ಒಟ್ಟು 19445 ಕಡೆಗಳಲ್ಲಿ , 133 ದಾಸರು , 8422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತವರ ನಾನಲ್ಲವೊ ಹರಿ ಬರಿದೆ ಖ್ಯಾತಿಯನು ತಂದಿತ್ತಿಯ ಪ ಮಾತುಗಳು ನಾಲುಕಾಡಿ ಸಭೆಯೊಳಗೆ ಪ್ರೀತಿ ಬಡಿಸುವೆನೊ ನರರ ರೀತಿಯಲಿ ಶ್ರುತಿ ಸ್ಮøತಿಗಳ ಪಠಿಸಿ ಶ್ರೀ- ನಾಥ ನಿನ್ನ ತೋಷಿಸಿದೆನೆ 1 ಜಪಮಣಿಗಳನು ತಿರುಹಿಸಿ | ಲೋಕರನ ಕಪಟಗೊಳಿಸುವೆನಲ್ಲದೆ ತಪ ಮಾಡಿದೆನೆ ಮನದಲಿ | ನಿನ್ನಯ ಕೃಪೆಯು ಉದಿಸುವ ತೆರದಲಿ 2 ದಾಸ ವೇಷವ ಧರಿಸಿದೆ ಕನಕದಾ- ವಾಸನೆಯಿಂದಲ್ಲದೆ ವಾಸುದೇವವಿಠಲ ಶರಣ ತಾ ಲೇಶವರಿಯೆನು ಕರುಣಿಸೊ 3
--------------
ವ್ಯಾಸತತ್ವಜ್ಞದಾಸರು
ಯಾತ್ರಕ್ಕೆ ಬಂದಿರ್ದೆನೋ ಭುವನ ಯಾತ್ರ ಮಾಡುವೆನು ಪ ಧಾತ್ರಿ ಈರೇಳಕ್ಕೆ ಸೂತ್ರಧಾರನ ಕೃಪಾ ಪಾತ್ರನಾಗಿ ಪವಿತ್ರನಾಗುವೆನು ಅ.ಪ ದೇಶ ತಿರುಗುವೆನು ದೇಹ್ಯದ ವಾಸನೆ ತೊಡೆಯುವೆನು ಆಶಾಪಾಶ ನೀಗಿ ದೋಷರಹಿತನಾಗಿ ದಾಸಜನಕೆ ಬಾಗಿ ಸಂತೋಷ ಪಡೆಯುವೆನು 1 ಪೃಥ್ವಿ ತಿರುಗುವೆನು ಹುಡುಕಿ ಸತ್ಯರ ಕಾಂಬುವೆನು ನಿತ್ಯನಿರ್ಮಲ ಹರಿಭಕ್ತಿ ಕವಚ ತೊಟ್ಟು ಮತ್ತೆ ಸಾವ್ಹುಟ್ಟುವ ಕುತ್ತ ಗೆಲಿಯುವೆನು 2 ಕ್ಲೇಶವ ತರಿಯುವೆನು ಮಾಯ ಮೋಸವ ಗೆಲಿಯುವೆನು ದಾಸಜನರ ಪ್ರಾಣೇಶ ಶ್ರೀರಾಮನ ದಾಸನಾಗಿ ಮುಕ್ತಿ ಆಸನೇರುವೆನು 3
--------------
ರಾಮದಾಸರು
ಯಾತ್ರೆಬೇಕು ಕ್ಷೇತ್ರಯಾತ್ರೆ ಬೇಕು ಪ ಸೂತ್ರದಾರ ಪಂಕೇಜನೇತ್ರನ ನೆನೆವುದಕೆ ಅ.ಪ ನೇಮ ಸಾಧನೆಗಾಗಿ ಪ್ರೇಮ ಮೊಳೆವುದಕಾಗಿ ಕಾಮ ಕ್ರೋಧವ ಸುಡುವ ಸ್ಥೈರ್ಯಕಾಗಿ1 ಈ ಮನದ ಚಂಚಲವ ಕಡಿದೊಂದೆ ಮನದಿಂದ ಶ್ರೀಮಾಂಗಿರಿಯ ರಂಗ ನಾಮಾಮೃತವೆಂಬ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾದವಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ ಪ ಪಾವಕ ಮೂರ್ತಿಕಳ್ಳ ದೈತ್ಯರ ಸಂಹಾರವ ಮಾಡಿದೆನಳಿನೋದ್ಭವನಯ್ಯ ಅಮರ ಚೆನ್ನಿಗರಾಯ 1 ಕಾಯ ಬೇಕೆಂದುನಟಿಸಿ ಕಂಬದಿ ಮೂಡಿ ನಗುವ ಭಕ್ತನ ನೋಡಿಸಟೆಯಲ್ಲ ಅಜಾಂಡಗಳೊಡೆವಂತೆ ಘರ್ಜಿಸೆಕುಟಿಲ ದಾನವನೋಡುವುದ ಕಂಡು ಎಳೆತಂದುಚಿಟಿಚಿಟಿ ಚಿಟಿರೆನ್ನಲು ಉಗುರಲಿ ಸೀಳಿಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟನಾಟಕ ಸೂತ್ರಧಾರಿ ನೀನಹುದು ಕ್ಷತ್ರಿಯರಚಟುಲ ಛಲದಿ ಒಗೆದು ಕರುಳ ಬಗೆದು ತುಳಿದ-ದಟರನು ಸಂಹರಿಸಿದ ಚೆಲುವರಾಯ 2 ಅಂದು ಕೌಸಲ್ಯಾ ಗರ್ಭ ಚಂದ್ರಮನಾಗಿ ಬೆಳಗಿಕೊಂದೆ ರಾವಣ ಕುಂಭಕರ್ಣಾದಿಗಳನೆಲ್ಲಇಂದಿರೇಶನೆ ನಿನ್ನ ನಂಬಿದ ವಿಭೀಷಣನಿಗೆಎಂದಿಗೂ ಪಾರವಿಲ್ಲದ ಪದವಿಯನಿತ್ತೆಕಂದನಾಗಿ ಜನಿಸಿ ವಸುದೇವ ದೇವಕಿಯರಿಗೆನಂದಗೋಕುಲದೊಳು ನಿಂದ ಕಂಸನ ಕೊಂದೆಚಂದಿರನ ನೆರೆಪೋಲ್ವ ಉನ್ನತೋನ್ನತನಾಗಿಕೊಂದು ತ್ರಿಪುರಾಸುರರ ಅವರ ಸತಿಯರ ಕೆಡೆಸಿಒಂದೆ ನೆಗೆತಕೆ ನೆಗೆವ ಅಶ್ವವನೇರಿದೆ ವ-ಸುಂಧರೆಯ ಮೇಲೆ ಲೀಲೆಯಾಡುತ ಕೃತಯುಗದಿನಿಂದು ಯಾದವಗಿರಿಯ ಮೇಲೆ ತ್ರೇತಾಯುಗದಿಬಂದು ರಾಮನೆನಿಸಿಕೊಂಡೆ ದ್ವಾಪರ ಯುಗದಿಬಂದು ಕೃಷ್ಣನೆನಸಿಕೊಂಡೆ ಕಲಿಯುಗದೊಳುನಿಂದು ಚೆಲುವ ಚೆನ್ನಿಗರಾಯನಾದೆ ವರನಂದಿಯ ಚಂದದಿಂ ರಕ್ಷಿಸಿದೆ ಎನ್ನ ಕಾಯೊಇಂದಿರಾಪ್ರಿಯ ಬಾಡದಾದಿಕೇಶವ ರಾಯ3
--------------
ಕನಕದಾಸ
ಯಾದವರರಸಿಲ್ಲೆ ಸಿಕ್ಕಿದನಲ್ಲೆ ಪ. ಸಿಕ್ಕಿದನಲ್ಲೇ ದಕ್ಕಿದನಲ್ಲೆಅ.ಪ.ಗೋಪಿಯ ಕಂದನೆ ಬೆಣ್ಣೆಯ ತಿಂದನೆಪೂತಣಿಯ ಕೊಂದನೆ ಮಧುರೆಗೆ ಬಂದನೆ 1 ಮಾಧವನಿವನೇ ವೇದಕೆ ಸಿಲುಕನೆಸಾಧುಗಳರಸನೆ ಸಜ್ಜನಪೋಷನೆ 2 ಜಾಣರಜಾಣನೆ ಗಾನಕೆ ಪ್ರೀಯನೆಮುನಿಗಳ ವಂದ್ಯನೆ ಮನ್ಮಥಪಿತನೆ 3 ಕಾಮಿತವೀವೋನೆ ಭಾಮಾಪ್ರೀಯನೆನೇಮದಿಭಜಿಪರ ಸದನಕ್ಕೆ ಬರುವನೆ 4 ವೇದವ ತಂದನೆ ಗಿರಿಯ ಪೊತ್ತನೆಬೇರನು ತಿಂದನೆ ಕಂಬದಿ ಬಂದನೆ 5 ದಾನವ ಬೇಡನೆ ಕ್ಷತ್ರೇರ ಕೊಂದನೆವನಕೆ ಪೋದನೆ ದುರುಳರ ಕೊಂದನೆ6 ಕಾಳೀಯ ಭಂಜನೆ ಬತ್ತಲೆ ನಿಂದನೆಹಯವನೇರ್ದನೆ ಹಯವದನನೆ7
--------------
ವಾದಿರಾಜ
ಯಾದವರಾಯ ಬೃಂದಾವನದೊಳು ವೇಣುನಾದವ ಮಾಡುತಿರೆ ಪ ರಾಧೆ ಮುಂತಾದ ಗೋಪಿಯರೆಲ್ಲಮಧುಸೂದನ ನಿಮ್ಮನು ಸೇವಿಸುತ್ತಿರೆ ಅ ಸುರರು ಅಂಬರದಿ ಸಂದಣಿಸಿರೆ ಅ-ಪ್ಸರ ಸ್ತ್ರೀಯರು ಮೈಮರೆದಿರೆಕರದಲಿ ಕೊಳಲನೂದುತ ಪಾಡುತಸರಿಗಮ ಪದನಿ ಸ್ವರಗಳ ನುಡಿಸುತ 1 ಹರಬ್ರಹ್ಮರು ನಲಿದಾಡುತಿರೆ ತುಂ-ಬುರು ನಾರದರು ಪಾಡುತಿರೆಪರಿಪರಿ ವಿಧದಲಿ ರಾಗವ ನುಡಿಸುತತುರು ಹಿಂಡುಗಳ ಕೂಡುತ ಪಾಡುತ2 ತುರು ಹಿಂಡುಗಳ ತರತರದಲಿ ತನ್ನಕರದಿಂ ಬೋಳೈಸಿ ಸಂತೈಸುತಅರವಿಂದ ನಯನ ಆದಿಕೇಶವರಾಯಕರುಗಳ ಸಹಿತ ಗೋವ್ಗಳ ತಿರುಹುತ3
--------------
ಕನಕದಾಸ
ಯಾದವೇಂದ್ರ ಪರಿಮೋದವ ಸೂಸುತ ಹಾದಿಯ ಹಿಡಿದಾನು ತಾಗುಣ ಸಾಂದ್ರ ಯಾದವೇಂದ್ರ ಪ. ಛತ್ರ ಚಾಮರದವರು ಜತ್ತಾಗಿ ನಡೆದರುಚಿತ್ತಜನೈಯನ ಹತ್ತಿರ ಕೆಲರು1 ಆನೆ ಅಂಬಾರಿಯವರು ಶ್ರೀನಿವಾಸನ ಮುಂದೆ ನಾನಾ ಭೂಷಿತರಾಗಿ ಮಾನದಿ ತೆರಳಿ 2 ರಾಜಪುತ್ರರು ದಿವ್ಯ ವಾಜಿಗಳೇರುತ ಬಾಜಾರದೊಳು ವಿರಾಜಿಸಿ ನಡಿಯೆ3 ಮಂದಗಮನೆಯರ ರಥ ಮುಂದಾಗಿ ನಡೆದವುಇಂದಿರೆ ಅರಸನ ಸಂದಣಿ ನೋಡ 4 ಎಲ್ಲೆಲ್ಲಿ ನೋಡಿದರೆ ಪಲ್ಲಕ್ಕಿ ಸಾಲಾಗಿ ಫುಲ್ಲನಾಭನ ಮುಂದೆ ನಿಲ್ಲಿಸಿ ನಡಿಯೆ5 ನೋಡ ಬಂದವರೆಲ್ಲ ಗಾಡಿ ವಯಲುಗಳೇರಿರೂಢಿಗೊಡೆಯನ ಮುಂದೆ ಓಡಿಸಿ ನಡಿಯೆ 6 ತಂದೆ ರಾಮೇಶನು ಬಂದ ಬೀದಿಯ ಸೊಬಗುಇಂದಿರೆವಶವಲ್ಲ ಚಂದಾಗಿ ರಚಿಸೆ 7
--------------
ಗಲಗಲಿಅವ್ವನವರು
ಯಾಯಾ ವರವ ನೀಡಿ ಶ್ರೀ |ಮಾಯಾ ರಮಣನ ಭಕುತರಿಗೆ ಪ ಅರುಣೋದಯ ಕಾಲದಲೆದ್ದು ಶ್ರೀ |ಹರಿಸ್ಮರಣೆ ಮಾಡುತಲಿದ್ದು ||ಕರಚರಣಾದ್ಯವಯವ ಶುದ್ಧಿ |ವಿರಚಿಸಿ ನಿರ್ಮಲ ಮನವಿ 1 ಆದ್ಯಂತ ಗುರುವಾದ |ಮಧ್ವರಾಯರ ಮತವಪೊದ್ದಿದ ಭಗವದ್ದಾಸರು ಬಂದರೆಇದ್ದಿಲ್ಲವು ಎಂದೆನ ಬ್ಯಾಡಿ2 ಘನ ಮಹಿಮ ನಾರಾಯಣನು ಇವ |ರನು ಕರತಂದಿಹನೆಂದರಿದೂ ||ಮನದಲಿ ಯೋಚಿಸಿ |ಸನುಮಾನವನು ಪಡುತಲಿ 3 ವಾಹನ ಪ್ರಿಯರು ಶು- |ದ್ಧಾಚರಣೆಯವರೆಂದು 4 ನರರಂತೆ ಇವರಲ್ಲಗುರು ಪ್ರಾಣೇಶ ವಿಠಲನಂಘ್ರಿ ||ಸರಸೀಜ ಧೇನಿಸುತ ಯಮ್ಮರ ಸುತ ಬಂದಿಹರೆಂದೂ 5
--------------
ಗುರುಪ್ರಾಣೇಶವಿಠಲರು
ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಸ್ತ್ರೀಯರು ಮುದದಿಂದ ಪ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ 1 ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ 2 ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ 3 ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ 4 ವಕ್ಕಡತಿ ತಂಡುಲವ ಚಕ್ಕನೆ ನೀಡಲು ಮಕ್ಕಳು ಮರಿಗಳು ಸಹಿತ ನಿತ್ಯಾ ಸುಖವಕ್ಕು ಸಟಿಯಲ್ಲಾ 5 ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ ಎಲ್ಲ ಕಾಲದಲಿ ನಿಮ್ಮಂಗಣದೊಳು ಇಲ್ಲವೆ ನಿಂತಿಪ್ಪದು 6 ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ ಮಸ್ತಕ ಭುಂಜಿಸುವಾ 7 ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ ಮುಂದೆ ಉತ್ತಮ ದೇಹದಲಿ ಬಂದು ಸುಜ್ಞಾನದಿಂದಲೆ ಲೋಲಾಡುವರು 8 ಹಲವು ಪೇಳುವದೇನು ಸುಲಭಾವೆನ್ನು ಧರ್ಮ ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ ಬಲ್ಲ ಮಹಾಫಲವ9
--------------
ವಿಜಯದಾಸ
ಯಾರ ಪಾಡಿದರೇನು ಯಾರ ಬೇಡಿದರೇನು ಯಾರು ಕೈಹಿಡಿದೆತ್ತಿ ಪಾಲಿಸುವನು ಪ ನೀರಜಾಸನ ನೊಂದು ನೂರುವರ್ಷ ಬಾಳೆಂದ ಕರ್ಮ ಕಳೆಯಲೆಂದು ಅ.ಪ ವೀರಪಾರ್ಥನು ಧುರದಿ ಹೊರಾಡಬೇಕೆಂದ ಮಾರುತಿಯಶ್ರೀರಾಮ ಕರುಣೆ ಬರಲೆಂದ ನಾರದನು ನಾರಾಯಣನ ಮಂತ್ರ ಭಜಿಸೆಂದ ಕಾರಣದಿ ಮಣಿವೆ ಮಾಂಗಿರಿಯರಂಗ ಗೋವಿಂದ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ
ಯಾರಂದರೇನು ಫಲವದೆ ನಮ್ಮ ದೃಷ್ಟ ಈ ರೀತಿ ಕಾಡಲು ಬರಿದೆ ಪ ಯಕ್ಷ ಕಿನ್ನರಾದಿವಂದಿತ ಪರಮಾತ್ಮ ಜಲ- ಜಾಕ್ಷ ಕೃಷ್ಣ ಮಾಧವಾಚ್ಯುತ ಪಕ್ಷಿವಾಹನ ಪಾಲಿಸು ಕರಿವರದ ಬೇಗನೆ ನೀನು ಪೇಕ್ಷಿಸದೆ ರಕ್ಷಿಸೆನ್ನ 1 ಇನ ಶಶಿ ಕುಜರಾಹು ಗುರುಬಲ ಇದರ ಮೇಲೆ ಶನಿ ಸೌಮ್ಯ ಕೇತು ಶುಕ್ರ ಗ್ರಹಗಳ ಘನದಿ ಸುಫಲ ಲೇಶಕಾಣದೆ ಬಳಲುವ ವೇಳೆ ಅನಿಮಿಷರೊಡೆಯನ ಮೊರೆ ಹೋಗದೆ 2 ಪರಮ ಪುರುಷ ಪತಿತ ಪಾವನ ಬಿರುದುಳ್ಳ ಹೆನ್ನೆಪುರನಿಲಯ ನರಹರಿ ಚರಣ ಸ್ಮರಣೆ ಹರುಷದಿಂದ ನಿರುತ ಮನದೊಳಾವಾಗ ಪರರ ನಿಂದೆಗೊಳಗಾಗಿ ವೃಥಾ 3
--------------
ಹೆನ್ನೆರಂಗದಾಸರು
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ ನೀರಮುಳುಗಿ ಬಂದು ಘೋರಪರ್ವತ ತಂದು ಧಾರುಣಿಯನು ಕದ್ದ ದನುಜನ ಕೊಂದು ನರಹರಿ ರೂಪದಿ ತರಳಗೊಲಿದುಪುಟ್ಟ ಚರಣದಿಂ ಧರಣಿಯನಳೆದ ಮಹಾತ್ಮನೋ 1 ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು ಮಡುಹಿ ಬಂದವನಿವನೇನೋ ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ 2 ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ ಚಿತ್ತಬಂದಂತೆ ತಾ ತಿರುಗುವನೋ ಉತ್ತಮನಾದ ಶ್ರೀ ಪ್ರಾಣನಾಥವಿಠಲನು ಎತ್ತನೋಡಿದರು ಸುತ್ತುತ್ತಲಿರುವನು 3
--------------
ಬಾಗೇಪಲ್ಲಿ ಶೇಷದಾಸರು
ಯಾರಿಗುಸುರಲಿ ಸಾರತತ್ವ ವಿ ಚಾರ ಭವದೂರಾ ಪ ಚಾರು ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ. ಶ್ರೀ ಗುರುನಾಥನ ಕಟಾಕ್ಷದಿ ತ್ಯಾಗಿಸಿ ಸಂಸಾರದ ಗೊಡವೆಯ ಯೋಗಿಯಂದದೊಳಿದ್ದು ಆಗಮ ನಿಗಮಾರ್ಥಕೆ ಸಿಲುಕದ ಯೋಗ ಘನವನೊಳಗೊಂಡಿಹ ಅಂಗದ ಯೋಗಾನಂದದುಯ್ಯಾಲೆಯ ತೂಗಿ ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ 1 ಉದರದ ನಾಭಿಯ ನೀಳದ ತುದಿ ಹೃದಯ ವಾರಿಜದೊಳಗಿಪ್ಪ ಶಿವ ಸದನ ಲಿಂಗವ ಕಂಡು ಅದು ಇದು ಬೇರ್ಪಡಿಸದೆ ಹೃದಯದಿ ಚದುರ ಸಾಧು ಸತ್ಪುರುಷರ ಮತದಲಿ ಮುದದಿ ಮುಕ್ತಿ ಮಾನಿನಿಗೆ ಮಂಗಲ ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ 2 ನೆತ್ತಿಯೊಳ್ ಹೊಳೆ ಹೊಳೆವ ಚಿದಾ ದಿತ್ಯನ ಪ್ರಕಾಶವ ಕಂಡು ಚಿತ್ತದಿ ನಲಿದಾಡಿ ಉತ್ತಮಾನಂದಾತ್ಮರಸ ಸವಿ ಯುತ್ತ ಚಪ್ಪರಿದು ಶರಣರ ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ 3 ಕುಂದುವ ಕಾಯದ ಸುಖಿಕೆಳೆಸದೆ ಹೊಂದಿದ ಸರ್ವಾಂಗದ ಶೋಧಿಸಿ ಒಂದೇ ದೇವನೊಳಾಡಿ ವಂದಿಸಿ ಗುರುಹಿರಿಯರ ಚರಣಕೆ ಹೊಂದಿ ಹೊಂದಿ ಓಲಾಡುವ ಅರಿಗಳ ಬಂದಿಯೊಳಗೆ ಸಿಲುಕದೆ ಬ್ರಹ್ಮಾ ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ 4 ಹಲವು ಯೋನಿಯೊಳಗೆ ಹೊರಳ ಕುಲ ಛಲ ಶೀಲವ ಮೂರಡಗಿಸಿ ಸುಲಭ ವಂಶದೊಳುಂಡು ಮಲಿನ ಮಾಯಾಮೋಹಕೆ ಸಿಲುಕದೆ ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ 5
--------------
ಭಟಕಳ ಅಪ್ಪಯ್ಯ
ಯಾರಿಗೆ ದಾರೋ ಗೋಡೆಗೆ ಮಣ್ಣು ಮಾರಿಯರೆಲ್ಲರು ಶ್ರೀ ಹರಿಯೇ ಪ ಸ್ಥಿತಿಯಲ್ಲ ದೇವಾ ನಿನ್ನುಳಿದು 1 ಅಂಬುಜಲೋಚನ ಪರಮ ಪುರುಷನ ಭವ ಅಂಬುಜೆರಮಣಾ ನಿನ್ನುಳಿದು 2 ನಂಬಿದ ಭಕ್ತರ ಸಲಹುವ ಹರಿಯೇ ಸಂಭ್ರಮದಾತ್ಮಗೆ ನಿನ್ನುಳಿದು3 ನರಹರಿ ಭಕ್ತಿ ಮಾಡಿದ ಧರ್ಮ ಸರಸದಿ ಪರಹಿತವನ್ನುಳಿದು 4 ಹಿಡಿಯುವೆ ಮುಕ್ತಿಯ ಮಾರ್ಗವನೀಗ ಪಡೆವೆನು ಸುಖವ ಕೇಶವನೇ5
--------------
ಕರ್ಕಿ ಕೇಶವದಾಸ