ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿದ್ಯಾ ಪ್ರಸನ್ನ ಶ್ರೀ ಯತಿಕುಲ ಗುರುರನ್ನ ಸದ್ವ್ಯೆಷ್ಣವ ಘನ್ನ ಪ. ಸಿದ್ಧಸಾಧನ ಮಧ್ವಮುನಿಯ ಚಿನ್ಹ ಧರಿಸಿದ ಬಹುಮಾನ್ಯ ಅ.ಪ. ವಿದ್ಯಾರತ್ನಾಕರ ಯತಿ ಕರಕಮಲದಿ ಜಾತ ಮುದ್ದು ಕುವರನೀತ ವಿದ್ಯಾವಾರಿಧಿ ಮುನಿಕರ ಸಂಜಾತ ಯತಿವರನಾದಾತ ಮಧ್ವಗ್ರಂಥಗಳ ಮನನ ಮಾಡಿದಾತ ಬಹುಮತಿಯುತನೀತ ಬುದ್ಧಿಕುಶಲದಿ ಬುಧರನು ಪೊರೆವಾತ ಸುಜನರ ಮನದಾತ 1 ವ್ಯಾಸತೀರ್ಥನ ಆಸ್ಥಾನಕೊಡೆಯರಾಗಿ ದುರ್ಗುಣಗಳ ನೀಗಿ ಆಸೆಯಿಂದ ಶ್ರೀ ಕೃಷ್ಣನ ಚನ್ನಾಗಿ ಪೂಜಿಸುತಲಿ ಬಾಗಿ ದಾಸತ್ವದ ಲಕ್ಷಣ ತಿಳಿದವರಾಗಿ ವಿಷಯ ಸಂಗ ತ್ಯಾಗಿ ಪಸನ್ನ ಕೃಷ್ಣನೆಂಬಂಕಿತವನೆ ಇಟ್ಟು ಪದರಚಿಸಿದ ಗುಟ್ಟು 2 `ವಿ' ಎನ್ನಲು ನರವಿಷಯ ಸಂಗದೂರ `ಧ್ಯಾ' ಎನೆ ಧ್ಯಾನವರ `ಪ್ರ' ಎನಲು ಸದ್ಗುಣನು `ನ್ನ' ಎನ್ನಲು ಶ್ರೀ ನರಹರಿ ತಾನೊಲಿವ `ತೀ' ಎನೆ ತೀರ್ವ ಭವ `ರ್ಥಾ' ಎನ್ನಲು ಪುರುಷಾರ್ಥ ಪಡೆದ ಭೋಗಿ `ರು' ಎನೆ ರುಜುಮಾರ್ಗಿ 3 ವಿದ್ಯಾಪ್ರಸನ್ನತೀರ್ಥರು ಎಂದೆನ್ನುತಲಿ ಸ್ಮರಿಪರ ಸಲಹುತಲಿ ಮುದ್ದುಕೃಷ್ಣ ಪಟ್ಟಾಭಿರಾಮನಂಘ್ರಿ ಸಚ್ಚರಿತ ಪ್ರಸಂಗಿ ಸದ್ವಿದ್ಯಗಳಿಗೆ ಗರ್ವರಹಿತ ಭಾವ ಬಹು ಸರಳ ಸ್ವಭಾವ ಹೃದ್ವನಜಸÀ್ಥನ ಕಾಂಬ ಮುನಿವರೇಣ್ಯ ಸದ್ಭಕ್ತ ಶರಣ್ಯ 4 ಮಂದ ಮತಿಯು ನಾನು ಕ್ಷಮಿಸು ತಂದೆ ನೀನು ಕುಂದನೆಣಿಸದೆ ಗುಣಗ್ರಹಿಸುತಲಿನ್ನು ಶ್ರೀ ಹರಿ ನುಡಿಸಿದನು ತಂದೆ ಮುದ್ದುಮೋಹನರ ಕೃಪೆಯಿಂದ ರಚಿತ ಪದದಂದ ಮಂದರಧರ ಗೋಪಾಲಕೃಷ್ಣವಿಠ್ಠಲ ಗರ್ಪಿತ ಗುಣಮಾಲ 5
--------------
ಅಂಬಾಬಾಯಿ
ವಿದ್ಯಾಕಾಂತಯತಿಗಳ ಕೀರ್ತನೆ ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ ನೀ ಪೇಳಬಾರದೆ ರುಕುಮಿಣಿ ನೀ ಪೇಳಬಾರದೆ ಸತ್ಯಭಾಮ ಪ ಪಾಪ ಮಾಡುವನೆಂದು ಕೋಪ ಮಾಡಿದಿರೆಂದು ನಾ ಪಾದಪದುಮಕ್ಕೆ ಶರಣೆಂಬೆ ತಾಯೆ 1 ನಿಮ್ಮ ನುಡಿಗಳಿಂದ ಸಮ್ಮತಿಸುವ ದೇವ ಸುಮ್ಮನೆ ತಿಳಿಸೆನ್ನ ಹಡದಮ್ಮ ತಾಯೆ 2 ಏನೊ ಪೇಳಿದನೆಂದು ನೀನೂಪೇಕ್ಷಿಸದಲೆ ಜಾನಕಿದೇವಿ ಪೇಳೆ ರಘೂಪತಿಗೆ ತಾಯೆ3 ಪಾದ ನಂಬಿದವರಿಗೆ ಮೋದವ ಕೊಡುವಂಥ ವೇದವ್ಯಾಸಗೆ ರಮೆ ತಿಳಿ ಹೇಳೆ ತಾಯೆ 4 ವಿದ್ಯಾಕಾಂತನ ಮನವಿದ್ದಂತೆ ಒಲಿಯುವ ಸದ್ದಯಾನಿಧಿ ನಮ್ಮ ನರಸಿಂಹ ತಾಯೆ 5 (ವಿದ್ಯಾಕಾಂತತೀರ್ಥರು (1824) ವ್ಯಾಸರಾಜ ಮಠದ 16 ನೇ ಯತಿಗಳು)
--------------
ವ್ಯಾಸತತ್ವಜ್ಞದಾಸರು
ವಿದ್ಯಾವಿದ್ಯಕಮೀರಿದಾಗುಣತ್ರಯಾ ದಾವನು ಹೊಂದಾದಿಯಾ ನಿಚಯಾಸರ್ವಕ್ಕುದಾವಾಶ್ರಯಾ ಶುದ್ಧಾತ್ಮಾ ಸುಖದಾಲಯಾ ಸತುಚಿದಾನಂದೈಕರಸನಿಶ್ಚಯಾ ಸಿದ್ಧಾಂತ ಪ್ರತಿಪಾದ್ಯದಾವನುದಯಾ ಶ್ರೀ ದೇವ ದತ್ತಾತ್ರಯಾ 1 ಜಗದೋಳಾವನಸದುಗುಣಾ ನಿರಗುಣಾ ಸ್ವಾರೂಪದಾ ಲಕ್ಷಣಾ ಬಗೆ ಬಗೆಯಲಿ ಮಾಡಲು ವಿವರಣಾ ನೇತಿನೇತಿ ಶೃತಿ ವಚನಾ ಮುನಿಜನಾ ನಿಶ್ಚೈಸದಿಹ ರಾವನಾ ಪ್ರಗಟೀಸಿಹನು ನೋಡಿದೇ ನಿಜಘನಾ ಶ್ರೀದತ್ತ ನಿರಂಜನಾ 2 ನಿಶ್ಚಯಿಸದಿಹದಾವನಲಿ ತಾಂಪೌರಾಣಿತಿಹಾಸ ಭೇದಿಸುತಲೀ ನೆಲೆ ಗಾಣದೇ ನಿಲ್ಲಲೀ ಅಪದಿಂದ ಮೀಮಾಂಸತರ್ಕವರಲೀ ಬೆಂಡಾದವು ನೋಡಲೀ ಅಪರ ಘನ ಬಂದಿದೇಧರಿಯಲೀ ಬೆಂಡಾದವು ನೋಡಲೀ 3 ಪಾತಾಳಾದಿಯ ಲೋಕವೇಳುಸರಳು ದಾವನ ಪದ ಕಟಗಳು ಖ್ಯಾತಿಂದೇಭುವನೇಳು ಊಧ್ರ್ವಕಿರಲು ನಾಭಿಂದ ಸಿರವಾಗಲು ಸೀತಾಂಶು ರವಿದಾವನಂಬಕಗಳು ಅಶಾವೆ ಶ್ರೀತಂಗಳು ದತ್ತೆನಿಸಲು4 ಅಮರಂಗಣಾ ದಾವನುದರ ವಿಶ್ವಕಾಗಿ ಭುವನಾ ಶ್ರೀಮದ್ರಮಾರಮಣಾ ನಖದಾಧೀನಾ ಶ್ರೀದತ್ತ ಮನ ಮೋಹನಾ 5 ಸರ್ವೆಶ ಸರ್ವೋತ್ತಮಾ ಸರ್ವಾಧಾರನುದಾವ ದೇವಗರಿಮಾ ಪೂಜ್ಯನು ಸಕಲಾಗಮಾ ಸರ್ವಾತೀತನು ದಾವನಂಘ್ರಿ ಕಮಲಾ ಸೇವಿಸುವಳು ಶ್ರೀರಮಾ ಶ್ರೀದತ್ತ ಗುರುವೇನಮಃ 6 ಅನಸೂಯಾ ಕರರತ್ನನಾಗಿಜನಿಸೀ ಇಷ್ಟಾರ್ಥವನು ಪೂರಿಸೀ ಯೋಗಾಂಗವನು ಪ್ರಕಟಿಸಿ ಸ್ಮರಿಸೀದವರಲ್ಲಿ ಬಹುಕರುಣಿಸೀ ಶ್ರೀ ದತ್ತಪದ ಧ್ಯಾಯಿಸೀ 7 ಮೆರೆವಾ ಮುಪ್ಪುರದಿಂದೇರುವಾ ಸಾರೀ ಸಾವಿರದಳ ಪದ್ಮದಿರುವಾ ಸ್ವಾನಂದ ಭೋಗಿಸುವಾ ಮುದ್ರಾಂಕುರವ ಬೀರುವಾ ಶ್ರೀದತ್ತ ಗುರು ಎನಿಸುವಾ8 ಕಾತ್ರ್ಯವೀರ್ಯವರವಾಯದುರಾಯನುದ್ಧರಿ ಸಿದಾ ಗುರುಮಹೀಪತಿ ನುಡಿಸಿದಾ ಸ್ವಾನಂದ ಸುಖ ಬೀರಿದಾ ಸದಾ ಪಡೆವನು ಗತಿಸಂಪದಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿಧಿ ಪ ಪುರಾರಿನುತ ಚರಣಾ ನಾರಾಯಣಾ ಅ.ಪ ಸರಸಿಜಾಪ್ತ ಕುಲಚಂದ್ರಮ ರಾಮ | ಮ- ಹಾರಾಜ ರಾಜಲಲಾಮ ನಿಸ್ಸೀಮ 1 ಎನ್ನಪರಾಧಗಳೇನಿದ್ದರು ಸರಿ ಮನ್ನಿಸುವರು ನೀನಲ್ಲದಾರು 2 ಅಜಿತಾದ್ಯನಂತರೂಪಾಪ್ರಮೇಯಭಜಕ ಪೋಷ ಗುರುರಾಮ ವಿಠ್ಠಲ ರಾಯಾ 3
--------------
ಗುರುರಾಮವಿಠಲ
ವಿನತಾನುತ ಮಣಿವರೂಥ ಜನಕಸುತಾ ನಾಥಪ್ರೀತ ಪ ಕನಕಾಂಬರ ಪಾರ್ಥಸೂತ ವನಮಾಲಾ ಮಣಿರಾಜಿತ ಅ.ಪ ಶುಕ ಶೌನಕ ಪರಿಪೂಜಿತ ಸಕಲಾಗಮ ವೇದವಿದಿತ ವಕುಳಸುಮಾಭರಣಾಯತ ಸುಕರಾರ್ಜಿತ ಮೋಕ್ಷದಾತ 1 ಪಾಹಿ ಪಾಹಿ ಪರಮನಾಮ ಪಾಹಿ ಪಾಹಿ ಪೂರ್ಣಕಾಮ ಪಾಹಿ ಪಾಹಿ ದನುಜಭೀಮ ಪಾಹಿ ಪಾಹಿ ಮಾಂಗಿರಿಧಾಮ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿನಾಯಕಾನತ ರಾಮಾ ಪ ಸುಶೀಲ ನಿರುಪಮ ಗುಣಾಭಿರಾಮಾ ಅ.ಪ [ಸಶೇಷ] ಮನೋಜ ನಿರುಪಮ ವದನ ನಿಶಾಕರಾರ್ಭಕ ದಶಾಸ್ಯಹನನ ವಿಶಾಲ ಲೋಚನ ಕೃಪಾವಲಂಬನ ದಶರಥ ನಂದನ ಸದಾ ನಿರಂಜನ1 ಸೀತಾವಿರಾಜಿತ ವಾತಾತ್ಮಜಾನತ ಪೀತಾಂಬರಾಚ್ಯುತ ರಮಾನತ ಭ್ರಾತಾಭಿವಂದಿತ ವಿಭೀಷಣಾನತ ಧಾತಾನಂದಿತ ಶ್ರೀಮಾಂಗಿರಿನಾಥ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿನುತ ಚರಣ ನಾರಾಯಣ ಪ ವಾರಿಧಿಶಯನ ಘಣಿಮಣಿ ಭೂಷಣಾ ಸಾರಸಭವನುತ ನಾರಾಯಣಾ ಅ.ಪ ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ ಸಿಂಧುಶಯನ ಗೋವಿಂದನು ನೀನೇ ಮಂದರಧರ ಮುಚುಕುಂದ ವರದ ನೀನೇ ಇಂದಿರೆಯರಸ ಮಾಂಗಿರಿಯ ರಂಗಯ್ಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿನುತ ತಾಮರಸ ವಿಧಿ ಭೂರಿ ಕರುಣಾಪೂರ್ಣ ಶರಣರಿಗೆ ಫಲದಾತವೀರ ವೈಷ್ಣವನು ಗಂಗಾಧರಾಪ್ತ ಸುದೀಪ್ತ ಚಾರುದೇಷ್ಣ ಪಿತನೆ ಶ್ರೀಮಧ್ವ ಹೃತ್ಕುಮುದ ಪೂರ್ಣೇಂದು ಪಾಹಿಪಾಹಿ 1
--------------
ಗುರುಗೋವಿಂದವಿಠಲರು
ವಿಭವ ಪ್ರಪೂರಣ | ಮಾಂಗಿರಿಮೋಹನಾ ಪ ದಾನವಕುಲಭೀಷಣಾ ಕೃಪಾಕರಾ ಅ.ಪ ಪರತರ ಸುಖದಾತ ಸುಜನಗಣನುತ ಕಾಮಿತ ಸಂದಾತ ಪಾರ್ಥಿವ ರಥಸೂತ ವರದಸ್ವಯಂಜಾತಾ ಶರಣ ಸಂಪ್ರೀತಾ 1 ಮುರಹರ ಮುಚುಕುಂದ ಭಯಹರ ವರದಾ ಶ್ರೀಮುಖ ಸಾನಂದ ಗೋಕುಲ ಮಕರಂದ ಸುರಮುನಿ ಬೃಂದ ನಂದನ ಕಂದ ಸುರುಚಿರ ಕೋವಿದಾ | ಮುರಳೀ ಬೃಹನ್ನಾದ ಪಾಂಡುಸುತಾನಂದ | ಮಾಂಗಿರಿವರದಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿಭೂತಿ ತುಂಬಿ ತಾಂಡುವರೇ | ಪ್ರೇತಗಳ ಹುಯ್ಯಲ್ಲಿ ಗೋ ಎಂದು ನಿಡಿದವರೇ ಸುಯ್ಯಲ್ಲಿ ಸೋಂಕಲಿಸದೆ ಘನದ ಯೋಗದಲಿದ್ದು ನೋಡ ಬಂದ ಕಂತುನ ನೋಡಿ ಬೂದಿ ಮಾಡುವರೇ ಪ ಭಿಲ್ಲನಾಗಿ ಕುಲವ ಕಳೆವರೆ | ನರನ ಬಲವು ಮಲ್ಲಯುದ್ಧ ಮಾಡಿ ತಿರುವರೆ | ಬಲ್ಲಾತನಾಗಿ ಫುಲ್ಲನೇತ್ರಗೆ ರತಿ ಗೆಲುವರೆ || ಸಲ್ಲದಂಗವ ತೋರಿ ನೀ ತಿರುಕನಾಗಿ ತಿರುಗುತ ಮತ್ತೆಲ್ಲ ಮುನಿಗಳ ಸತಿಯರ ಧರ್ಮವನಳಿವರೆ 1 ಕಣ್ಣಿಲಿ ಕಿಚ್ಚು ಗರೆವರೆ | ವರೇಣ್ಯನಾಗಿಹೆಣ್ಣಿಗೆಯ ರಂಗ ಮಾರುವರೆ ಶ-ರಣ್ಯನಾಗಿ ಸಣ್ಣವನ ಶಿರವ ತರುವರೆ |ಮಣ್ಣಿನ ಭಂಡಿಯನೇರಿ ಕಲ್ಲಿನ ಬಿಲ್ಲನೇರಿಸಿ |ಮುಪ್ಪುರಗಳ ಗೆಲಿದು ಸುಡುಗಾಡ ಸೇರುವರೆ 2 ಬತ್ತಲೆ ಕುಣಿವುತಲಿರುವರೆ | ಸ್ಮøತಿಕತ್ತಿನಾಗಿ ಎತ್ತನೇರಿಕೊಂಡು ಮೆರೆವರೆ |ಪುಣ್ಯಾತ್ಮನಾಗಿ | ಸತ್ತನೀ ಚರ್ಮವ ಪೊರುವರೆ |ಉತ್ತಮ ರುಕ್ಮವರ್ಣದ ಜಡೆಯುಳ್ಳ ಸದಾಶಿವನ |ನಂಜಿಗಂಜದೆ ಸವಿಮಾಡಿ ಬಿಗಿಬಿಗಿ ಸುರಿವರೆ 3
--------------
ರುಕ್ಮಾಂಗದರು
ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ | ಗುರುತ ಮಾಡಿದ ಸೊಗಸು ಮರಿಯದೊ ಗೋಪಾಲ ಪ ಕಣ್ಣುನೋಟ ತಿರುಹಿ ನೀ ಕೈಯ ಮುದರಿ ವರಹ | ಹೊನ್ನು ಕಂಭದಲಿ ನಿಂದು ತೋರಿ | ಭ್ರಮಿಸಿ ಕುನ್ನಿಗೆ ಕಣಿಯನಿಕ್ಕಿ ಹೊಡೆಯೊನಾಗಿ | ಹೆಣ್ಣು ಭಾವನ ಕರೆದು ಸೂಚನೆ ಮಾಡಿದನು 1 ಪುಟ್ಟ ಹೆಜ್ಜೆಲೆ ಸಾಗಿ ಮುದ್ದು ಕೊಡಲು ಬಯಸಿ | ದೃಷ್ಟಿಯಿಂದ ನೋಡಲು ಭ್ರಾಂತಳಾಗಿ | ಅಟ್ಟ ಅಡಿವೆಯೊಳು ನಡಿವೆ ನಾ ಪೋಗಲು | ದುಷ್ಟ ನಾದಿನಿ ಕಂಡು ಮಾವಗೆ ಪೇಳಿದಳು 2 ಇಂದಿರೇಶ ತಾನಾಗಿ ಎದೆ ಮುಟ್ಟಿ ನಿನಗೆ | ಇಂದಿನ ದಿವಸ ನಾ ಭ್ರಮಿಸಿದ್ದು | ಒಂದೊಂದು ಬಗೆ ನೆನಿಸಿ ಕಲೆಕಲೆಗಳು ಕೆರಿದ್ಯಾಸೆ | ಮುಂದೆಗಾಣದೆ ನಡಿಯೆ ಗಂಡಾ ತಲೆದೂಗಿದನು3 ಬೀದಿಯೊಳಗೆ ನೀನು ಕುದರಿಯ ಕುಣಿಸುತ ಹಾದು ಪೋಗಲು ನಮ್ಮ ಮನಿಯ ಮುಂದೆ | ಪಾದಕ್ಕೆ ಕಪ್ಪನೆ ಇಟ್ಟು ತೊಟ್ಟ ಕುಪ್ಪಸ ಬಿಚ್ಚೆ | ಮದನ ನೋಡಿ ಮನೆಯಲ್ಲರಿಗೆ ಬೀರಿದನು4 ಪರಮಪುರುಷ ನೀನೆ ನಿನ್ನಂಗ ಸಂಗಕ್ಕೆ | ಸರಿಗಾಣೆ ಸ್ಮರಿಸೆ ಮನಸು ನಿಲ್ಲದೊ | ಸುರತ ಕೇಳಿಯ ಜಾಣ ವಿಜಯವಿಠ್ಠಲ ಎನ್ನ | ಕರೆದು ಮಸಕು ತೆಗೆದು ತರ್ಕೈಸೊ ಚನ್ನಿಗಾ 5
--------------
ವಿಜಯದಾಸ
ವಿವಿಧ ದೈವ ಸ್ತುತಿ ಜಲರುಹ ಮೋಹನ ವಿಶಾಲ ನೇತ್ರ ಪ ಗಾನಾನಂದ ಲೋಲ ಬಂಧುರ ಗಾನಾನಂದ ಲೋಲಾ ಗೋಪಾಲ ವನಮಾಲ ಗೋಕುಲ ಗೋಪಾಲ ವನಮಾಲ ಅ.ಪ ದಶರಥ ನಂದನ ವಿಶಾಲಹೃದಯ ಸತ್ಯಧರ್ಮಶೀಲ ರಾಘವ ಸತ್ಯಧರ್ಮಶೀಲ ಖಲಾಳಿಕುಲಶೂಲ ರಾಘವ ಖಲಾಳಿಕುಲಶೂಲಾ 1 ಪುರಹರ ಶಂಕರ ಕೃಪಾ ಸಮುದ್ರ ನಾಟ್ಯನಾದ ಚತುರ ಶ್ರೀಕರ ನಾಟ್ಯನಾದ ಚತುರ ಪಿನಾಕ ಶಶಿಶೇಖರ 2 [ಶ್ರೀರಾಮಪ್ರಿಯ ಭಕ್ತಾಗ್ರೇಸರ] ಪವನಾತ್ಮಜ ಶೂರ ಹನುಮಾನ್ ಪವನಾತ್ಮಜ ಶೂರ ಮರಕತ ಮಣಿಹಾರ ಮಾರುತಿ ಮರಕತ ಮಣಿಹಾರ 3 ಶರಣ ಜನಾನುತ ಗಿರೀಶ ಸದೃಶ ಸತ್ಯಸಾಯಿಬಾಬ ಪಾಲಯ ಸತ್ಯಸಾಯಿಬಾಬ ಪರಮದಯಾಹೃದಯಾ ಸವಿನಯ ಪರಮದಯಾಹೃದಯ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿವೇಕದಿಂದಾ ಮತಿಯುಕ್ತನಾಗಿ ಕುವಿದ್ಯದಾದಾ ಗುಣವೆಲ್ಲ ನೀಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದದಾಮೋದರ ಮಾಧವೇತಿ 1 ತ್ರಿವಿಧ ತಾಪದೊಳು ಮಗ್ನನಾಗಿ ನೀವ್ಯರ್ಥದಿನಗಳಿಯದೆ ಹೋಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 2 ಈ ವಿಷಯದಾಸುಖ ನಿತ್ಯವಲ್ಲಾ ನೀವಾತು ಕೇಳಿಗುರುವೀನ ಸೊಲ್ಲಾ ಭಾವಾರ್ಥದಿಂದ ಸ್ಮರಿಸೂದು ನೀತಿ ಗೋವಿಂದ ದಾಮೋದರ ಮಾಧವೇತಿ 3 ಆವದು ತನ್ನ ಹಿತವನು ನೋಡಿ ಸಾವಧನಾಗೀ ಶ್ರವಣ ಮಾಡಿ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 4 ಅವಾವ ಯೋನಿಯಲಿ ಬಂದಹಿಂದಾ ಅವದುಗತಿಯಂದು ನೋಡಿವಂದಾ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 5 ತಾವಂದೇ ಆಶ್ರೈಸದೆ ಕಾಮಧೇನು ಸಾವಿರ ಸಾಧನಕ ಬೀಳುದೇನು ಬಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 6 ಜೀವಾತ್ಮರಾಗಿ ಸಚ ರಾಚ ರಾವ ಬಾವರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೊದರ ಮಾಧವೇತಿ 7 ಗೋವಿಂದ ಅಷ್ಟಕವ ದಾವಪ್ರಾಣೀ ಸೇವಿಸುವನು ಕಾವನು ಚಕ್ರಪ್ರಾಣೀ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿಶೇಷ ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ ಹಡಗಿಂದ ಬಂದಿತು ಉತ್ತತ್ತಿ ಹಣ್ಣು ಬಡವರಿಗೆ ಬೇಕಾದ ಬಾಳೆಯ ಹಣ್ಣು ಕೂತರೆ ಏಳದು ಕುಂಬಳದ್ದಲ್ಲ ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1 ಮಕ್ಕಳು ಬಯಸುವ ಚಕ್ಕೋತ ಹಣ್ಣು ಸಕ್ಕರೆ ಸವಿಯಾದ ಅನಾಸಿನ ಹಣ್ಣು ರುಚಿ ಹಲಸಿನ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2 ದಾಹವಡಗಿಸುವದು ದ್ರಾಕ್ಷಿಯ ಹಣ್ಣು ದೊರೆಗಳು ತಿನ್ನುವ ದಾಳಿಂಬೆ ಹಣ್ಣು ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3 ಅತಿಮಧುರವಾದ ಕಿತ್ತಲೆ ಹಣ್ಣು ಯತಿಗಳಿಗಾನಂದ ಸೀತಾಫಲದ್ಹಣ್ಣು ಅತಿರುಚಿಯಾದ ಅಂಜೂರದ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4 ಮಾನವಂತರು ತಿನ್ನುವ ಮಾವಿನ ಹಣ್ಣು ಜ್ಞಾನಿಗಳಿಗೆ ರಾಮನಾಮದ ಹಣ್ಣು ದೀನಜನರು ತಿಂಬ ಮೂಸುಂಬೆ ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5 ಅಪರೂಪದಲಿ ಬೆಳೆದ ಮಾದಳದ್ಹಣ್ಣು ಕಪಿಗಳು ತಿನ್ನುವ ಸೀಬೆಯ ಹಣ್ಣು ತಪಸ್ವಿಗಳಾಹಾರ ಜಂಬುನೇರಳೆಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6 ಪರಿ ಔಪಧಕೆ ಹೆರಳೆಯ ಹಣ್ಣು ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು ಪರಮ ರೂಪಿಯಾದ ಕರಬೂಜದ್ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7 ಬಡವರಿಗೂ ಈ ಹುಣಸೇ ಹಣ್ಣಿರಬೇಕು ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು ರುಚಿ ಎಲ್ಲ ಜನರುಗಳು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8 ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9 ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10 ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
--------------
ನಿಡಗುರುಕಿ ಜೀವೂಬಾಯಿ
ವಿಶೇಷ ಎಂಥ ರಾಸಿಯೊ ಶ್ರೀಕಾಂತನ ಮುಖಸೂನು ನಿಂತು ಏರುವೋ ರಾಶಿನ್ಯಾವುದೊ ಇದನೆಲ್ಲರು ಪೇಳಿರಿ 1 ರಂಗ ಮೂರುತಿ ಸುತನ್ವೊೈರಿ ಏರಿಪೋ ಹೆಸ- ರೆಂದುಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 2 ಹರಿಸುತನಟ್ಟುಳಿಯಿಂದ ಪುಟ್ಟುವುದೇನು ಪರಮ ಗುಪ್ತದ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 3 ಇರುಳು ಹಗಲು ಮೈಯ್ಯ ತೊಳೆಯುತ ಮಣ್ಣಿನ ಲ್ಲೊ ್ಹರಳುತಿಪ್ಪುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 4 ಒದ್ದು ಮಾತಂಗನ ಗದ್ರಿಸ್ತಮುರಿದ ಪ್ರ- ಸಿದ್ಧನೆನಿಪ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 5 ಜೋಡು ವಂಶುದ್ಧಾರ ಮಾಡುವುದೀ ರತ್ನೆಂ- ದಾಡಿಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 6 ಜಗದೊಳಗೆಲ್ಲ ಭಾರಕರ್ತನಾಗಿ ಏರಿಸಿಳುಹೋ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 7 ಅಂಧಕಾರದಲಿದ್ದು ಬಂದ ಜನರ ಮುಟ್ಟಿ ದುಂದೆಬ್ಬಿಸುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 8 ದೊರೆಸುತ ತಾ ಬಂದು ಸರುವ ಜನರ ಮುಂದೆ ಮುರಿದುಬಿಷ್ಠುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 9 ಭರದಿ ಬಂದು ಕಾಲಕೆದರುತ ತನ್ನ ್ಹಲ್ಲು ಮುರಿಸಿಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 10 ರುಂಡ ಮಾಲೆಗಳೆಲ್ಲ ಗುಂಡಿನಂಥ ದೇಹ- ಕ್ಕ್ಹೊಂದೇರಿಳಿವೊ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 11 ಹತ್ತರೊಳಗೆ ಒಂಬತ್ತು ಬಿಟ್ಟ ಹೆಸ ರಿಟ್ಟುಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 12 ಯೋಚನೆ ಮಾಡಿ ಆಲೋಚಿಸಿ ನೋಡರನೇಕ ಮೂಢಜ್ಞಾನಿಗೆ ತಿಳಿವೊದೆ ಇದನೆಲ್ಲರು ಪೇಳಿರಿ 13 ಈಸು ರಾಶಿಗಳು ಭೀಮೇಶಕೃಷ್ಣನ ದಯ- ದೀಕ್ಷಣದಲ್ಲೆ ತಿಳಿದು ಪೇಳಿ ಇದನೆಲ್ಲರು ಪೇಳಿರಿ 14
--------------
ಹರಪನಹಳ್ಳಿಭೀಮವ್ವ