ಶ್ರೀ ಕೃಷ್ಣ ಚರಿತ್ರೆ
ಅಧ್ಯಾಯ ಒಂದು
ರಾಗ:ಸೌರಾಷ್ಟ್ರ ತಾಳ:ತಿವಿಡೆ ಸ್ವರ ಋಷಭ
ಶ್ರೀ ರಮಣ ಚರಣಾರವಿಂದವ ಆರಡಿ ಪರಿಯಾಗಿ ಸೇವಿಸಿ
ಶ್ರೀ ರಮಾ ಬ್ರಹ್ವಾದಿ ಗುರುಪದ ಸೇರಿ ಸೇವಿಸುವೆ| ನಾರಿಮಣಿ
ಶಿರಿದೇವಿ ಅಪಾರ ಮಹಿಮೆಯ ತಿಳಿವುದಕೆ ಪೂರ
ಮನಗಂಡಿಲ್ಲ ಮತ್ತಿನ್ನಾರು ಬಲ್ಲವರು 1
ಆರಗೊಡವಿನ್ನೇನು ಮತ್ತಿನ್ನಾರು ದೂರಿದರೇನುಸರ್ವವು
ಪೂರಮಾಡುವ ನಮ್ಮ ಗುರುಗಳ ಪೂರದಯವಿರಲು|
ಮನದಲಿ
ಘೋರತರ ಅಭಿಲಾಷೆ ಯೋಗ್ಯತೆ ಮೀರಿ ಇರುವುದು 2
ಮನಸಿನಲಿ ಮಾತ್ಸರ್ಯವಿಲ್ಲದೆ ಘನಕವೀಶ್ವರಗಳಿಗೆವಂದಿಸಿ
ಅನುಸರಿಸಿ ಭಾಗವತವನು ಬಹುವಿನುತ ದಶಮ ಸ್ಕಂದದರ್ಥವ
ಕನ್ನಡಿ ತೋರಿಸಿದಂತೆ ಸ್ಪಷ್ದದಿ ಕನ್ನಡಿಲ್ಹೇಳುವೆನು 3
ಪದ್ಯ
ಭಾರ ಆಘೋರದುಃಖವನು
ಶ್ರೀ ರಮೇಶನ ಸ್ತುತಿಸುತಿರುವ ಕಾಲದಲಿ|
ಸಾರ ಸಾರಿ ಹೇಳಿದನು ವೃಂದಾರ ಕರುಗಳಿಗೆ 1
ಪದ, ರಾಗ:ಯರಕಲಕಾಂಬೋದಿ ಅಟತಾಳ ಸ್ವರಧೈವತ
ಕೇಳಿರೋ ಭೋ ದೇವತೆಗಳಿರಾ ಹೇಳುವೆ ಹರಿಭಾವವ
ಹೇಳಿರೋ ನಿಮ್ಮವರಿಗೆಲ್ಲಾ ಭಾಳ ಸಂತೋಷದಿಂದಲೇ ಪ
ಇಷ್ಟುದಿವಸ ಭೂದೇವಿ ಕಷ್ಟವ ಬಟ್ಟಳು ಬಹಳ ಸ್ಪಷ್ಟವಾಗಿ
ಆಕೆಯಾ ಕಷ್ಟವು ದೂರಾಗುವುದಿನ್ನು || ವಿಷ್ಣುನಾಜ್ಞೆಯಲಿ
ನೀವು ವೃಷ್ಣಿ ಕುಲದಲ್ಹುಟ್ಟಿರೋ|| ವಿಷ್ಣುತಾ ದೇವಕಿಯಲ್ಲಿ
ಕೃಷ್ಣನಾಗಿ ಹುಟ್ಟುವಾ1
ಪದ
ಈ ವಚನವ ಕೇಳಿ ದೇವತಿಗಳಾಗ ಹರಿಸೇವೆ ಆಗಲಿಯೆಂಬೋ
ಭಾವದಲಿ ಜನಿಸಿದರು| ಈ ವಸುಧಿಯೊಳಗವರು
ಭಾವಕನು ಕಶ್ಯಪ ವಿಭಾವಸುವನ ಪೋಲ್ವ ವಸು
ದೇವನಾದನು ಅದಿತಿದೇವಿ ತಾ ಜನಿಸಿದಳು ದೇವಕಿಯು ಆಗಿ|
ದೇವ ಪೂಜಕನು ವಸುದೇವ ತಾ ಪ್ರೀತಿಯಲಿ
ದೇವಕಿಗೆ ಕೊಟ್ಟ ಸದ್ಭಾವದಲಿ ಬೇಕಾದ್ದು ದೇವಕಿಯಲಿ
ವಸುದೇವ ರಥವೇರಿದನು ಆವಾಗ ಕಂಸ ತಾ ತೀವ್ರ
ನÀಡಿಸಲಾವತ್ತಿಗಾಯಿತಲ್ಲೆ ವಿಯದ್ವಾಣಿ
ಪದ, ರಾಗ(ದೇಸಿ) ಅಟತಾಳ, ಸ್ವರಷಡ್ಜ
ಕೇಳು ಕಂಸನೆ ನಿನಗೇಳುವೆ ನಾ ಬಂದು| ಕೇಳು ಕಂಸಾ||
ಬಹಳ ದಿವಸ ಬಾಳಿ ಇರುವವನಲ್ಲ ಕೇಳು ಕಂಸ ಪ
ಮಂಗಳಾಂಗಿಯು ಈಕೆ ತಂಗಿ ಎಂದೆನಬೇಡ ಕೇಳು ಕಂಸಾ|
ತಂಗಿಯ ಮಗನೇ ನಿನ್ನಂಗಕ್ಕೆ ವೈರಿಯು ಕೇಳು ಕಂಸಾ|| 1
ಭಂಡ ನಾನೆಂದು ಉತ್ಕಂಠಿದಿಂದರ ಬೇಡ ಕೇಳು ಕಂಸಾ|
ಎಂಟನೆಯವ ನಿನ್ನ ಘಂಟಸಿ ಕೊಲ್ಲುವನು ಕೇಳು ಕಂಸಾ|| 2
ವೈರಿ ದಾವಾತಿದ್ದಾನೆಂದೆನ ಬೇಡ ಕೇಳು ಕಂಸಾ|
ಶುದ್ಧ ಅನಂತಾದ್ರೀಶ ಅವತಿಳಿ ಕೇಳು ಕಂಸಾ|| 3
ಪದ್ಯ
ನುಡಿದಿರುವ ಆ ಸತ್ಯವಾಣಿಯ ಕೇಳಿ ಮೃತ್ಯುಗಂಜಿಕೀನ್ನ
ಹೊತ್ತುಗಳೆಯದಲೆ ಆ ಹೊತ್ತು ಕೊಲಬೇಕೆಂದು ಸತ್ವರದಿ
ಕೇಶದಲಿ ಒತ್ತಿ ಹಿಡಿದು ಕತ್ತಿ ಹಿರಿದೆತ್ತಿದನು ಕÀಂಸಾ|
ಆ ವೃತ್ತಿಯನು ತಿಳಯುತಲೆ ಅತ್ಯಂತವಾಗಿ ತನ್ನ ಚಿತ್ತದಲಿ
ಮಿಡುಕಿ ಮದಮತ್ತ ಕಂಸಗೆ ನುಡಿದ ಒತ್ತಿ ಈ ಪರಿಯಾ || 1
ಪದ, ರಾಗ:ಆನಂದಭೈರವಿ ಆದಿತಾಳ
ಬೇಡಲೊ ನೋಡಿ
ಈಕೆಯಲಿ ಮಾಡು ಮಮತೆಯನು ಮಾಡಬೇಡ ಹಿಂಸಾ|| ಪ
ಯಾಕೆಕೊಲ್ಲುವಿಯೋ
ನೀ ಕರುಣಿಸು ಸಣ್ಣಾಕಿ ನಿರ್ಮಲಾಂಗಿ|| 1
ಕೊಂದರೆ ಎನಗೆ ಕೇಡು | ಮತ್ತದರಿಂದ ನಿನಗೆ ಕೇಡು
ತಿಳಿದು ನೋಡು|| 2
ಏಸು ದಿವಸ ನೀನು ಬದುಕುವಿ ನಾಶವಿಲ್ಲವೇನು|
ಮೋಸವಾಗದಿರು ಶ್ರೀಶ ಅನಂತಾದ್ರೀ ಕೋಪಿಸುವನು 3
ಆರ್ಯಾ
ಬಹಳ ರೀತಿಯಲಿ ಹೇಳಿಕೊಂಡರೂ ಕೇಳಲಿಲ್ಲ ಕಂಸನು
ಶೌರಿಯು ಹೀಗೆ || 1
ಪದ, ರಾಗ:ಅನಂದ ಭೈರವಿ ತಾಳ:ಆದಿ
ಬೇಡಿದ್ದು ಕೊಡುವೆನು ನಾನು| ಪ
ಜೇವ ಹತ್ಯವೇ ಮುಂಚೆ ಕೇವಲ ನಿಂದ್ಯದು ಸ್ತ್ರೀ ವಧಕಂತು
ಇನ್ನು ದಾವುದು ಸರಿಯದು || 1
ಹುಟ್ಟುದರೀಕೆಯ ಹೊಟ್ಟೆ | ಮಕ್ಕಳು ಘಟ್ಟಿ ಮನಸು ಮಾಡಿ
ಕೊಟ್ಟುಬಿಡುವೆನು ಕೇಳು || 2
ಬಲ್ಲಿದಾನಂತಾದ್ರಿವಲ್ಲಭನ ಆಣಿ|| 3
ಪದ, ರಾಗ:ಯರಕಲಕಾಂಬೋಧಿ
ಶೌರಿಯ ವಚನವ ಕೇಳಿ ವೈರಿಯ ಕಂಸನು ಆಗ ಮೋರೆಯ
ತೆಗ್ಗಿಬಿಟ್ಟನು ನಾರಿಯ ಕೊಲ್ಲುವದು | ವೈರಿಯ ಭಯ ಕಳೆವುತ
ನಾರಿಯ ಕರಕೊಂಡು ||1
ಮುಂದಾ ದೇವಕಿಯಲಿ ಕಂದನು ಆದಾಕ್ಷಣಕೆ ತಂದೊಪ್ಪಿಸಿದನು
ಕಂಸಗೆ ನೊಂದ ವಸುದೇವ| ಮುಂದಾ ಕಂಸನ ನೋಡಿ|
ಮನನ ಹಾಸ್ಯದಿ ಮತ್ತ ಕಂದನ ತಿರಿಗಿ ಒಪ್ಪಿಸಿ ಆಗಂದನು
ಈ ಪರಿಯು || 2
ಶಿಷ್ಟನೆ ನೀಕೇಳೈ ಬಂದಿಷ್ಟಿಲ್ಲಿವನಿಂದೆನಗೆ| ಸ್ಪಷ್ಟದಿ ನಿನಗ್ಹೇಳುವೆ
ಎನಗಷ್ಟಮನೇ ವೈರಿ| ದುಷ್ಟನ ಮಾತಿಗೆ ಶೌರಿಯು ತುಷ್ಟನು
ಇದು ಎಂದು || 3
ಪದ, ರಾಗ:ಕನ್ನಡ ಕಾಂಬೋದಿ ತಾಳ:ಬಿಲಂದಿ
ಮುಂದ ಶೌರಿಯು ತನ್ನ ಮಂದಿರಕ್ಕೆ ಪೋಗಲು ಬಂದ ನಾರದನು
ಆಗಲ್ಲೆ ಕಂಸ ಇದ್ದಲ್ಲೆ || 1
ಮಾಡಿದಾ | ಮಾತನಾಡಿದಾ|| 2
ಸುದ್ದಿಯಂಬೋದ್ಹುಟ್ಟಿತು | ಕೆಲಸ ಕೆಟ್ಟಿತು|| 3
ದಾವ ಮೊತೇನ್ಹೇಳಲಿ ದೇವದೇವ ಶ್ರೀಹರಿ ದೇವಕಿಯಲ್ಲಿ ಪುಟ್ಟುವಾ|
ನಿನ್ನ ಕೊಲ್ಲುವಾ|| 4
ಅಸುರರಾದವರುಗಳಾ ಅಸುಗಳನ್ನೆ ಹೀರುವಾ ವಸುಧಿ
ಭಾರವನಿಳಿಸುವಾ ಕೀರ್ತಿ ಬೆಳಿಸುಮವಾ|| 5
ನಂದಗೋಪಾದಿUಳೆÀಲ್ಲ ನಂದ ಬಾಂದವರು ಮತ್ತು ಮುಂದ
ವಸುದೇವಾದಿಗಳು | ದೇವತಿಗಳು|| 6
ಇನ್ನಕೇಳು ಇವರ ಹೊರ್ತು ಅನ್ನರಾದವರು ಎಲ್ಲಾನಿನ್ನ
ಅನುಸರಿಸೆ ಇರುವುವರು | ಅಸುರರೇ ಅವರು|| 7
ಮೂಲದಲ್ಲೇ ಮುಂಚೆ ನೀ ಕಾಲನೇಮಿಯೆನಿಸಿ ಈ
ಕಾಲಕ್ಕೆ ಕಂಸನಾಗಿರುವಿ | ಮೈಮರ್ತು ಇರುವಿ || 8
ನಿನ್ನ ಪೂರ್ವ ವೈರಿಯು ಚನ್ನಿಗಾನಂತಾದ್ರೀಶಾ ನಿನ್ನ
ಕೊಲ್ಲುವನೆಂಬುದದು |ನಿನಗೆ ತಿಳಿಯದು || 9
ಧಿಟ್ಟ ನಾರದನು ಮುನಿಮುಟ್ಟಿ ಬಂದ್ಹೀಂಗನಲು
ಥಟ್ಟನೆ ಕಂಸ ಭಯಬಟ್ಟು ಅವರಿಬ್ಬರಿಗೆ ಘಟ್ವ ಬೇಡಿಯ ಬಿಗಿದು
ಹುಟ್ಹುಟ್ಟದವರನ್ನ ಬಿಟ್ಟು ಬಿಡುದಲೆÀ ಕೊಂದ ಹುಟ್ಟಿದಾಕ್ಷಣಕೆ||
ಹುಟ್ಟುಗ್ರ ಸೇನನಲಿ ಹುಟ್ಟಿದಾರಭ್ಯ ಬಹು ದಿಟ್ಟಾದ ಸ್ನೇಹವನು
ಬಿಟ್ಟ ಆ ಕಂಸ ಕಂಗೆಟ್ಟು ಬಹುಕಾಸೋಸಿ ಬಟ್ಟವನ ಬಂದಿಯ
ಲ್ಲಿಟ್ಟುತಾನೆ ಆದ ಪಟ್ಟಕಾಧಿಪತಿಯು|| 1
ಪದ:ರಾಗ:ಶಂಕರಾಭರಣ ಸ್ವರ:ಷಡ್ಜ, ತಾಳ:ಆದಿ
ಯೂದವರನ್ನು ಬಹುಪೀಡಾ ಬಡಿಸೀದಾ || 1
ದುಷ್ಟನ ಕೈಯೊಳು ಸಿಕ್ಕು ಶಷ್ಟ ಬಡಲಾರೆವು ಎಂದು
ಅಷ್ಟೂರು ನಿಲ್ಲದೆ ದೇಶಭ್ರಷ್ಟರಾಸರು|| 2
ಅನುಬಂಧಿಗಳೆಂಬುವರು ಅನುರಾಗದಿಂದಲ್ಲೆ|
ಅವನ ಅನುಸರಿಸಿಕೊಂಡಿರುತಿಹರು ಅನುದಿನದಲ್ಲಿ||3
ಕ್ರೂರಾಗಿ ಇರುವೊನು ಕಂಸಾ ನಾರಿ ದೇವಕ್ಕಿ ದೇವಿಯು
ಆರು ಮಹಾಕಾಳಿಯ ಹರೊ ಆಜ್ಞೆಯಿಂದ ಕೀಳುತು
ರೋಹಿಣಿ ಗರ್ಭದೊಳಿಟ್ಟಳು|| 4
ದೇವಕಿದೇವಿಯು ವಸುದೇವಾದಿಗಳೆಲ್ಲ ಗರ್ಭ
ಸ್ರಾವವಾಯಿತೆಂದೊದರಿದರು ಆ ವ್ಯಾಳ್ಯದಲ್ಲಿ|| 5
ಎಂಟನೆ ಗರ್ಭಾಗಿ ಶ್ರೀ ವೈಕುಂಠೇಶ | ನಿಂತಾನು ಸಾಧು
ಕಂಟಕರನ್ನು ಕೊಲ್ಲುವೆ ನೆಂದುತ್ಕಂಠದಿಂದಲಿ || 6
ಶಂಜಾಕ್ಷಿ ದೇವಕಿ ದೇವಿ ಶಂಜನಾಭನುದರವೆಂಬೋ
ಪಂಜರದೊಳಿರಲು ತೇಜಃ ಪುಂಜಳಾದಳು7
ಇಂಥಾಕಿಯ ಕಂಡು ಕಂಸಾನಂತಾದ್ರೀಶ ಗರ್ಭದಲ್ಲಿ
ನಿಂತಾನೆಂದು ತಿಳದೀಪರಿ ಚಿಂತಿ ಮಾಡಿದಾ|| 8
ಪದ:ರಾಗ:ಶಂಕರಾಭರಣ
ಏನು ಮಾಡಲಿ | ನಾ ಇನ್ನೇನು ಮಾಡಲಿ | ಏನು ಮಾಡಲೇನು
ವಿಷ್ಟು ತಾನೆ ಬಂದಿನ್ನೇನು ಗತಿ ಇನ್ನೇನು|| ಪ
ವೀರರೊಳಗೆ ಸೇರಿ ಎನ್ನ ಮಾರಿ ಹ್ಯಾಂಗ ತೋರಲಿನ್ನೇನು ||1
ತಂಗಿ ವಧ ಜಗಂಗಳೊಳಗೆ ಅಮಂಗಳಿದು ಸು