ಒಟ್ಟು 9343 ಕಡೆಗಳಲ್ಲಿ , 135 ದಾಸರು , 4870 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾರ ಭಜಿಸಲೈಯ್ಯಾ|ಯನ್ನ ಗತಿ ಮುಕುತಿದಾಯಕ ರಂಗ ನೀನಿರಲು ಪ ಸ್ನಾನಪಾನಕಬಪ್ಪ ಸುರನದಿಯನೇ ತ್ಯಜಿಸಿ ಹೀನ ಸರಿತೆಗಳಲ್ಲಿ ಮುಣುಗುವರೇ ಏನ ಬೇಡಿದ ನೀವ ಸುರ ಭೂಜ ಇದಿರಿಡಲು ಕಾನನದ ಶಾಲ್ಮಲಿಯ ಫಲವ ನರಸುವಂತೆ 1 ಕಾಮಧೇನು ಮನಿಗೆ ಬರಲು ಕರೆ ಕೊಳ್ಳದೇ ಆ ಮೊಲದ ಹಾಲವನು ಬಯಸುವಂತೆ ಕಾಮಿತಾರ್ಥವ ನೀವ ಚಿಂತಾ ಮಣಿಯಿರಲು ಪ್ರೇಮದಿಂದಲಿ ಕಾಜು ಮಣಿಯ ನರಸುವಂತೆ2 ತಾಯ ಮಾರಿಯ ತೋತ್ತು ಕೊಂಬಂತೆ ಸಿರಿಯಸುಖ ದಾಯಕ ನಿನ್ನ ಮರದನ್ಯಕೆರಗೀ ಹೇಯ ವೃತ್ತಿಗೆ ಬೆರೆವದುಂಟೇ ನಿನ್ನವನೆನಿಸಿಕಾಯೋ ಭಕುತಿಯ ನಿತ್ತು ಗುರು ಮಹಿಪತಿ ಸ್ವಾಮಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆನಿನ್ನ ಚಿತ್ತಬಂದಂತೆ ನೀನೆ ಕಾಯಯ್ಯ ಪ. ಅನ್ನಾಥರೊಡೆಯ ಎನ್ನ ಮುನ್ನ ಮಾಡಿದ ಪಾಪತÀನ್ನ ಫಲವಾಯಿತೆಂದು ಇನ್ನುಬ್ಬಿ ಕೊಬ್ಬುತಿದೆಎನ್ನುದರದಿ ಅನುದಿನ್ನ ಕೂಡಿಘನ್ನಪಿತ್ತವೆಂಬ ಬಲುಕಿಚ್ಚು ಹೆಚ್ಚುತಿದೆ 1 ದ್ರೌಣ್ಯಸ್ತ್ರದಿಂದ ಬೆಂದ ನಿನ್ನ ತಂಗಿಯ ಮೊಮ್ಮಗಸನಕಾದಿಗಳರ್ಚಿಸುವ ಸೌಮ್ಯಪಾದದಕೊನೆಯನ್ನೆ ಮುಟ್ಟಿಸಿ ಪೆಣನಾಗಿರ್ದ ಹಸುಳೆಯ ಜನರು ಜಯಜಯವೆನೆ ಜೀವಂತನ್ನ ಮಾಡಿದೆ 2 ನಿತ್ಯ ಮೃತನು ನಾನುಭೃತ್ಯನು ಪಾಪವ ಕಿತ್ತು ಎತ್ತಿಕೋ ತಂದೆ 3 ಅಂಜಿದ ಕಪಿಕಟಕ ಸಭೆಯ ಪಂಜರ ಬಸಿವುತಿದೆ ನಿನ್ನಕಂಜಾಕ್ಷದಿಂದ ನೋಡಿದರವರಂಜಿಪೋಗದೆಅಂಜನಾದೇವಿಯ ಸುತನಾಳಿದ ರಘುರಾಯಅಂಜಿಸಬೇಡ ತಂದೆ ನಿನ್ನ ಕಂದನ ರಕ್ಷಿಸಿಕೊ 4 ವನ್ನದ ಹರಿಣನಂತೆ ಸುತ್ತ ಮುನ್ನ ಬರಲು ಕೃಷ್ಣಎನ್ನ ತಾಪವು ಅನುದಿನ್ನ ತಟ್ಟದುಇನ್ನೊಬ್ಬ ಮದ್ದನೀಯೆ ಅದು ಉನ್ನತವಾಗುತಿದೆ ತಂದೆಎನ್ನಾಳು ಹಯವದನ ಇನ್ನಾದರೆ ಸಲಹೊ 5
--------------
ವಾದಿರಾಜ
ಇನ್ನಾರೆ ತಿಳಿದು ನೋಡು ಮನರಾಯಾ | ನಿನ್ನ ಕಣ್ಣದೆರೆದು ಸ್ವ ಹಿತದ ಉಪಾಯಾ ಪ ನಾನಾ ಜನ್ಮದಲ್ಲಿ ಬಂದು ಧರೆಯಲ್ಲಿ ಸುಖ | ವೇನು ಪಡೆದಿ ಹರಿಯ ಸ್ಮರಣೆ ಮರೆದಿಲ್ಲಿ 1 ಶರಗೊಡ್ಡಿ ಬೇಡಿಕೊಂಬೆ ನಾನೀಗಾ | ಸ್ಥಿರವಾದರಿಲ್ಲ ದೂರ ಶಿವಯೋಗಾ 2 ಇಂದು ನಾಳೆವೆನ್ನಬೇಡಿ ನಿಶ್ಚಯಾ ನಿನಗ | ಮುಂದ ಮತ್ತ ದೊರೆಯದಿದ ನರದೇಹಾ 3 ತಂದೆ ಮಹಿಪತಿಸ್ವಾಮಿ ದಯದಿಂದ | ನಂದವ ಪಡೆದು ಗೆಲಿಯೋ ಭವದಿಂದಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನೂ ಭ್ರಾಂತಿಯ ಮಾಡುವರೆ | ನನ್ನದೆಂದು ಆಡುವರೆ |ತನ್ನ ತಾ ತಿಳಿಯದೆ | ಅನ್ಯರ ಗುಣದೋಷ ನೋಡುವರೆ ಪ ಸ್ತುತಿಸುತ ಬಂದರೇನು | ಮತ್ತೆ ಜಲವ ಮಿಂದರೇನು | ಎತ್ತ ಹೋದರೂ ದಣಿವಿಕೆಯಿಲ್ಲದೆ | ನಿತ್ಯಾನಿತ್ಯ ವಿವರಿಸಲಿಲ್ಲ 1 ಮಾತಿನ ಬಣವಿಯನೊಟ್ಟಿ | ಸ್ವಂತ ವಿಷಯಂಗಳ ಮುಟ್ಟಿ |ಯಾತಕೆ ವೈರಾಗ್ಯದ ಮಾತು | ಮಾತಿನಂತೆ ನಡೆದರಾಯಿತು 2 ನಾನು ದೊಡ್ಡವ ನನ್ನವರೆಂದು | ಜ್ಞಾನ ಗರ್ವದ ಮನೆಗೆ ಬಂದು | ಜ್ಞಾನಬೋಧನ ಪ್ರಭುವ ಕೂಡದೆ ದೀನನಾಗಿ ಬಳಲುವದೇನೊ 3
--------------
ಜ್ಞಾನಬೋದಕರು
ಇನ್ನೆಂತಹದೆ ಮುಯ್ಯ ಹರಿಣಾಕ್ಷಿ ಬಂದು ಎಂಥ ಸೊಗಸಿಲೆ ಕುಳಿತಾರೆ ಪ. ಚಂದ್ರ ಕಾಂತಿಯಿಂದೊಪ್ಪ್ಪುತ ಕುಳಿತಾರೆ ಎಂಥ ಸುಕೃತವು ಫಲಿಸಿತು 1 ಛತ್ರ ಹಿಡಿದವರೆಷ್ಟು ಚಾಮರ ಬೀಸುವರೆಷ್ಟು ನರ್ತನ ಮಾಡುವವರೆಷ್ಟು ಕೀರ್ತನ ಮಾಡುವವರೆಷ್ಟು 2 ಗಾಳಿ ಬೀಸುವವರೆಷ್ಟು ಬಹಳೇ ಹೊಗಳುವರೆಷ್ಟು ಕೇಳೋ ರಾಮೇಶನ ಮಡದಿಯರ ಕೇಳೋ ರಾಮೇಶನ ಮಡದಿಯರ ಮುಂದೆ ನಿಂತು ಹೇಳಿ ಕೊಂಬುವವರೆಷ್ಟು3
--------------
ಗಲಗಲಿಅವ್ವನವರು
ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ಧ್ರುವ ಎನ್ನೊಳು ಗುರು ತನ್ನ ಮರ್ಮವು ತೋರಿದ ಇನ್ನೇನಿನ್ನೇನು 1 ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು 2 ಎನ್ನೊಳು ಘನಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು 3 ನಾನು ನಾನೆಂಬುದು ನೆಲಿಯು ತಾನಾಯಿತು ಇನ್ನೇನಿನ್ನೇನು 4 ಏನೆಂದು ತಿಳಿಯದ ಅನುಮಾನ ಗಳೆಯಿತು ಇನ್ನೇನಿನ್ನೇನು 5 ಪರಮ ತತ್ವದ ಗತಿ ನೆಲೆ ನಿಭ ತೋರಿತು ಇನ್ನೇನಿನ್ನೇನು 6 ಎನ್ನೊಳಾತ್ಮ ಖೂನ ಕುರುಹವು ತಿಳಿಯಿತು ಇನ್ನೇನಿನ್ನೇನು 7 ಕನಸು ಮನಸು ಎಲ್ಲ ನಿನ್ನ ಸೇವೆ ಆಯಿತು ಇನ್ನೇನಿನ್ನೇನು 8 ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು 9 ಅರಹು ಮರಹಿನ ಇರುವು ತಿಳಿಯುತು ಇನ್ನೇನಿನ್ನೇನು 10 ಭಾವದ ಬಂiÀiಲಾಟ ನಿಜವಾಗಿ ದೋರಿತು ಇನ್ನೇನಿನ್ನೇನು 11 ಜೀವಶಿವನ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು 12 ಆಯವು ದಾಯವು ಸಾಹ್ಯವು ದೋರಿತು ಇನ್ನೇನಿನ್ನೇನು 13 ಜೀವನ್ನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು 14 ಜನ್ಮ ಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು 15 ಸಂದೇಹ್ಯ ಸಂಕಲ್ಪ ಸೂಕ್ಷ್ಮವು ಹರಿಯಿತು ಇನ್ನೇನಿನ್ನೇನು 16 ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು 17 ಸುಷಮ್ನ ನಾಳದ ಸೂಕ್ಷ್ಮವು ದೋರಿತು ಇನ್ನೇನಿನ್ನೇನು 18 ಇಮ್ಮನವಿದ್ದದು ಒಮ್ಮನವಾಯಿತು ಇನ್ನೇನಿನ್ನೇನು 19 ಆಧಾರಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು 20 ಸದ್ಗುರು ಕೃಪೆಯಾದಾ ಸಾಧನವಾಯಿತು ಇನ್ನೇನಿನ್ನೇನು 21 ಇನ್ನೇನಿನ್ನೇನು 22 ಅಂತರಾತ್ಮನ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು 23 ಇನ್ನೇನಿನ್ನೇನು 24 ಎನ್ನೊಳು ಭಾಸ್ಕರ ಗುರು ತಾನೆಯಾದನು ಇನ್ನೇನಿನ್ನೇನು 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೇನು ನೋಡುವಿ ನೆಲಿಯಾ | ಬನ್ನ ಬಿಡಿಸಿ ಕಾಯೋ ಶ್ರೀ ಗುರುರಾಯಾ ಪ ದಾಸಿಗೆ ಕರುಣಿಸಿ ರಾಯರಂಭೆಯ ಮಾಡಿ | ದೋಷವೆಣಿಸುವನೆ ಮುನ್ನಿನ ನೋಡಿ 1 ಸರಿ ತಾ ಹರಿದು ಬಂದು ಗಂಗೆಯಾ ಕೂಡಲಿ | ತಿರುಗಿ ನೂಕುವದೇನು ಜರೆಯುತಲಿ2 ತಂದೆ ಮಹಿಪತಿ ನಿಮ್ಮ ನಂದನನೆನಿಸುತ | ಕುಂದ ನಾರಿಸುವದು ಬಿರುದಿಗುಚಿತಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನೇನು ಭಯವಿಲ್ಲನಿನಗೆ ಪಾದ ಭಜಿಸೊ ಮನದೊಳಗೆ ಪ ಬನ್ನಗೊಳಿಸುವಾ ವ್ಯಾಧಿ ಮುನ್ನೆ ಬಾರದೋ ಮಗುವೇ ಅ.ಪ ಕರ್ಮ ಶೇಷದಲಿಂದ ಈ ವಿಧದ ವ್ಯಾಧಿ ಸಂಭವಿಸಿತಲ್ಲಾ ಪಾದ ಸೇವೆ ಸತ್ಕಾರದಿಂದಲೇ ತಾವಕÀನು ನೀನೆಂದು ಗುರುರಾಯ ಪೊರೆವಾ 1 ಏನು ಕರುಣವೊ ಗುರುವರಗೆ ನಿನ್ನಲಿ ನೀನೇನು ಧನ್ಯನೋ ಈ ಲೋಕದಲ್ಲೀ ದೀನಭಾವವನೋಡಿ ದೀನವತ್ಸಲಬಂದು ತಾನೆ ಕರುಣದಿ ಪೊರೆದಮೇಲೇ2 ಅರಿಯದಿಹ ನರರಿಗಾಶ್ಚರ್ಯ ತೋರಲೋಸುಗದಿ ಮರೆಯದಂತೆ ಮನಕೆ ಕುರುಹು ಮಾಡಿ ಧರೆಯೊಳಗೀ ಗುರುವರಗೆ ಸರಿಯಿಲ್ಲ ಗುರುಜಗನ್ನಾಥ ವಿಠಲ ತಾನೇ ಬಲ್ಲಾ 3
--------------
ಗುರುಜಗನ್ನಾಥದಾಸರು
ಇರಬಾರದೊ ಬಡವ ಜಗತ್ತಿನೊಳಗೆ | ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪ ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು | ಬಿಡದೆ ಜನ ಪೇಳುವುದು ಸಿದ್ಧವಯ್ಯಾ | ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು | ಒಡವೆ ಸಂಪಾದಿಸಲು ಅಪಹರಿಸಿದ ನೋಡು 1 ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು | ಹಣದಾಸಿಯಿಂದ ನಾ ಘಳಿಸಿದ್ದೆನೊ | ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ | ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ2 ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ | ಸರಿಬಂದ ಕಾರ್ಯಮಾಡುವರಲ್ಲದೇ | ನೆರೆಯವರದೇ ತಪ್ಪೇ ವಿಜಯ ವಿಠ್ಠಲರೇಯ | ಮರಳೆ ಮಾತಾಡಿದರೆ ಅಪರಾಧ ಹೊರಿಸುವರು 3
--------------
ವಿಜಯದಾಸ
ಇರಲಯ್ಯಾ ಶ್ರೀಹರಿ ಇರಲಯ್ಯಾ ದಾಸನ ಮೇಲೆ ದಯೆ ಪ ಮರಿಯಾದೆ ಹೋಗಲಿ ಮರಿಯಾದೆ ಇರಲಿ ಧರೆಯಮೇಲೆ ಇವ ಇರುವತನಕ ದಯೆ 1 ದು:ಖದಿಂದಿರಲಿ ನಾ ಸುಖದಿಂದಿರಲಿ ನಿಖಿಲರು ಜರಿಯಲಿ ಭಕುತನಮೇಲೆ ದಯೆ 2 ಬಂದದು ಬರಲಿ ಮಮ ತಂದೆ ಶ್ರೀರಾಮ ನಿಮ್ಮ ಬಂಧುರಧ್ಯಾನಮಾತ್ರವೊಂದೆನ್ನಗಲದಂತೆ 3
--------------
ರಾಮದಾಸರು
ಇಲ್ಲದ ಸ್ವಾತಂತ್ರ್ಯವೆಲ್ಲಿ ಬಂತು ನಾ ಪ ಬಲ್ಲೆನೆಂಬುವುದು ಬಲು ಭ್ರಾಂತು ಅ.ಪ ಪರಿ ನಡೆಯದೇಕೆ 1 ಜೀವದೇವಗೆ ಭೇದವೇ ಸಿದ್ಧ ದೇವರಸನು ಜೀವಕರ್ಮಬದ್ಧ 2 ತಾ ಘನಜೀವನು ಅಲ್ಪತೃಣ 3
--------------
ಗುರುರಾಮವಿಠಲ
ಇಲ್ಲೆಂದೆ ಇಲ್ಲೆಂದೆ ಭಕ್ತಜನಕೆ ಭಯ ಇಲ್ಲೆಂದೆ ಇಲ್ಲೆಂದೆ ಪ ಪಾದ ಎಲ್ಲ ಸಂಪದವೆಂದು ಬಲ್ಲಂಥ ಭಕ್ತರಿಗೆಲ್ಲರೀತಿಲಿ ಭಯಅ.ಪ ವಂದಿಸಿ ನುಡಿದರೆ ಬಂತೇನೆಂದೆ ನಿಂದಿಸಿ ನುಡಿಯಲು ಕುಂದೇನೆಂದೆ ಸಿಂಧುಶಯನನ ತಂದು ಮಾನಸವೆಂಬ ಮಂದಿರದಿಟ್ಟವರಿಗೆಂದೆಂದಿರದು ಭಯ 1 ಬಡತನ ಬಂದರೆ ಮಿಡುಕೇನೆಂದೆ ಕಡುಸಿರಿಯಿರ್ದರೆ ನಿಜವೇನೆಂದೆ ಜಡಭವ ಕನಸೆಂದು ದೃಢವಹಿಸೊಡಲೊಳು ಮೃಡಸಿಧರನೆ ನಿಮ್ಮ ಆಡುವರಿಗೆ ಭಯ 2 ಪೊಡವಿಪ ಮೆಚ್ಚಲು ಕೊಡುವುದೇನೆಂದೆ ಕಡುಕೋಪಗೊಂಡರೆ ಕೆಡುವುದೇನೆಂದೆ ಪೊಡವೀರೇಳನು ಒಡಲೊಳಗಿಟ್ಟವನಡಿ ಬಿಡುದಿರುವರಿಗಿಡಿ ಭುವನದ ಭಯ 3 ಸತಿಸುತರಿದ್ದರೆ ಹಿತವೇನೆಂದೆ ಸತಿಸುತರಿಲ್ಲದಿರೆ ಅಹಿತವೇನೆಂದೆ ರತಿಪತಿಪಿತನಡಿ ಸತತದಿ ಗೂಡಿಟ್ಟು ನುತಿಪ ಭಕ್ತರಿಗೆ ಕ್ಷಿತಿಮೇಲೇತರ ಭಯ 4 ಭೂಷಣ ಮಾಡಲದೊಂದೇ ಅಂದೆ ದೂಷಣ ಮಾಡಲದೊಂದೇ ಅಂದೆ ಶ್ರೀಶ ಶ್ರೀರಾಮನ ಸಾಸಿರ ನಾಮದ ಧ್ಯಾಸದಿಟ್ಟವರಿಗೇಸು ಕಾಲದಿ ಭಯ 5
--------------
ರಾಮದಾಸರು
ಇಲ್ಲೇ ಹರಿ ಇರುವ ಪ ಬಲ್ಲವರದ ನೋಡಲಲ್ಲೇ ತೋರುವ ಅ.ಪ ಗಿಡದ ಬೇರು ಕಾಂಡ ಕೊಂಬೆ ರೆಂಬೆಗಳಲ್ಲಿ ಅಡಗಿ ಎಲೆಯೊಳ್ಹೀಚು ಹೂವ್ಕಾಯ್ಗಳಲ್ಲಿ ಮೃಡ ಸಖನಲ್ಲಲ್ಲೆ ವಿವಿಧ ರೂಪಗಳಿಂದ ಅಡಗಿದ್ದು ಬೆಳೆಸುವ ಕಳೆಗೊಳಿಸುವನು1 ವಸ್ತ್ರದ್ಹಾಸುಹೊಕ್ಕು ದಾರಗಳಂದದಿ ವಿಸ್ತಾರಗೊಂಡ ಈ ಲೋಕದೊಳು ಹಸ್ತಿವರದನಾದಿಮೂಲ ತಾ ನೆಲೆಗೊಂಡು ಸ್ವಸ್ಥದಿ ಪೊರೆವನನಂತ ಪ್ರಾಣಿಗಳ 2 ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ರೂಪ ವನು ತಾಳಿ ನಾರಾಯಣ ವಾಸುದೇವನು ಅನಿಮಿತ್ತಬಂಧು ಚರಾಚರ ಪೃಥ್ವಿಯ ನನುದಿನ ಪೊರೆವ ರಘುರಾಮವಿಠಲನು 3
--------------
ರಘುರಾಮವಿಠಲದಾಸರು
ಇವನೆವೆ ಮಾನವನು ನೋಡಿರೋ ಇವನೆವೆ ಮಾನವನು ಪ ದಾವನು ಶ್ರಿ ಹರಿ ಪಾವನ ನಾಮವ ಆವಾಗ ನೆನೆವುತ ಸಾವಧನಾದಾ ಅ.ಪ ಹಿಂದಿನ ಪುಣ್ಯದಲಿ ನಾನೀಗ ಬಂದೆನು ನರದೇಹದಲಿ | ಮುಂದಾವ ಗತಿಗಳೋ ಛಂದದ ತಿಳಿಯದು | ಮಂದರ ಧರ ಸಲಹೆಂದು ಮೊರೆಯಿಡುವ 1 ಇದ್ದಷ್ಟರೊಳುದಾವ ಶೇವೆಗೆ ಕದ್ದಿರ ತನುಮನವಾ | ಸಿದ್ಧರ ನೆರೆಯಲಿ ಶಿದ್ಧ ಬೋಧಾಮೃತ | ಬುದ್ಧಿಲಿ ಸೇವಿಸಿ ಗದ್ದಳವಾಗಾ 2 ಗುರು ಮಹಿಪತಿ ಸ್ವಾಮಿ ಚರಣಕ ಶರಣೆಂದವನು ಪ್ರೇಮಿ | ಗುರು ವಚನವನಂದದಿ ಧರೆಯೊಳು ನಡೆಯುತ | ಗುರು ಭಕ್ತಿ ಜಾಗಿಸಿ ಗುರುತನಕ ಬಂದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇವರರುವರ ಹಿಡಿದು ಬಂಧಿಸಿ ನೀವು ಬೇಗ ಪ ಬಿಮ್ಮನೆ ಬಿಗಿದು ಕಾಮನ ಕಟ್ಟೆ ಅವನ ತಮ್ಮನ ಹಿಡಿದು ತಲೆಯ ಕುಟ್ಟಿ ಸುಮ್ಮನೆ ಲೋಭನ ಕೈ ಕೆಟ್ಟಿ ಗುಮ್ಮಿ ಜಮ್ಮನೆ ಮೋಹನ ದವಡೆಗೆ ತಟ್ಟಿ 1 ದಂಡಿಸಿರೈ ಮದವೆಂಬುವನ ತಲೆಯ ಚಂಡ ಹಾರಿಸಿ ಮತ್ತೆ ತುಡಿಗೆ ಮತ್ಸರನ ಬಿಡದೆ ಹೆಂಡಿರು ಮಕ್ಕಳಸೆರೆಯೊಳಗಿಕ್ಕಿ 2 ಅರಿಗಳನರುವರ ಜಯಿಸಿ ಸದ್ಗುರುವಿನ ಕರುಣ ಕಟಾಕ್ಷವ ಧರಿಸಿ ಪರಮಾತ್ಮ ಪರಿಪೂರ್ಣನೆನಿಸಿ ಹರಿಸೂನು ಕೋಣೆ ಲಕ್ಷ್ಮೀಶನ ಸ್ಮರಿಸಿ 3
--------------
ಕವಿ ಪರಮದೇವದಾಸರು