ನೀನೇ ಕಾಪಾಡಬೇಕು ನಿರುತವು ಬಿಡದೆಯ-
ಜ್ಞಾನಾಬ್ಧಿಯ ದಾಟಿಸು ಸೀ-
ಕಮಲ ಭೃಂಗ ಶುಭಾಂಗ 1
ಸುಗ್ರೀವನ ಮಂತ್ರಿವರ ದ-
ಶಗ್ರೀವನ ಗುದ್ದಿದವನೆ ಶತ್ರುನಿಕರವಂ
ಶೀಘ್ರದಿ ಗೆಲುವಂದದಲಿಯ-
ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ 2
ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ
ಪಿರಿಯರು ಪೇಳಿದ ಪರಿಯಲಿ
ನೆರೆನಡೆವಂದದಲಿ ಸುಮತಿಯನು ಕೊಡು ಹನುಮ3
ಹೊರಗಿನ ಶತ್ರುಗಳಂ ವಾ-
ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ
ದ್ಯರ ಗೆಲುವುದಕೆ ಶಾಂತಿಯೆ
ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ4
ಕತ್ತಿಯಲಿ ಕಡಿದೆರೆರಡಾ-
ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ
ನೆತ್ತಿಮೊದಲು ಪಾದವರಿಗು
ಕತ್ತರಿಸಿದರೀತಿಯಹುದು ಕಾಯೈ ಹನುಮ 5
ಪರಧನ ಪರಾಕಾಮಿನಿಯರಿ
ಕೊರಳೊಳರಿವೆಂಬ ರಜ್ಜುವಿಂದಲಿ
ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ 6
ಸಂಗವು ನಿತ್ಯಾಹ್ನೀಕಕೆ
ಭಂಗವು ಬರುತಿಹುದು ಸದ್ವಿಷಯವಾದರದೆ
ಬಂಗಾರವು ರತ್ನವು ತಾ
ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ 7
ನವವಿಧ ಭಕ್ತಿಯ ಕೊಡು ರಾ-
ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ
ತವಕದಲಿ ಪಾಲಿಸುತಲಿ ನಿ-
ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ 8
ತಾನನುದಿನದಿ ಬರುವ ಕಷ್ಟಗಳನು
ಪರಿಹರಿಸುತ್ತ ಹಿಂದೆ ತಿರುಗುತಲಿರುವಂ9