ಸ್ಮಾರ್ತರು ನಾಮವ ಧರಿಸಿ ಯಥಾರ್ಥವು
ಹರಿನಾಮವ ಬಹಳ ವಿಸ್ತರಿಸಿ ಪ
ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ
ಚನ್ನಕೇಶವ ರಾಯನೆಂದೆಂಬ ನಾಮ
ಉನ್ನತವಾಗಿಹ ನಾರಾಯಣ ನಾಮ
ಮಾಧವ ನಾಮವ 1
ಅಂತರಂಗದಿ ಗೋವಿಂದನ ನಾಮವ
ಸಿರಿ ನಾಮವ
ಸಂತತ ಮಧುಸೂದನನೆಂಬ ನಾಮವ
ಪಂಥವಿಡಿದು ತ್ರಿವಿಕ್ರಮ ನಾಮವ 2
ಅನುದಿನ ವಾಮನ ನಾಮವ
ವನಜಾಕ್ಷ ಶ್ರೀಧರ ಗುಣ ನಾಮವ
ವಿನಯದಿ ಹೃಷಿಕೇಶನೆನುತಿಹ ನಾಮವ
ತನುವಾದ ಪದುಮನಾಭನ ನಾಮವ 3
ಅಂದದೊಳು ಧರಿಸಿರುವ ದಾಮೋದರ ನಾಮ
ಚಂದದಿ ವಾಸುದೇವನ ನಾಮವ
ಕುಂದದೆ ಸಂಕರ್ಷಣನೆಂಬ ನಾಮವ
ಬಂಧನ ಪರಿಹಾರ ಪ್ರದ್ಯುಮ್ನ ನಾಮವ 4
ಅರ್ಥಿಯಿಂದಲೆ ಅನಿರುದ್ಧನ ನಾಮವ
ಉತ್ತಮ ಪುರುಷೋತ್ತಮ ನಾಮವ
ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ
ಮೃತ್ಯುವು ಕಾಣದ ನರಹರಿ ನಾಮವ 5
ಅಚ್ಯುತ ನಾಮವ
ನಿಶ್ಚಯಿಸಿ ಜನಾರ್ದನ ನಾಮವ
ಬಚ್ಚಿಡಬೇಡ ಉಪೇಂದ್ರನ ನಾಮವ
ಸಿರಿ ನಾಮವ 6
ದುಷ್ಟನಿಗ್ರಹವಾದ ಕೃಷ್ಣನ ನಾಮವ
ಬೆಟ್ಟದ ವರಾಹತಿಮ್ಮಪ್ಪನ ನಾಮವ
ಅನುದಿನ ಘನ ನಾಮವ
ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ 7