ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ್ತಿ ಶರಜ ನಮೋ ಸಜ್ಜನ ಪ ಧೂರ್ತ ಶಿಕ್ಷ ನಮೋ ಅ.ಪ ತಾರಕಾರಿ ನಮೋ ಚಿನ್ಮಯ | ಸಾರಸಾಕ್ಷ ನಮೋ 1 ಫುಲ್ಲನೇತ್ರ ನಮೋ | ಶ್ರೈಜಗ ವಿಶ್ವ ವಲ್ಲಭೇಶ ನಮೋ 2 ದಾಸರಕ್ಷ ನಮೋ ಪಾವಂ ದೋಷರಹಿತ ನಮೋ 3
--------------
ಬೆಳ್ಳೆ ದಾಸಪ್ಪಯ್ಯ
ಮೂರ್ತಿಧ್ಯಾನ ಕಮಲಜ ಹೃತ್ಸರೋವರ ಕಂಜವೆಂಸಾ ಮನುಜ ಹೃದ್ವ್ಯೋಮದಿ ಮಿಂಚಿನಂತೆಸೆವಾ ಧ್ವಜವಜ್ರ ಪದುಮ ಪತಾಕಾಂಕುಶ ವಹ ನಿಜಕಾಂತಿಯಲರುಣಾಬ್ಜದಂತೆಸೆವಾ ಪದತಳದ ಮೇಲೆ ಥಳಥಳಿಸುತಲಿಹ ಪದುಮಭವಾಂಡ ಭೇದನದಕ್ಷವೆನಿಸುವಾ ಸುರವಾಹಿನಿಗೆ ತೌರುಮನೆ ತಾನಹ ದುರುಳ ಶಕಟತನುಚೂರ್ಣೀಕೃತವಹ ಪಾರ್ಥಶರೀರ ರಕ್ಷಣಕರ್ತೃತಾನಹ ಪಾತಕ ಪರಿಹರವಹ ಉಂಗುಟದಿಂ ಭುವನಗಳತಿಗಳ ಹಿಂಗಿಪ ನಖಪಂಕ್ತಿಗಳ ಕಿರಣಗಳಾ ವೀರಮುದ್ರಿಕೆಯ ಮಂಟಿಕೆಯಕಾಂತಿಗಳಾ ವೋರಂತೆ ಪೆರ್ಚಿಹ ಪಾದಾಂಗುಲಿಗಳಾ ತೊಳಪ ಕಡೆಯ ಪೆಂಡೆಯದ ತೊಡವು ಗಳ ವೈಕುಂಠಗಿರಿ ವೇಂಕಟೇಶ ನಿನ್ನಾ | ಚರಣಸೇವೆಯನೇ ಕರುಣಿಸಯ್ಯಾ
--------------
ಬೇಲೂರು ವೈಕುಂಠದಾಸರು
ಮೂಲ ಕಾರಣ ವಿಠಲ | ಪಾಲಿಸಿವಳಾ ಪ ಲೀಲಾ ಮನೋರೂಪ | ಬಾಲಗೋಪಾಲಾ ಅ.ಪ. ಕರ್ಮಕರ್ಮಗಳ | ಮರ್ಮಗಳ ತಿಳಿಸುತ್ತಕರ್ಮ ನಾಮಕ ಕಾಯೊ | ಪೇರ್ಮೆಯಲಿ ಇವಳಾದುರ್ಮತಧ್ವಾಂತಾಕ | ಸಮೀರ ಮತ ತಿಳಿಸಿನಿರ್ಮಲಾತ್ಮನೆ ಸಲಹೊ | ಭರ್ಮ ಗರ್ಭಾತ್ಮ 1 ಸುಖ ದುಃಖ ದ್ವಂದಗಳು | ಸಕಲಕ್ಕು ಶ್ರೀ ಹರಿಯೆಮುಖ್ಯ ಕಾರುಣಾನೆಂಬ | ಸುಖತೀರ್ಥ ಭಾವಾ |ಕಕುಲಾತಿಯಿಲ್ಲದೆ | ತ್ರೈಕರಣ ಪೂರ್ವಕದಿನಿಖಿಲಾತ್ಮ ಕೃತವೆಂಬ | ಯುಕುತಿಯನೆ ತಿಳಿಸೋ 2 ಪತಿಸುತರು ಹಿತರಲ್ಲಿ | ವ್ಯಾಪ್ತನಾಗಿಹ ಹರಿಯಹಿತದಿಂದ ಸೇವೆಯಲಿ | ಕೃತಕೃತ್ಯಳೆನಿಸಿಮತಿಮತಾಂವರರಂಘ್ರಿ | ಶತಪತ್ರ ನಮಿಪ ಸ-ನ್ಮತಿಯನ್ನೆ ಪಾಲಿಸೋ | ಕೃತಿರಮಣದೇವ 3 ಗಜ ಪಂಚಾಸ್ಯ | ಪರಿಹರಿಸಿ ಇವಳ ಘವಸರ್ವದ ಪೊರೆಯಲ್ಕೆ | ಹರಿಯೆ ಬಿನ್ನವಿಪೇ 4 ಸೃಷ್ಟಿ ಸ್ಥಿತಿ ಸಂಹಾರ | ಅಪ್ಟ ಕರ್ತೃತ್ವಗಳಸುಷ್ಠು ಚಿಂತನೆಯಲ್ಲಿ | ನೆಟ್ಟ ಮನವಿರಿಸೀಕೃಷ್ಣ ಗುರು ಗೋವಿಂದ | ವಿಠಲನೇ ಗತಿಯೆಂಬಶ್ರೇಷ್ಠ ಮತಿಯಲಿ ಭವದ | ಕಟ್ಟನೇ ಬಿಡಿಸೋ5
--------------
ಗುರುಗೋವಿಂದವಿಠಲರು
ಮೂಲ ಪ್ರಕೃತಿ ಪ ಪತಿಯೆ ಸದ್ಗತಿಯೆ ಇದನಿತರರಾ ಬೇಡೆ ನಾಂ ಹಿತಮಾಡುವನು ನೀನು ಸತತಾಯನ್ನಗಲದಿರು ಅ.ಪ ತತ್ವಾಮಂಗಳದ್ರವ್ಯ ಸಾತ್ವೀಕ ವೃತ್ತಿ ಸಂ ಪತ್ತಿನೋಳ್ ಹಿಗ್ಗುವ ಮುತ್ತೈದೆಯೆನಿಸೆನ್ನ 1 ಗುರುಭಕ್ತಿಯೆಂಬ ಭರ್ಜರಿಸೀರೆಯನುಡಿಸಿ ಕಂಚುಕ ತೊಡಿಸಿ ಹರುಷದಿ ಕೊಡು ಮುಕ್ತ 2 ಕಳ್ಳರಿಗೆ ಕಾಣದ ಒಳ್ಳೆ ವಡವೆಗಳಿಟ್ಟು ಚೆಲ್ವನಿ ನ್ನೊಳು ಬೆರೆಸುನಲ್ಲಾ ಗುರುರಾಮವಿಠಲ ಪತಿಯೆ 3
--------------
ಗುರುರಾಮವಿಠಲ
ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ ನೀನು ಪ ನಮೋನಾರಾಯಣಾಯ ಕಡೆಯಲುಳ್ಳ ಅ.ಪ ವೇದ ಪಾಂಚರಾತ್ರಾಗಮ ಪೌರಾಣಗಳ ನಿರುತ ನುತಿಪ ವೇದದೆ ಶ್ರೀವೈಷ್ಣವರಿಗೆ ತಾರಕಬ್ರಹ್ಮವಾದ ಆದಿಯೊಳಾಚಾರ್ಯರಿಂದ ಪಂಚಸಂಸ್ಕಾರ ಹೊಂದಿ ಬೋಧೆ ಪಡೆದ ಮಹಾಮಂತ್ರರಾಜವೆನಿಸಿ ಮುಕ್ತಿ ಕೊಡುವ 1 ಅಷ್ಟಾಕ್ಷರಿಯಾದ ಮಂತ್ರ ಇಷ್ಟಸಿದ್ಧಿಮಾಳ್ಪ ಮಂತ್ರ ನಿಷ್ಠೆಯಿಂದ ಜಪಿಸುವರಿಗನಿಷ್ಟಹಾರಿಯಾದ ಮಂತ್ರ ಇಷ್ಟುಮಾತ್ರ ಪಠಿಸುವರಿಗೂ ಮೋಕ್ಷವನ್ನೆ ಕೊಡುವ ಮಂತ್ರ ಸೃಷ್ಟೀಶ ಹೆಜ್ಜಾಜಿಯ ಕೇಶವನನ್ನೊಲಿಪ ಮಂತ್ರ 2
--------------
ಶಾಮಶರ್ಮರು
ಮೂಲೋಕದೊಳಗೆ ಮುಕುಂದನೆ ದೈವವಿದ- ಕಾಲೋಚನೆಯ ಮಾಡಬೇಡ ಇವ ಲೋಲಾಕ್ಷಿ ಎಂದೆಂದು ಬಿಡ ಅಲ್ಲದಿದ್ದರೆ ಮೇಲಣ ಸಂಪದವ ಕೊಡ ಇಂಥವನಾವ ಪ. ಆಡÀಲೇಕಿನ್ನು ಸಖಿ ಅಂಜಿದವನಂತೋಡುವ ಕಾಡುವ ಖಳನಾಗಿ ನಿತ್ತ (ನಿಂತ?) ಇವ ರೂಢಿಯೊಳಗೆ ಬಲುದೈತ್ಯ ಇದನೋಡಿ ಪಾಡುವರು ಸುಖ ನಲಿವುತ್ತ ಇಂಥವನಾವ 1 ಕಾಳಿಯ ನಾಗನ ತುಳಿದ ಮತ್ತವಗೊಲಿದ ಬಾಲಗೋಪಾಲ ಸುಕೃಪಾಳು ಇವ ನಾಳು ನಾನೆಂದು ಸಖಿ ಬಾಳು ಗಿರಿಯ ಭಾರವ ತಾಳಿತಿವನದೊಂದು ತೋಳು ಇಂಥವನಾವ 2 ಕಣ್ಣಾರೆ ಕಂಡೆವಲ್ಲ ಮಣ್ಣಮೆದ್ದೆಯೆನಲು ಸಣ್ಣ ಬಾಯೊಳು ಸರ್ವಜಗವ ಎಲೆ ಹೆಣ್ಣೆ ತೋರಿ ತೊಳೆದ ನಮ್ಮಘವ ಇನ್ನು ಹಯವ ದನ್ನ ತನ್ನವನೆನ್ನಾಳುವ ಇಂಥÀವನಾವ 3
--------------
ವಾದಿರಾಜ
ಮೂವರೇರಿದ ಬಂಡಿ ಹೊರೆನೆನದುದೇವಕೀ ನಂದನನು ತಾನೊಬ್ಬ ಬಲ್ಲ ಪ ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬಓಡಾಡಿದನೊಬ್ಬ ಈ ಮೂವರುಆಡಿದವಗೆ ಕಿವಿಯಿಲ್ಲ ನೋಡಿದವನ ಮಗ ಪಾಪಿಓಡಾಡಿದವನೊಬ್ಬ ಓಡನಯ್ಯ 1 ಕಾಯ ಕಾಯ ಬಡಲಿಗ ಚೆಲ್ವಕಾಯ ಗಿರಿ ಪೊತ್ತವನು ಕಡುಧರ್ಮಿಯು 2 ಹರಿಗೆ ಮಾವನು ಆದ ಹರಿಗಳಿಯ ತಾನಾದಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದಸಿರಿಧರನು ಕಾಗಿನೆಲೆಯಾದಿಕೇಶವರಾಯ3
--------------
ಕನಕದಾಸ
ಮೃಗಮೋಹಿನಿಯೊಡನೇಕೋ ಪಂಥ ಪ ಕಾಂತ ಸಿರಿಕಾಂತ ಸುರನಗರಾಧಿಪ ಅ- ನಂತ ಗುಣವಂತ ದೇವಾ ಎನ್ನ ಸಲಹೊ ಅ.ಪ ಸುಲಲಿತ ಲತಾಂಗಿ ನಿನ್ನೊಲುಮೆಯಲ್ಲಿ ನೆರೆಹೊಂಗಿ- ಸಲೆ ಮನವ ಮಾಡಿ| ನಿನ್ನಗಲಿ ಬಾಯಾರಿ ಬಲು ವಿರಹದಾಸರಿನ ಬೇಸರಿನಲ್ಲಿ ಯಿಂ_ ತಳಿದವಳ ಕಾಯೊ ಸಿರಿಧಾಮ ಗುಣಧಾಮ 1 ಕಳಕಳಿಪ ನೋಟ ಕಾತರಿಪ ವಿರಹದ ಹೂಟ ಅಳಲು ಮನ ಅಳಿನಿದ್ರೆ ನಿನಗಾಲಯ ಮುದ್ರೆ ಅಳಿದುಳಿಸು ಲಜ್ಜೆಗೇಡುಗಳ ಪಾಡುಗಳ ಇಂ- ತುಳಿದವಳ ಕಾಯೊ ಸಿರಿಧಾಮ ಗುಣಧಾಮ 2 ಮೂರಾರವಸ್ಥೆಗಳ ನೀರಿಕಡೆಯನವಸ್ಥೆ ಮಾತಿರುವಳೆ ಬಾಲೆ ನಿನಗೆದ್ದ ಮೇಲೆ ನಾರಿಯೆಡೆಗೈದರಲೆಗಲಿಪ್ಪಿ ಬಿಗಿದಪ್ಪಿ ಸೊಗಸೇ ತೋರಿಸಿದನಮರ ಪುರಿಪಾಲ ಸಿರಿಲೋಲ 3
--------------
ಕವಿ ಲಕ್ಷ್ಮೀಶ
ಮೃಡ ಫಣೀಂದ್ರವೀಂದ್ರ ವಂದ್ಯ ಕಡಲಶಯನ ಶ್ರೀನಿವಾಸ ಒಡೆಯನಾಜ್ಞೆಯಿಂದಲೆನಗೆ ಪ. ಜೀವಗಣಪತೆ ಸರ್ವದೇವತಾಗತೆ ಪಾವನಾತ್ಮ ಪದ್ಮ ಸಮಕರಾವಲಂಬಿತ್ತು ಬೇಗ 1 ಮೂರು ತಾಪವಾ ಹತ್ರ ಸೇರದಂದದಿ ಅದರ ಬೇರ ಕಡಿದು ಭಕ್ತಿಸಾರ ಧಾರದಿಂದ ದೃಢವ ಮಾಡಿ 2 ಕೈಟಭಾರಿಯ ಪುರದ ಭಾಟದಾರಿಯ ಬೇಟ ಜಲಟ ಕುಕ್ಕುಟಗಳ ನೋಟಾಪಾಟದೊಡನೆ ತೋರಿ 3 ಹರಿಯ ದೊರೆತನ ಕರುಣಿಕಾಗ್ರಣಿ ಕಮಲ ಕರವ ಎನ್ನ ಶಿರದೊಳಿಕ್ಕಿ 4 ನಿನ್ನ ಕರುಣವು ನಿಯತವಾಗಲು ಪನ್ನಗಾಚಲೇಂದ್ರ ದಯದಿ ತನ್ನ ದಾಸನೆಂದು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮೃಡ ಶಂಭೋ | ಪ ಅದ್ರಿಧರ ಪ್ರಿಯ ಅದ್ರಿ ಕೃತಾಲಯ | ಅದ್ರಿಜಾಮಾತಾದ್ರಿ ರಿಪುನುತ | ಪತಿ ಪಾಪಾದ್ರಿ ಕುಲಿಶಕನ | ಕಾದ್ರಿಶರಾಸನ ಮುದ್ರಿತ ಪಾಣೇ1 ಉನ್ನತದಿಂದಲಿ ಮನ್ಮಥ ಬರಲುದ | ಹನ್ಮಾಡಿದ ಷಣ್ಮುಖ ಜನಕನೆ | ಸನ್ನುತ ಲೀಲಾ | ಜನ್ಮರಹಿತ ಘನ ಚಿನ್ಮಯ ರೂಪಾ || 2 ಬರಿಸಿದೆ ಗಂಗೆಯ ನಿರಿಸಿದೆ ಜಡೆಯೊಳು | ಧರಿಸಿದೆ ಚಂದ್ರನ ಮೆರೆಸಿದೆ ಭಕ್ತರ | ಗುರುಮಹೀಪತಿ ಯಂಕುರಿಸಿದ ಬಾಲನ | ಸಿರಸದಲಿಡು ನಿಜ ಪರಸದ ಕೈಯಾ | 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೃಡನ ಜಟಾಂತರವಾಸಿ ನಾಮಕಳೆ ಪ ನಿರುತ ಹರಿ ಗುರು ಕರುಣಾ ಪಾತ್ರೆ ಪರಮ ಪುರುಷ ದೂಷಿ ನಿಚಯ ವೀತಿ ಹೋತ್ರೆ 1 ದುರಿತ ಮಾರ್ಗಚರಿತ ಜನ ಹೃತ್‍ಶೂಲೆ ಮದನ ಶರಜಾಲೆ 2 ನಿವಾರಿತ ಮಮತಾ ಪಾಶ ವಾರಂ ವಾರೆ ಹರಿಕಥಾಶ್ರವಣ ದಳಿತ ಅಶ್ರುಧಾರೆ 3 ವರಸತ್ಕಲಾಪ ಮಂದಾಯು ಹರಣೆ ಪರಿಪರಿ ಸುಕ್ಷೇತ್ರ ಚರಿತ ಚರಣೆ 4 ಗುರುದತ್ತಾಶ್ರೀತ ವರಸುಪಥೆ ಹರಿಸ್ಮರಣಾವಿನಾ ನ ಜೀವಿತ ಶಪಥೆ 5 ಪರಿಕರಾ ಪರಿತದಾಕಾರ ವೀಕ್ಷಿತ ನೇತ್ರೆ ಸರಿತಶ್ವಾಸ ಸಾವೃತ ಪರಿಮಳಗಾತ್ರೆ 6 ಲಜ್ಜೋದಧಿ ನಕ್ಷೇಪಿತ ಗಜಗಮನೆ ಅರ್ಜಿತಾಂಗಾರ ವಿಲಸಿತ ಶೃಂಗಾರ ವದನೆ 7 ರುಜು ಜ್ಞಾನಭಕ್ತಿ ವಿಧಾರಣ ಶಕ್ತೆ ವಿಜಯ ರಾಮಚಂದ್ರವಿಠಲ ಪದ ಸೇವಾಸಕ್ತೆ 8
--------------
ವಿಜಯ ರಾಮಚಂದ್ರವಿಠಲ
ಮೃತ್ಯುಂಜಯನೇ ಶರಣು ಶಂಕರನೆ ಶರಣು ಶರಣು ಪ ವಾಸವೇ ಕೈಲಾಸ ವಸನವೇ ದಿಕ್ಕುಗಳು ಪೂಸಿಹುದು ಸರ್ವಾಂಗವೆಲ್ಲ ಭಸ್ಮ ನೇಸರಿನ ತೇಜ ಶಶಿಜೂಟ ಗಂಗಾಧರನ ಪಾಸಟಿಯು ನಿನಗೊಬ್ಬರಿಲ್ಲ ಗೌರೀಶ 1 ಪಂಚ ವಿಂಶತಿ ತತ್ವದೂರ ವಿಶ್ವಾಧಾರ ಪಂಚ ಶರಹರ ವಿರಂಚ್ಯಾದಿ ಸಂಸ್ತುತಾ ನಿತ್ಯ ಪ್ರ ಪಂಚ ಮಯನಾದ ಗಿರಿಜೇಶ ವಿಶ್ವೇಶ 2 ಪರಮ ಪುರುಷ ಪರೇಶ ಪರಮ ಗುಣಗಣ ನಿಲಯ ಶರಣ ಜನ ಸುರಧೇನು ವಿಶ್ವವಂದ್ಯಾ ಭವ ಪೂಜ್ಯಸೂರ್ಯ ಕೋಟಿಪ್ರಕಾಶ ಉರಗ ಭೂಷಣ ವೃಷಭಾರೂಢ ಗೌರೀಶ 3 ಭೂತಪತಿ ಭುವನೇಶ ಪ್ರೇತ ನಿಲಯ ನಿವಾಸ ನೂತನದ ಗಜಚರ್ಮ ನಿನಗೆ ವಿಖ್ಯಾತ ಗೀತ ನೃತ್ಯ ವಿಲಾಸ ಮಾತುಳಾಧ್ವರನಾಶ ಭಾತಿ ಕಂಠದಿ ವಿಷವು ಗೌರೀಶ 4 ಧರೆಯೊಳಧಿಕತರ ವರದ ಮೂಲನಿವಾಸ ಕರಿವದನ ನಂದೀಶ ಶಕ್ತಿ ಉಮೆ ಸಹಿತ ಭರದಿಂದ ನೆಲಸಿ ಸೊಪ್ಪಿನ ಸುಬ್ಬಗೆವರವಿತ್ತೆ ದುರಿತವನು ಪರಿಹರಿಸೋ ಶಂಭುಲಿಂಗೇಶ 5
--------------
ಕವಿ ಪರಮದೇವದಾಸರು
ಮೇಲನೆಸಗಲಿ ನಿಮಗೆ ಮಾಲಕುಮಿ ಮನ್ನಿಸುಗೆ ಪ. ಬಾಲಕರು ಬಯಸುವೆವು ಬಾಲೆಯರು ಹರಸುವೆವು ಅ.ಪ. ಮಾಧವನ ದಯೆಯಿರಲಿ ಯೊಧರಿಗೆ ಜಯವಿರಲಿ ಸಾಧನವು ಕೈಸೇರೆ ಶ್ರೀಧರನು ಮೈದೋರೆ 1 ಸಿದ್ಧಿಸಿದಾವ್ರತವೆಂದು ಶುದ್ಧಭಾವದಿ ಬಂದು ಬದ್ಧಕಂಕಣರಾಗಿ ಶ್ರದ್ಧೆಯಿಂ ಶಿರಬಾಗಿ 2 ವಾಸುದೇವನ ಸ್ಮರಿಸಿ ಮೀಸಲಂ ತೆಗೆದಿರಿಸಿ ವಾಸಪಂಥದಿ ಬೇಗ ದಾಸ್ಯಮಂ ಬಿಡಿಸೀಗ 3 ವಿಜಯದಶಮಿಯು ನಾಳೆ ವಿಜಯಯಾತ್ರೆಗೆ ತೆರಳೆ ವಿಜಯಸಾರಥಿಯೊಲಿದು ವಿಜಯವೀಯುವನಹುದು 4 ಘನತೆಗೇರುವ ನಮ್ಮ ವನಿತೆಯರೆ ನಿಮ್ಮ ಮನೆತನವ ಬೆಳಗಿಸಿರೆ ಇನಿಯರನು ಹುರಿಡಿಸಿರೆ 5 ಪೌರುಷವು ಪುಟ್ಟುವೋಲ್ ವೀರರಹುದೆನ್ನುವೋಲ್ ವೀರಮಾತೆಯರೆ ನೀಂ ವೀರಪುತ್ರರ ಪಡೆಯಿರೆ 6 ಮಕ್ಕಳಂ ತಕ್ಕೈಸಿ ತಕ್ಕಂತೆ ನುಡಿಗಲಿಸಿ ಕಕ್ಕುಲಿತೆಯಿಂ ನೋಡಿ ಅಕ್ಷರಸ್ಥರ ಮಾಡಿ 7 ಮಹಿಳೆಯರೆ ಮಾದರಿಯ ಗೃಹಿಣಿರಹೆ ಶಾರದೆಯ ಮಹಿಮೆಯದು ಕರಮೆಸೆಗೆ ವಿಹಿತಮದು ನಿಮ್ಮೊಳಗೆ 8 ದೇಶದೇಳಿಗೆಯಲ್ಲಿ ಆಸೆ ನಿಮಗಿರುವಲ್ಲಿ ದೇಶೀಯವ್ರತಧರಿಸಿ ಐಶ್ವರ್ಯಮಂ ಬೆಳಸಿ 9 ಪತಿ ಸುತ ಸಹೋದರರ ಹಿತವೆಳಸಿ ಬಾಂಧವರ ಮತವರಿತು ನಡೆಯಿಸಿರೆ ವ್ರತಸಾಂಗವೆನ್ನಿಸಿರಿ 10 ಇನ್ನೇಳಿ ಕೈನೀಡಿ ಸನ್ಮಾನೈಯರೆ ನೋಡಿ ಧನ್ಯವಾದವ ಮಾಡಿ ಮನ್ನಿಸಿರೆ ದಯೆಗೂಡಿ 11 ಬಾಲಕರು ಬೇಡುವರು ಮೇಲೆನಿಪ ಮಮತೆಯನು ಶಾಲುಸಕಲಾಸೆಯನು ಬಾಲಕರು ತಾ ಬಯಸರು 12 ತಾಯಿಯರೆ ನೀವಿತ್ತ ತಾಯ್ನಲವನಿತ್ತ ತಾಯೆಂದುಕೊಳ್ಳುವರು ಈಯಣುಗರ್ ಕೇಳಿದನು 13 ಕನ್ಯೆಯರು ಹಾಡುವರು ಕನ್ನಡವ ಪಾಡುವರು ಕನ್ನಡಕೆ ಜಯವಾಗಲೆನ್ನುವರು ನಲವೀಗೆ 14 ಹರಕೆಯನು ಸಲ್ಲಿಸಿರೆ ತರಳರಂ ಮನ್ನಿಸಿರಿ ಮರಳಿ ಬಾರೆಂದೆನಿರೆ ಹರುಷದಿಂ ಬೀಳ್ಕೊಡಿರಿ15 ವರಶೇಷಗಿರಿವಾಸ ಕರುಣದಿಂದಲೆ ಲೇಸ ಧರೆಗೆಲ್ಲ ಸಂತೋಷ ದಯೆಗೆಯೈ ಸರ್ವೇಶ16
--------------
ನಂಜನಗೂಡು ತಿರುಮಲಾಂಬಾ
ಮೇಲು ಕೋಟೆ ತಿರುನಾರಾಯಣ ಚರಣಂ ಶರಣಂ ಸುರ ಮುನಿ ವಲಯಂ ಯದುಗಿರಿನಿಲಯಂ ಪ ಗುರುರಾಮಾನುಜ ಹೃದಯಭರಣಂ ಸ್ಮರವರ ಸುಂದರಮನಿಶಂ ಸದಯಂ ಅ.ಪ ಯತಿರಾಮಾನುಜ ಶೆಲ್ವಕುಮಾರಂ ಪತಿತಪಾವನ ಮಾಯುತ ಮಣಿಹಾರಂ ಸತತಾನಂದದ ಪುಣ್ಯಶರೀರಂ ಶತಪತ್ರಾಯುತ ನೇತ್ರಮುದಾರಂ 1 ವಿರಾಜಿತ ಮಸ್ತಕಮಮಲಂ ಪರಮ ವೈಭವೋತ್ಸವ ರಾರಾಜಿತ ಪುರುಷೋತ್ತಮ ಕೇಶವ ಮಾಲೋಲಂ 2 ಪರಮ ಪುಣ್ಯತೀರ್ಥಾಕರ ಶೋಭಿತ ನರಹರಿ ಗಿರಿಸಂಭೂಷಿತ ಧಾಮಂ ನಿರುತ ದಯಾಕರ ಮಾಂಗಿರಿಪತಿ ಭೂ ಮಾಧವ ಜಗದಭಿರಾಮಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೇಲುಕೋಟೆ ಯದುಗಿರಿವಾಸ ನಾರಾಯಣ ಯದುಗಿರಿವಾಸ ಪ ಯದುಗಿರಿವಾಸನೆ ಬುಧಜನಪೋಷನೆ ಮದಮುಖಶಿಕ್ಷನೆ ಪದುಮದಳಾಕ್ಷನೆ ಅ.ಪ ವೇದವ ತಂದು ಅಜನಿಗಿತ್ತು ಭಾರವ ಪೊತ್ತು ಕೃತಯುಗದೊಳಗೆ ವೇದಾದ್ರಿಯೆಂದೆನಿಸಿದೆ ಚತುರ್ಮುಖನಲಿ ಪೂಜೆ ಗ್ರಹಿಸಿದ ನಾರಾಯಣ 1 ನಿಗಮವ ತಂದು ಮನುವಿಗಿತ್ತು ಕಂಬದಿಂ ಬಂದು ತ್ರೇತಾಯುಗದಲ್ಲಿ ನಾರಾಯಣಗಿರಿಯೆನಿಸಿದೆ ಸನಕಾದಿಗಳ ಪೂಜೆ ಗ್ರಹಿಸಿದ ನಾರಾಯಣ 2 ದಾನವ ಬೇಡಿ ಕ್ಷತ್ರಿಯರ ಕುಲವನೀಡಾಡಿ ದ್ವಾಪರಯುಗದಲ್ಲಿ ಯದುಗಿರಿಯೆನಿಸಿದೆ ರಾಮ ಕೃಷ್ಣರ ಪೂಜೆ ಗ್ರಹಿಸಿದ ನಾರಾಯಣ 3 ಜಾನಕಿಯ ತಂದು ಅತಿದುರುಳ ಕಂಸನ ಕೊಂದು ಕಲಿಯುಗದೊಳಗೆ ಶ್ರೀ ಯತಿಶೈಲವೆನಿಸಿದೆ ಯತಿರಾಜರಿಗೆ ಒಲಿದ ಪತಿತಪಾವನ ಸ್ವಾಮಿ 4 ಹಯವನುಹತ್ತಿ ನಾರಯಣ ದುಷ್ಟಕಲಿಯ ನೀನೊತ್ತಿ ಸಪ್ತದ್ವೀಪವನೆಲ್ಲ ಸುತ್ತಿ ಬಂದೆಯೊ ಎನ್ನಪ್ಪ ನಿನ್ನೆಣೆಕಾಣೆ ಕಂದರ್ಪನಪಿತ ಚೆಲ್ವಯದುಗಿರಿವಾಸ 5
--------------
ಯದುಗಿರಿಯಮ್ಮ