ಒಟ್ಟು 615 ಕಡೆಗಳಲ್ಲಿ , 86 ದಾಸರು , 499 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು
ಹರಿಮಂದಿರಹರಿಮಂದಿರ ಈ ಸ್ಥಳವುಹರುಷದಿ ಚಿಂತಿಪರಿಗೆ ಪಹರಿಹರ ಬ್ರಹ್ಮಾದಿಗಳು ಪೊಗಳುತಿರೆಸುರಮುನಿ ನಾರದ ಋಷಿಗಳು ಸ್ತುತಿಸಲುಸುರರುಪುಷ್ಪ ವೃಷ್ಟಿಯ ಕರೆಯಲು ಅ-ಪÀ್ಸರಸ್ತ್ರೀಯರುನರ್ತನ ಮಾಡುವ ಸ್ಥಳಅ.ಪಸಿರಿನಾರಾಯಣ ಶೇಷಶಯನದಲಿಶಯನಿಸಿ ನಿದ್ರಿಸುತಿರೆಸಿರಿಭೂದುರ್ಗಾಂಬ್ರಣಿಯರು ಸೇವಿಸಲುನಾಭಿ ಕಮಲದಲಿಸರಸಿಜೋದ್ಭವ ಸ್ತುತಿಸುತ ಧ್ಯಾನಿಸಲುಕರಜೋಡಿಸಿ ಸುಜನರು ನಮೋ ನಮೋ ಎನೆಭರದಿ ಜಾಗಟೆಭೇರಿತಾಳ ತುತ್ತೂರಿಯುಕರದಿ ಶಂಖು ಗಂಟೆ ನಾದ ಮೊಳಗೆಹರಿಭಜನೆ ಮಾಡುತ ತದ್ಧಿಮಿಕೆನ್ನುವ ಸ್ಥಳ 1ಹರಿವೈಕುಂಠದಿ ಸಿರಿಯೊಡಗೂಡಿರಲುಭೃಗುಮುನಿ ತಾಡನದಿಸಿರಿದೇವಿ ಕೋಪಿಸಿ ಹರಿಯನು ಬಿಡಲುಸಿರಿಇಲ್ಲದೆ ಒಬ್ಬನೆ ಇರಲಾಗದೆ ವೆಂಕಟಗಿರಿಗಿಳಿತರಲುಸರಸಿಜಾಕ್ಷ ಕರಿಬೇಟೆಯ ನಾಡುತಬರುತ ಪದ್ಮಾವತಿಯನು ಮೋಹಿಸಿಕೊರವಿರೂಪತಾಳುತ ಕಣಿ ಹೇಳಲುಭರದಿ ಕಲ್ಯಾಣವು ನಡಸಿದ ಸ್ಥಳವಿದು 2ಸುರರುಅಸುರರು ಶರಧಿಯ ಮಥಿಸಿರಲುಅಮೃತವನೆ ಕಂಡುಹಿರಿ ಹಿರಿ ಹಿಗ್ಗುತ ನುಗ್ಗೆ ದಾನವರುಶ್ರೀಹರಿತಿಳಿದು ತ್ವರದಿಂದ ಮೋಹಿನಿರೂಪ ತಾಳಿಬಿರಿಬಿರಿ ನೋಡುತಲಿರೆ ದಾನವರುಸುರರಿಗೆ ಅಮೃತವನುಣಿಸುತ ಮೋಹಿನಿಪರವಶದಲಿ ಮೈ ಮರತಿರೆ ಅಸುರರುಸುರರಿಗೆ ಅಭಯವ ನೀಡಿದ ಸ್ಥಳವಿದು 3ವಿಶ್ವಾಸದಿ ತಪಗೈದ ಸುರನ ನೋಡಿಮಹದೇವರು ಒಲಿದುಭಸ್ಮಾಸುರ ಬೇಡಿದ ವರಗಳ ಕೊಡಲುನಿಜ ನೋಡುವೆನೆಂದು ಭಸ್ಮಾಸುರ ಬೆನ್ನಟ್ಟುತ ಬರುತಿರಲುವಿಶ್ವವ್ಯಾಪಕಹರಿತಾ ತಿಳಿದುತಕ್ಷಣ ಸ್ತ್ರೀ ರೂಪವ ಧರಿಸುತ ಬರೆಭಸ್ಮಾಸುರ ತನ್ಹಸ್ತದಿ ಮೃತಿಸಲುಭಕ್ತರನುದ್ಧರಿಸಿದ ಈ ಸ್ಥಳವು 4ಲೋಕ ಲೋಕದ ಜನರೆಲ್ಲರು ಕೂಡಿಪ್ರಜಾ ಕಂಟಕನಾದಮೂಕಾಸುರನನು ಗೆಲ್ಲಲು ಸಾಗದಲೆಶ್ರೀಕಾಂತನ ಪ್ರಾರ್ಥಿಸೆಮೂಕಾಂಬಿಕೆ ನಾಮದಿಂದಲಿ ಪ್ರಜ್ವಲಿಸಿಮೂಕಾಸುರನನು ವಧಿಸಿದ ಶ್ರೀ ಕೋಲಾ-ಪುರದಲಿ ವಾಸಿಸುತಲಿ ಸಂತತಶ್ರೀಕರ ಕಮಲನಾಭ ವಿಠ್ಠಲಏಕಾಂತದಿ ಭಕ್ತರ ಸಲಹಿದ ಸ್ಥಳವಿದು 5
--------------
ನಿಡಗುರುಕಿ ಜೀವೂಬಾಯಿ
ಹಾಳು ಮಾಡಿದ ಹನುಮ ಸಾಲು ವನಗಳ |ಧಾಳಿ ಕೊಟ್ಟನಿತರ ಜನಕೆ |ಕೇಳಲಿದನು ದನುಜನೆಂದು ಪಚರರು ಪೇಳಲವನು ಖತಿಯ |ಲಿರುವ ದಳವ ಕಳುಹಲದನು ||ತರಿದ ಭಯವಬಡದೆ ಮುಂದಕೆ |ಚರಣವಿಡದೆ ಬಹು ಸಮರ್ಥ 1ಹರಿಜಿತ ಬಲು ಭರದಿ ಬರಲು |ಥರವು ಸಿಗುವದಿವನ ವಶಕೆ ||ಮೂರೇಳು ಮುಖನ ಕಾಂಬುವೆನೆನುತ |ಕರವಮರೆದ ಮರುತ ಕುವರ 2ದಾನವ ಪತಿಯಲ್ಲಿ ಪೋಗಿ |ಏನು ಯೋಚನೆಯನ್ನು ಮಾಡದೆ ||ತಾನು ಗಂಭೀರ ಸ್ವರದಿ ಪೇಳ್ದ |ಪ್ರಾಣೇಶ ವಿಠ್ಠಲನ ಮಹಾತ್ಮೆಯನ್ನು 3
--------------
ಪ್ರಾಣೇಶದಾಸರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು