ಒಟ್ಟು 633 ಕಡೆಗಳಲ್ಲಿ , 83 ದಾಸರು , 512 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಹರಿಧ್ಯಾನಿಸೊ ಲಕ್ಷ್ಮೀವರನ ಧ್ಯಾನಿಸೊಪಉರಗಶಯನನಾಗಿಘೋರಶರಧಿಯನ್ನು ಮಧಿಸಿರುವಸುರರಿಗಮೃತವೆರೆದ ನಮ್ಮ ಗರುಡಗಮನ ತಾನುಅ.ಪದಂಡಧರಗೆ ಸಿಲುಕಿ ನರಕ ಕೊಂಡದಲ್ಲಿ ಮುಳುಗಲ್ಯಾಕೆಪುಂಡರೀಕನಯನ ಪಾಂಡುರಂಗನೆನ್ನದೇಶುಂಡಲಾಪುರಾದಿ ಪಾಲ ಪಾಂಡುಪುತ್ರ ಧರ್ಮರಾಯಕಂಡು ನಮಿಸಿ ಪೂಜೆಗೈದ ಅಂಡಜವಾಹನನೆಂದು1ಬಾಯಬಡಿಕನಾಗಿ ಸರ್ವ ನ್ಯಾಯ ತಪ್ಪಿ ಮಾತನಾಡಿಕಾಯಬೆಳೆಸಿ ತಿರುಗಿ ಬಂದೆ ಸಾಯಲಾ ಕಥೆವಾಯುತನಯ ವಂದ್ಯಚರಣಕಾಯಜಛೆಂದೆರಗಿದವಗೆಆಯುಧವರೇಣ್ಯ ಸರ್ವಸಹಾಯವ ಮಾಡುವಾ2ಕಂದ ಅಬಲ ವೃದ್ಧರೆಂದು ಬಂಧು ಜನರು ಭಾಗ ಕಿರಿದುಕಂದುಕುಂದುರೋಗಿ ಸ್ತ್ರೀಯರೆಂದು ಭೇದವೊಇಂದಿರೇಶಗಿಲ್ಲ ನರರು ಒಂದೇ ಮನದಿ ಧ್ಯಾನಿಸಿದರೆಸುಂದರಾಂಗಮೂರ್ತಿಗೋವಿಂದ ಪೊರೆಯುವಾ3
--------------
ಗೋವಿಂದದಾಸ
ಹೆಂಡತಿ ಎಂಬ ದೇವರನು ನಂಬಿಹನಣ್ಣಹೆಂಡತಿಯೆ ದೇವರೆಂದು ಕೆಡುತಿಹನಣ್ಣಪತಲೆಗೆ ತಾನೆರೆಯುವುದೆ ಮಂಗಲ ಸ್ನಾನವಣ್ಣಬಲು ವಸ್ತ್ರವುಡಿಸುವುದೆ ಅಭಿವಸ್ತ್ರವಣ್ಣಎಲೆಗೊಪ್ಪು ಮೊದಲಾಗಿಡುವುದೇ ಆಭರಣವಣ್ಣಹಲವು ಪರಿಮಳ ಲೇಪನವೇ ಗಂಧವಣ್ಣ1ನಾನಾ ದಂಡೆಯ ಹಾರವ ಮುಡಿವುದೆ ಪುಷ್ಪವಣ್ಣನಾನಾ ಬಹುಮಾನ ಮಾಡುವುದೆ ಧೂಪವಣ್ಣನಾನಾಪರಿಉಣಿಸುವುದೆ ನೈವೇದ್ಯವಣ್ಣನಾನಾ ಸಂತಸಪಡಿಸುವುದೆ ದೀಪವಣ್ಣ2ನೆನೆದೂಳಿಗ ಮಾಡುವುದೆ ಪ್ರದಕ್ಷಿಣವಣ್ಣಮುನಿಸುವಳ ತಿಳಿಸುವುದೆ ಸಾಷ್ಟಾಂಗವಣ್ಣಇನಿತು ಪೂಜೆಯ ಮಾಡಿ ತಿರುಗೊಂದು ಭವವಣ್ಣಚಿನುಮಯ ಚಿದಾನಂದ ನಿನಗೆ ದೊರೆಯನಣ್ಣ3
--------------
ಚಿದಾನಂದ ಅವಧೂತರು