ಒಟ್ಟು 1173 ಕಡೆಗಳಲ್ಲಿ , 100 ದಾಸರು , 986 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾಂಬಕೀ ವರಲಕ್ಷ್ಮೀ ಮಂಗಳಂ ಜಯ ಪ ಅಂಗಜಾದಿ ಪ್ರೇಮಜನನಿ ಭೃಂಗವೇಣಿಯೆ ಜಯ ಅ.ಪ. ಬಿಂಬರದನವಸನ ಭೂಷ್ಯೆ ಅಂಬುಜಾಂಬಕಿ ಅಂಬ ಪಾಹಿಮಾಂ ಜಯ 1 ಕುಂಕುಮಾಕ್ತ ಫಾಲಶೋಭೆ ಕಿಂಕಿಣೀರವೆ ಪಂಕಜಾತ ಶೋಭಮಾನ ಹಸ್ತಪಲ್ಲವೆ ಜಯ 2 ರತ್ನನಿಚಯ ಭಾಸಮಾನ ರತ್ನಕಿಂಕಿಣೀ ರತ್ನರಾಜಪುತ್ರಿ ಕಮಲೆ ಭಕ್ತವತ್ಸಲೆ ಜಯ 3 ನಿತ್ಯ ನಿನ್ನನು ಯತ್ನದಿಂದ ಧೇನುನಗರ ವಾಸೆ ಪಾಲಿಸು 4
--------------
ಬೇಟೆರಾಯ ದೀಕ್ಷಿತರು
ಮಂಗಳಾರತಿ ಎತ್ತುವೆ ಮಾರಮಣಗೆ ಪ ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ ವೈರಾಜ್ಯ ಸ್ಯಾರಾಜ್ಯ ಮಹ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು 1 ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ 2 ಪಾಪಿಗಳೊಳಗತಿ ಪಾಪಿಯು ನಾನೆನ್ನ ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು 3 ಪದಜಾನುಕರಗಳಿಂ ಉದರ ಹೃದಯದಿ ಶಿ- ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು 4 ಕಂದರ್ಪ ಕೋಟಿ ಲಾವಣ್ಯ ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು 5 ವಾಹನ ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ 6 ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು ಕಪಟನಾಟಕ ಸೂತ್ರಧಾರೀ ಗುರುರಾಮವಿಠಲ 7
--------------
ಗುರುರಾಮವಿಠಲ
ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ ತುಂಗವಿಕ್ರಮಗೆ ಮಂಗಳಾರತಿಯ ಧ್ರುವ ಅಗಣಿತಗುಣ ಅಗಮ್ಯಗೋಚರ ಸುಗಮದಲಾಡುವ ನಿಗಮೋದ್ಧಾರಗೆ 1 ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ ಭಗತವತ್ಸಲ ಸ್ವಾಮಿ ನಗಧರಗೆ 2 ಜಗತಿಯ ಕದ್ದೊಯ್ದ ಸುರನ ಸೀಳಿದ ಜಗದೋತ್ತಮನಾದ ಜಗದೋದ್ಧಾರಗೆ 3 ದುರುಳದೈತ್ಯನ ಬೆರಳುಗುರಿಲಿ ಸೀಳಿದ ತರಳ ಪ್ರಹ್ಲಾದಗೊಲಿದ ನರಹರಿಗೆ 4 ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ 5 ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ ಪರಮಪುರುಷನಾಗಿಹ ತಪೋನಿಧಿಗೆ 6 ದೇವತಿಗಳ ಸೆರೆಯ ಬಿಡಿಸಿದ ದೇವನು ಪಾವನಮೂರುತಿ ಅಹಲ್ಯೋದ್ದಾರಗೆ 7 iÀುದುಕುಲತಿಲಕ ವಿದುರವಂದಿತನಾದ ಬುಧಜನಪಾಲ ಮದನಮೋಹನಗೆ 8 ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ ಹೊಳೆವದೋರಿದ ಚಲುವಿಲಿ ಮಹಾಮುನಿಗೆ 9 ಮುದ್ದು ತೇಜಯನೇರಿ ತಿದ್ದಿ ರಾವುತನಾದ ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ ಅಮಂಗಜನಪಡದಾ ಮಂಗಳಾತ್ಮಗ ಪ ಪೊಂಬ್ಹರಿವಾಣದೊಳಗ | ಕೆಂಬ್ಹವಳದಾರತಿ ನಿಲಿಸಿ ಮುಂಬ್ಹರಿವರನ್ನ ಜ್ಯೋತಿಯಲಿ ಬೆಳಗಿರೆ 1 ಉತ್ತಮ ಪುರುಷ ಶ್ರೀ ಹರಿಗೆ ಮತ್ತ ಜಗನ್ಮಾತೆ ಸಿರಿಗೆ | ಮುತ್ತಿನ ಶಾಶೆಯನಿಟ್ಟು ಬೆಳಗಿರೆ 2 ಜಯ ಜಯ ಶಿಷ್ಟ ರಕ್ಷಕನೇ ಜಯ ಜಯ ದುಷ್ಟಶಿಕ್ಷಕನೇ | ಜಯವೆಂದು ಬೆಳಗಿ ಮಹಿಪತಿ ಸುತಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಗುವಿನ ಮರುಳಿದು ಬಿಡದಲ್ಲ - ಈ ಪ ಜಗದೊಳು ಪಂಡಿತರಿದ ಬಿಡಿಸಿ ಅ ನೀರನು ಕಂಡರೆ ಮುಳುಗುತಿದೆ - ತನ್ನಮೋರೆಯ ತೋರದೆ ಆಡುತಿದೆಧಾರಿಣಿ ಹಲ್ಲಲಿ ಎಳೆಯುತಿದೆ - ದೊಡ್ಡಭೈರವಾಕಾರದಿ ಕೂಗುತಿದೆ 1 ಪೊಡವಿಯ ಕೊಟ್ಟಗೆ ಅಳೆಯುತಿದೆ - ತನ್ನಕೊಡಲಿಯೊಳು ಭೂಪರ ಕಡಿಯುತಿದೆಅಡವಿ ಕೋತಿಗಳ ಕೂಡುತಿದೆ - ಚೆಲ್ವಮಡದಿಯರನು ಹಿಡಿದೆಳೆಯುತಿದೆ 2 ಉಟ್ಟಿದ್ದ ವಸ್ತ್ರವ ಬಿಸುಡುತಿದೆ - ತನ್ನದಿಟ್ಟ ತೇಜಿಯನೇರಿ ನಲಿಯುತಿದೆಸೃಷ್ಟಿಯೊಳು ಭೂಸುರರ ಪೊರೆದ ಜಗಜಟ್ಟಿಯಾದಿಕೇಶವ ರಾಯನಂತೆ 3
--------------
ಕನಕದಾಸ
ಮಣಿ ಗರಿಗಾಮಿನಿ ಸುಖವಾಣಿ ಪ ಮರುಗು ನಾಗ ಸುರಗೆ ಜಾಜಿ ಸರಸ ಸೂಮಾಲೆ ಧರಿಸಿ ವರಶೃಂಗಾರಳಾಗುತಲಿ 1 ಅಗರು ಗಂಧ ಚಂದನವನು ಗಜ ಜೌವ್ವನವನು ಮಿಗೆ ಶ್ರೀ ಲೇಪಳಾಗುತಲಿ 2 ಶಾಮಸುಂದರನಂಘ್ರಿ ಕಮಲ ಭಾಮಿನಿನೀನು ಮನದಿ ಸ್ಮರಿಸೆ ಕೋಮಲಾಂಗಿ ಶಶಿವದನೆ 3
--------------
ಶಾಮಸುಂದರ ವಿಠಲ
ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ ಪ ಪೃಥ್ವಿಯೊಳು ನೀ ಸಲಹಿದವರನನವರತ ಮತ್ತೆ ನಾನಿಂದು ಗಜದೊಡನೆ ಕಂಗೆಡುತಿರೆ ವಿ ಪತ್ತಕಡೆಗಾಣಿಸಲಶಕ್ಯವೇನಯ್ಯಾ 1 ದುರುಳಖಳ ಪ್ರಹ್ಲಾದನನಲೆಬಡಿಸುತಿರಲದನು ಪರಿಹರಿಸಲೆಲ್ಲಿಂದ ಬಂದೊದಗಿದೆ ಮೊರೆ ಇಡಲು ಕರಿಯ ಧ್ವನಿ ನಿನಗೆಂತು ಕೇಳಿತು ಶರಣಜನಬಂಧುವೇ ಬಂಧನವ ಪರಿಹರಿಸೋ 2 ಆದೊಡೇನಾಯ್ತು ನಿನ್ನಂಘ್ರಿನಂಬಿರಲು ನೀದಯದಿ ನಿನ್ನೊಳಿಂಬಿಡುವ ನೆವದೀ ಮಾಧವನೆ ಗಜವಾಗಿ ಬಂದೊದಗಿದೆಯೋ ನಾಧನ್ಯ ವೈಕುಂಠಪತಿ ಚೆನ್ನರಾಯ 3
--------------
ಬೇಲೂರು ವೈಕುಂಠದಾಸರು
ಮದಗಜಗಮನೆಯರ ಮುದದಿ ಮುಯ್ಯಕ್ಕೆ ಸರಿ ಹದಿನಾಲ್ಕು ಲೋಕದೊಳಗಿಲ್ಲಕೇಳಮ್ಮ ದೂತೆ ಹೇಳಮ್ಮ ಹೋಗಿ ಈ ಮಾತೆ ಪ. ಚಂದ್ರ ಉದಿಸಿದಂತೆ ಬಂದರೆ ಐವರು ಇಂದೆಮ್ಮ ಪುಣ್ಯ ಫಲಿಸಿತೆ ಇಂದೆಮ್ಮ ಪುಣ್ಯ ಫಲಿಸಿತೆ ಐವರುಬಂದೆರಗೋರಮ್ಮ ಕ್ಷಣದೊಳು 1 ಎಂಥ ದಯವ ಮಾಡಿ ಕಾಂತೆಯರು ಬಂದಾರೆಎಂತು ನಮ್ಮ ಪುಣ್ಯ ಫಲಿಸಿತುಎಂತೆಮ್ಮ ಪುಣ್ಯ ಫಲಿಸಿತುಲಕ್ಷಿ ್ಮಕಾಂತನೆ ಬಂದ ಮನೆತನಕ 2 ಹರದೆಯರು ಬಂದದ್ದು ಅರಿದು ಎಷ್ಟೇಳಲಿಬೆರಗಾದರಮ್ಮ ಹರಬೊಮ್ಮಬೆರಗಾದರಮ್ಮ ಹರಬೊಮ್ಮ ಕಾಮಧೇನುಕರೆದಂತಾಯಿತು ಸುಖವನೆ3 ಸಚ್ಚಿತಾನಂತ ಬಂದದಾಶ್ವರ್ಯ ನೋಡÀ ತಾಯಿಅಚ್ಚ ಕರುಣದಲೆ ಐವರಿಗೆ ಅಚ್ಚ ಕರುಣದಲೆ ಐವರಿಗೆ ಪರಿಪರಿಉತ್ಸಾಹ ಉನ್ನತಿಯ ಕೊಡುವವನೆ4 ಅತಿಶಯ ಮುಯ್ಯವನು ಸುತಿಸಲಾರೆವ ಕೆಲದಿಚತುರಂಗ ಬಲವ ಸಹಿತಾಗಿಚತುರಂಗ ಬಲವ ಸಹಿತಾಗಿ ರಾಮೇಶನ ಸತಿಯರ ಕರೆಯ ಬರತೇವ5
--------------
ಗಲಗಲಿಅವ್ವನವರು
ಮದನ ಮೋಹನ ಕೃಷ್ಣ ಉದಧಿ ಶಯನ ಹರಿ ಮಾಧವನ ಪ ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ ಇಂದಿರೆ ರಮಣ ಗೋವಿಂದನ ಮಹಿಮೆಯ ಒಂದೆ ಮನದಿ ಸ್ತುತಿಸುವ ಜನರ ಕುಂದೆಣಿಸದೆ ಮುಚುಕುಂದ ವರದ ಹೃನ್ಮಂದಿರದಲಿ ನಲಿದಾಡುವನು 1 ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ- ನೇಕ ವಿಧದಿ ಸ್ತುತಿಸುವ ಜನರ ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು ತೋಕನಂದದಿ ಪರಿಪಾಲಿಸುವ 2 ಪದ್ಮನಾಭನ ಪಾದಪದ್ಮವ ಸ್ಮರಿಸುತ ಶುದ್ಧಮನದಿ ಪಾಡಿ ಪೊಗಳುವರಾ ಸಿದ್ಧಾರ್ಥನಾಮ ವತ್ಸರದಲಿ ಸುಜನರ ಹೃದ್ರೋಗವಳಿಯುತ ಸಲಹುವನೂ 3 ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ- ಕಾಂತನನೇಕ ವಿಧದಿ ಸ್ಮರಿಸೆ ದಂತಿವರದ ಅನಂತ ಮಹಿಮ ತನ್ನ ಕಾಂತೆ ಸಹಿತ ಒಲಯುವನವರ್ಗೆ4 ಕಮಲಸಂಭವಪಿತ ನಮಿಸಿ ಸ್ತುತಿಸುವೆನು ಕಮಲ ಪತ್ರಾಕ್ಷಹರಿ ಕರುಣಾನಿಧೆ ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ- ತ್ಕಮಲದಿ ಪೊಳೆಯುವ ಸುಜನರಿಗೆ5
--------------
ನಿಡಗುರುಕಿ ಜೀವೂಬಾಯಿ
ಮದನನಯ್ಯಾ ಮೋಹನ್ನರಾಯಾ ನೀ ಬಾರೋ |ಹದನದಿಂದ ಹೇಳಿದಳು ಮದಗಜಗಾಮಿನಿ ಪ ಕಾಣದೆ ನಿಲ್ಲಲಾರಳು | ಕನಸನಾದರೂ ಕಾಣಳು |ಗಾಢ ನಿದ್ರೆಯನರಿಯಳು | ಬೆಳಗಾದರೂ ಮರೆಯಳು 1 ನಿನ್ನ ಮೊನ್ನ ಬರದೆ ಹೋಗಿ | ಭಿನ್ನನುಸರದೆ ಬೆರಗಿ |ಸೊನ್ನೆಗಳ ಮಿತವೆಂದು | ಎನ್ನ ಕೂಡನಾಡಿದಳು 2 ಆವ ಮೋಹದ ಮಡದಿ | ನಿನ್ನಗಲಿಸಿದ್ದಾಳು |ರುಕ್ಮಭೂಷಾ ಆವಳಾಣಿಗಳ | ನಿನಗೆ ಹಾಕಿ ಹಿಡಿದಾಳು 3
--------------
ರುಕ್ಮಾಂಗದರು
ಮನವೇ ಮೈ ಮರೆಯಲಿ ಬ್ಯಾಡಾ | ನಿನ್ನೊಳು ಘನದೆಚ್ಚರ ಬಲಿ ದೃಢಾ ಪ ಸ್ವಾಪದ ಕನ್ನಡಿ ಮನಿಯಾ ಹೊಕ್ಕು ಬಳಲಿದ ಪರಿಯಾ | ಸಿಂಹನು ಕೂಪದಿ ನೆರಳಿಗೆ ಬೀಳಲಿ ಕಾಜಿನ | ಸೋಪಾನವ ನೋಡಿ ಗಜವಿನ್ನಾಪದ ಬಿಟ್ಟದ ಕೇಳಲೀ 1 ಶುಕನಲಿಕದಲಿ ಬಂದು ಬಿದ್ದಿತು ತಾನಿಂದು | ವಾನ್ನರ ಪರಿ | ಪ್ರಕಟದಿ ವಿಷಯಕ ಮೋಹಿಸಿ 2 ತಂದೆ ಮಹಿಪತಿ ಚರಣ ನಮಿಸಿ | ಪಡಿಯಲೋ ಕರುಣಾ | ಇಂದಿರೆಯರಸನಾ ನಾಮವ ಪಾಡುತ | ಅರುಹಿನ | ಮಂದಿರವನು ಸಾರೀ ಜನುಮಕ | ಬಂದ ಸಾರ್ಥಕ ಮಾಡುತಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನಸಿಜಜಾತ ತಾತಮೋಹಿನಿಭಾಮಿನೀ ಶ್ರೀಮಣಿ ಪ ವನಜಾಸನೆ ಘನಸುಗುಣೀ | ಮುನಿಮಾನಸ ತೋಷಿಣಿ ಅ.ಪ ನರೋತ್ತುಂಗ ಪ್ರಮೋದಿನೇ | ಚಿನ್ಮಯೆ ಸುಮಭಾವನೆ ದರಹಾಸ ಸುಮಾನಿನೆ ಭಾಗ್ಯಾಲಂಕಾರೆ ಪಂಕಜಾಸನೇ 1 ವರ ಸುಖಾಭ್ಯಂಜನೇ ಮೋಹನೇ ಮಣಿಗಣರದನೇ | ಗಜಗಮನೇ ಭೃಂಗ ಚತುರೆ ನಿರುತ ನಿರಂಜನಿ ಕೋಮಲೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ
ಮಹಾದೇವಾ ಪ ಗಿರಿಜೆ ರಮಣ ವೃಷಬೇಂದ್ರ ವಾಹನಾ | ಸರಸಿ ಜಾರಿ ಮಿತ್ರಾನಲ ನಯನಾ 1 ಕರ್ಪುರ ಗೌರವ ಪಂಚಾನನಾ | ಸರ್ಪ ಭೂಷಣಂಗಜ ಮದಹರಣಾ 2 ಕರಿಚ - ರ್ಮಾಂಬರ ಸುರ ನದಿ ಧರಾ | ಗುರು ಮಹಿಪತಿ ಸುತ ಭಯ ಹರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಧವ ಪ ಪರಮಪುರುಷ ನೀಪುರುಷೋತ್ತಮ ನೀ ಅಜ ಭವ ಸುರ ನರೋತ್ತಮಾರ್ಚಿತ ಅ.ಪ ದೇವ ದೇವೋತ್ತಮ ದೇವ ಸಾರ್ವಭೌಮ ಜೀವ ಜೀವಾಂರ್ತಗತ ಸರ್ವೋತ್ತಮ 1 ಅಣುತೃಣಗಣ ಮಹತ್ತತ್ವಾದಿಗಳ ಅನಂತರೂಪಗುಣಗಳಲಡಗಿ ಮೆರೆವ ಪ್ರಭು 2 ಬ್ರಹ್ಮ ಸುರೇಂದ್ರಾರ್ಚಿತ ಪಾವನ ಪದ ಚಿನ್ಮಯರೂಪ ಸುರಾಸುರ ವಂದ್ಯಾ 3 ಗರುಡಗಮನ ಸಿರಿರಮಣ ಚರಣನಖ ಕಿರಣ ಕೋಟಿರವಿತೇಜಪ್ರಕಾಶಕ4 ಗಂಗಾಪಿತ ಅನಂಗಜನಕ ಹೇ ಮಂಗಳಾಂಗ ರಘುರಾಮವಿಠಲ ಪ್ರಭು 5
--------------
ರಘುರಾಮವಿಠಲದಾಸರು