ಒಟ್ಟು 3196 ಕಡೆಗಳಲ್ಲಿ , 112 ದಾಸರು , 2367 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡುಕೊಡು ವರವನು ತಡವು ಮಾಡದೆ ಎ ನ್ನೊಡೆಯ ಶ್ರೀಹರಿ ಕೃಪೆ ಮಾಡಯ್ಯ ಪ ಬಿಡದಿರೆನ್ನನು ಜಗದೊಡತಿಯಾಣೆ ನಿ ನ್ನಡಿಗಳನೆಂದಿಗೂ ಬಿಡೆನಯ್ಯಾ ಅ.ಪ ಕ್ಷಿತಿಯೊಳಗತಿಶಯ ಪತಿತ ಪಾವನ ಶ್ರೀ ಪತಿ ನೀಗತಿ ಎನುತಿಹೆನಯ್ಯ ರತಿಪತಿಪಿತನೆ ಸುಮತಿಯನು ಪಾಲಿಸಿ ಗತಿಯನು ತೋರಿಪುದೆನಗಯ್ಯ1 ನಿನ್ನ ಪದವ ನಂಬಿ ನಿನ್ನವನೆನಿಸಿದ ಎನ್ನನುಪೇಕ್ಷಿಪರೇನಯ್ಯ ಸನ್ನುತ ನಿನ್ನನು ಮನ್ನಿಸಿ ಕೇಳುವ ಬಿನ್ನಪವಿನಿತೆ ಕೇಳಯ್ಯ 2 ಎಲ್ಲರ ಹೃದಯದೊಳಲ್ಲಿ ನೆಲೆಸಿರುವ ಫುಲ್ಲನಯನ ನೀ ಪೇಳಯ್ಯ ಕಲ್ಲುಮನದಿ ನೀನೊಲ್ಲದೊಡೀ ಜಗ ದಲ್ಲಿ ಪೋಪುದಿನ್ನೆಲ್ಲಯ್ಯ 3 ಪತಿಯಗಲಿದ ಪತಿವ್ರತೆಗೆ ಇತರರಲಿ ರತಿ ಸಂಜನಿಸುವದೇನಯ್ಯ ಗತಿಪತಿಯೆಲ್ಲರಪತಿ ನೀನೆನ್ನುತ ಶ್ರುತಿನುತಿಪುದು ಪುಸಿಯೇನಯ್ಯ 4 ಜಗದೊಳು ನಿನ್ನನೆ ಸುಗುಣಿಯು ಎನ್ನುತ ನಿಗಮವು ಪೊಗಳುತಲಿಹುದಯ್ಯ ಖಗಪತಿಗಮನನೆ ಬಗೆ ಬಗೆಯಲಿ ರತಿ ಸೊಗಯಿಸು ನಿನ್ನೊಳು ಎನಗಯ್ಯ 5 ಸೃಷ್ಟಿನಾಥಪದ ವಿಷ್ಟರ ಭಕ್ತಿಯ ಕೊಟ್ಟರಭೀಷ್ಟವು ಎನಗಯ್ಯ ಇಷ್ಟರ ಮೇಲಿನ್ನು ಲಕ್ಷ ಕೊಟ್ಟರೂ ಎನ ಗಿಷ್ಟವಲ್ಲ ಶ್ರೀ ಕೃಷ್ಣಯ್ಯ 6 ಚರಣಕಮಲದೊಳಗೆರಗುವೆ ಪುಲಿಗಿರಿ ವರದವಿಠಲ ದಯೆಯಿರಿಸಯ್ಯ ಚರಣಶರಣನಿಗೆ ಕರುಣಿಸದಿದ್ದರೆ ಕರುಣಿಗಳರಸರಿನ್ನಾರಯ್ಯ 7
--------------
ವೆಂಕಟವರದಾರ್ಯರು
ಕೊಡುವನು ಸಂಪದವ ಸುಙÁ್ಞನವ ಕೊಡುವ ಪ ಬಹುಜರನು ವಲಿಸಿ ಪಿತೃಭ್ರಾತಾಚಾರ್ಯನು ತಾನೆಂದೆನಿಸಿ ಕವಿವರ ನೆಂದೆನಿಸಿ ಬಹುವಿಧದಲಿ ತಾನು ಅತಿಹಿತದಲಿ ಗೈಯಲು ಸುಸ್ತವವನು ವರ್ಣಿಸೆ ಮಹಿಮೆಯನು1 ಸ್ಮರಿಸುವ ಭಕ್ತರ ಪೊರೆವಕರಣಿತಾನು ಸ್ವೀಕರಿಸಿದನದನು ಹರಿಸಾಕ್ಷಾನನವೆನಿಪಸುವಾಕ್ಯವನು ಸಂಪಾದಿತ ತಾನು ಹರಿವಿಶ್ವಸುನಾಮದಿ ಭೂತಳದಲ್ಲಿ ಉದಿಸಿದ ಮುದದಲ್ಲಿ ಪರಿಚಾರ ಕಾಮದಿ ಕರಸ್ನೇಹದಲಿ ಜನಿಸಿದ ಪೂರ್ವದಲಿ 2 ಸಿರಿಗೋಪಾಲಾಖ್ಯರು ಸುಙÁ್ಞನವನು ಕರುಣಿಸೆ ಮರ್ಮವನು ಸರಸದಿ ಗ್ರಂಥದವರ ಸುಹಸ್ಯವನು ಸಂಗ್ರಹಿಸಿದ ತಾನು ಸಿರಿರಘುವರ ಕರುಣದಿ ಧರೆಯೊಳು ಮೆರೆವುಲ್ಲರುವಿಗಿಲ್ಲರುವ ಗುರುವಿನ ಮಹಿಮೆಯನು3
--------------
ವರದೇಶವಿಠಲ
ಕೊಳಲೂದೋ ಕೃಷ್ಣ ಕೊಳಲೂದೊ ಪ ಕೊಳಲೂದಲು ಮನ ತಳೆವುದು ಮನವಿದೊಬಳಲಿಪ ಚಿಂತೆಯ ಕಳೆವುದು ನಾದೊ ಅ.ಪ. ಸವಿಸವಿ ಸ್ವರಗಳು ಕಿವಿಗಳ ಹೊಗಲದು _ಭವಿಸುದೆನ್ನೊಳು ಭಕುತಿಯನಾದೊ 1 ತನು ಕೊಳವೆಯಲಿ ನಿನದುಸಿರನು ಕೊಡೆಇನಿದು ನುಡಿದು ಪಾವನ ತನುವಹುದೊ 2 ಸ್ವರಮಧುರತೆಯು ಶಿರದೊಳು ಚರಿಸುತೆನಿರುತ ನಿನ್ನಯ ಸ್ಮರಣೆಯ ನೀವುದೊ 3 ಮಧುರ ನಿನ್ನಯ ಗಾನವ ಕೇಳ್ವುದುಗದುಗು ವೀರನಾರಾಯಣನ ಮಹಾ ಪ್ರಸಾದೊ 4
--------------
ವೀರನಾರಾಯಣ
ಕೊಳಲೇನು ಪುಣ್ಯವ ಮಾಡಿ ರಂಗನ ಬಳಿಗೆ ಬಂದಿತೇ ಪ ನಳಿನ ನೇತ್ರೆಯರ ಮನಸು ಎಲ್ಲಾ ಸೆಳೆದು ಪೋದೀತೇ ಅ.ಪ. ವನಜನಾಭನು ಯಮುನೆಯಲ್ಲಿ ಕೊಳಲನೂದುವಮನಸು ನಿಲ್ಲದ ನಡೀರೆ ಪೋಗೋಣ ಕೇಳಿ ನಾದವ 1 ಇಂದು ಗೋವುಗಳ 2 ಎಂಥ ರಾಗ ಮಾಡುವೋನು ಕಂತುಪಿತನುಅಂತರಂಗಕೆ ಸುಖವನಿತ್ತು ಭ್ರಾಂತಿಗೊಳಿಸುವ 3 ಕುಂಡಲ ಹಾರಪದಕ ಧರಿಸಿ ಕುಳಿತಿಹಸರಸಿಜಾಕ್ಷಿಯರೆ ನೋಳ್ಪ ಜನಕೆ ಹರುಷ ಕೊಡುತಿಹ 4 ಸಿರಿಯು ಬಂದು ಮುರಳಿಯಾಗಿ ಮರುಳು ಮಾಡುವನೆಪರರಿಗಿಂಥ ಸುಖವುಂಟೆಂದು ಭ್ರಾಂತಿಗೊಳಿಸುವನೆ ] 5 ಇಂದು ನಮ್ಮೊಳು ಸರಸವಾಡುವನೆ 6
--------------
ಇಂದಿರೇಶರು
ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ಪ ಹೇಮಗರ್ಭ ಕಾಮಾರಿ ಶಕ್ರಸುರ ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ ಕಟ್ಟಾಣಿ ತ್ರಿವಳಿ ಕೊರಳೋಳೆ ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ ಕಟ್ಟ ಕಂಕಣ ಕೈಬಳೆ ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ ಇಟ್ಟು ಶೋಭಿಸುವ ಅಷ್ಟಸಂಪನ್ನೆ 1 ಸಕಲ ಶುಭಗುಣಭರಿತಳೆ ಏಕೋದೇವಿಯೆ ವಾಕುಲಾಲಿಸಿ ನೀ ಕೇಳೆ ನೋತನೀಯನ್ನ ಮಹಲೀಲೆ ಕೊಂಡಾಡುವಂಥ ಏಕಮನವ ಕೊಡು ಶೀಲೆ ಪತಿ ಪಾದಾಬ್ಜವ ಏಕಾಂತದಿ ಪೂಜಿಪರ ಸಂಗವ ಕೊಡು ಲೋಕದ ಜನರಿಗೆ ನಾ ಕರವೊಡ್ಡದಂತೆ ನೀ ಕರುಣಿಸಿ ಕಾಯೆ ರಾಕೇಂದುವದನೆ 2 ಇಂದಿರೆ ಯೆನ್ನ ಕುಂದು ದೋಷಗಳಳಿಯೆ ಅಂದ ಸೌಭಾಗ್ಯದ ಸಿರಿಯೆ ತಾಯೆ ನಾ ನಿನ್ನ ಕಂದನು ಮುಂದಕ್ಕೆ ಕರೆಯೆ ಸಿರಿ ವಿಜಯವಿಠ್ಠಲರೇಯ ಎಂದೆಂದಿಗೊ ಮನದಿಂದಗಲದೆ ಆ ನಂದದಿಂದಲಿ ಬಂದು ಮುಂದೆ ಕುಣಿಯುವಂತೆ ವಂದಿಸಿ ಪೇಳಮ್ಮ ಸಿಂಧುಸುತೆಯಳೆ3
--------------
ವಿಜಯದಾಸ
ಕೋಲ ಕೋಲನ್ನ ಕೋಲ ಕೋಲ ಕೋಲನ್ನ ಕೋಲಕೋಲ ಹೊಯ್ದುಪಾಡಿ ನಮ್ಮ ಜಾಣರಂಗಗೆ ಪ. ಲೋಕನಾಯಕ ವ್ಯಾಸ ಮುನಿಗಳಿಗೆ ಏಕೋ ಭಾವದಿಂದ ನಮಿಸಿಹಾಕಿರೆಮ್ಮ ಕೋಲ ಹೊಯ್ದುವಾಕ್ಯಗೆಲಿಸೆಂದು1 ಮಿತ್ರೆ ರುಕ್ಮಿಣಿದೇವಿ ಕರೆದುಮಿತ್ರಾದಿಗಳಿಗೆ ಹೇಳಿದಳುಮುತ್ತಿನ ಕೋಲ ತೊಳಿಯಿರವ್ವಉತ್ತಮ ಜಲದೊಳು 2 ರಾಸ ಕ್ರೀಡೆಯಲ್ಲಿ ವನಿತೆಯರುವಾಸುದೇವ ಪಿಡಿದ ಕೋಲ ಸೋಸಿಲೆ ಪೂಜಿಸಿರಮ್ಮಲೇಸು ಕೊಡಲೆಂದು 3 ಮಂದಗಮನೆಯರೆಲ್ಲ ಕೋಲಿಗೆ ಗಂಧ ಅಕ್ಷತೆ ಏರಿಸಿರೆ ಮುಂದಾಗಿ ಬಲಗೊಳ್ಳಿರೆಲ್ಲವೃಂದಾರಕರನ್ನ4 ನಲ್ಲೆಯರು ಮುತ್ತಿನ ಕೋಲಿಗೆ ಮಲ್ಲಿಗೆ ಸಂಪಿಗೆ ಏರಿಸಿರೆಎಲ್ಲಾ ಫಲಗಳಿಟ್ಟು ಕೈಯ್ಯನಲ್ಲೆಯರು ಮುಗಿದಿರೆ 5 ಜಾಣೆಯರು ನೀವೆಲ್ಲ ಮೊದಲೆವಾಣಿಯ ಬಲಗೊಳ್ಳಿರೆ ಕಲ್ಯಾಣವಾಗಲೆಂದು ಕೈಯ್ಯಮಾಣಗೆ ಮುಗಿದಿರೆ 6 ಮೃಡನ ಮಗನ ಮೊದಲೆ ನೆನೆದುಪಿಡಿಯಿರಮ್ಮ ಕೋಲ ನಿಮ್ಮನುಡಿಯಗೆಲಿಸಲೆಂದು ದ್ರವ್ಯವಕೊಡಿರೆ ದಾನವ 7 ಇಂದು ಗೆಲಿಸೆಂದು 8
--------------
ಗಲಗಲಿಅವ್ವನವರು
ಕೋಲು ಕೋಲೆನ್ನ ಕೋಲು ಕೋಲು ಕೋಲೆನ್ನ ಕೋಲು ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲು ಕೋಲು ಕೋಲೆನ್ನ ಕೋಲು ಕೋಲು ಕೋಲೆನ್ನ ಕೋಲೆ ಪ. ತಮನ ಕೊಂದನ ಕೋಲೆ ಕಮಠನಾದನ ಕೋಲೆ ಕ್ಷಮೆಯನೆತ್ತಿದನ ಕೋಲೆ ಕೋಲು ಕಮನೀಯ ನರಸಿಂಹರೂಪನಾದನ ಕೋಲೆ ಸುಮುಖ ವಾಮನನ ಕೋಲೆ 1 ಪರಶುರಾಮನ ಕೋಲೆ ರಘುಕುಲದಲುದಿಸಿ ದಶ- ಶಿರನ ಕೊಂದವನ ಕೋಲೆ ಕೋಲು ಸಿರಿಕೃಷúರಾಯನ ಸುಕೋಲೆ ಬುದ್ಧನ ಕೋಲೆ ತುರಗವೇರಿದನ ಕೋಲೆ 2 ವಾದಿರಾಜನಿಗೊಲಿದು ಸೋದೆಪುರದಿ ನಿಂದು ಮೋದಿ ತ್ರಿವಿಕ್ರಮನ ಕೋಲೆ ಕೋಲು ಕಾದಿ ಖಳರನು ಕೊಂದ ವೇದಗಳ ತಂದ ವಿ ನೋದಿ ಹಯವದನ ಕೋಲೆ 3
--------------
ವಾದಿರಾಜ
ಖಗವರನೇ ಪಾಲಿಸೋ ಪ ಪೆಗಲೊಳು ಹರಿಯನು | ಮಿಗೆ ಭಕುತಿಲಿ ಪೊತ್ತುನಗಧರ ಬಿಂಬವ | ನಗುತ ನಖದಿ ನೋಳ್ಪ ಅ.ಪ. ವೇದೋದಿತ ಕ್ರಿಯ | ಕಾದ್ಯಭಿಮಾನಿಯೆವೇದಮಯನೆ ಹರಿ | ಗಾದೆಯೊ ವಾಹನಸಾಧಿಸಿ ಶ್ರೀಹರಿ | ಪಾದಾಂಬುಜಗಳಹಾದಿಯ ತೋರೊ ಅ | ಗಾಧ ಮಹಾತ್ಮಾ 1 ಸಾಸಿರ ಬೃಹತಿಯ | ಸೂಸಿ ನೀ ಪೊಗಳುತಸಾಸಿರ ನಾಮನು | ಕೇಶವ ನೊಲಿಮೆಯಪೋಷಿತ ನಾಗಿಹೆ | ಆಶುಗ ಹೃದಯಾಕಾಶದೊಳಿರುತಿಹ | ಶ್ರೀಶನ ತೋರಿಸಿ 2 ಪಾವಮಾನಿಸುತ | ಪಾವಿಸಿ ಮನ್ಮನಭಾ5¥5 | ಗೋವಿಂದ ವಿಠಲನ |ಪಾವನ ನಾಮ ಸು | ಭಾವನ ಉಣಿಸುತಕೋವಿದ ಸಂಗತಿ | ಈವುದು ನೀ ಸದ 3
--------------
ಗುರುಗೋವಿಂದವಿಠಲರು
ಖೇಟ ಕುಕ್ಕುಟ - ಜಲಟಾ | ತ್ರೈರೂಪಿನಿಶಾಟ ಸಂಕುಲ ರೋಟಾ ಪ ಕೈಟಭಾರಿ ಪದ ಓಲೈಸುವಗೆ ಅ.ಪ. ಕರ್ಮ ಭಂಜನ ಭವ ಅಘ ಶೋಧಕ | ಶುಚಿ ಶರಣೂ 1 ಸಿರಿ ಹರಿತ್ರೈವಿಕ್ರಮ ಪದ ಪೂಜಕ | ನಿಷ್ಕಾಮಕ | ಸೇವಕ ಶರಣೂ | 2 ಹರಿ ಪಾದಾಂಗುಷ್ಠದುಗುರೂ | ಖರ್ಪರದೊಳೂ | ಮಾಡೆ ಡೊಗರೊ ಹರಿಯಿತು ಹೊರ ಜಲಜಾಂಡದೊಳೊ ||ಕರುಣಾರ್ಣವ ಗುರು | ಗೋವಿಂದನ | ಪದ ತೊಳೆದನವರ ಪದವನ | ಸಾರುವನ | ಚರಣವನ | ಶರಣೂ 3
--------------
ಗುರುಗೋವಿಂದವಿಠಲರು
ಗಂಗಾ ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ ನೀ ಸರಸವಾಗಿ ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯನು ಕೂಡಿ ಉ- ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1 ಹಾಲಿನಂತೆ ಹರಿವೊ ಗಂಗೆ ನೀನು ನೀಲದಂತಿದ್ದ ಯಮುನೆಯನು ಕೂಡಿ ಲೀಲೆಯಿಂದಲಿ ಸರಸ್ವತಿಯನು ಕೂಡಿ ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ ಸಗರನ ಸುತರ ಉದ್ಧಾರ ಮಾಡಿ ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ ಮಗುವೆಂದು ಮುಂದಕೆ ಕರೆಯೆ ತಾಯಿ 3 ಬಿಂದುಮಾಧವ ವೇಣುಮಾಧವನ್ನ ಆ- ನಂದ ಭೈರವ ಕಾಳ ಭೈರವನ್ನ ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4 ಪೊಡವಿ ಮ್ಯಾಲಿಂಥ ಸಡಗರದಿ ಹರಿದು ಕಡಲಶಯನನ್ನ ಕಾಲುಂಗುಷ್ಠದ ಮಗಳು ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ ಪರಿಪರಿಯಿಂದ ಪೂಜೆಯಗೊಂಬುವಿ ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6 ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ ಶುದ್ಧವಾಗಿ ಪಂಚಗಂಗೆಯಲಿ ಭವ ಸ- ಮುದ್ರವನು ದಾಟಿಸೆ ಭಾಗೀರಥಿ 7 ಸುಕೃತ ಒದಗಿತೆಂದು ಗಂಗ ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು ಪಾದವನು ತೋರೆನ್ನ ಪೊರೆಯಬೇಕೆ 9
--------------
ಹರಪನಹಳ್ಳಿಭೀಮವ್ವ
ಗಂಗಾಜನಕಗೆ ಮಂಗಳಾರುತಿಯನೆತ್ತಿ ಮಂಗಳಾಂಗಿಯರು ಸಂಗೀತ ಪಾಡುತ ಪ ಅನಿಮಿಷೇಶನು ಆನಂದಾತ್ಮಾ ಪ್ರಾಕೃತನು ಅನಿಲವಾಸಾನಂತಾನಂತಾನಂತನಂತರೂಪನು 1 ಲಕ್ಷ್ಮೀವಾಸನು ಕುಕ್ಷಿಯೊಳ್ ಬ್ರಹ್ಮಾಂಡಧರನು ಲಕ್ಷಣಗ್ರಜನು ಸುಕ್ಷೇಮದಿಂದಿಡುವ ನಾಮ 2 ಕರುಣಪೂರ್ಣನು ಸ್ಮರಿಪರ ಭವವಿದೂರ ಸರಿಮಿಗಿಲಿಲ್ಲದ ಸಿರಿವಿಠಲ ನಾಮಧೇಯ 3
--------------
ಸಿರಿವತ್ಸಾಂಕಿತರು
ಗಂಗಾನದಿ ಬಾರೆ ಬಾರಮ್ಮ ಜಾನ್ಹವೀದೇವಿಹರಿಭಕುತರ ಕಾಯಿ ಪ ಬಾರೆ ಬಾರೆ ಪುರವೈರಿ ಸಿರಸ್ಥಿತೆಮೂರು ಲೋಕಗಳ ವಾರಣ ಮಾಡುವಿ ಅ.ಪ. ನೀರಜ ಶುಭವಸ್ತ್ರೆಸಾರಸಾಯತ ಸುಂದರ ನೇತ್ರೇಚಾರು ಸುರಗಿ ಮುತ್ತಿನ್ಹಾರ ಕುಂಡಲನೊಸ-ಲ್ಹೀರ ಮಸ್ತಕವಿದು ಸಾರಸಭೂಷೆ 1 ಹರಿಯಾ ಸ್ನಾನೋದಕದಲಿ ನೀನಿರುವಿವರ ವೀಳ್ಯದಲಿರುವಿಹರಿಯಾ ತರುಣಿಯನೆ ನೀ ಪಡೆದಿರುವಿ2
--------------
ಇಂದಿರೇಶರು
ಗಟ್ಟಿ ಮನವ ಕೊಡೊ ಹರಿ ಹರಿ ಗಟ್ಟಿ ಮನವ ಕೊಡೊ ಪ ಸೃಷ್ಟಿಕರ್ತನೆ ನಿನ್ನ ಶಿಷ್ಟ ಪಾದದೆನಗೆ ನಿಷ್ಠೆ ಭಕ್ತಿಯ ನೀಡು ಬಿಟ್ಟು ಅಗಲದಂತೆ ಅ.ಪ ದುರಿತದೋಷಗಳು ಕಡಿದು ಬರುವ ಕಂಟಕವನ್ನು ಪರಹರಿಸೆನಗೆ ಅರಿವು ನಿಲಿಸಾತ್ಮನ ಕುರಹು ತಿಳಿಸುಸಿರಿವರನೆ ಕರುಣದಿ 1 ಚಲನವಲನಗಳನು ಕಳೆದು ನಿಲಿಸು ಜ್ಞಾನವನ್ನು ಹೊಲೆಯ ದೇಹದ ನೆಲೆಯ ತಿಳಿಸಿ ಎನ ಗಳುಕಿಸು ಭವದಾಸೆ ಘಳಿಲನೆ ಒಲಿದು 2 ತಾಪತ್ರಯಗಳನು ಛೇದಿಸಿ ಪಾಪಶೇಷಗಳನ್ನು ಲೋಪಮಾಡಿ ಇಹದ್ವ್ಯಾಪರದೊಳಗಿಂದ ನೀ ಪೊರೆ ಭವನಿರ್ಲೇಪನೆ ದಯದಿ 3 ಕಟ್ಟಿ ಕಾದುತ್ತಿರುವಸಂಸಾರ ಕೆಟ್ಟಬವಣೆಜನ ಬಟ್ಟ ಬಯಲು ಮಾಡಿಕೊಟ್ಟು ನಿಜಾನಂದ ಶಿಷ್ಟರೊಳಾಡಿಸೆನ್ನ ಸೃಷ್ಟೀಶ ದಯದಿಂ 4 ನೀನೆ ಕರುಣದಿಂದ ಬಿಡಿಸಯ್ಯ ಯೋನಿಮಾರ್ಗ ತಂದೆ ಧ್ಯಾನದಿರಿಸಿ ನಿನ್ನ ಮಾಣದ ಪದ ನೀಡು ದೀನದಯಾಳು ಶ್ರೀ ಜಾನಕಿರಾಮ 5
--------------
ರಾಮದಾಸರು
ಗಣೇಶ ಹಿತಮತಿಯ ಪಾಲಿಸೊ ಪ ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ ಭಜನೆ ಮಾಡುವಂಥ ನಿಜವ ಪಾಲಿಸಿ 1 ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು 2 ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ 3
--------------
ಬಾಗೇಪಲ್ಲಿ ಶೇಷದಾಸರು
ಗಣೇಶಸ್ತುತಿ ಕರುಣಿಸೋ ಗೌರೀಕರಜ ಪ ಕರುಣಾಳು ಕ್ಷಿಪ್ರ ಮನದ ಕಾಯ ಬೇಗದಿ ಅ.ಪ ಕಾಯ ಜಾತ ಅರಿವರ್ಗಗಳಿಗೆ ವಿಘ್ನವ ತ್ವರದಲ್ಲಿ ಇತ್ತು ಶುಭಕೆ ಮಾರ್ಗವ 1 ನರಭಾವದಿಂದ ನಿನ್ನ ಮರೆತರೆ ನೀನು ಎನ್ನನು ಜರಿದರೆ ಪೊರೆವೊರ್ಯಾರೊ ನಿರುತದಿ 2 ಮರುದಂಶ ಮಧ್ವಮುನಿಯ ವರಶಾಸ್ತ್ರ ಪೇಳ್ವ ಬುದ್ಧಿಯ ವರವಿತ್ತು ಬಂದ ವಿಘ್ನವ ಕಳೆಯುತ 3 ವರಪಾಶಪಾಣಿ ಎನ್ನ ದುರಿತಾಶಪಾಶ ಛೇದಿಸಿ ಹರಿ ಭಕ್ತಿ ಪಾಶದಿಂದ ಬಿಗಿಯುತ 4 ಕರಿವಕ್ತ್ರಶಂಕೆ ಎಂಬ ಕರಿಯನ್ನು ಅಂಕುಶದಲಿ ಮುರಿಬಿಂಕ ಶಂಕಿಸದೆ ವಿದ್ಯವ 5 ಸಿರಿ ವಾಣಿ ಚಂಡಿಕಾದ್ಯರು ನಿರುತದಿ ಇದ್ದು ವರವ ಬೀರ್ವರು 6 ನರವಾಹ ವಾಯುಜರಿಗೆ ಸರಿ ಎಂಬೋ ಜ್ಞಾನದಿ ಪಾದ ತೋರಿ ಬೇಗನೆ 7
--------------
ಪ್ರದ್ಯುಮ್ನತೀರ್ಥರು