ಒಟ್ಟು 57 ಕಡೆಗಳಲ್ಲಿ , 21 ದಾಸರು , 57 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ ಪ ಅನಿಮಿಷರಂದದಿ ವನವಾಸಕೆ ಹೋದವನ _ ಶ್ರೀರಾಮ ಎನ್ನಿರೊಮನಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ _ ಶ್ರೀರಾಮ ಎನ್ನಿರೊಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ _ ಶ್ರೀರಾಮ ಎನ್ನಿರೊದಿನಕರನಳಿವಿನಲಿ ಪಗೆಯ ಗೆದ್ದಾತನ _ ಶ್ರೀರಾಮ ಎನ್ನಿರೊ1 ಗಜವನೇರಿದವನ ತಂದೆಯ ತಾಯನಳೆದವನ _ ಶ್ರೀರಾಮ ಎನ್ನಿರೊಭುಜಬಲದಿಂದ ಭೂಪಾಲರ ಗೆದ್ದವನ _ ಶ್ರೀರಾಮ ಎನ್ನಿರೊನಿಜಮುನಿಗಳ ವನದಿಂದ ತನಯರ ತಂದವನ _ ಶ್ರೀರಾಮ ಎನ್ನಿರೊಭುಜಗಧರನ ಕೈಯ ಆಯುಧವನು ತಂದವನ _ ಶ್ರೀರಾಮ ಎನ್ನಿರೊ 2 ವಾಸವ ಹೊಕ್ಕವನ _ ಶ್ರೀರಾಮ ಎನ್ನಿರೊತೃಣಕೆ ಬಾಯಿತ್ತನ ಮೇಲೇರಿ ಬಪ್ಪನ _ ಶ್ರೀರಾಮ ಎನ್ನಿರೊ ಅಣುರೇಣು ತೃಣದೊಳು ಪರಿಪೂರ್ಣನಾದನ _ ಶ್ರೀರಾಮ ಎನ್ನಿರೊಪ್ರಣವಗೋಚರ ಕಾಗಿನೆಲೆಯಾದಿಕೇಶವನ _ ಶ್ರೀರಾಮ ಎನ್ನಿರೊ 3
--------------
ಕನಕದಾಸ
ಸಾರಿ ಚೆಲ್ಯದೆ ನೋಡಿಹಸ್ವರೂಪ ತೋರುವ ಗುರುದೀಪ ಧ್ರುವ ಒಳಹೊರಗಿದು ಥಳಥಳಿಸುತಲಿಹುದು ಮೊಳೆಮಿಂಚಿನಕಳೆ ಝಳಝಳಿಸುತ ನಿಜ ಹೊಳೆಯುತಿಹುದು ಇಳೆಯೊಳಗಿಂದು ತಾ ಬೆಳಗಿನೊಳಿಹ ಘನ ಬೆಳಗಿನ ಪ್ರಭೆಯು 1 ಅನುದಿನ ನೋಡಿ ತುಂಬಿ ತುಳುಕುವದು ಮುನಿಜನ ನೋಡುವಾನಂದದ ಸುಖವಿದು ಘನಪರಬ್ರಹ್ಮಾನಂದದ ಬೆಳಗು 2 ಕಣ್ಣಿಗೆ ಕಾಣಿಸುತಿಹುದು ನೋಡಿ ಭಿನ್ನವಿಲ್ಲದೆ ಅಣುರೇಣುದೊಳೆಲ್ಲ ಧನ್ಯಗೈಸಿತು ಮಹಿಪತಿ ಜೀವನವಿದು ತನ್ನಿಂದಲಿ ತಾನೆ ತಾನೊಲಿದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಾತ ನಾನಲ್ಲಾ ಸಾವು ಮೊದಲೆನಗಿಲ್ಲಾ ಯೋಗಿ ತಾ ಬಲ್ಲಾ ಪ ಧರೆಯೆನಿಸಿ ದೊರೆಯಾಜÉ್ಞಯೊಳಾಳುತಿಹೆ ನಾನು ವರಮಂತ್ರಿಯಾಗಿ ವರ್ತಿಸುವವನೆ ನಾನು ಕರಣಿಕರ ತೆರದಿ ಲೆಕ್ಕವ ನೋಡುತಿಹೆ ನಾನು ಪರಿವಾರವಾಗಿ ಓಲೈಸುವವನೆ ನಾನು 1 ವಾಹನ ಹೊರುವಾತ ನಾನು ಹೊತ್ತಂತಿರುವೆ ನಾನು ಹರಿನಾಮ ಹರನಾನು ನರನಾನು ಸರ್ವವೀ ಪರಿಯೊಳಗೆ ಮೆರೆದು ವಿಸ್ತರಿಪೆ ನಾನು 2 ಅಣುರೇಣು ತೃಣಕಾಷ್ಠ ಭರಿತನಾಗಿಹೆ ನಾನು ಗಣನೆಯಿಲ್ಲದ ಗುಣವ ತೋರ್ಪೆ ನಾನು ಉಣಲಿಕ್ಕುವವ ನಾನು ಉಂಡು ತೃಪ್ತಿಪೆ ನಾನು ರಣನಾನು ರಣವ ಗೆಲುವಾತ ನಾನು 3 ಭೂಮಿಯಾಗಿಹೆ ನಾನು ಬೆಳೆವ ಬೆಳೆಯೇ ನಾನು ಸೋಮ ಸೂರ್ಯಾಗ್ನಿ ವಾಯುಗಳೆ ನಾನು ನಾಮರೂಪಾತೀತ ವಸ್ತುವಾಗಿಹೆ ನಾನು ಕಾಮಿನಿಯರಾಗಿ ಕಾಮಿಸುವವನೆ ನಾನು 4 ಒಲಿವಾತನೇ ನಾನು ಒಲಿದರಗಲೆ ನಾನು ಕೊಲಿಸಿಕೊಂಬುವೆ ನಾನು ಕೊಲುವಾತ ನಾನು ಸುಲಭದಿಂದಲಿ ಜ್ಞಾನ ಫಲವಿಕ್ಕುವವ ನಾನು ಚೆಲುವ ವಿಮಲಾನಂದ ಗುರುರಾಯ ನಾನು 5
--------------
ಭಟಕಳ ಅಪ್ಪಯ್ಯ
ಸ್ಥಾಣುಂಕರ ವಿರಾಜಿತ ರಮಾಸದನ ಮೋಹನ ಪ ವಾಣೀಶ ಸಂಭಾವಿತ ಗೋಪೀಜನ ಸೇವಿತಾ ಅ.ಪ ಮಣಿಭೂಷಣ ರಂಜಿತ ಮುಕ್ತಜನಾನಂದಿತಾ 1 ಫಣಿಮಣಿಗಣ ಸಂಭೂಷಿತ ವನಿತಾಜನ ತೋಷಿತ 2 ಅಣುರೇಣು ತೃಣಪೂರಿತ ಗುಣಸಾಗರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ಧ್ರುವ ಬಲಗೊಂಡದೆ ಬ್ರಹ್ಮಭಾವ ನೆಲಗೊಂಡದೆ ಸರ್ವದ ಬಲುದೋರುತದೆ ಸುಸ್ವಾದ ಸುಲಭ ಸದ್ಗುರು ಪ್ರಸಾದ 1 ತಾನಾಗ್ಯದೆ ತಾರ್ಕಣ್ಯಸ್ವಾನುಭವದ ಸುಪುಣ್ಯ ಮುನಿಜನರೆ ಧನ್ಯಧನ್ಯ ಅಣುರೇಣುಕ ತಾ ಮಾನ್ಯ 2 ಮನೋನ್ಮನದಾಶ್ರಯ ಭಾನುಕೋಟಿ ಉದಯ ದೀನ ಮಹಿಪತಿಗಿದೆ ಸಾಹ್ಯ ಅನುದಿನಿದೇ ಉಚ್ಛ್ರಾಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀನೆ ಸಕಲಾಧಾರ ಸದ್ಗುರುದಾರ ಧ್ರುವ ಅಣುರೇಣು ಪರಿಪೂರ್ಣ ನೀನೆ ಶ್ರೀನಾರಾಯಣ ತನುಮನಕರಣ ಪ್ರಾಣದೊಳು ವ್ಯಾಪಕ ಗುಣಜನಮನ ಸ್ಥಾನದೊಳು ನಿಜಾಧಿಷ್ಠಾನ ನಾನಾ ಪರಿಯ ಖೂನ ನೀನೆ ಚೈತನ್ಯ ಘನ 1 ಪಾರಾವಾರ ದೂರ ಸುರಜನರ ಮಂದಾರ ಕರುಣಾಕರ ಸ್ಥಿರ ಪರಮ ಙÁ್ಞನ ಗಂಭೀರ ದುರುಳ ಜನ ಸಂಹಾರ ಸಾರ ಗುರು ನೀನೆ ಸಾಕಾರ 2 ದಾತ ನೀನೆ ವಿಶ್ವವಂದಿತ ಗುಣಾತೀತ ಸ್ವತ:ಮುನಿಜನರ ಸ್ವಹಿತ ಅನುದಿನ ಸದೋದಿತ ದಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ಹರಿ ತಾರಿಸೆನ್ನ ಸಹಕಾರಿ | ದಯಬೀರಿ | ಸಿರಿ ಮನೋಹಾರಿ | ಶೌರಿ | ನರಹರಿ ಮರೆಯದೆ ಹೊರಿ ಮನ ಹರಿವಾರು | ಪರಿ ಪರಿ 1 ಸ್ಪುರಿತಾ ಚಕ್ರಗೋಗದಾಬ್ಜ ಭರಿತಾ | ಯುಧನಿರುತಾ | ಶೋಭಿತಾ | ನಿರ್ಜರ ಸರಿತಾ | ಗುರುತದನವರತ ದಲರಿತರ ದುರಿತಪ | ಹರಿ ಚಿದಾನಂದ ಭರಿತ ಸುಚರಿತಾ 2 ಸನ್ನುತ ಮಹಿಪತಿ | ಅಣುಗನೊಡಿಯಾ ಫಣಿವರ ಶಾಯೀ | ಎಣೆಗಾಣದಗಣಿತ | ಗುಣಗಣ ಮಣಿಖಣಿ | ಅಣುರೇಣು ತೃಣಕಣ ವ್ಯಾಪಕ ಪೂರಣ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಎನ್ನ ಸಲಹೋದಾತಶ್ರೀನಾಥಪ.ಅಣುರೇಣು ತೃಣ ವ್ಯಾಪ್ತ ಅಕಳಂಕ ನಿರ್ಲಿಪ್ತವನರುಹಾಸನ ಪ್ರೀತ ವೈಕುಂಠಕರ್ತ1ತಾಪಸಜನ ಪೂಜ್ಯ ತರಣಿಕೋಟಿತೇಜಶ್ರೀಪರಮೋತ್ತಮ ಸಕಲಾಂತರಾತ್ಮ 2ಬ್ರಹ್ಮಾಂಡಸಂರಕ್ಷ ಭಾಗವತರ ಪಕ್ಷಹಮ್ಮಿನ ಖಳರೊದ್ದಹರಿಅನಿರುದ್ಧ3ಸ್ವರ್ಣಮುಖರೀ ತೀರ ಸನ್ನಿಧಿ ಮಂದಿರಪೂರ್ಣಮಹಿಮ ವಟಪರ್ಣಾಶ್ರಯ ಕೃಷ್ಣ 4ಸ್ವಾಮಿ ಪುಷ್ಕರವಾಸಶುಭಮಂದಸ್ಮಿತಹಾಸಪ್ರೇಮಾಬ್ಧಿಅಹರ್ನಿಶಿಪ್ರಸನ್ವೆಂಕಟೇಶ5
--------------
ಪ್ರಸನ್ನವೆಂಕಟದಾಸರು
ಪ್ರಾಣಾಂತರ್ಗತಪ್ರಾಣ ಅಣುರೇಣುಚರಾಚರಪೂರ್ಣ ಪ.ಕಾಣೆನು ನಿನ್ನ ಸಮಾನ ಮಾನದ ಪು-ರಾಣಪುರುಷಸುತ್ರಾಣವರೇಣ್ಯಅ.ಪ.ಪಂಕಜನಾಭಶ್ರೀವೆಂಕಟರಮಣನೆಕಿಂಕರಜನಮನಃಪ್ರೇಮದನೆಶಂಕರಾದಿ ಸುರಸಂಕುಲ ಸೇವಿತಶಂಖ ಸುದರ್ಶನ ಗದಾಬ್ಜಹಸ್ತನೆ 1ಪಾಪಿಯು ನಾ ನೀ ಪಾಪಹ ಪಾವನರೂಪಪರಾತ್ಪರಗೋಪಾಲಕಾಪಾಡೆಮ್ಮ ಸಮೀಪಗನಾಗಿ ಜ-ಯಾಪತಿಗೋಪತಿಶ್ರೀಪತಿ ನೀಗತಿ2ಚಟುಳ ನೇತ್ರಾವತಿತಟನಿಕಟಪ್ರಕಟವಟಪುರವರ ವೆಂಕಟಧಾಮವಟುವಾಮನ ಲಕ್ಷ್ಮೀನಾರಾಯಣಪಟುವೀರ್ಯ ತಮಃಪಟಲನಿವಾರಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣು ಶರಣು ಶೇಷಗಿರಿವರದ ದೇವಶರಣು ಶರಣು ಲಕ್ಷ್ಮೀವರ ಮುದದಶರಣಾಗತ ಭಯಸಂಹಾರ ಕಾರಣಕರುಣ ಕರಣ್ಯನಂತಕಿರಣಘವಾರಣ ಸುವಾರಣಉದ್ಧರಣಜಹರನುತಚರಣಪ.ಕೃತಸೇವ್ಯಾಮಲ ಅವ್ಯಾಕೃತಗಾತ್ರ ದೇವಪೃಥುರಾಜಪಾಲಾಂಬುಜಾಯತ ನೇತ್ರಯತಿ ಹೃದಯ ಗುಹ್ಯಾಂಗೀಕೃತೋತ್ತುಂಗಹೃತಕ್ಷಿತಿ ಜಾತ ಸತಿಪ್ರತತಿಗೃಹೀತಾವಿತಥÀಶ್ರುತಿಸ್ಮøತಿಗೀತ ಪ್ರೀತ ರತಿಪತಿಪಿತನೆ1ಸೋಮಕುಲಾಬ್ಧಿ ರಾಕಾಸೋಮಕಾಶ ದೇವಸಾಮಜಪಕ್ಷ ಸುರಸ್ತೋಮ ಪೋಷಕಕಾಮಿತಾರ್ಥಪ್ರದಾತ ಸ್ವಾಮಿತೀರ್ಥಧಾಮತ್ರಿಧಾಮ ಸುಮನಸಾಮೋದಪ್ರೇಮಧಿ ಶ್ರೀಮತ್ನಾಮ ನಿಸ್ಸೀಮ 2ಹನುಮನಿಮೇಷ ಋಷಿಗಾನಪ್ರಿಯ ದೇವಸನಕಸನಂದನ ಸನಾತನಧ್ಯೇಯಮಣಿಮಯಕನಕಭೂಷಣಾಂಕ ಭೂಮುನಿಜನ ಧ್ಯಾನ ಲೀನ ಅಣುರೇಣು ಪೂರ್ಣಪ್ರಸನ್ನವೆಂಕಟನಗಪಾ ಪುನಃಪುನಾನುದಿನ 3
--------------
ಪ್ರಸನ್ನವೆಂಕಟದಾಸರು
ಸಕಲವೆಲ್ಲವು ಹರಿಸೇವೆಯೆನ್ನಿರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿನಡೆವುದೆಲ್ಲವು ಹರಿಯಾತ್ರೆಯೆನ್ನಿ ||ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿಕುಸುಮ ಪರಿಮಳವು ಕಂಜನಾಭಗೆನ್ನಿ ||ಎಸೆವಾಭರಣವು ಯಶೋಧೆನಂದನಗೆನ್ನಿಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿಕೋಟಲೆ ಸಂಸಾರ ಕಪಟನಾಟಕಗೆನ್ನಿ 3ನಿದ್ರೆ ಜಾಗರವು ಸಮುದ್ರಶಯನಗೆನ್ನಿಭದ್ರಗಜನಿಧಿ ವರದಗೆನ್ನಿರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀಮುದ್ರೆ ಧರಿಸಿದವ ಹರಿದಾಸನೆನ್ನಿ 4ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿಎಣಿಸಬಾರದನಂತ ಮಹಿಮನೆನ್ನಿಸೆಣಸುವ ರಕ್ಕಸರ ಶಿರವ ಚಂಡಾಡುವಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
--------------
ಪುರಂದರದಾಸರು
ಸ್ವಾಮಿ ನರಸಿಂಹ ಶರಣುಶ್ರೀಮಹಾ ಅಹೋಬಲನಿಲಯ ದೇವ ಶರಣು ಪ.ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತಗಾತ್ರಭಜಕಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ 1ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತದನುಜಹಿರಣ್ಯಕಹರ್ತ ದೀನನಾಥಕನಕಜಠರನ ಜನಕ ಕರುಣಾಂಕ ಕ್ರೂರಮುಖಪುನೀತಶುಭಚಾರಿತ್ರ ಪ್ರಹ್ಲಾದಮಿತ್ರ2ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನಮುದಶಾಂತ ಪರಿಪೂರ್ಣಮೂರ್ತಿ ಪುಣ್ಯಪ್ರದನಾಮ ನವರೂಪ ಪತಂಗಾನಂತಪ್ರದೀಪ ನಿನ್ನಪದವೆಗತಿಹೊರೆಯೆನ್ನ ಪ್ರಸನ್ವೆಂಕಟರನ್ನ3
--------------
ಪ್ರಸನ್ನವೆಂಕಟದಾಸರು