ಪಾದ | ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ
ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ.
ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |ಸಾನು ರಾಗದಿ ಜ್ಞಾನವಾರ್ಜಸಿ | ಜ್ಞಾನ ನಿಧಿ ಎಂದೆನಿಸಿ ಮೆರೆದ 1
ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ 2
ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ | ಜಗದೀಶ ವಿಠಲಾಂಕ ಪಡೆದ 3
ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ | ಶ್ರೀ ಹರಿಕಥೆ ಸುಧೆಯ ಗರೆದ 4
ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ | ಈಕ್ಷಿಸುತ ಭುವಿಯನ್ನೆ ತೊರೆದ 5