ಶ್ರೀರಮಾರಮಣ ಶರಣಾರ್ತಿನಿವಾರಣಾ ಪ
ಸಾರಸಾಕ್ಷ ಕರುಣಾರಸಪೂರ್ಣ
ಭೂರಿ ಸುವೈಭವ ಭುವನರಕ್ಷಣಅ.ಪ
ನಾನು ನಿನ್ನೊಳು ಮೊರೆಯಿಡುತಿರುವೆನೊ
ನೀನೆನ್ನೊಳು ದಯೆದೋರು ಹರಿಯೆ
ದೀನಪಾಲನಾಪರ ನೀನೆನ್ನುತ
ಲಾನು ಬಂದೆನೊ ಶ್ರೀನಿಕೇತನ 1
ಹಿಂದೆಯನೇಕರ ಕಾಪಾಡಿರುವೆ
ಮುಂದೆಯು ಭಕ್ತರ ಬೆಂಬಿಡದಿರುವೈ
ತಂದೆ ಬಂದು ಗಜರಾಜನ ಸಲಹಿದೆ
ಯೆಂದು ನಂಬಿದೇ ಮಂದರಾದ್ರಿಧರ 2
ಸುಧಾಮ ಅಜಮಿಳ ಅಂಬರೀಷ ದ್ರೌ
ಪದಿಯರ ಸಮಯದಿ ಕಾಯ್ದವನೇ
ವಿಧಿಪಿತ ನೀನದುಭುತಮಹಿಮನಯ್ಯ
ಸುಧಾ[ಮ] ನ ಬಂಧುವೆ ಜಾಜೀಶಾ 3