ನಿರುತದಿ ನೆನೆ ನರಹರಿಯ ನರಹರಿಯ ಶಿರಿಧೊರೇಯ ಪ
ಪೋತ ಧ್ರುವನು ತಾ ತಾತನ ತೊಡಿಯಲಿ
ಪ್ರೀತಿಲಿ ಕುಳಿತಿರೆ ಮಾತೆ ದೂಡಲತಿ ಸೋತು ಮನದಿ ಹರಿ
ಸ್ತೋತ್ರವ ಗೈಯ್ಯಲಾತಗೆ ಪದ ನೀಡಿದಾ 1
ಕಡಿಗ್ಯಾದ ದ್ರೌಪದಿ ಮುಡಿಯ ಪಿಡಿದು ಖಳ
ಬಿಡÉಳೆದೊಯ್ಯೊ ಕಡುದುರುಳ ಸಭೆಗೆ
ಸಿಡಿದೆಳೆಯೆ ಶೀರೆಯನು
ಒಡನೆ ಹರಿಯೆನಲುಡುವಾಸವಕ್ಷೈಸಿತು 2
ದುರುಳ ಹಿರಣ್ಯಕಶು-
ಪಿರದೆ ಪೀಡಿಸಲು ಪರಿಪರಿಯಿಂದಲಿ
ಹರಿಗೆ ಮೊರೆಯಿಡಲು ಕರುಳು ಬಗೆದ ನರಸಿಂಹವಿಠಲನು 3