ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನಸಾದಾತೂರ ಕಳವಳಗೊಳದಂತೇ ಪ ಮಾನವ ಕಾಡುವ ದುರಿತಾಗಳೋಡಿಸಿ ಸಲಹಲು 1 ನಿಷ್ಠೂರದಿಂದೆನಗೆ | ಕಷ್ಟಗೊಳಿಸದಂತೇ 2 ನಿತ್ಯಾ ಚಿತ್ತಕೆ ದುಃಖವೊತ್ತಿ ದೂಡುವರು 3 ಧ್ರಷ್ಟರಿಂದ್ಹದಿನೆಂಟು | ಕೆಟ್ಟಾ ದೋಷವ ತ್ಯಜಿಸಲ್ 4 ಎಂದೂ ರಕ್ಷಿಸೋ ಯೆನ್ನ | ತಂದೆ ಸದಾನಂದ 5
--------------
ಸದಾನಂದರು
ಮಾನಹೀನನಿಗೆ ಇಲ್ಲದ ಅಭಿಮಾನವ್ಯಾತಕೋ ನಾನೇ ಬ್ರಹ್ಮನೆನ್ವನ ಮುಖ ನೊಡ್ವದ್ಯಾತಕೋ ಪ ಹರಿಯೇ ಸರ್ವಪರಾ ಎನ್ನದವನ ಜ್ಞಾನವ್ಯಾತಕೋ ತಾರತಮ್ಯವರಿಯದವನಾಚಾರ್ಯವ್ಯಾತಕೋ 1 ಆಶೆಯನು ಬಿಡದವಗೆ ಸನ್ಯಾಸವ್ಯಾತಕೋ ಭಾಷೆ ಹೀನನಾದವನ ವಿಶ್ವಾಸವ್ಯಾತಕೋ 2 ವರದ ಶ್ರೀ ಹನುಮೇಶ ವಿಠಲ ಒಲಿವನ್ಯಾತಕೋ 3
--------------
ಹನುಮೇಶವಿಠಲ
ಮಾನಾಗ, ಉರಿಯು ಹೆಣ್ಣು ಹೈಕಳ ಕೂಡೆಶ್ರೀನಾಥ ನಿನಗೆ ಸಲ್ಲದು ಮಕ್ಕಳಾಟ ಪ ತರಳ ನೀನೆಮ್ಮ ಸೀರೆಗಳನೆತ್ತಿಕೊಂಡುತರುವನೇರುತ ಕಕ್ಕಳ ಕೆಳೆವೆತರುವಳಿತನ ಸಾಕು ನಿನ್ನ ಪೇರುರದಲಿತರುಣಿ ನಗುತಾಳೆ ಪೊಕ್ಕಾಟ ಸಾಕು 1 ಅರಸಿನ ಮಗನೆಂದು ತಾಳಿದೆವಲ್ಲದೆಸರಸಿಜಾಕ್ಷಿಯ ಮನೆಯ ಮಳಲಲ್ಲಿಸರಸದೊಳಿಹರೆ ನಿನ್ನಂಗದೊಳಿರ್ದಸುರರೋಡಬೇಕು ಸಲ್ಲದು ಮಕ್ಕಳಾಟ2 ಬೊಮ್ಮ ನಿನ್ನುದರದ ಜಗನಿನ್ನ ಅಂಗದೊಳಿದ್ದ ಸುರಮುನಿಗಳುನಿನ್ನನೆ ನಗುವರೊ ನೀನರಿಯದೆ ಎಮ್ಮಚೆನ್ನ ಹೆದ್ದಾಟ ಹೊಕ್ಕಾಟ ಸಾಕು 3 ಕಾಲ ಪೆಂಡೆಯುಹೊಸ ಹೊಸ ಚೆನ್ನಿಗ ಪರಿಹಾಸ ಸಾಕೋ4 ತುತಿಸಿ ತುತಿಸಿ ಕಾಣರು ಬ್ರಹ್ಮರುದ್ರರುಮತಿಗೊಳಗಾಗೆ ಮುನೀಶ್ವರರಶ್ರುತಿಗಳು ನಿನ್ನನು ಪುಡುಕಲರಿಯವು ಬಾಲಸತಿಯರೊಡನೆ ಖೇಳಮೇಳವೆ ಸಾಕು 5 ಸ್ನಾನಮಾಡಲೀಯೆ ಮೌನಗೌರಿಯನೋನಲೀಯದೆ ಮೌನವ ಕೆಡೆಸಿಧ್ಯಾನ ಮಾಡಲೀಯೆ, ನಿನ್ನ ಚೆನ್ನಿಗರುಹಾನಿ ನೀಗುವರು ಎಂಬುದರಿಯೆವೊ 6 ಚೆಲುವರರಸ ಶಿಖರ ಶಿಖಾಮಣಿಯೆಲಲನೆಯರ ಮನ ಸೂರೆಗಾರಫಲಿಸಿತು ವ್ರತ ನಮ್ಮ ಕೃಷ್ಣ ನಿನ್ನೊಲುಮೆಯಬಲೆಗೆ ಸಿಕ್ಕದರಾರೊ ಸೊಬಗು ಸುಗ್ಗುಳಿಯೇ7
--------------
ವ್ಯಾಸರಾಯರು
ಮಾನಿನಿ ಕರೆದ ಪ ನನ್ನ ಕರೆವ ನೋಡೆ ನಿನ್ನ ಕರೆವ ನೋಡೆಅನ್ಯ ಗೋಪಿಯರನೆಲ್ಲ ಕರೆಯುತಾನೆಮನ್ಮಥನಂಘ್ರಿ ಇನ್ನು ಬಿಟ್ಟಿರಲಾರೆಸನ್ನುತಾಂಗಿಯರೆಲ್ಲ ಸಾಗಿ ಬನ್ನಿ 1 ವೇಣುಸ್ವರವು ತಮ್ಮ ಮಾನಸದೊಳು ತುಂಬಿಕಾನ ಮೇಲೆ ಮಾಡಿ ಕೇಳುತಾವಖಾನ ಪುಲ್ಲನೆ ಬಿಟ್ಟುವ ವೃಂದಗೋಷ್ಟದಿ ನಿಂತುಸ್ಥಾನದೊಳಗೆ ಕಣ್ಣಿ ಕೀಳುತಾವ 2 ಇಂದು ಪಿಡಿದು ಪೋಗಿಆನಂದವಾಲನ ಮುಖ ಕಾಂಬೋಣಮ್ಮಾಆನಂದವಾಲನ ಮುಖ ನೋಡೋಣಮ್ಮಾ 3
--------------
ಇಂದಿರೇಶರು
ಮಾನಿನಿ ಕಾಂತೆ ಪ. ಕಾಂತ ಕೃಷ್ಣರಾಯ ನಮಗೆ ಚಿಂತಾಮಣಿಯಂತೆ ಕೊಡುವ ಚಿಂತಾಮಣಿಯಂತೆ ಅನಂತ ಸುಖವಿತ್ತುಭಕ್ತರ ಸಂತೈಸುವನಂತೆ1 ಅಕ್ಷಯ ಸುಖವಿತ್ತು ಭಕ್ತರ ಸಂತೈಸುವನಂತೆ2 ಮುಂದು ಸಂಚಿತಗಾಮಿಯುಹಿಂದಾದುವಂತೆನಮಗೆ ಹಿಂದಾದುವಂತೆ ತಂದೆ ರಾಮೇಶನ ಪಾದಕ್ಕೆ ಹೊಂದಿವೆÉಯಂತೆ3
--------------
ಗಲಗಲಿಅವ್ವನವರು
ಮಾನಿನಿ ಕಾಂತೆ ಶ್ರೀನಿವಾಸ ನಡೆದ ಕಾಮಧೇನುವಿನಂತೆ ಪ. ಲಕ್ಷುಮಿ ರಮಣ ನಮಗೆ ಕಲ್ಪವೃಕ್ಷತಾನಂತೆಅಕ್ಷಯ ಸುಖವಿತ್ತು ಭಕ್ತರ ರಕ್ಷಿಪೋನಂತೆ1 ಕಾಂತೆ ಕೃಷ್ಣರಾಯ ನಮಗೆ ಚಿಂತಾಮಣಿಯಂತೆಅನಂತ ಸುಖವ ವಿತ್ತು ಭಕ್ತರ ಸಂತೈಸುವನಂತೆ2 ಇಂದು ಸಂಚಿತಾಗಾಮಿಯು ಹಿಂದಾದುವಂತೆ ತಂದೆ ರಾಮೇಶನ ಪಾದಕೆ ಹೊಂದಿವೆಯಂತೆ 3
--------------
ಗಲಗಲಿಅವ್ವನವರು
ಮಾನಿನಿ ಬಲು ನುಡಿಯೋದುಚಿತವೆಭಲಾ ಭಲಾ ಎನಿಸು ಅನುಗಾಲ ಪ. ಬಂದ ಜನರು ಬಲು ಚಂದಾಗಿ ಕುಳಿತಿಹರು ಚಂದಿರವದನೆ ಸುಭದ್ರಾಚಂದಿರವದನೆ ಸುಭದ್ರಾ ನಿನ್ನ ಮುಖಕುಂದಿತಾಕೆಂದು ಕಮಲಾಕ್ಷ 1 ಬಲ್ಲೆ ಭಾಷೆ ನಿನ್ನ ಕ್ಷುಲ್ಲತನದ ಬುದ್ಧಿಮಲ್ಲಿಗೆಯಂಥ ಸುಕುಮಾರಿಮಲ್ಲಿಗೆಯಂಥ ಸುಕುಮಾರಿ ಗರತಿಗೆ ಹೊಲ್ಲ ಮಾತುಗಳ ನುಡಿಯೋರೆ2 ಮಾನುಳ್ಳ ಮಗಳಿಗೆ ನಾನಾ ಮಾತುಗಳಂದಿ ಏನೆಂಬೋರಿದಕೆ ಜನರೆಲ್ಲಏನೆಂಬೋರಿದಕೆ ಜನರೆಲ್ಲ ಸತ್ಯಭಾವೆಮಾನಾಪಮಾನ ನಿನಗಿಲ್ಲ3 ಮದ್ಗುಣಕಿ ಹೂವು ಉದ್ದಾದರೇನ ಮುದ್ದು ಮಲ್ಲಿಗೆಯ ಸರಿಯೇನ ಮುದ್ದು ಮಲ್ಲಿಗೆಯ ಸರಿಯೇನ ಭಾವೆ ಸುಭದ್ರಾಗೆ ನೀನು ಸರಿಯೇನ 4 ತಂಗಿಗಾಡಿದ ಮಾತು ರಂಗರಾಮೇಶ ಕೇಳಿಬಂಗಾರದಂಥ ಗುಣನಿಧಿಬಂಗಾರದಂಥ ಗುಣನಿಧಿ ಸುಭದ್ರೆಗೆವ್ಯಂಗ್ಯ ಮಾತುಗಳ ನುಡಿವೋರೆ5
--------------
ಗಲಗಲಿಅವ್ವನವರು
ಮಾನಿನಿ ರನ್ನೆ ತಾನ್ಯಾಕೆ ಬಾರನುನೀನೆ ವಿಚಾರಿಸು ಇಬ್ಬರ ನ್ಯಾಯವ ಪ ಮಗಳಿಗೆ ಮಗಳಾದ ಮಗಳಿಗಳಿಯನಾದಮಗಳ ಗಂಡಗೆ ಭಾವ ಮಾವನಾದುದ ಕೇಳಿನಾ ನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ 1 ವೈರಿಗೆ ವೈರಿಯಾದೆ ವೈರಿಗೆ ಸುತನಾದೆವೈರಿ ಗಂಡಗೆ ತನ್ನ ಮಗಳ ಕೊಟ್ಟುದ ಕೇಳಿನಾ ನಿನ್ನ ಪಾದಕೆ ಬಂದೆ ಶ್ರೀಹರಿಯೆ 2 ಆನಿ ಬಿದ್ದರ ತನ್ನ ಗ್ಯಾನದಿಂದೇಳುವುದುಏನು ಮಾಡಿದರು ಅದರ ಭಾವ ಹಿಂಗದುಜ್ಞಾನವಂತ ಕಾಗಿನೆಲೆಯಾದಿಕೇಶವರಾಯ ಮುನಿದು ಪೋದನೆ 3
--------------
ಕನಕದಾಸ
ಮಾನಿನಿ ಆ ಮಹಾಭಕುತಿಗಭಿಮಾನಿ ಪ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ 1 ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ ಮೂಗುತಿಸರಿಗೆ ಸಲೆ ಭುಜಕೀರ್ತಿ ಪೆಟ್ಟಿಗೆ ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ ವಳಿ ತಾಯಿತು ಸರಪಳಿಯ ಪದಕ ಪ್ರ ವಳ ಮುತ್ತಿನ ಸರಪಳಿಗಳು ತೊಗಲು ಎಳೆ ಅರುಣನ ಪೋಲುವ ಕರತಳವ 2 ಕಡಗ ಕಂಕಣ ಮಣಿದೋರೆ-ದೋಷ ವಿದೂರೆ ಝಡಿತದುಂಗುರ ಶೃಂಗಾರೆ ಮುಡಿದ ಮಲ್ಲಿಗೆ ವಿಸ್ತಾರೆ-ಕಂಚುಕಧರೆ ಉಡಿಗೆ ಶ್ವೇತಾಂಬರ ನೀರೆ ಬಡ ನಡು ಕಿಂಕಿಣಿ ನಿಡುತೋಳ್ಕದಳಿಯ ಪೊಡವಿಗೊಡೆಯ ನಮ್ಮ ವಿಜಯವಿಠ್ಠಲನ್ನ ಅಡಿಗಳರ್ಚಿಪುದಕೆ ದೃಢಮನ ಕೊಡುವಳ 3
--------------
ವಿಜಯದಾಸ
ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಪ ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ | ಮೇದಿನಿ ತಿರುಗಿ ಬರುತಲಿ ಇತ್ತಲು | ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ | ಮಣಿ ಮುಕ್ತಿ ತೀರದಲಿ1 ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ | ಬಿಸಿಜದಳ ಲೋಚನೆ ಲಕುಮಿಯಿಲ್ಲೀ || ಎಸೆವ ಮಂಜರಿ ವೃಕ್ಷದಲಿ ವಾಸವಾಗಿ | ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು 2 ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ ಪರಮ ಗತಿ ಕೊಡು ಎಂದು ಸ್ತುತಿಸಿದನು ಹರಿಯ3 ಇಲ್ಲಿಗೆ ಬಂದು ಸತ್ಕರ್ಮವನು ಮಾಡಿದಡೆ | ಎಲ್ಲ ಕ್ಷೇತ್ರದಲಿ ಮಾಡಿದ ಫಲಕಿಂತ | ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ | ದುಣಿಸುವುದು | ಎಲ್ಲೆಲ್ಲಿ ಇದ್ದರು ಸ್ಮರಣೆ ಮಾಡಿರೊ ಜನರು 4 ಸುಗಂಧ ಪರ್ವತವಾಸ ಪುರುಷೋತ್ತಮ | ನಿಗಮಾದಿಗಳಿಗೆ ಅತಿದೂರತರನೋ | ಸುಗುಣನಿಧಿ ವಿಜಯವಿಠ್ಠಲರೇಯ ಸರ್ವದ | ಗಗನದಲಿ ಪೊಳೆವನು ಬ್ರಹ್ಮಾದಿಗಳ ಸಹಿತಾ 5
--------------
ವಿಜಯದಾಸ
ಮಾಮನೋಹರಾ ಮುರಾರಿ ಬಾರೋ ಪ ಕರಿವರದಾಯಕ ಮರಚಮುಸ್ಥಾಪನ | ಶರಣಾಗತ ಸಹಕಾರಿ ಬಾರೋ | ಸರಸಿಜಾಸನ ವಂದಿತಾಂಘ್ರಿ | ದುರಿ | ತಾಚಲ ವಜ್ರಧಾರಿ ಬಾರೋ 1 ಮನೋಜನಿತ ಜನಕರವಿಂದ ಲೋಚನ | ಮುನಿಜನ ಹೃದಯ ವಿಹಾರಿ ಬಾರೊ| ಘನಮಹಿಮ ಸುದಾಮ ರಕ್ಷಕಕ | ದನುಜಾವಳಿ ಮದಹಾರಿ ಬಾರೋ 2 ಕಾಲ ಪಯೋಧರ | ಮಂದರೋದ್ಧಾರಿ ಬಾರೋ | ನಂದನಾತ್ಮಜ ದೇವ ಮಹಿಪತಿ | ನಂದನ ಪ್ರಭು ಉದಾರಿ ಬಾರೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಮವ ಮಮ ಕುಲಸ್ವಾಮಿ ಗುಹ ನತಜನ ದುರಿತಾಪಹ ಪ. ಭೀಮವೀರ್ಯ ನಿಸ್ಸೀಮಪರಾಕ್ರಮ ಧೀಮತಾಂವರ ನಿರಾಮಯ ಜಯ ಜಯಅ.ಪ. ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನ ಪಾವನ್ನ ಮೀನಕೇತನಸಮಾನ ಸಹಜ ಲಾವಣ್ಯ ಗಾನಲೋಲ ಕರುಣಾನಿಧಿ ಸುಮನಸ- ಸೇನಾನಾಥ ಭಾವನಿಸುತ ಸುಹಿತ1 ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯ ನಿಟಿಲಾಕ್ಷತನಯ ನಿಗಮಜ್ಞ ಬಾಹುಲೇಯ ಕುಟಿಲ ಹೃದಯ ಖಲಪಟಲವಿದಾರಣ ತಟಿತ್ಸಹಸ್ರೋತ್ಕಟರುಚಿರ ಮಕುಟ2 ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶ ದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸ ಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಮವ ಮೃಗರಿಪು ಗಿರಿರಮಣ ಮಹಿತಗುಣಾಭರಣ ಪ ಕಾಮಕಲುಷಭವಭೀಮ ಜಲಧಿಗತ ತಾಮಸಾತ್ಮಕಂ ದುರಿತಮಹಿ ಅ.ಪ. ನೀಲಜಲದ ಮದಹೇಳನ ಸುಭಗಶರೀರ ಕುಂದಕುಟ್ಮಲ ಸಮಾನ ಶುಭರದನ 1 ವತ್ಸಲಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸಾಮಗಾರತ ಸತತಶುಭ ಚರಿತ 2 ಸಂತತಾರ್ತಾದರಚಕ್ರ ವಿಬುಧಗೇಯ ಪಾರಿಜಾತ ದುರಿತಾರಿ ವರದನುತ 3
--------------
ವೆಂಕಟವರದಾರ್ಯರು
ಮಾಮವ ಮೃಗರಿಪು ಗಿರಿರಮಣ-ಮಹಿತ ಗುಣಾಭರಣಪ ಕಾಮ ಕಲುಷಭವ ಭೀಮಜಲಧಿಗತ ತಾಮಸಾತ್ಮಕಂ ದುರಿತಚರಿತ ಮಹಿ ಮಾಮ ಅ.ಪ. ನಿಟಿಲನಯನ ಮಕುಟ ಲಸಿತ ವದನ ನೀರಾ-ಪೂರಾ ನೀಲ ಜಲದ ಮದಹೇಳನ ಸುಭಗಶರೀರ ಕುಂದ ಕುಟ್ಮಲ ಸಮಾನ ಶುಭರದನ 1 ವದನ ವಿಜಿತ ಶರದಮೃತಕಿರಣ ಸುಕುಮಾರಾಕಾರಾ ವತ್ಸಲ ಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸದಯ ಹೃದಯ ಪರಿತೋಷಿತ ನತಜನ ಸಾಮಗಾನರತ ಶುಭ ಚರಿತ||ಮಾಮವ|| 2 ಕಮಲ ಸಂತತಾರ್ತಾದರ ಚಕ್ರ ವಿಬುಧಗೇಯ ಪ್ರಕಟ ಮಹಿಮ ಮಾಂಡವ್ಯ ಮನೋರಥ ಪಾರಿಜಾತ ದುರಿತಾರಿ ವರದನುತ ||ಮಾಮವ|| 3
--------------
ಸರಗೂರು ವೆಂಕಟವರದಾರ್ಯರು
ಮಾಮವತು ಶ್ರೀ ರಮಾಪತೇ | ರಘುಪತೇ ಸೀತಾಪತೇ ಪ ಭೀಮಪರಾಕ್ರಮ ದನುಜಾರಾತೇ | ಕಾಮಿತಾರ್ಥದಾಯಕ ನಮೋಸ್ತುತೇ ಅ.ಪ ಜನಕ ನೃಪಾತ್ಮಜಾಯುತ ಸುರ ಭೂಜಾ | ಇನಶಶಿತೇಜ ನಯನಸರೋಜ | ವಿನಮಿತ ಶುಂಭ ವಿನತಸುತಾಧ್ವಜ | ಮುನಿಪ ಸಮಾಜ ರೂಪ ಮನೋಜ ||1 ವಾನರಪತಿ ಸಂಸೇವಿತ ಚರಣಾ | ದಾನವವೈರಿ ವಿಭೀಷಣ ಕರುಣಾ | ದೀನಜನಾಶ್ರಯ ಪಾವನಚರಣಾ ಶ್ರೀನುತ ಮಾಂಗಿರಿ ವೆಂಕಟರಮಣಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್