ಒಟ್ಟು 1211 ಕಡೆಗಳಲ್ಲಿ , 4 ದಾಸರು , 1185 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬು ಹರಿಯ ಎನ್ನ ಮನವೇ ಪ ಸುರಪತಿ ಮುಳಿಯಲು ಸಕಲ ಗೋವಳರನು| ಹೊರೆದನು ಕರದೆತ್ತಿ ಗಿರಿಯಾ 1 ಭಕುತಿಲಿ ಶರಣು ಬರಲು ಸುದಾಮನು| ಸಕಲ ಸುಖವನಿತ್ತಾ ದೊರೆಯಾ2 ಗುರುಮಹಿಪತಿ ದೀನೋದ್ಧಾರನು| ಮುರ ಅರಿಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬುಗೆ ಪಡಿಯಿರೋ ದೇವರ ದೇವನಾ ಪ ಧಾಮ ಸಾರ್ವಭೌಮ ತಾಮರಸ ಸಖ ಆ ಮಹಾಕುಲೋದ್ದಾಮ ಆಹವ ಭೀಮ| ಸ್ವಾಮಿ ಸಕಲರ ಕಾಮಿತಾರ್ಥವ ನೇನಿ ಮುನಿಜನ ಪ್ರೇಮಿ| ಚರಿತ ನಿಸ್ಸೀಮಿಯಾ1 ಧಾಟಿಯಲಿ ನರನಾಟಕ ವಿಡಿದ ಆಟವಾಡಲು ನೀಟಾ| ಕೋಟಿ ಕೋಟಿ ನಿಶಾಟ ದರ್ಪೋಚ್ಚಾಟ ಮಾಡಿದ ಸ್ಪೋಟಾ| ನೀಟ ಶರಣ ಮುಕುಟಿಗಿತ್ತನು ಪೀಠಾ| ಧೀಟ ಶ್ರೀ ಜಟೆ ಜೂಟ ವಂದಿತ ಪಾಟರಹಿತ ಸ್ಪರಾಟನಾ 2 ಅಂದು ಇಂದೇ-ನೆಂದಿಗಾದರ ವಂದೇ ದಯದಿಂದ| ಛಂದ ಛಂದದ-ಲಿಂದ ಭೋಕ್ತರ ಬಂಧು ಭಕ್ತರ ವೃಂದ| ಸುಂದರಾನನ ಕುಂದರದನ ಸುಮಂದ ಹಾಸಾನಂದ| ಇಂದಿರೈರಸ ತಂದೆ ಮಹಿಪತಿ ಕಂದ ಪ್ರೀಯ ಮುಕುಂದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮಗೊಬ್ಹಾನೆ ತಾ ಜೀವಜೀವದ ಗೆಳೆಯ ಧ್ರುವ ಸುತ್ತಿ ಸೂಸ್ಯಾಡುತ್ಹಾನೆ ನೆತ್ತಿಯೊಳಗೆ ತುಂಬ್ಯಾನೆ ತುತ್ತುಮಾಡಿ ಉಣಿಸುತ್ಹಾನೆ ಹತ್ತಿಲೆ ತಾ ಹಾನೆ 1 ಹೊಟ್ಟೆಲೆನ್ನ ಹಿಡಿದಾನೆ ಘಟ್ಯಾಗಿ ರಕ್ಷಿಸುತಾನೆ ದೃಷ್ಟಿಸಿ ನೋಡುತ್ಹಾನೆ ಗುಟ್ಟಿನೊಳ್ಹಾನೆ 2 ತಾನೆ ಸೋತು ಬರುತ್ಹಾನೆ ಎನಗುಳ್ಳ ಸದ್ಗುರು ನಾಥ್ಹಾನೆ ಕನಗರಸಿದಾಗೊಮ್ಹಾನೆ ಮನದೊಳು ನಿಂದ್ಹಾನೆ 3 ಮಾಯದ ಸುಖ ಮರಿಸ್ಯಾನೆ ತಾಯಿ ತಂದೆ ತಾನಗ್ಹ್ಯಾನೆ ಸಾಹ್ಯ ಬಲು ಮಾಡುತ್ಹಾನೆ ಭವಭಯ ಬಿಡಿಸ್ಹ್ಯಾನೆ 4 ಮನ್ನಿಸಿ ದಯ ಬೀರುತ್ಹಾನೆ ಧನ್ಯ ಪ್ರಾಣಗೈಸುತ್ಹಾನೆ ಚಿಣ್ಣ ಮಹಿಪತಿಯ ಗುರು ತಾನೆ ಕಣ್ಣಿನೊಳ್ಹಾನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮೊ ಶ್ರೀ ರಮಣಿ ಜಯ ತ್ರಿಭುವನ ಜನನೀ ಪ ನಾಭ ಪ್ರೀಯೇ ಗುಣ ಸದನೀ | ಜಾಂಬೂನದಾಂಬರ ವರಣೀ | 1 ಸುರಮನಿ ವಂದ್ಯ ಪದದ್ವಯ ಪಾವನೀ ನರಸೀರುಹದಳ ನಯನೀ2 ಗುರುವರ ಮಹಿಪತಿ ನಂದನೋದ್ದರಣೀ ಶರಣ ರಕ್ಷಕ ಘನ ಕರುಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ಮುಖ್ಯ ಪ್ರಾಣ ನಾಥನೇ ನಮೋ ಜಗದೊಳು ಪ್ರಖ್ಯಾತನೇ ಪ ಧರಣಿ ಸುತೆಯ ಮುಖ ಚಂದ್ರಚಕೋರನಾ ಸಿರಿ ಚರಣಾಂಬುಜ ಭೃಂಗಾ ಸುರವರರಿಯ ತಂದೆಯ ಮಾವನ ಸಂ ಹರಿಸದೆ ವಾನರ ತುಂಗಾ1 ದುರ್ಯೋಧನಾದಿ ನೂರೊಂದು ಮಂದಿಯ ತನು ಪರ್ವತ ವಜ್ರದಂಡಾ ಕರಿ ಏರಿ ಬಹ ಭಗದತ್ತನ ಗದೆಯಿಂದ ಹರಿಸದೆ ಭೀಮ ಪ್ರಚಂಡಾ2 ಧರಿಯೊಳುತಾನವ ಗುಣ ಕರಿಯಾವಳ ನರಸಿಂಹನು ಮಧ್ವರೇಯ ಪರಮರೂಪವ ಮೂರಾಗಿ ದೊರಿದೆ ಗುರು ಮಹಿಪತಿ ಪ್ರಭು ಪ್ರೀಯಾ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮ ಕುಲದೈವೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿನೀತ ಧ್ರುವ ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನ ವಂದಿತ ಸದ್ವಸ್ತುನೀತ 1 ಧಾರುಣಿಯ ಗೆದ್ದಾತ ತರಳಗೊಲಿದಹನೀತ ದಾತ ಕರುಣಿ ಈತ 2 ಮೂರು ಪಾದಳಿದಾತ ಪರಶುಧರನಹುದೀತ ಸುರಜನರ ಪೂಜಿತ ಸರ್ವೋತ್ಮನೀತ 3 ಪವನಸುತಗೊಲಿದಾತ ಮಾವನ ಮಡುಹಿದಾತ ಭುವನತ್ರಯಲೀತ ದೇವನೀತ 4 ಬೆತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ ಭಕ್ತರಿಗೆ ಹೊರೆವಾತ ಶಕ್ತನೀತ 5 ಅಣುರೇಣುದೊಳೀತ ಅನುಕೂಲವಾದಾತ ಆನಂದೋ ಬ್ರಹ್ಮ ಅನಂತನೀತ 6 ಮಹಾಮಹಿಮನಹುದೀತ ಬಾಹ್ಯಾಂತ್ರಪೂರಿತ ಮಹಿಪತಿಯ ಸಾಕ್ಷಾತ ವಸ್ತುನೀತ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮ ಗುರುರಾಯನೇ | ಸ್ಮರಿಸಿದಾಗಲಿಹನೇ ಪ ಮನುಜನಾಗಿ ಬಂದನೇ | ಮತ್ರ್ಯದೊಳು ನಿಂದನೇ | ಜನನ ಮರಣ ಸಂದನೇ | ಜರಿಸಿ ಕೊಟ್ಟಾ ನಂದನೇ1 ಚಿತ್ತದ ಮೈಲಿಗೆ ಕಳಿಸಿದನೇ | ಚಿದ್ಘನಾಮೃತ ಗರದನೇ | ಸತ್ಯ ವಾಕ್ಯಾ ಬಿತ್ತಿದನೇ ಸತ್ವದ ಹೊಲ ಬೆಳಸಿದನೇ2 ಮಹಿಪತಿ ನಂದನ ಪ್ರಾಣನೇ | ಮಹಾಪ್ರಜ್ಞಾಪೂರ್ಣನೇ | ಇಹಪರ ಕೊಡುವ ತ್ರಾಣನೇ | ಮಹಿಮೆಗೆ ಎಣೆಗಾಣೆನೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮ ದೈವ ದೇವನೀತನು ಧ್ರುವ ನಮ್ಮ ದೈವ ದೇವನೀತ ನಮ್ಮ ಜೀವ ಪ್ರಾಣದಾತ ನಮ್ಮ ಕಾವ ಕರುಣ ಶ್ರೀದೇವನೀತ ನೋಡಿರೊ 1 ನಿರ್ವಿಕಲ್ಪ ನಿರ್ಗುಣೀತ ನಿರ್ವಿಕಾರ ನಿಷ್ಟ್ರತೀತ ನಿರ್ವಿಶೇಷನಾದ ನಿರಾಳನೀತ ನೋಡಿರೊ 2 ನಿತ್ಯ ಏಕಶ್ಯಾಂತನೀತ ನಿತ್ಯನಿರಂಜನೀತ ನಿತ್ಯನಿಜ ಮಹಿಪತಿಯ ವಸ್ತುಗತಿಯ ನೋಡಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮ ನಿಮ್ಮಗೊಂದಾದ ಮಾತು ಬ್ರಹ್ಮಾದಿಗಳು ಹೋದರು ಸೋತು ಒಮ್ಮನಾದರೆ ತಿಳಿವದಂತು 1 ಬಿಟ್ಟು ಕೊಡೊ ನಿನ್ನ ಬಾಜಿ ಗಂಟುಹಾಕಿಹೆ ಬಲು ಗಜಿಬಿಜಿ ಮುಟ್ಟಲಾರದು ಮೊನೆ ಸಣ್ಣ ಸೂಜಿ ಗುಟ್ಟು ಹೇಳೊ ಸದ್ಗುರು ದೇವಾಜಿ 2 ನಮ್ಮ ನಿಮ್ಮಳಗ್ಯಾಕೆ ತೊಡಕು ಇಮ್ಮನಾದರೆ ಹುಟ್ಟಿತು ಒಡಕು ಹಮ್ಮು ಎನ್ನೊಳಗಿಲ್ಲ ನೀ ಹುಡುಕು ಸುಮ್ಮನ್ಯಾಕಿದು ಶ್ರಮೆಯ ತಿಡುಕು 3 ಗುರು ಹೇಳಿದ ಮಾತಿಗೆ ಮುಟ್ಟಿ ತೋರಿ ಕೊಡಬೇಕು ನೀನೆ ಗಟ್ಟಿ ಅರಿತ ಮ್ಯಾಲೆ ಮಿಸುಕನು ತುಟ್ಟಿ ಖರೆ ಮಾಡಿಕೊ ಜಗಜಟ್ಟಿ 4 ಒಂದು ಮಾತು ಎಂಬುದು ಬಲ್ಲಿ ಸಂದ ಸಂದೇಹ್ಯಾರಿಸೊ ನೀ ಇಲ್ಲಿ ಕಂದ ಮಹಿಪತಿ ಮನದಲ್ಲಿ ಚಂದವಾಗಿರೊ ನೀನೆವೆ ಅಲ್ಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮ ರಂಗನ ಕಂಡಿರ್ಯಾ ಹೇಳಿರಿ ನೀವಮ್ಮಾ ಪ ಅರಳೆಲೆ ಮಾಗಾಯಿ ಕಿರಿಗೂದಲು ಮುತ್ತಿನ| ವರಮಕುಟ ಪದಕ ಕೊರಳಿನಾ 1 ಕುಂಡಲ ಕುಡಿ-ಗಂಗಳ ಬೆಳಗಿನ| ಚೆಲುವ ಕದವು ಮುದ್ದು ಸೊಬಗಿನಾ 2 ಬರಿಮುಗುಳ ನೆಗೆಯಾ ಸುದಂತ ಸಾಲಿನ ಸಿರಿವತ್ಸಧರ ಹೇಮಚಸನನಾ3 ಧರೆಯೊಳು ಭಕ್ತರ ಮಾಡುವ ಪಾವನ| ಮಿರುಪರನ್ನದಂಗುರ ಬೆರಳಿನಾ 4 ಕೊಳಲನೂದಿ ಗೋಪ್ಯಾರ ಮೋಹಿಪ ಮನಸಿನಾ| ಒಲಿದು ಪಾಲಿಪ ಮಹಿಪತಿಜನ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ಧ್ರುವ ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ 1 ತುಂಬಿ ತುಳುಕಿತಾನಂದ ಗುಂಭಗುರುತ ಕಂಡಿನ್ನು ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ 2 ಗುಪ್ತಲಿದ್ದ ಧನ ತಾ ಪ್ರಾಪ್ತ ವ್ಯಾನಂತವಾಯಿತು ತಪ್ಪದೆ ಮಹಿಪತಿಗೆ ತೃಪ್ತಿ ಹೊಂದಿತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮಮ್ಮನ ಕಂಡೆ ಬೊಮ್ಮನ ಪಡೆದಿಹಳ ಧ್ರುವ ಅಮ್ಮನ ಕಂಡೆನಗೆ ಸುಅಮೃತ ಪಾನವಾಯಿತು ಸಂಭ್ರಮದಿಂದಲೆನಗೆ ಬ್ರಹ್ಮಾಂಡದೊಳು 1 ಅಹ್ಲಾದವಾಯಿತಿಂದು ಫುಲ್ಲಲೋಚನೆಯ ಕಂಡು ಉಲ್ಲಾಸ ತುಂಬಿತೆನಗೆ ಮೂಲೋಕದೊಳು 2 ಮಾತೃ ಪಿತೃವೆಂಬುದು ಸೂತ್ರಧಾರಿ ತಾನೊಬ್ಬಳೆ ಅಂತ್ರ ಬಾಹ್ಯದಲೆನಗೆ ಪುತ್ರ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ 1 ಸದ್ಭೋಧದನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರು ಬೆನ್ನಟ್ಟಿ ಹೋಗೆ ಹಿಂದೆ 2 ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಗುಹ್ಯ ವಾಕ್ಯದ ಹೆಜ್ಜೆ ಮೆಟ್ಟು ಸುಳವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿಹನಾ ನಿಮ್ಮ ಪಾದರಕ್ಷಕೆ ಗಂಟು 3 ಬಾಗಿಲಕಾಯಿಕೊಂಡು ಬಿದ್ದಿಹ್ಯ ನಿಮ್ಮ ಶ್ವಾನ ಹಗಲಿರುಳು ನಾ ನಿಮ್ಮ ಬೊಗುಳವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗುಮದಿಂದ ದೊರೆಯಿತು ನಿಜ ಸ್ಥಾನ 4 ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷ ಸಂಪೂರ್ಣ ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ ಪಿಡಿದು ಮಾಡುವೆ ನಾ ಜತನ ಮೂಢ ಮಹಿಪತಿಗಿದೆ ಸುಖಸಾಧನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನರ ಹರಿನಾಮವ ನೀ ನೆನೆದರೆ| ಧರಿಯೊಳು ಸಾಲದೇ ಇಹಪರ ದೋರದೆ| ಬರದೇ ಸಾಯಾಸ ಬಡುವರೇ ಪ ಆದಿ ಯುಗಂಗಳಲಿ ತಾಪಸರು| ಸಾದರ ಬಹುದಿನದಿಂದಾ| ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ| ಶ್ರೀಧರ ತಾ ದಯದಿಂದಾ1 ಸಂತರ ಸಂಗದಿ ಶ್ರವಣವ ಮಾಡಿ| ಆಂತರ್ಭಾವನೆ ಬಲಿಸೀ| ಭ್ರಾಂತ ನೀನಾಗದೆ ಅನ್ಯ ಸಾಧನದಲಿ| ಸಂತತ ಕೀರ್ತನೆ ಬೆರೆಸೀ2 ಸಾವಿರಕೊಂದೆ ಈ ನುಡಿ ನಿಜವೆಂದು| ಸಾವಧವನಾದವ ಮನುಜಾ| ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ| ಆವನಂಬವನೇ ದನುಜಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರಜನ್ಮ ವ್ಯರ್ಥವಲ್ಲವೇ | ಈ ಮೂಢರ | ನರಜನ್ಮ ವ್ಯರ್ಥವಲ್ಲವೇ ಪ ಗುರುಗಳ ಶರಣ್ಹೊಕ್ಕು ದಯ ಪಡಿಲಿಲ್ಲಾ | ತರಣೋಪಾಯದ ನಿಜ ತಿಳಿದವನಲ್ಲಾ 1 ಘಟ್ಟಿಸಿ ಒಬ್ಬರ ಮನಿಯ ಮುಣಗಿಸಿ | ಹೊಟ್ಟೆಯ ಬಿಟ್ಟನು ಅನ್ಯಾಯ ಘಳಿಸಿ 2 ಉತ್ತಮರಲ್ಲಿ ಅರಕ್ಷಣವಕ್ಕುಳ್ಳಿರನು | ಲೆತ್ತ ಪಗಡಿಯಾಡಿ ಹೊತ್ತು ಗಳೆವನು 3 ವಾಸುದೇವನ ಸೇವೆಗಾಲಸ್ಯ ಹಿಡಿದಾ | ಕಾಸಿನ ಆಶೆಗೆ ಎತ್ತಾಗಿ ದುಡಿವಾ 4 ಮಹಿಪತಿ ನಂದನ ಪ್ರಭುವಿನ ಮರತಾ | ಸ್ವಹಿತದ ಹಾದಿಗೆ ಅವನು ಹೊರತಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು