ಕೊಡವನು ಹೊರಲಾರೆನೆ ಅಕ್ಕಕೊಡವನು ಹೊರಲಾರೆನೆಕೊಡವನು ಹೊರಲಾರೆ ಕಷ್ಟಪಡಲಾರೆಕೊಡವನು ಒಡೆದರೆ ಕಡೆಹಾಯುವೆನೆ ಪ
ನಿತ್ಯ ಶುಚಿಯಾಗದ ಕೊಡನೆ1
ರೂಪು ದಿನದಲಿ ಮಾಸಿಹ ಕೊಡನೆಆಪತ್ತಿನಿಂದ ನರಳುವ ಕೊಡನೆಪಾಪದ ಪುಂಜದ ಪಡಿಶಂಟು ಕೊಡನೆಜೋಪಾನ ಮಾಡಲು ಜರಿವಾ ಕೊಡನೆ 2
ಎಲ್ಲಿಂದ ಬಂದಿತೋ ಎನಗೀ ಕೊಡವುಎಲ್ಲಿಯ ಪಾಪಿಯು ಮಾಡಿದ ಕೊಡವುಬಲ್ಲ ಚಿದಾನಂದನ ಮರೆಸುವ ಕೊಡವುಬಾಳನು ಕೊಡಿಸುವ ಸತಿಯೆಂಬ ಕೊಡವು 3