ಒಟ್ಟು 569 ಕಡೆಗಳಲ್ಲಿ , 83 ದಾಸರು , 498 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು
ಹೊಲೆಯ ಹೊಲತಿ ಇವರವರಲ್ಲಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಪ.ಸತಿಯಳ ವಶನಾಗಿಜನನಿ - ಜನಕರಿಗೆಅತಿ ನಿಷ್ಟುರ ನುಡಿವವ ಹೊಲೆಯಸುತರ ಪಡೆದು ವಾರ್ಧಿಕ್ಯ ಮದವೇರಿಪತಿದ್ಟೇಷ ಮಾಡುವಳೆ ಹೊಲತಿ 1ಗುರುಗಳಲ್ಲಿ ವಿದ್ಯೆಗಳನು ಕಲಿತುಹಿರಿಯರ ಬಳಲಿಸುವವ ಹೊಲೆಯಪರಪುರಷಗೊಲಿದು ತನ್ನ ಪುರುಷನವಿರಸವ ಮಾಡುವ ಕುಲಕೇಡಿತೆ ಹೊಲತಿ 2ಒಡೆಯನನ್ನವನುಂಡು ಅಡಿಗಡಿಗೆ ಬಾಯ್ಬಿಡದೆ ತರ್ಕಿಸುವ ಜಡ ಹೊಲೆಯಬಡತನ ಬಂದರೆ ಪುರುಷನ ರಚ್ಚೆಗೆಬಿಡದೆ ತಹಳೆ ಶುದ್ಧ ಹೊಲತಿ 3ನೂರೊಂದು ಕುಲ ಕುಂಬಿಪಾಕಕಟ್ಟುವಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯಆರೊಳು ಕಲಹಾಪಸ್ಮಾರಿ ದುರ್ಮುಖಿಯು - ಕಠೋರಕುಮತಿ ಶುದ್ಧ ಹೊಲತಿ 4ಅಜನುತ ಪುರಂದರವಿಠಲನ ದಾಸರಭಜನೆಯ ದಾರಿಯ ಬಿಟ್ಟವ ಹೊಲೆಯನಿಜವರ್ಯರಾದ ಸಜ್ಜನರ ಪಾದಪದ್ಮವಭಜಿಸದಿರುವಳೆ ಶುದ್ಧ ಹೊಲತಿ 5
--------------
ಪುರಂದರದಾಸರು
ಹ್ಯಾಂಗಾದರು ದಾಟಿಸೊ ಭವಾಬ್ಧಿಯಹ್ಯಾಂಗಾದರು ದಾಟಿಸೊ ಪ.ಗಂಗಾಜನಕನಾ ನಿನ್ನವನೆಂದುಹ್ಯಾಂಗಾದರು ದಾಟಿಸೊ ಅ.ಪ.ನಗುತ್ತಾದರು ಉಂಡೆ ಅಳುತ್ತಾದರು ಉಂಡೆಬಗೆ ಬಗೆ ದುರ್ಜನ್ಮ ಸುಖದು:ಖವತಗೆ ಬಗೆ ನಿರಯದಿ ಹೊರಳ್ಯಾಡುವನ ತಂದುಮಿಗಿಲಾದ ದೇಹವನಿತ್ತೆ ಇನ್ನೆಲೆ ಕೃಷ್ಣ 1ತಿಳಿದಾದರು ಮಾಡಿ ತಿಳಿಯದಾದರು ಮಾಡಿಹಲವು ದೋಷದ ರಾಶಿ ಒದಗಿಸಿದೆಬಲುತಪ್ಪು ನೋಡದೆ ನಾಮಾಮೃತವನಿತ್ತುಸಲಹುವ ಮನಬಲ್ಲ ಎಲ ಎಲೋ ಮುಕುಂದ 2ಮಂದಮತಿಯುಗ್ರಾಹ ಅಂಧ ಕೂಪದಿ ಬಿದ್ದುಎಂದಿಗುಭೋಗಭೋಗಿಸಲಾಪೆನೆತಂದೆ ಪ್ರಸನ್ನವೆಂಕಟಪತಿಗೊಲಿದುನಿಂದೆನ್ನ ಛಿದ್ರವನೆಣಿಸುವರೆ ರಂಗ 3
--------------
ಪ್ರಸನ್ನವೆಂಕಟದಾಸರು