ಒಟ್ಟು 9343 ಕಡೆಗಳಲ್ಲಿ , 135 ದಾಸರು , 4870 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೆ ನಾ ಇಂದಿರಾಪತಿ ತಂದೆ ತಾಯಿ ಗೋವಿಂದನ ಬಂಧು ಬಳಗೆನಗೆಂದು ನಾ ನಂದ ಕಂದ ಮುಕುಂದನ 1 ಕಾಮಪೂರಿತ ಕಂಜಲೋಚನ ಸ್ವಾಮಿ ಕಾವನೈಯನ ಸಾಮಗಾಯನ ಪ್ರಿಯನ ಸೋಮಶೇಖರ ಧ್ಯೇಯನ 2 ಸಾನುಕೂಲ ಸಕಲಕ ಸಾಧನ ಭಾನುಕೋಟಿ ಪ್ರಕಾಶನ ಜ್ಞಾನಗಮ್ಯ ವಿನಾಶನ ದೀನ ಮಹಿಪತಿ ಈಶನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕಂಡೆನು ಹರಿಯ | ಭವಹಾರಿಯ ಇಂದು ಕಂಡೆನು ಕಂಬದಿಂದಲಿ ಪ ಬಂದು ದೈತ್ಯನ ಕೊಂದು ಕಂದನಿ- ಗಂದು ಒಲಿದಾನಂದ ಸಾಂದ್ರನ ಇಂದಿರಾ ಮಂದಿರನ ವಂದ್ಯನ ಅ.ಪ. ಎಂದಿನಂದದಿ ಬರುತ | ಮನದಲಿ ಶ್ರೀ ಮು- ಕುಂದ ನಾಮವ ನೆನೆಯುತ ಮುಂದು ಮುಂದಕೆ ನಡೆಯುತ | ಆ- ನಂದದಿ ಹೋಗುತಲಿರೆ ಸುಂದರಿ ಶ್ರೀ ತುಲಸಿಗೊಲಿದು ಬೃಂದೆಯನು ಕರವಿಡಿದು ಪೊಳೆದು ಬಂದು ಗಂಡಕಿಯಿಂದ ಭಕ್ತರ ವೃಂದ ಪೊರೆಯಲು ಪಥದಿ ನಿಂದನ1 ಸುಕೃತ | ಬಂದೊದಗಿತೊ ಶ್ರೀಶನೆನಗೆ ದೊರೆತ | ಪ್ರಭಾವದೆ ದುರಿತ | ರಾಶಿಯು ಇನ್ನು ದಾಸರಾಯರ ಕುಲದಿ ಜನಿಸಿದ ಕೂಸೆನುತ ದೇಸಿಗರ ಸೇವೆಗೆ ಮೀಸಲಾಗಿಸಲೋಸುಗೆನ್ನ ಮ- ಹಾಶಯವ ಲೇಸೆನಿಸಿ ಬಂದವ 2 ವಿಕಳ ತತಿಗೆ ಬಾಧಕ | ಈತನ ನಾಮ ಪ್ರಕಟಿಸಲಿನ್ನು ಸುಖ | ಪಾಲಿಸುವನು ಯುಕುತಿಗೆಂದಿಗು ನಿಲುಕ | ಸುಕೃತರಿಂದ ಭಕುತಿ ಸೇವೆಯನೊಂದೆ ಕೊಳ್ಳುವ ಭಕುತಿ ಮುಕುತಿಗಳನ್ನು ಕೊಡುವ ಸಕಲ ಕಾಲದಿ ನಿಂತು ಸಲಹುವ ಲಕುಮಿಕಾಂತನ ಸರ್ವ ಶಕ್ತನ 3
--------------
ಲಕ್ಷ್ಮೀನಾರಯಣರಾಯರು
ಇಂದು ಕಣ್ಣಿಲೆ ಕಂಡಿತು ಧ್ರುವ ಆಯಿತು ವಸ್ತು ಒಂದು ಕಣ್ಣಿಗೆ ಕಣ್ಣು ಕಾಣಬಂದು ಕಾಣಿಸಿ ನಿಜಪುಣ್ಯಗೈಸಿತು ಎನಗಿಂದು 1 ಹೊಳೆಯುತಿಹ್ಯದು ನಿಜಘನ ನೋಡಲಿಕ್ಕಾಯಿತುನ್ಮನ 2 ಕಣ್ಣುಗುರುತಾದ ಪೂರ್ಣಗುರುಬೋಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಕಲಿಗಾಲದ ಮಹಿಮೆಯ ಗುಟ್ಟು ಮುದಿತನ ಬಂದರೆ ಮಾಯದ ಪೆಟ್ಟು ಪ ವಿಧವೆಯಾದರೆ ತಲೆಯ ಮೇಲ್ಮೊಟ್ಟು ವಿಧುರನಾಗೆ ದುರ್ನೀತಿಯ ಕಟ್ಟು ಅ.ಪ ಕುರುಡನಾದರೆ ಅಣಕದ ಬಾಳು ಅರೆಕಿವುಡಗೆ ಬೈಗುಳ ಕೂಳು ನರಳಿದರೆ ಸಾಯಲಿಲ್ಲವೆಂಬ ಗೀಳು ಕೊರಗಿ ಕಣ್ಣೀರನು ಸುರಿಸುವ ಗೋಳು 1 ಇತ್ತಬಾರದಿರು ಎಂಬರು ಕೆಲರು ಅತ್ತಲೆ ಹೋಗು ಹೋಗೆಂಬರು ಕೆಲರು ಎತ್ತಹೋದರೂ ಬಂದುದೇಕೆಂಬರು ತುತ್ತೊಂದಾದರೂ ಸಿಗದೆಂಬುವರು 2 ಹದ್ದುಹದ್ದೆಂಬುವ ಬಿರುನುಡಿಯಿಂದ ಒದ್ದೋಡಿಸುವಳು ಸೊಸೆ ಮನೆಯಿಂದ ಕದ್ದೋಡುವನು ಮಗ ಭಯದಿಂದ ಮದ್ದುಕೊಡಯ್ಯ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡಲಾ ಧ್ರುವ ಮೊರಿಯು ಕೇಳೆಲಾ ಹರಿಯು ನಿಶ್ಚಲಾ ದುರಿತ ಹರಿಸೆಲಾ 1 ಸುಳವದೋರಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ 2 ಬಂಧುಬಳಗ ದೈವ ಕುಲಕೋಟಿ ನೀನೆಲಾ3 ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ 4 ಅಂದು ಒದಗಿ ನೀ ಬಂದ ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ 5 ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ 6 ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕೂಡಿದೆವು ನಿಜ ಇಂದು ಕೂಡಿದೆವು ನಿಜ ಧ್ರುವ ಇಂದೆ ಕೂಡಿದೆವಯ್ಯ ತಂದೆ ಸದ್ಗುರು ನಿಮ್ಮ ಎಂದೆಂದಗಲದ್ಹಾಂಗ ದ್ವಂದ್ವ ಶ್ರೀಪಾದ 1 ಪುಣ್ಯಗೈಸಿತು ಪ್ರಾಣ ಧನ್ಯಗೈಸಿತು ಜೀವನ ಉನ್ಮನವಾಗಿ 2 ಇಂದು ಕೂಡಿದೆವು ಬಂಧುಬಳಗ ನಮ್ಮ ಪಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಗುರುಪೂಜಿ ಮಾಡುವ ನಿಂದು ಮನದೊಳು ಹರುಷಪಡುವ ಧ್ರುವ ತಂದೆ ಸದ್ಗುರುಸೇವೆ ಮಾಡುವ ಬಂದ ಜನ್ಮದ ಹಾದಿ ಬಿಡುವ ಪಥ ಬ್ಯಾಗೆ ಹಿಡುವ ಹೊಂದಿ ಸದ್ಗತಿ ಮುಕ್ತಿ ಕೊಡುವ 1 ಬಂದು ಸಾರ್ಥಕ ಮಾಡುವ ಪಾದ ನೋಡುವ ತಂದು ರತಿಪ್ರೇಮ ನೀಡುವ ಒಂದು ನಾಮ ನಿಶ್ಚಯವಿಡುವ 2 ಒಂದು ಮನದಿ ಪೂಜಿಮಾಡುವ ಎಂದು ಬಿಡದೆ ನಾಮವ ಕೊಂಡಾಡುವ ಇಂದು ನಲಿನಲಿದಾಡುವ ಕಂದ ಮಹಿಪತಿಸ್ವಾಮಿ ನೋಡುವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ಇಂದು ದಯದಿ ಸಂದರ್ಶನವಿತ್ತೆಯಾ ಇಂದಿರಾಧವಾ ದೇವಾ ಪ ಸುಂದರಾಂಗ ರಂಗ ಮುಂದೆ ಬಂದುನಿಂದೆ ಬೆಳಕಿನೊಳ್ ನಭದೆ ಅ.ಪ ವಿಭವದಿರ ರಥದಿ ಹಿತದಿ ಶುಭದ ಶ್ರೀಭೂನೀಳಾಸಹಿತ ಆಭಯವ ನೀಯುತಾ ನಾಥಾ 1 ಭಕ್ತ ಬೃಂದ ಗೈವ ಸೇವೆಯಾ ಸಕ್ತಿಯಂ ಪಡೆದು ದೃಢದಿ ನಿತ್ಯಗಾರುಡ ಸೂರ್ಯಮಂಡಲ ಡೊಲೊತ್ಸವದಿ2 ಮುದಗೆರೆರಂಗ ವೊರಿದಗೆನಗೆ ಮಹಿಮೆತೋರುತಾ ನಿರುತ ಪೊರೆವುದು ಜಾಜೀನಾಥ 3
--------------
ಶಾಮಶರ್ಮರು
ಇಂದು ಧನ್ಯನಾ ಪ ಇಂದು ಧನ್ಯನ ಇಂದಿರೇಶನಾ| ಇಂದುವದನವ ಕಂಡೇನಾ| ಕಂದರೊಳಗುದ್ಧಂಡನಾ| ಬಂದು ಪಾಲ್ಬೆಣ್ಣೆ ಉಂಡನಾ 1 ಅರ್ನವೊಪಮ ವರ್ಣಕಾಯಸು| ವಾಹನ ಕರುಣನಾ| ನಿರ್ನಸುವರಣ ನಿಪುಣನಾ| ಸ್ವರ್ಣವಸನಾ ವಿರ್ಣನಾ 2 ಮಹಿಯ ಭಾರವನಿಳುಹಲೋಸುಗ|ದಯ| ಗೃಹದೊಳಗ ತಾಬೆಳೆದನಾ| ಇಹಪರ ಜನ ಹೊರೆದನಾ| ಮಹಿಪತಿಸುತ ವರದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಂದ ಕಂದ ಮುಕ್ಕುಂದನಾ| ಬಂದು ವದಗಿಹ ಬಹಳ ಪುಣ್ಯದಿ ಛಂದವಾಯಿತು ಚಲುವನಂಘ್ರಿಯ ಪ ಬಲಿಗೆ ಭೂಮಿಯ ಬೇಡಿ ಹೆಜ್ಜೆಯಾ| ಅಳತೆಯರಡಲಿ ಅಡಗಿಸಿ| ನಳಿನ ಜಾಂಡಕ ಸಖವ ಸೋಂಕಿಸಿ| ಸುರನದಿ ಪಡೆದ ನಂಘ್ರಿಯಾ 1 ಶಿಲೆಯು ಆಗಿರೆ ಶಾಪದಲಿ ಸೋಂ| ಕಲು ನಿಜಾಂಗದ ಕಾಣಿಸಿ| ನಲಿದು ಕಾಳೀಂದಿಯೊಳುರುಗನಾ| ತಲೆಯಳಾಟದಿ ತುಳಿದ ನಂಘ್ರಿಯಾ 2 ಮುನಿಜನ ಹೃದಯ ಮನೆಯ ದೀಪವು| ಯನಿಪ ಶ್ರೀದೇವಿ ಯರಸನಾ| ಮನದಿಗುರುವರ ಮಹಿಪತಿ ಪ್ರಭು| ನೆನೆವವರೊಳಗೆ ನೆಲೆಸಿಹನ ಪದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಮ್ಮ ಮನಿಲಿ ಬ್ರಹ್ಮಾನಂದ ಬಂದು ಭಾವ ಪೂರಿಸಿದ ಮುಕುಂದ ಧ್ರುವ ಎನ್ನಮನಕೆ ಮಾಡಿದ ಮನೋಹರ ಚೆನ್ನಾಗೊಲಿದು ದೋರಿದ ಸಹಕಾರ ಮನ್ನಿಸೆನಗೆ ಬೀರಿದ ನಿಜಸಾರ ಇನ್ನೊಬ್ಬರಿಗ್ಹೇಳುದಲ್ಲೀ ವಿಚಾರ 1 ದಯದಿಂದ ಪಿಡಿದು ಎನ್ನ ಕೈಯ ಶ್ರೇಯ ಸುಖ ನೀಡಿದ ಪ್ರಾಣಪ್ರಿಯ ತ್ರಯ ಗುಣಾತೀತದ ಸುಖಾಶ್ರಯ ತ್ರೈಲೋಕದೊಳೆನಗೆ ವಿಜಯ 2 ಕಣ್ಣು ಪಾರಣಗೈಸಿದೆನ್ನ ನೋಡಿ ಎನ್ನೊಳನುಭವಾಮೃತಸಾರ ನೀಡಿ ಚಿಣ್ಣಮಹಿಪತಿ ಕೈವಶಗೂಡಿ ಧನ್ಯಧನ್ಯಗೈಸಿದ ದಯಮಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮ ಮನಿಲ್ಯಾನಂದೋಬ್ರಹ್ಮಾ ತಂದೆ ಸದ್ಗುರು ದಯ ಏನೆಂದ್ಹೇಳಲಿ ಸಂಭ್ರಮ ಧ್ರುವ ಹರುಷ ತುಂಬೇದ ಬಹಳ ತೆರವಿಲ್ಲೆಳ್ಳಷ್ಟು ಸ್ಥಳ ಸಿರಿಯನಾಳ್ವ ದಯಾಳ ಹರಿ ಬಂದಾನೆ ಕೃಪಾಳ 1 ಸೂಸುತಲಿ ಸಂತೋಷ ಪಸರಿಸ್ಯದ ಉಲ್ಹಾಸ ಭಾಸುತಾನೆ ಸರ್ವೇಶ ಭಾಸ್ಕರ ಕೋಟಿ ಪ್ರಕಾಶ 2 ಪ್ರಾಣಕಾಗೇದ ಪ್ರಸ್ತ ಮನಕಾಗೇದ ತಾಂ ಸ್ವಸ್ತ ಸಅನುಭವದ ಸುವಸ್ತ ಖೂನಾಗಿ ಬಂದು ಸಾಭ್ಯಸ್ತ 3 ಹೇಳಲಿಕ್ಕಳವಲ್ಲ ಹೊಳವ ಸುಖದ ಸೊಲ್ಲ ತಿಳಿದ ಮಹಿಮೆ ಬಲ್ಲ ಸುಳವು ಸೂಕ್ಷ್ಮವೆಲ್ಲ 4 ಕರ್ತುತಾಂ ದಯಮಾಡಿ ಅರ್ತು ಬಂದೊಡಮೂಡಿಆರ್ಥಿಯಿಂದೆವೆ ನೋಡಿ ಬೆರ್ತು ಮಹಿಪತಿಕೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮ ಸಲಹಯ್ಯಾ ಸಿರಿರಮಣಾ| ದುರಿತ ನಿವಾರಿಸು ಪೂರ್ಣ| ಮಂದಮತಿಗಳಾ ನೋಡದೆವೆ ನ್ಯೂನಾ| ಛಂದದಿಂದ ಕೊಡು ನಿನ್ನ ಚರಣ ಧ್ಯಾನಾ ಪ ಹಿಂದ ವ್ಯಾಧನೊಬ್ಬ ಹರಿಣಿ ಹಿಡಿಯಲಿ| ನಿಂತು ಚತುರ್ವಿಧ ಬಲಿಯಾನೊಡ್ಡಿರಲಿ| ಮೃಗ ಮೊರೆಯಿಡಲಿ| ಬಂದು ಕರುಣಿಸಿ ರಕ್ಷಿಸಿದ ಪರಿಲಿ 1 ಬಸಿರೊಳಗಿದ್ದ ಪರೀಕ್ಷಿತಗೆಂದು| ಎಸೆಯಲು ಬಾಣಗಳ ದ್ರೋಣಿ ಮುಳಿದು| ಬಿಸಜಾಕ್ಷ ನಿನ್ನ ಚಕ್ರ ಮರೆವಿಡಿದು| ಪರಿ ಬಂದು 2 ದಿನ ವತ್ಸಲ ದಯಾನಿಧಿ ಎನುವಾ| ಖೂನದೋರಿಸಯ್ಯಾ ಬಿರುದಿನ ಅನುವಾ| ನಿನೇ ತಾಯಿ ತಂದೆ ಬಂಧು ಸಖದೈವ| ಘನಗುರು ಮಹಿಪತಿ ಸುಖ ಜೀವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಮ್ಮನಿಯಲಿ ಆನಂದ ಬಂದ ನೋಡಿ ಮುಕುಂದ ಗುರುಕೃಪೆಯಿಂದ ಧ್ರುವ ಸದಮಲ ಸುಖಕಲ್ಲೋಳ ಬೆಳಗುದೋರುತಲ್ಯದೆ ಬಹಳ ಹೇಳಲಳವಲ್ಲದು ಬಲುಸೂಕ್ಷ್ಮ ತಿಳಿದವ ತಾ ವಿರಳ ಇಳೆಯೊಳು ನಿಜ ಆನಂದವು ದೋರಿತು ಸ್ವಾನುಭವಕ ಸುಕಾಲ 1 ಮಾಯವಗಂಡು ಧನ್ಯಧನ್ಯಗೈಯಿತು ಜೀವನ ತಾ ಸನ್ಮತ ಸುಖಸವಿಗೊಂಡು ಪುಣ್ಯರಥ ಪರಿಣಾಮದಲನುದಿನ ಮನಬೆರೆಯಿತು ನೆಲೆಗೊಂಡು ಸ್ಮರಣಿಯ ಸವಿದುಂಡು 2 ಸದ್ಗುರು ಎನ್ನೊಡೆಯ ಚಂದವಾಯಿತು ಆನಂದದ ಸುಖವಿದು ಮಹಿಪತಿಗೆಡೆಯಡಿಯ ಸಂದಹರೆವ ಜನ್ಮ ಮರಣದ ಹೇಳಿದ ತಾ ನಿಜನುಡಿಯ ಹೊಂದಿ ಹರುಷಬಡುವಾನಂದವುದೋರುತಿದೆ ಸಿಲುಕಡಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು