ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ
ಹಣ್ಣು ಕೊಳ್ಳಿರಯ್ಯಾನ್ನಂತ ಗುಣಮಹಿಮೆಯುಳ್ಳ ಧ್ರುವ
ಹಣ್ಣು ಬಂದದೆ ನೋಡ್ಯಾನಂದೋ ಬ್ರಹ್ಮಾಪಾಟಿಯಿಂದ
ಕಣ್ದೆರದು ಕೊಂಡವರು ಧನ್ಯ ಧನ್ಯರೊ 1
ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ
ಚೆನ್ನಾಗಿ ಉನ್ಮನವಾಗಿ ಹಣ್ಣ 2
ಅಣ್ಣಗಳ ಬಂದು ಕಣ್ಣುಗೆಟ್ಟು ಹೋಗಬ್ಯಾಡಿ
ಸಣ್ಣ ದೊಡ್ಡರೊಳಗಿಹ್ಯ ಹಣ್ಣ 3
ಉತ್ತುಮರುದ್ದೇಶವಾಗಿ ಮತ್ತೆ ಹತ್ತುಭಾರೆ
ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು 4
ಬಿತ್ತಿಬೆಳೆದ ಫಲವಲ್ಲ ಹೊತ್ತುಮಾರುವದಲ್ಲ
ಚಿತ್ತದೊಳಗ್ಹತ್ತಿಲಿಹ ಹಣ್ಣು 5
ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ
ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ 6
ಹಣ್ಣು ಕೊಂಡು ಮಹಿಪತಿಯ ಪುಣ್ಯ ಪೂರ್ವಾಜಿತ
ತಾನೆಧನ್ಯ ಧನ್ಯವಾದ ಗುರುಕೃಪೆಯಿಂದ ಕಾಣಿರೋ 7