ನಂಬಿಗಿಟ್ಟ ಸಂಸಾರ
ಇದು ನಂಬಿ ಹಂಬಲಿಸದಿರು ಪೂರಾ ಪ
ಕಾಯವೆಂಬುದು ಸ್ಥಿರವಲ್ಲಾ
ಅತಿ ಮಾಯಕೆ ಬಂದು ಸಿಕ್ಕಿದೆಲ್ಲಾ
ಬಾಯಿ ರುಚಿಗಳು ಬಿಡು ಎಲ್ಲಾ
ರುಚಿ ರುಚಿಸೆಲ್ಲಾ
ತಂದೆ ತಾಯಿಗಳು
ಇನ್ನು ಹೊಂದಿದ ಅದರಲ್ಲೆ ಬಗೆ
ಮಾಯದೊಳು ಇರುವಾಗೆ
ಆನಂದ ತೋರುವದು ನಿನ್ನೊಳಗೆ 1
ಧೊರೆತನ ದೌಲತ್ತು ಸ್ಥಿರವೆಂದು
ಪರಿ ಪರಿಯಲಿ ವಿಹರಿಸು ಎಂದೂ
ಪರಮಾತ್ಮನ ಭಜನಿಲ್ಲದೆಂದೂ
ವ್ಯರ್ಥ ಪಾಪಕೆ ಒಳಗಾಗಿ ಕೆಡುವೆಂದೂ 2
ಬದುಕು ಬಾಳುವೆ ನಂಬಿಕೊಂಡು
ಮುಂದೆ ತುದಿಗಾಣದೆ ಹೋಗ್ವದು ಕಂಡೂ
-----------------------
---------------------- 3
ಅಷ್ಟೂ ಶ್ರೀಹರಿ ಮಾಯವೆಂದೂ
ಸ್ಪಷ್ಟದಿ ಮನದಲಿ ತಿಳಿಯಿಂದೂ
ಶಿಷ್ಟ ಹೆನ್ನ ವಿಠ್ಠಲನೆಂದೂ
ಉತ್ಕøಷ್ಟದಿ ಹೃದಯದಿ ಸ್ಮರಿಸಿಂದೂ 4