ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ
ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ.
ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ 1
ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ 2
ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ 3
ಸಾರ ಸುಖಸಾಂದ್ರಾ 4
ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5