ಒಟ್ಟು 19445 ಕಡೆಗಳಲ್ಲಿ , 133 ದಾಸರು , 8422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗೆ ಹೋಲುವೆ ನಿನ್ನ ಯಾರಲ್ಲಿ ಸಲ್ಲಾಪಿಸಲಿ ಮಾರನೋ ಮದನನ ಪಡೆದ ಕೇಶವನೋ ಪ ಸಾರಸವದನನು ವಾರಿಧಿಶಯನನು ಅ.ಪ ಆಹವ ಭೀಮನೋ | ಸಾಹಸ ಮಲ್ಲನೋ ಬಹು ಸುದೀರ್ಘನು ಮೋಹಮಂದಿರನು ಮಹಿಜೆಯರಸನೋ ಅಹಿಯ ಶಯನನೋ ಬಹುಗುಣಾನ್ವಿತ ವೆಂಕಟೇಶನೋ ಮಹಿತ ಮಹಿಮನು ಸಾಹಸ ಶೀಲನು ಪಾಹಿರಘು ಕುಲಪತಿ ಚೆನ್ನ ಚೆಲುವನು 1 ಉರಗ ಭೂಷಣನೋ | ಸರಸಿಜ ಭವನೋ ಧರಣಿಯ ಅಳೆದ ಪರಮಪುರುಷನೋ ಗರುಡಗಮನನೋ | ಕರುಣ ಭಜಿಪನೋ ನರಪಸುತ ಕೋದಂಡಧರನೋ ಮೆರೆವ ಕಾಂಚೀಪುರದ ವರದನೋ ನಿರುತ ವಂದಿತ ಮಾಂಗಿರೀಶನೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾರು ಇದ್ದರೇನು ನಿನ್ನ ಪಥಕೆ ಬಾರರೋ ಶ್ರೀಹರಿ ಮುರಾರಿ ಎಂದು ಗತಿಯ ನೋಡಿ ಕೊಂಡಿರೋ ಪ ಹೊನ್ನು ಹಣವು ಚಿನ್ನ ಚಿಗುರು ಬಣ್ಣ ಬಂಗಾರವಿರಲು ಎನ್ನವರು ತನ್ನವರು ಎಂದು ಬರುವರೋ ಅನ್ನಕಿಲ್ಲದಿರಲು ಕೆಟ್ಟು ಅಲ್ಲಿ ಪರಿಕಾಲದಲ್ಲಿ ನಿನ್ನ ಕುಶಲವಾರ್ತೆಗಳನು ಮುನ್ನ ಕೇಳರೋ 1 ಇಂದು ಹಬ್ಬ ಹುಣ್ಣಿಮೆಂದು ಬಂಧು ಬಳಗವೆಲ್ಲನೆರೆದು ತಿಂದು ನಿನ್ನ ಹಿಂದೆ ಮುಂದೆ ತಿರುಗು ತಿಪ್ಪರೋ ಬಂಟ ಬಹಳ ಭಾಗ್ಯವೆಲ್ಲ ಕುಂದಿ ಹೋದ ಕಾಲದಲ್ಲಿ ಮುಂದೆ ಸುಳಿಯರೋ 2 ತುಂಬಿ ಇರಲು ಎಡದೆ ಬಿಡದೆ ನೆಂಟರಿಷ್ಟರೆಂದು ತಿಂಬರೋ ವಡವೆ ವಸ್ತು ನಷ್ಟವಾಗಿ ಬಡತನವು ಬಂದ ಬಳಿಕ ಬಿಡುವ ಕೈಯ ನಿನ್ನ ನೊಂದ ನುಡಿಯ ನುಡಿಸರೋ 3 ಮಡದಿ ಮಕ್ಕಳೆಲ್ಲ ನಿನ್ನ ಒಡನೆ ಹುಟ್ಟಿದವರು ಸಹಿತ ಕಡು ಮಮತೆಯಿಂದಲವರು ನೋಡಿ ನಡೆವರೋ ಉಡಲು ತೊಡಲು ಒಡಲಿಗಿಷ್ಟು ಕಡಿಮೆಯಾಗಿ ಎಂದು ಹೊಡೆದು ಕೊಂಬರೋ 4 ಮೃತ್ಯುನಿನ್ನ ಹತ್ತಿರಿದ್ದು ಹೊತ್ತು ವೇಳೆ ನೋಡುತಿಹುದು ವ್ಯರ್ಥವಾಗಿ ಇವರ ನಂಬಿ ಕತ್ತೆ ಕೆಡದಿರೋ ಸತ್ತು ಹುಟ್ಟಿ ಸಾಯ ಬೇಡಿ ಚಿತ್ತದಲ್ಲಿ ಭೀಮನಕೋಣೆ ಗೊತ್ತಿಲಿದ್ದ ಲಕ್ಷ್ಮೀಪತಿಯ ಒತ್ತಿ ಭಜಿಸಿರೋ 5
--------------
ಕವಿ ಪರಮದೇವದಾಸರು
ಯಾರೆ ಹುಡುಗಿ ನೀನು ಬಂದವಳಿಲ್ಲಿಯಾರೆ ಹುಡುಗಿ ನೀನು ಪ ಯಾರೆ ಹುಡುಗಿ ನೀನು ಮೂರು ಬಾರಿಲಿ ಬಂದಿನೀರಜಾಂಬಕ ಕರವೀರದವಳೆ ನೀ 1 ಮಾನಿನಿ ಮಣಿಯೆ 2 ಏನು ಪೇಳಿದನಮ್ಮಾ ಅಚ್ಯುತಪ್ರಾಣದೇವನು ನಿಮ್ಮಾಏನು ಸೂಚಿಸಲೆಂದು ನೀನು ಪೇಳಿದರೀಗನಾನು ಶೋಧಿಸುವೆನೆ ದೀನರುದ್ಧಾರಳೇ 3 ಇಂದುಮುಖಿಯೆ ನೀನು ಸುಮ್ಮನೆನಿಂದ ಕಾರಣವೇನುಇಂದಿರೇಶನ ಸಖಿ ಒಂದು ಮಾತಾಡದೆ ನಿನ-ಗೊಂದಿಸುವ ಕರದಿಂದ ಮಹಾಸಕ 4
--------------
ಇಂದಿರೇಶರು
ಯಾರೆಂದು ತಿಳಿದೆಯೋ ಈತನ ನೀನು ಪ ಯಾರೆಂದು ತಿಳಿದಿಹೆ ಯದುಕುಲೋತ್ತಮಮನ ನೀ ಪೋರ ಮಾತುಗಳನು ಸಾಕುಮಾಡೆಲೋ ಮೂಢ ಅ.ಪ. ಪಶುಪಾಲನಿವನೆನುತ ಜರಿದೊಡೇನಾಯ್ತು ಪಶುಪತಿ ವಿನುತನೀತ ಬಿಸಜ ಸಂಭವನಿತ್ತ ವರದ ಬಲುಮೆಯಿಂದ ವಸುಧೆ ಕಂಟಕನಾದ ಅಸುರ ಹಿರಣ್ಯಕನ ಬಸುರ ನಖದಲಿ ಬಗೆದು ಸವರಿದ ಅಸುರರಿಪು ಶ್ರೀಕರಿಗಿರೀಶನ ದಶಶಿರಾಂತಕ ದಶರಥಾತ್ಮಜ ಅಸಮ ಮಹಿಮನ ಅಪ್ರಮೇಯನ 1
--------------
ವರಾವಾಣಿರಾಮರಾಯದಾಸರು
ಯಾರೇನು ಮಾಡುವರೋ ಹರಿಯೇ ಯಾರಿಂದಲೇನಹುದು ಪ ವಾರಿಜಾಂಬಕ ಮಾರಜನಕ ಕೌಸ್ತುಭ ವಕ್ಷ ಶ್ರೀಶಾ ಅ.ಪ. ಅಜ ಈ ಜಗ ಸೃಜಿಸಿದನೆ ಶ್ರೀದೇವಿಯು ನಿಜಗುಣ ನೆಲೆಗಂಡಳೆ ಭುಜಗಭೂಷಣ ಆಯಕರ್ತನಾದರೆ ಭಜಕನಾ ಬಯಕೆ ಬಾಯಬಿಡುವದೆ 1 ಸುರಪ ಸುರರೊಡೆಯನೆ ಧರಣಿ ಈ ಉರಗೇಂದ್ರ ಪೊತ್ತಿದನೆ ದುರುಳನ ಭಯಕೆ ಪುರವ ಬಿಟ್ಟೋಡಿದ ಧರಣಿಯ ದುರುಳನೊಯ್ಯೆ ವರಾಹರೂಪದಿ ತಂದೆ ನೀ ತಂದೆ ಹರಿಯೇ 2 ಶ್ರೀಪತಿ ಸುರತತಿಯ ಸೃಜಿಸಿ ಈಪ್ಸಿತಾರ್ಥಗಳನೆಲ್ಲಾ ಅವರಿಗೆ ಸ್ವಾಪ್ನಜಾಗೃತಿಯಲಿ ಪರಿಪಾಲಿಸೆ ಮಹಾನಿಧಿವಿಠಲ ನೀನಲ್ಲದಿನ್ಯಾರೋ 3
--------------
ಮಹಾನಿಥಿವಿಠಲ
ಯಾವ ಪರಿಯಲಿ ಒಲಿಸಿ ಪಡೆವೆ ಹರಿಯೊಲವನು ಭೂವಿವರವನು ಪೊತ್ತ ಮಹಶೇಷಗರಿದು ಪ ಸುರನದಿ ಜಲದೊಳಭಿಷೇಕವ ಮಾಡುವರೆ ಚರಣದಲಿ ಜನಿಸಿಹಳು ದೇವಗಂಗೆ ಮೆರೆವ ದಿವ್ಯಾಸನವನೀಯೆ ವಿಶ್ವಾಧಾರ ಧರಿಸಿ ಕೊಡಲಿಕೆ ವಸ್ತ್ರ ಪೀತಾಂಬರ 1 ಹೇಮರಚಿತಾಭರಣದಿಂದ ಮೆಚ್ಚಿಸಲವಗೆ ಕಾಮಿನಿಯೆ ಶ್ರೀಮಹಾಲಕ್ಷ್ಮಿದೇವಿ ಪ್ರೇಮದಿಂ ಶಾಲ್ಯಾನ್ನದಿಂದ ತೃಪ್ತಿ ನಿತ್ಯ ತೃಪ್ತ 2 ಕ್ಷೀರದಿಂ ಮೆಚ್ಚಿಸಲಿಕವಗೆ ಪಾಲ್ಗಡಲೆಮನೆ ಮಾರುತಾತ್ಮಜ ಕೋಣೆ ಲಕ್ಷ್ಮೀಶ ನಂಘ್ರಿಗೆ ನಮಸ್ಕಾರದಿಂ ಮೆಚ್ಚಿಸಲಿಕವ ಜಗದ್ವಂದ್ಯಾ 3
--------------
ಕವಿ ಪರಮದೇವದಾಸರು
ಯಾವ ಸಂಭ್ರಮವಿದೇ ವಾರಿಜ ವದನೆ ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ ದೇವ ದೇವನು ನಿನ್ನ ಪೂಜೆಗೊಪ್ಪಿದನೇ ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ ಗಾನ ನೃತ್ಯಗಳಿಂದ ಒಲಿಸಿದೆಯೇನೇ ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ ಸಾನುರಾಗದಿ ಪೂಜೆ ಮಾಡಿದೆಯೇನೇ ನಾನೇನಗೈದರೆ ಅವನೊಲಿಯುವನೇ1 ಪರಿಮಳ ಗಂಧಕೆ ಮೈ ತೋರುವನೇ ಕೊರಳಿಗೆ ಹಾರವ ನೀಡಲೊಪ್ಪುವನೇ ಮುರಳಿಯ ಗಾನವನೊಲಿದು ಕೇಳುವನೇ ಪರಮಪುರುಷ ಬಾರೆಂದರೆ ಬಹನೇ 2 ಕರಗಳ ಮುಗಿದರೆ ಕರುಣಿಪನೇನೇ ಚರಣಕೆ ಮಣಿದರೆ ಒಲಿಯುವನೇನೇ ಪರಿಪರಿ ಹೊಗಳಲು ನಲಿಯುವನೇನೇ ವರದ ಮಾಂಗಿರಿರಂಗ ದಯೆ ತೋರನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾವ ಸುಖ ಇದು ದಾವ ಸುಖ ಮನುಜ ಶರೀರದ್ದು ಪ ನೋಯುತಲಿರುವುದು ಅ.ಪ ಕೊಂಡ ದಾವ ಸುಖ ಇದು ಹೇಯವಾಲದ ಭಾಂಡದ್ದಾವ ಸುಖ ಕಾಯವೆನಿಸಿಕೊಂಡು ಸಾವುಕುಣಿಗೆ ಬಿದ್ದು ಮಾಯವಾಗುತಲಿಹ್ಯದಾವ ಸುಖ 1 ಜಡಮತಿಶರೀರದ್ದು ದಾವ ಸುಖ ಇದು ಕೆಡುವ ತನುವು ನಿಜ ದಾವ ಸುಖ ಬುಡವು ಮೇಲಾಗಾಡಿ ಕಡೆಗೆ ಒಂದುದಿನ ಮಡಿದು ಹೋಗುವುದುದಾವ ಸುಖ 2 ನೇಮವಲ್ಲೊಂದಿನ ದಾವ ಸುಖ ಕಾಮಿತವನು ನೀಗಿ ಸ್ವಾಮಿ ಶ್ರೀರಾಮನ ಪ್ರೇಮ ಸಂಪಾದಿಸಲಾಗ ಸುಖ 3
--------------
ರಾಮದಾಸರು
ಯಾವ ಹೆಸರಿನಿಂದೆ ಕರೆದರೇನುಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನುಪ ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು 1 ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ 2 ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು 3 ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ವೀರನಾರಾಯಣನುಮುದದಿಂದ ಸಲಹುವನು ಸಂದೇಹವೇನು 4
--------------
ವೀರನಾರಾಯಣ
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯುವ ಹೊಸಪರಿ ರೂಪದಿ ಪ. ಶಂಖಚಕ್ರ ನಾಮಾಂಕಿತಮಾಗಿಹ ಸಂಕರ್ಷಣ ರೂಪದಿ ಮೆರೆಯುವ 1 ರವಿಶಶಿ ಬಿಂಬಗಳ್ ಎಡಬಲದೋಳ್ ನವವಿಧದಿಂದಲಿ ಮೆರೆಯುವ 2 ನಾಡಿನೊಳೀಪರಿ ಗೂಢರೂಪದಿ ನಾಡಿನ ಭಕ್ತರು ಬೇಡಿದುದೀಯುವ 3 ಎಣಿಸಿ ಗುಣಿಸಲ್ ತಣಿಯದ ಮಹಿಮನ ಮಣಿಸುವೆನು ಶೇಷಗಿರೀವರನಿವನ 4
--------------
ನಂಜನಗೂಡು ತಿರುಮಲಾಂಬಾ
ಯೆಂತು ವರ್ಣಿಸಲಮ್ಮ ಈ ಗುರುಗಳ | ಯಂತ್ರೋದ್ಧಾರ ನಾಗಿ | ಇಂತು ಮೆರೆವ ಯತಿಯಾ ಪ ಕೋತಿ ರೂಪದಿ ಬಂದು | ಭೂತಳಕ್ಕೆ ಬೆಡಗು ತೋರಿ || ಈ ತುಂಗ ಭದ್ರೆಯಲಿ | ಖ್ಯಾತನಾಗಿಪ್ಪ ಯತಿಯೊ 1 ಸುತ್ತು ವಾನರ ಬಂಧ | ಮತ್ತೆ ಮಲೆಯಾಕಾರ || ಮಧ್ಯ ಚಿತ್ರಕೋಣ ಅದರೊಳು | ನಿತ್ಯದಲಿ ಮೆರೆವಾ ಯತಿಯಾ 2 ವ್ಯಾಸರಾಯರಿಂದ ಬಂದು | ಈ ಶಿಲೆಯಾಳು ನಿಂತು ||ಶ್ರೀಶ ವಿಜಯವಿಠ್ಠಲನ್ನ | ಯೇಸು ಬಗೆ ವರ್ಣಿಪೆ ಯತಿಯಾ3
--------------
ವಿಜಯದಾಸ
ಯೆಂದಿಗಾಹುದೋ ನಿನ್ನ ದರುಶನಾ | ಇಂದಿರೇಶ ಮುಕುಂದ ಕೇಶವಾ ಪ ಗಾನಲೋಲನೇ ದೀನ ವತ್ಸಲಾ || ಮಾನದಿಂದಲೀ ನೀನೆ ಪಾಲಿಸೋ 1 ಯಾರಿಗೆ ಮೊರೆಯಿಡುವೆ ಶ್ರೀ ಹರೀ || ಸಾರಿ ಬಂದು ನೀ ಈಗಲೇ ಪೊರೀ 2 ಗಜವ ಪಾಲಿಸೋ ಗರುವದಿಂದಲೀ || ಭುಜಗಶಯನ ಶ್ರೀ ವಿಜಯವಿಠಲಾ3
--------------
ವಿಜಯದಾಸ
ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ಯೆಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ ಪ ಮುಂದೆ ಹೋಗಲು ಬಂಧಮಾಡುತ ಕುಂದು ಅಳಿಯುತ ತಂದೆ ದಯೆತೊರಿ ಅ.ಪ ಮಂದ ನಾನಯ್ಯ ಕಂದಿ ಕುಂದಿದೆ ಭವದಿ ಕೇಳಯ್ಯ ಬಂಧು ಬಳಗವು ಯಾರು ಇಲ್ಲಯ್ಯ ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ ಅಂದು ಸಭೆಯೊಳು ಮಂದಗಮನೆಯ ಒಂದು ನೊಡದೆ ಬಂದು ಸಲಹಿದ ಸಿಂಧು ಶಯನಾನಂದ ಮೂರುತಿ ನಂದನಂದನ ಶ್ಯಾಮಸುಂದರ ಬಂಧು ಸರ್ವರ ಬಂಧಮೋಚಕ ಮಂದರಾದ್ರಿ ಧರನೆ ಯದುಕುಲ ಚಂದ್ರ ಶೋಭಾಸಾಂದ್ರ ಕೃಷ್ಣನೆ ಬಂದು ಚಂದದಿ ಸಲಹಿ ಎನ್ನನು 1 ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ ಮೇಲೆ ಯೌವನ ಒಡನೆ ಬಂತಲ್ಲಿ ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ ಕಾಲಕಳೆದೆನು ಪಗಡೆ ಜೂಜಿನಲಿ ಮಲ್ಲಮರ್ದನ ಮಾತುಲಾಂತಕ ಚಲ್ವಸೂಕರ ಪುಲ್ಲಲೊಚನ ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ ಸಾರ ಶ್ರೀ ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ ಬುದ್ಧ ಕಲ್ಕಿಯೆ ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ2 ಮೂರು ತಾಪವ ಹರಿಪ ಬಗೆಯೇನೋ ವೈರಿ ಆರರ ಭರದಿ ತರಿ ನೀನೂ ಮೂರು ಋಣಗಳು ಉಳಿಯೆಗತಿಯೇನು ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು ಸಾರಸಜ್ಜನ ಪ್ರಾಪ್ಯ ಶುಭಗುಣ ಸಾರ ಕರುಣಾ ಪೂರ್ಣವಾರಿಧಿ ಮಾರಜನಕನೇ ಋಷಭಮಹಿದಾಸ ತೋರು ಜ್ಞಾನವ ಬಾದರಾಯಣ ಮೀರಲಾರೆನು ವಿಷಯವಾಸನೆ ಭಾರತೀಶನ ಒಡೆಯ ಕೃಷ್ಣನೆ ಭಾರ ನಿನ್ನದು ಎನ್ನ ಪೊರೆವದು ಮತ್ಸ್ಯ ವಾಮನ ಧೀರ ಧೃವನಾ ಪೊರೆದ ವರದನೆ ಬೀರಿ ಭಕ್ತಿ ಜ್ಞಾನ ವೈರಾಗ್ಯ 3 ಎನ್ನ ಯೋಗ್ಯತೆ ನೋಡಿ ಫಲವೇನು ನಿನ್ನ ಘನತೆ ತೋರಿ ಪೊರೆ ನೀನು ನಿನ್ನ ದಾಸನ ಮಾಡು ಎನ್ನನ್ನು ಅನ್ಯಹಾದಿಯ ಕಾಣೆ ನಾ ನಿನ್ನು ಬೆನ್ನು ಬಿದ್ದೆನು ಇನ್ನೂಮುನ್ನೂ ಮಾಧವ ವಿಶ್ವ ತೈಜಸ ಪ್ರಾಜ್ಞತುರಿಯ ಹಂಸ ವಿಷ್ಣುವೇ ಜ್ಞಾನ ಭೋಧಕ ಸನತ್ಕುಮಾರನೇ ಮೌನಿ ದತ್ತಾತ್ರೇಯ ಹಯಮುಖ ದೀನವತ್ಸಲ ಯಜ್ಞ ಧನ್ವಂತ್ರಿ ಶ್ರೀನಿವಾಸ ರಾಮ ಕಪಿಲನೆ ಜ್ಞಾನ ನಿಧಿ ಮುನಿ ನಾರಾಯಣನೆ ನೀನೆ ಅನಿರುದ್ಧಾದಿ ರೂಪನು ಧ್ಯಾನಗೊಚರ ಶಿಂಶುಮಾರನೆ ಸಾನುಕೂಲದಿ ನೀನೆ ವಲಿಯುತ ಕರ್ಮ ಸಂಚಯ4 ಆದಪೊದ ಮಾತು ಏಕ್ಕಯ್ಯ ಮಧ್ವರಾಯರ ಪ್ರೀಯ ಶೃತಿಗೇಯ ಮೋದದಾಯಕ ಮುಂದೆ ಸಲಹೈಯ್ಯ ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ ತಿದ್ದಿ ಮನವನು ಕದ್ದು ಅಘವನು ಒದ್ದು ಲಿಂಗವ ಶುದ್ಧಜ್ಞಾನದ ಸಾಧು ಜಯಮುನಿ ವಾಯುವಂತರ ಮಾಧವ ಶ್ರೀ ಕೃಷ್ಣವಿಠಲನೆ ಪಾದ ಮಧುಪರ ವೃಂದ ಮಧ್ಯದಿ ವೇದ ಸಮ್ಮತ ಗಾನ ಸುಧೆಯನು ಶುದ್ಧಭಕ್ತಿ ಜ್ಞಾನದೊಡಗೂಡಿ ಮೆದ್ದು ಪಾಡುತ ಕುಣಿವ ಭಾಗ್ಯವ ಮುದ್ದು ಕೃಷ್ಣನೆ ನೀನೆ ಎನಗಿತ್ತು 5
--------------
ಕೃಷ್ಣವಿಠಲದಾಸರು