕೇಳಿಬಾಳು1ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆಪರಸ್ತ್ರೀಯ ಸರಸಕೊಳಗಾಗಿನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜಸ್ಪರುಶ ದೊರಕುವುದೆಂತೊ ನಿನಗೆ 2ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸಲ್ಲಾಪವು ಪರಸತಿಯರೊಡನೆಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿಪಾಪ ಬುದ್ಧಿಗಳನ್ನುಜರಿದು3ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತಮ ಸ್ತ್ರೀಯರಧರಸುಧೆಬಯಸಿಚಿತ್ತವ್ಯಸ್ತವ ಮಾಣದೊಮ್ಮೆಗಾದರೆಹರಿಭಕ್ತಿರಸವೀಂಟಿ ಸುಖಿಯಾಗು 4ವನಜವನವಂ ಬಿಟ್ಟು ಅಳಿವೃಂದ ಚಂಪಕದನನೆಗೈದಿ ಪ್ರಾಣ ಬಿಡುವಂತೆವನಿತೆಯರ ವಾಸನೆಯೆ ನಿರಯದೌತಣವೆಂದುವನಜಾಕ್ಷ ನಿರ್ಮಾಲ್ಯ ಸೂಡು 5ಇಂತೆಂಬ ಪಂಚಭೌತಿಕದೇಹದಾಸೆಯೊಳುಸಂತತದಿಲಂಪಟನೀನಾಗಿಅಂತ್ಯದೊಳುಜರೆಕಾಡುವಾಗ ಕಫ ವಾತವೆಮುಂತಾದ ವ್ಯಥೆ ಬೆನ್ನ ಬಿಡವು 6ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿವಿಸ್ಮರಣೆ ಬೇಡ ಹರಿಪದಕೆಕಶ್ಮಲಾನ್ವಿತವಾದ ಯೋನಿಗಳ ಬರವರಿತುವಿಸ್ಮರಣೆ ಬೇಡ ಹರಿಪದಕೆ 7ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬಕ್ಷುಲ್ಲಕರ ನುಡಿಯನಾಡದಿರುಎಲ್ಲಿ ಭಾಗವತರ ನಿಕೇತನಾಜೆÕಯ ಕೇಳೆಅಲ್ಲಿ ಮಧುಕರವೃತ್ತಿತಾಳು8ಹರಿದಾಸರ ವಿಲಾಸವೆ ಎನ್ನ ಸಿರಿಯೆಂದುಹರಿದಾಸರಡಿಗೆ ಮಗುಳೆರಗಿಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದುಹರುಷ ಪುಳಕಿತನಾಗಿ ಬಾಳು 9ದಶಇಂದ್ರಿಯಂಗಳಿಗೆ ವಶವಾಗದಿರು ಏಕಾದಶಿ ವ್ರತಕೆ ವಿಮುಖವಾಗದಿರುದಶಶಿರಾರಿಯ ನಾಮದಶನವೆಭುಂಜಿಸುದಿಶೆಯರಿತೂ ಕಾಣನಾಗದಿರು 10ಪದ್ಮನಾಭನ ಪಾದಪದ್ಮವೆ ಗತಿಯೆಂದುಪದ್ಮಜನ ಪದಕೆ ಪೋಗುವನಪದ್ಧತಿಯವಿಡಿದುವರಪದ್ಮಪತಿ ವಾಸ ತ್ರೈಸದ್ಮನಿಗೆ ಉದ್ಯೋಗಮಾಡು11ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳುಕಡಿಮಿಲ್ಲವೆಂಬ ಪಾಶವನುಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲುಕಡೆಹಾಯಿಸಬಲ್ಲದಿದು ನಿನಗೆ 12ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದುಜೀವೋತ್ತಮನೆ ವಾಯುವೆಂದುಭಾವಶುದ್ಧಿಗಳಿಂದ ಬಯಲುಡಂಬಕಬಿಟ್ಟುಜೀವಿಸಲು ಸ್ವರೂಪ ಸುಖವಾಹುದು 13ವರಊಧ್ರ್ವಪುಂಡ್ರಹರಿಮುದ್ರೆಯನಲಂಕರಿಸುಶಿರಿ ತುಲಸಿ ಪದ್ಮಸರ ಧರಿಸುಸ್ಮರನ ಶರಕಂಜದರಿಯಾರುವರ್ಗವನೊದೆದುಹರಿದು ಬಹ ದುರಿತಗಳ ಸದೆದು 14ಏಸುಜನ್ಮದಿ ಬಂದು ನೊಂದೆ ಭವಾಟವಿಯೊಳುಮೋಸ ಹೋಗದಿರಿನ್ನು ತಿಳಿದುಬೇಸರದೆ ಉರಗಾದ್ರಿವರದ ಪ್ರಸನ್ವೆಂಕಟೇಶನಂಘ್ರಿಯ ಬಿಡದೆ ಭಜಿಸು 15
--------------
ಪ್ರಸನ್ನವೆಂಕಟದಾಸರು