ಒಟ್ಟು 258 ಕಡೆಗಳಲ್ಲಿ , 62 ದಾಸರು , 223 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ನಿಮ್ಮ ಪದ ಕಾಂಬೆನೊ | ಗುರು ಎಂದಿಗೆ ನಿಮ್ಮ ಪದ ಕಾಂಬೆನೊ ಪ. ಎಂದಿಗೆ ನಿಮ್ಮ ಕಾಂಬೆ ಅಂದಿಗೆ ಮುಕ್ತಳಹೆ ಅ.ಪ. ಸಕಲ ಶಾಸ್ತ್ರಗಳನೆ ಶೋಧಿಸಿ | ಬಹು ಅಕಳಂಕ ತತ್ವವ ಸಾಧಿಸಿ | ಬೇಗ ಮುಕುತಿ ಯೋಗ್ಯರಿಗೆಲ್ಲ ಸುಖವ ತೋರುವ ಗುರು 1 ಮನದಿ ನೆಲಸಿ ಲೀಲೆ ತೋರುತ | ದೃಢ ಮನದಿ ಮನಸಿಜನ ಗೆಲ್ಲುತ | ದೇವ ಮನಸಿಜನಯ್ಯನ ಮನಸಿನೊಳ್ ತೋರುತ 2 ಕಷ್ಟಪಡುವುದು ಕಾಣುತ | ಬಹು ತುಷ್ಟರಾಗಿ ಅಭಯ ನೀಡುತ | ಮನ ಮುಟ್ಟಿ ರಕ್ಷಿಪೆನೆಂದು ಇಷ್ಟು ಸಲಿಪ ಗುರು 3 ನರಹರಿ ಧ್ಯಾನಿಪ ಶ್ರೀ ಗುರು | ಬಹು ಕರುಣಾಳುವೆ ದೇವತರು | ನಿಮ್ಮ ಅರಘಳಿಗೆ ಬಿಟ್ಟು ಇರಲಾರೆ ಧರೆಯೊಳು 4 ಮುಕ್ತಿ ಸೌಭಾಗ್ಯವ ನೀಡುವ | ಬಹು ಶಕ್ತರಹುದು ನಿಮ್ಮ ಭಾವವ | ನಾನು ಎತ್ತ ಯೋಚಿಸೆ ಕಾಣೆ ಸತ್ಯವಚನವಿದು 5 ಆನಂದಪಡಿಸುವ ಶ್ರೀ ಗುರು | ನಿಮ್ಮ ಏನೆಂದು ಸ್ತುತಿಹಲಿ ಪಾಮರರು | ನಿಮ್ಮ ಕಾಣರು ಜಗದಲಿ ಏನೆಂಬೆ ಮಹಿಮೆಯ 6 ಗೋಪಾಲಕೃಷ್ಣವಿಠ್ಠಲನ | ಶುಭ ರೂಪವ ತೋರುವ ಕಾರುಣ್ಯ | ದೇವ ಪರಿ ನಿಮ್ಮ ಸ್ತುತಿಸಿ ನಾ ಪಾರು ಕಾಂಬೆನು 7
--------------
ಅಂಬಾಬಾಯಿ
ಎಂದಿಗೆ ನೀ ಕರುಣಿಸುವಿ ಸುಂದರಾಂಗ ಎನ್ನೊಳು ಕುಂದಿ ಪೋದೆನಲ್ಲೊ ಬೇಗ ಬಂದು ಕಾಯೊ ಕರುಣಾಳು ಪ. ಧರ್ಮ ಕರ್ಮಗಳು ಮಾಳ್ಪ ಮರ್ಮವರಿಯದಿದ್ದರು ಭರ್ಮದಾಶೆಗಾಗಿ ಹೀನ ಕರ್ಮದೊಳಗೆ ಬಿದ್ದರು ದುರ್ಮದಾಂಧರನು ಗೆಲುವ ನಿರ್ಮಲ ಚಿದಾತ್ಮ ನಿನ್ನ ಹಮ್ರ್ಯದ ಮುಂದೊದರಿ ಸರ್ವಶರ್ಮಪೊಂದಿಚ್ಛಿಸುವೆನು 1 ಜೀಯ ನಿನ್ನ ಪೊಗಳಿ ಪಾಡುವಾಯವಿರಲು ಸಾಕಯ್ಯ ರಾಯರೊಲವು ತನ್ನಂತೆ ನಿರಾಯಾಸದಿಂದಹುದೈಯ್ಯ ವಾಯುವೀಯ ಜನರ ಕೂಡಿ ಮಾಯ ಗೆಲಲು ಮಾನವೀಯ ಕಾಯವನ್ನು ನೋಯದಂತೆ ಕಾಯೊ ಸಕಲದಾಯಕಾರಿ 2 ನಿತ್ಯಾನಂದ ನಿನ್ನ ಪಾಡಿ ಹೊತ್ತ ಕಳೆವ ಕಾರ್ಯಕ್ಕೆ ಒತ್ತಿ ಬರುವ ವಿಘ್ನಬಾಧೆ ಹತ್ತದಂತೆ ಓಡಿಸು ಸತ್ಯರಮಣ ಶರಣ ಪುರುಷೋತ್ತಮ ಶ್ರೀ ವೆಂಕಟೇಶ ಚಿತ್ತದಲ್ಲಿ ನಿನ್ನ ದಿವ್ಯ ಮೂರ್ತಿದೋರೊ ಮರಿಯದಿರು 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೆ ನೀ ಯೆನ್ನ ಮುಂದಕೆ ಬರುವೆಯೊ ಸುಂದರ ಮೂರುತಿಯೆ ನಂದದಿ ಭಕುತರ ವೃಂದಗಳೆಲ್ಲವ ಸಂದೇಹವಿಲ್ಲದೆ ಮುಂದಕೆ ಕರದೊಯ್ವೆ ಪ ಪಂಕಜಾಕ್ಷನೆ ನೀನು ಕಿಂಕರ ಜನರಾ- ತಂಕಗಳೆಲ್ಲವ ಶಂಕಿಸದೆ ವೆಂಕಟನಾಮಕ ಸಂಕಟಪರಿºರವಿವ- ಳಾಂಕರನÀರವ ನಿಶ್ಶಂಕೆಯಿಂದಲಿಯಿತ್ತು 1 ಆರುವೈರಿಗಳೆನ್ನ ಗಾರುಮಾಡುವರಯ್ಯಾ ಆರು ಕಾವರು ಇಲ್ಲಾ ಮಾರಜನಕನೆ ಪಾರುಗಾಣಿಸದೆ ನೀ ದೂರಗೈಸಲು ಯನ್ನ- ನಾರು ರಕ್ಷಿಪರೊ ದೋಷವಿದೂರನೆ ಪೇಳೋ 2 ಯರಬೆರಡೆನಾಗಿತ್ತು ಪೊರಿಯೋ ದೇವರ ದೇವ ಕರುಣಾಬ್ಧಿ ನೀನೆಂದು ವರವೋದು ಶ್ರುತಿಯು ಶರಣಾಗತನನ್ನು ಪೊರೆಯದೆ ಬಿಡುವಂದು ಸರಿಯೇನೋ ಕರುಣಾಳು ಸಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಎಂದಿಗೆ ಪಾಲಿಪೆ ಎನ್ನ ಗೋ- ಪ ವಿಂದ ಮುಕುಂದ ಆ- ನಂದ ಮೂರುತಿಅ.ಪ ಚರಣಸೇವೆಯ ಕೊಡಿಸಿ ಪರಮಭಕ್ತರೊಳಿರಿಸಿ ದುರಿತರಾಸಿಗಳ ಪರಿಹರಿಸಿ 1 ತಾರದೆ ಸಂತೋಷದಿ ಮಾರಜನಕ ನಿನ್ನ ಧೇನಿಸುವಂತ 2 ಗುರುರಾಮವಿಠ್ಠಲ ನಿನ್ನ ಹೊರತು ಅನ್ಯರಿಲ್ಲ ಸಿರಿನಲ್ಲ 3
--------------
ಗುರುರಾಮವಿಠಲ
ಎಂದಿಗೆ ಬಿಟ್ಟೀತು ಈ ಆಸೆ ಪ ಕುಂದಿ ಕುಂದಿ ಕೊರಗುವ ಮನಸೆ ಅ.ಪ ಸಾರವಿಲ್ಲದ ಸುಖಗಳ ಕೋರಿ | ಸಂ- ಸಾರವೆಂಬ ಚಕ್ರದಿ ಸೇರಿ1 ಕಷ್ಟದಿಂದೇನು ಕಾಣುವೆ ಕೊನೆಗೆ 2 ಗರ್ವಹಂಕಾರಗಳಿಂ ಮೆರೆದೆ 3 ಅದು ಇದು ಬೇಕೆಂದಪೇಕ್ಷಿಸುವೆ | ನಿನ್ನ ಮೊದಲರಿಯದೆ ವೃಥಾ ಯೋಚಿಸುವೆ 4 ಪರಮಸುಖವ ಪಡು ನೀ ಸತತ 5
--------------
ಗುರುರಾಮವಿಠಲ
ಎಂದಿಗೆ ಶ್ರೀಹರಿಯಾ ಮಾತಿಲಿ ಕಾಲವು ಕಳೆದಲ್ಲಿ ಘನವೇನಿಲ್ಲಯ್ಯ ಪ ಸ್ಥಳಕುಲ ಮೋದಿಸಿ ತಾಂಡವಮೂರ್ತಿಯ ಕುಲನೆನಿಸಿ ಮಾರ್ಗದಲಿ ಕುಲನೆಲೆ ತಿಳಿದು ಕಾಣುತಹೋಗುವ ನೆನೆಗಳ್ಳರ ಕೂಡೆ ಚಲೊ ಚಲೊ ಬೋಧಿಗೆ ಒಳಗಾಗಿ ಮಧುರಸ ಚಂಚಲ ನತಿ------ದು ಭಲ ಭಲ ಎನಿಸಿಕೊ ಬೇಗನೆ ಪರಮ ಭಕ್ತರ ಒಳಗೆಂದೂ 1 ಸರಸರ ಮಾರ್ಗದ ಸರಳಿಯ ತಿಳಿದಾ ಶರಣರ ನೆಲೆಗಾಣೊ ನೆರೆಹೊರೆಲಿರುವರ ಕರಕರಿಗಳುಯೆಂಬ ಕಲ್ಮಿಷ-----ಕಾಣೊ ಹರಿಗುರು ಕರುಣಾದಿ ಅಂತರಂಗದಿ ಅರಿತಿರುವರ ಕೂಡೋ ಪರಿ ಪರಿಯಲಿ ಆ ಭಂಡಾರದ ಗುರುಭಾರವು ನೀನೋಡೊ 2 ಮನಘನ ಕಾಂತಿಯ ಮಹಿಮೆಯ ತಿಳಿದಾ ಮರ್ಮಜ್ಞರ ಬೆರಿಯೊ ದಿನ ದಿನ ಸಂಭ್ರಮವನು ಅಘಸರಿಸಿ ದೃಢಭವವು ಪಿಡಿಯೊ ತನುವನು------ದ್ರಿಸಿ ತಾರಕ ಜಪಿಸಿ ಧನ್ಯನಾಗೊ ಇನ್ನೂ ದೀನಜನ ರಕ್ಷಕ ಧೀರ 'ಹೆನ್ನೆ ವಿಠ್ಠಲನ’ ಧಿಟ್ಟದಿ ಸ್ಮರಿಸಿನ್ನು 3
--------------
ಹೆನ್ನೆರಂಗದಾಸರು
ಎಂದಿಗೆನಗೆ ಬುದ್ಧಿ ಬಂದಿತೋ ಹರಿಯೆ ಇಂದೀವರಾಕ್ಷ ನೀನೆ ಗತಿ ದೊರೆಯೆ ಪ. ಕಣ್ಣಿದಿರಲಿ ಕಂಡು ಕಾಲಗತಿಗಳನ್ನು ತನ್ನ ಸಂಸ್ಥಿತಿ ಮುಂದೆಂತಾಹುದನು ಚೆನ್ನಾಗಿ ಗ್ರಹಿಸದೆ ಚಪಲ ಚಿತ್ತದಿ ಗೃಹ ಸನ್ಮಹದಲಿ ಮನವನಿಟ್ಟು ಬಳಲುವೆ 1 ಸಾಗದ ಕಾರ್ಯವ ಸುಲಭವೆಂದೆಣಿಸಿದ- ರಾಗದು ಹಗಲಿರಳೊರಳಿದರು ನಾಗಶಯನ ನೀನು ನಿರ್ಣಯಿಸಿದ ರೀತಿ ಯಾಗುವದೆಂಬುದನರಿಯದೆ ಮರುಳಾದೆ 2 ಇಂತಾದ ಮ್ಯಾಲೆ ಶ್ರೀಕಾಂತ ನೀ ದೊರಕುವ- ದೆಂತು ಸಂಘಟ್ಟಿಪದೋ ನಾನರಿಯೆ ಕಂತುಜನಕ ವೆಂಕಟೇಶನೆ ಮಾನಸ ಭ್ರಾಂತಿಯ ಬಿಡಿಸು ನಿಶ್ಚಿಂತೆಯಿಂದಿರಿಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೊ ಕಾಣೆ ಸುಖವು | ಜೀವಕೆ ಪ ಬಂಧಕದೊಳು ಸಿಕ್ಕಿ ಬಾಧೆ ಪಡುತಿಹುದು ಅ.ಪ ಜನರೂಢಿ ನೋಡಿದರೆ ಕೊನೆಗಾಣುವುದೇ ಇಲ್ಲ 1 ಗರ್ಭಯಾತನೆ ಎಂಬೋದÀರ್ಭುದವಾಗಿಹದು ನಿರ್ಭರ ದುಃಖಗಳಾವಿರ್ಭೂತವಾಗುವುದೊ 2 ಬಾಳುವ ಕೌಮಾರದಿ ಬಹುಚಿಂತೆಯನುದಿನ 3 ಬದ್ಧ ಸಂಸಾರಕೆ ಮದ್ದು ಮಾಡುವರಾರು 4 ಯಾವಾವಸ್ಥೆಗಳಲ್ಲಿ ಜೀವಗೆ ಸುಖವಿಲ್ಲ ಕಾವನು ಗುರುರಾಮವಿಠಲನೊಬ್ಬನೆ ಬಲ್ಲ 5
--------------
ಗುರುರಾಮವಿಠಲ
ಎಂದಿಗೋ ಆಗುವುದಕೆ ಈಗ್ಯಾಕೆ ವ್ಯಾಜ್ಯ ಪ ಮುಂದೆ ನೋಡಿ ನಡಿಯದಿರೆ ಮುಕ್ತಿ ಪೂಜ್ಯ ಅ.ಪ ಬ್ರಹ್ಮಗೆ ಜೀವತ್ವ ಯಾವಾಗ ಬಂತು ನಮ್ಮೊಳಗೆ ಗೊತ್ತಿಲ್ಲದ ಭ್ರಾಂತು 1 ಮಾಯಾ ಮಿಥ್ಯ ಸತ್ಯ ನಾವು ನೋಡಿಕ್ಕೊಂಡರೆರಡು ಅಗತ್ಯ 2 ಗುರುರಾಮವಿಠಲ ಇದರ ಕುರುಹಲ್ಲಾ 3
--------------
ಗುರುರಾಮವಿಠಲ
ಎಂದಿಗ್ಯಾಹೋದೋ ನಿನ್ನ ದರುಶನ ಪ ವೇಳೆ ತಪ್ಪದೆ ಊಳಿಗವನು ಧ್ಯಾನ ಮಾಳ್ಪ ನಿನಾಳುಗಳ ಸಂಗ 1 ನಿನ್ನ ಮೂರ್ತಿಗಳ್ಧ್ಯಾನ ಮಾಡುವ ಉನ್ನಂಥಾ ಗುಣಯೆನ್ನ ಸೇರ್ವದೋ 2 ತ್ರಿಜಗವಂದಿತ ಕುಜನನಿಂದಿತ ಭುಜಗಶಯನ ಶ್ರೀ ವಿಜಯವಿಠ್ಠಲನೇ 3
--------------
ವಿಜಯದಾಸ
ಎಂದಿಗ್ಹ್ಯೋದೀತಯ್ಯಾ ಹರಿ ಹರೀ ಎಂದು ಮುಳುಗೀತಯ್ಯಾ ಪ ಎಂದಿಗ್ಹೋದೀತು ಸುಖ ಅಂದಗೆಡಿಪ ಮಹ ಮಂದಮತಿಯು ಎನ್ನಿಂದ ಬಿಟ್ಟು ದೂರ ಅ.ಪ ಕತ್ತಲ ಕಾಳಿದು ಎನ್ನನು ಸುತ್ತಿಕೊಂಡು ಸೆಳೆದು ಸತ್ಯಮರೆಸಿ ಸ್ಥಿರಚಿತ್ತ ಕೆಡಿಸಿ ಪಿಡಿ ದೆತ್ತಿ ಹಾಕುತಿದೆ ಮತ್ತೆ ಭವಬಂಧದಿ 1 ಮುಂದರಿಗೊಡದಿದು ನಿರುತದ ಅಂದವ ತಿಳಿಗೊಡದು ಬಂಧಿಸಿ ಬಲುಘೋರಾಂಧಕಾರ ಮುಚ್ಚಿ ಸಂದಿನೊಳ್ನೂಕೆನ್ನ ಕೊಂದು ತಿನ್ನುತಿದೆ 2 ತೆರೆದು ನೋಡಲೀಯದು ಕಣ್ಣಿಗೆ ಪರದೆಯ ಹಾಕುವುದು ನರಹರಿಶರಣರ ಕರುಣಮಂ ತಪ್ಪಿಸಿ ಪರಮ ಶ್ರೀರಾಮ ನಿಮ್ಮ ಚರಣ ದೂರೆನಿಪುದು 3
--------------
ರಾಮದಾಸರು
ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಪ ಮುಂದರಿತು ಶ್ರೀಹರಿಯ ಭಜಿಸುವುದು ಲೇಸುಅ ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ 1 ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ2 ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ 3
--------------
ಕನಕದಾಸ
ಎಂದು ಕಾಹು(ಣು?)ವೆ ಎನ್ನ ಮನೋಹರ ಎಂದಿ[ಗೆಕಾ] ಹುದಿನ್ನೆಂದಿಗೆ ಬಂದೆ ಭವಭವಭವವೀ ದುಃಖದಿ ನೊಂದೆನೊ ರಂಗನಂಘ್ರಿ ಚರಣವ ಪ. ಮಂಗಳಾಂಗನ ಮಾಧವನ ಕೋಟಿ ಅಂಗಜಜನಕವಿಲಾಸನ ಗಂಗಾಜನಕನ ಗರುಡವಾಹನ ತುಂಗವಿಕ್ರಮನಂಘ್ರಿ ಚರಣವ 1 ಕಂತುಜನಕನ ಕಮಲನಾಭನ ಸಂತತದ ಸರ್ವೇಶನ ಯಂತ್ರವಾಹಕ ಎನ್ನ ಒಡೆಯನ ಚಿಂತಾಯ[ಕ]ನ ಶ್ರೀ ಚೆಲುವಚರಣವÀ 2 ಪರಮಪುರುಷನ ಪುಣ್ಯನಾಮನ ಶರಣುಜನಸರ್ವೇಶನ ಕರುಣಿ ಹೆಳವನಕಟ್ಟೆರಂಗನ ಚರಣ[ವ]---------- 3
--------------
ಹೆಳವನಕಟ್ಟೆ ಗಿರಿಯಮ್ಮ
ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಪ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ 1 ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ 2 ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ 3 ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ 4 ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ 5 ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ6 ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ ಈ ರೀತಿಯಲಿ ಕೂಡ ಇಂದಿರೇಶನ ಕೂಡ 7 ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ ಭದ್ರ ಮೂರುತಿಯಾದ ಭವಹರ ಕೂಡ 8 ಗುರುಪುರಂದರ ಉಪದೇಶನ ಬಲದಿಂದ ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ 9
--------------
ವಿಜಯದಾಸ
ಎಲ್ಯಾದರು ಮಾಡಬೇಕು ಕೆಲಸ ಪ ಅಲ್ಲೇನು ಇಲ್ಲೇನು ಬಲ್ಲಂಥಾವನಾದರೆ ತಾನು ಅ.ಪ ಶರೀರ ಸಂಬಂಧಿಗಳಿಗಾಗಿ | ಮೂರು ಕರಣದಿಂದಲಿ ಅನುವಾಗಿ ಕರೆಕರೆಪಡುತಲಿ ಅರೆನಿಮಿಷವಾದರೆ ಬಿಡದೆ 1 ತ್ತರವಾದ ಕಟ್ಟಾಜ್ಞೆ ಅಲ್ಲಿ ನ- ರರ ಕಾಟವು ಇಲ್ಲಿ ಸುರರ ನಿಬಂಧನೆಯಲ್ಲಿ 2 ಬಾಲ್ಯ ಯೌವನ ಕೌಮಾರ | ಮುಪ್ಪು ಲೀಲೆಯಿಂದಲಿ ಕೆಲವರು ಗೋಳಾಡುತಲಿ ಕೆಲವರು3 ಸ್ವಲ್ಪಾದರು ಸತ್ಕರ್ಮ ಮಾಡೆ | ಫಣಿ- ಅಲ್ಪರಿವುದು ಯಾಕೆ 4 ಇಪ್ಪತ್ತು ನಾಲ್ಕು ತತ್ವಗಳಿಂದ | ನ- ಕ್ಲುಪ್ತಗೈದಿರುವನು ಆಪ್ತ ಎಂದಿಗೂ ನಮಗವನು 5
--------------
ಗುರುರಾಮವಿಠಲ