ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾವ ಸಂಭ್ರಮವಿದೇ ವಾರಿಜ ವದನೆ ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ ದೇವ ದೇವನು ನಿನ್ನ ಪೂಜೆಗೊಪ್ಪಿದನೇ ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ ಗಾನ ನೃತ್ಯಗಳಿಂದ ಒಲಿಸಿದೆಯೇನೇ ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ ಸಾನುರಾಗದಿ ಪೂಜೆ ಮಾಡಿದೆಯೇನೇ ನಾನೇನಗೈದರೆ ಅವನೊಲಿಯುವನೇ1 ಪರಿಮಳ ಗಂಧಕೆ ಮೈ ತೋರುವನೇ ಕೊರಳಿಗೆ ಹಾರವ ನೀಡಲೊಪ್ಪುವನೇ ಮುರಳಿಯ ಗಾನವನೊಲಿದು ಕೇಳುವನೇ ಪರಮಪುರುಷ ಬಾರೆಂದರೆ ಬಹನೇ 2 ಕರಗಳ ಮುಗಿದರೆ ಕರುಣಿಪನೇನೇ ಚರಣಕೆ ಮಣಿದರೆ ಒಲಿಯುವನೇನೇ ಪರಿಪರಿ ಹೊಗಳಲು ನಲಿಯುವನೇನೇ ವರದ ಮಾಂಗಿರಿರಂಗ ದಯೆ ತೋರನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾವ ಸುಖ ಇದು ದಾವ ಸುಖ ಮನುಜ ಶರೀರದ್ದು ಪ ನೋಯುತಲಿರುವುದು ಅ.ಪ ಕೊಂಡ ದಾವ ಸುಖ ಇದು ಹೇಯವಾಲದ ಭಾಂಡದ್ದಾವ ಸುಖ ಕಾಯವೆನಿಸಿಕೊಂಡು ಸಾವುಕುಣಿಗೆ ಬಿದ್ದು ಮಾಯವಾಗುತಲಿಹ್ಯದಾವ ಸುಖ 1 ಜಡಮತಿಶರೀರದ್ದು ದಾವ ಸುಖ ಇದು ಕೆಡುವ ತನುವು ನಿಜ ದಾವ ಸುಖ ಬುಡವು ಮೇಲಾಗಾಡಿ ಕಡೆಗೆ ಒಂದುದಿನ ಮಡಿದು ಹೋಗುವುದುದಾವ ಸುಖ 2 ನೇಮವಲ್ಲೊಂದಿನ ದಾವ ಸುಖ ಕಾಮಿತವನು ನೀಗಿ ಸ್ವಾಮಿ ಶ್ರೀರಾಮನ ಪ್ರೇಮ ಸಂಪಾದಿಸಲಾಗ ಸುಖ 3
--------------
ರಾಮದಾಸರು
ಯಾವ ಹೆಸರಿನಿಂದೆ ಕರೆದರೇನುಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನುಪ ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು 1 ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ 2 ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು 3 ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ವೀರನಾರಾಯಣನುಮುದದಿಂದ ಸಲಹುವನು ಸಂದೇಹವೇನು 4
--------------
ವೀರನಾರಾಯಣ
ಯೆಂತು ವರ್ಣಿಸಲಮ್ಮ ಈ ಗುರುಗಳ | ಯಂತ್ರೋದ್ಧಾರ ನಾಗಿ | ಇಂತು ಮೆರೆವ ಯತಿಯಾ ಪ ಕೋತಿ ರೂಪದಿ ಬಂದು | ಭೂತಳಕ್ಕೆ ಬೆಡಗು ತೋರಿ || ಈ ತುಂಗ ಭದ್ರೆಯಲಿ | ಖ್ಯಾತನಾಗಿಪ್ಪ ಯತಿಯೊ 1 ಸುತ್ತು ವಾನರ ಬಂಧ | ಮತ್ತೆ ಮಲೆಯಾಕಾರ || ಮಧ್ಯ ಚಿತ್ರಕೋಣ ಅದರೊಳು | ನಿತ್ಯದಲಿ ಮೆರೆವಾ ಯತಿಯಾ 2 ವ್ಯಾಸರಾಯರಿಂದ ಬಂದು | ಈ ಶಿಲೆಯಾಳು ನಿಂತು ||ಶ್ರೀಶ ವಿಜಯವಿಠ್ಠಲನ್ನ | ಯೇಸು ಬಗೆ ವರ್ಣಿಪೆ ಯತಿಯಾ3
--------------
ವಿಜಯದಾಸ
ಯೆಂದಿಗಾಹುದೋ ನಿನ್ನ ದರುಶನಾ | ಇಂದಿರೇಶ ಮುಕುಂದ ಕೇಶವಾ ಪ ಗಾನಲೋಲನೇ ದೀನ ವತ್ಸಲಾ || ಮಾನದಿಂದಲೀ ನೀನೆ ಪಾಲಿಸೋ 1 ಯಾರಿಗೆ ಮೊರೆಯಿಡುವೆ ಶ್ರೀ ಹರೀ || ಸಾರಿ ಬಂದು ನೀ ಈಗಲೇ ಪೊರೀ 2 ಗಜವ ಪಾಲಿಸೋ ಗರುವದಿಂದಲೀ || ಭುಜಗಶಯನ ಶ್ರೀ ವಿಜಯವಿಠಲಾ3
--------------
ವಿಜಯದಾಸ
ಯೆಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ ಪ ಮುಂದೆ ಹೋಗಲು ಬಂಧಮಾಡುತ ಕುಂದು ಅಳಿಯುತ ತಂದೆ ದಯೆತೊರಿ ಅ.ಪ ಮಂದ ನಾನಯ್ಯ ಕಂದಿ ಕುಂದಿದೆ ಭವದಿ ಕೇಳಯ್ಯ ಬಂಧು ಬಳಗವು ಯಾರು ಇಲ್ಲಯ್ಯ ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ ಅಂದು ಸಭೆಯೊಳು ಮಂದಗಮನೆಯ ಒಂದು ನೊಡದೆ ಬಂದು ಸಲಹಿದ ಸಿಂಧು ಶಯನಾನಂದ ಮೂರುತಿ ನಂದನಂದನ ಶ್ಯಾಮಸುಂದರ ಬಂಧು ಸರ್ವರ ಬಂಧಮೋಚಕ ಮಂದರಾದ್ರಿ ಧರನೆ ಯದುಕುಲ ಚಂದ್ರ ಶೋಭಾಸಾಂದ್ರ ಕೃಷ್ಣನೆ ಬಂದು ಚಂದದಿ ಸಲಹಿ ಎನ್ನನು 1 ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ ಮೇಲೆ ಯೌವನ ಒಡನೆ ಬಂತಲ್ಲಿ ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ ಕಾಲಕಳೆದೆನು ಪಗಡೆ ಜೂಜಿನಲಿ ಮಲ್ಲಮರ್ದನ ಮಾತುಲಾಂತಕ ಚಲ್ವಸೂಕರ ಪುಲ್ಲಲೊಚನ ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ ಸಾರ ಶ್ರೀ ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ ಬುದ್ಧ ಕಲ್ಕಿಯೆ ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ2 ಮೂರು ತಾಪವ ಹರಿಪ ಬಗೆಯೇನೋ ವೈರಿ ಆರರ ಭರದಿ ತರಿ ನೀನೂ ಮೂರು ಋಣಗಳು ಉಳಿಯೆಗತಿಯೇನು ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು ಸಾರಸಜ್ಜನ ಪ್ರಾಪ್ಯ ಶುಭಗುಣ ಸಾರ ಕರುಣಾ ಪೂರ್ಣವಾರಿಧಿ ಮಾರಜನಕನೇ ಋಷಭಮಹಿದಾಸ ತೋರು ಜ್ಞಾನವ ಬಾದರಾಯಣ ಮೀರಲಾರೆನು ವಿಷಯವಾಸನೆ ಭಾರತೀಶನ ಒಡೆಯ ಕೃಷ್ಣನೆ ಭಾರ ನಿನ್ನದು ಎನ್ನ ಪೊರೆವದು ಮತ್ಸ್ಯ ವಾಮನ ಧೀರ ಧೃವನಾ ಪೊರೆದ ವರದನೆ ಬೀರಿ ಭಕ್ತಿ ಜ್ಞಾನ ವೈರಾಗ್ಯ 3 ಎನ್ನ ಯೋಗ್ಯತೆ ನೋಡಿ ಫಲವೇನು ನಿನ್ನ ಘನತೆ ತೋರಿ ಪೊರೆ ನೀನು ನಿನ್ನ ದಾಸನ ಮಾಡು ಎನ್ನನ್ನು ಅನ್ಯಹಾದಿಯ ಕಾಣೆ ನಾ ನಿನ್ನು ಬೆನ್ನು ಬಿದ್ದೆನು ಇನ್ನೂಮುನ್ನೂ ಮಾಧವ ವಿಶ್ವ ತೈಜಸ ಪ್ರಾಜ್ಞತುರಿಯ ಹಂಸ ವಿಷ್ಣುವೇ ಜ್ಞಾನ ಭೋಧಕ ಸನತ್ಕುಮಾರನೇ ಮೌನಿ ದತ್ತಾತ್ರೇಯ ಹಯಮುಖ ದೀನವತ್ಸಲ ಯಜ್ಞ ಧನ್ವಂತ್ರಿ ಶ್ರೀನಿವಾಸ ರಾಮ ಕಪಿಲನೆ ಜ್ಞಾನ ನಿಧಿ ಮುನಿ ನಾರಾಯಣನೆ ನೀನೆ ಅನಿರುದ್ಧಾದಿ ರೂಪನು ಧ್ಯಾನಗೊಚರ ಶಿಂಶುಮಾರನೆ ಸಾನುಕೂಲದಿ ನೀನೆ ವಲಿಯುತ ಕರ್ಮ ಸಂಚಯ4 ಆದಪೊದ ಮಾತು ಏಕ್ಕಯ್ಯ ಮಧ್ವರಾಯರ ಪ್ರೀಯ ಶೃತಿಗೇಯ ಮೋದದಾಯಕ ಮುಂದೆ ಸಲಹೈಯ್ಯ ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ ತಿದ್ದಿ ಮನವನು ಕದ್ದು ಅಘವನು ಒದ್ದು ಲಿಂಗವ ಶುದ್ಧಜ್ಞಾನದ ಸಾಧು ಜಯಮುನಿ ವಾಯುವಂತರ ಮಾಧವ ಶ್ರೀ ಕೃಷ್ಣವಿಠಲನೆ ಪಾದ ಮಧುಪರ ವೃಂದ ಮಧ್ಯದಿ ವೇದ ಸಮ್ಮತ ಗಾನ ಸುಧೆಯನು ಶುದ್ಧಭಕ್ತಿ ಜ್ಞಾನದೊಡಗೂಡಿ ಮೆದ್ದು ಪಾಡುತ ಕುಣಿವ ಭಾಗ್ಯವ ಮುದ್ದು ಕೃಷ್ಣನೆ ನೀನೆ ಎನಗಿತ್ತು 5
--------------
ಕೃಷ್ಣವಿಠಲದಾಸರು
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ 2 ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ ಕ್ಷಣದೊಳಗೆ ಪೋದಂತೆ ಕಾಣಿಸುವದು || ಘನ ಪಾಷಾಣಗಳು ತೃಣ ಸಮವು ಯೆನಿಸುವವು ವನಜಾಕ್ಷನ ಕೃಪೆಯ ಪಡದ ದಾಸರಿಗೆ 3 ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು | ಪದೇ ಪದೆಗೆ ರೋಗಗಳು ಬೆನ್ನಟ್ಟವು || ಉದಯಾಸ್ತಮಾನವೆಂಬೋ ಭಯವು ಸುಳಿಯದು | ಪದುಮನಾಭನ ಕೃಪೆಯ ಪಡೆದ ದಾಸರಿಗೆ4 ಬಾರವು ಭಯಗಳು ಬಂದರು ನಿಲ್ಲವು | ಹಾರಿ ಹೋಗುವವು ದಶದಿಶಗಳಿಗೆ || ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ | ಸೇರಿದಾ ಜನರಿಗೆ ಇನಿತಾಹುದುಂಟೇ 5
--------------
ವಿಜಯದಾಸ
ಯೇಕೋದೇವ ಶ್ರೀ ವೆಂಕಟನಾಯಕ ಯಾದವ ಕುಲ ತಿಲಕ ಸುಜನ ಮಂದಾರ ಅನೇಕದಿವ್ಯರೂಪ ಪ. ವನರುಹದಳಲೋಚನ ಮುನಿಸುತ ವೈಕುಂಠ ನಿವಾಸ ಕನಕಕೌಸ್ತುಭಮಣಿ ಭೂಷಾ ಕಂಬುಗದಾಬ್ಜದಳ ದಿನಕರ ಕೋಟಿ ಪ್ರಕಾಶ ದಯಾಂಬುಧಿ ದೀನಜನೋದ್ದಾರ ಬಿಡಿಸೊ ನೀ ಎನ್ನ 1 ರಮಣಿಯ ಪಂಕಜದಳನೇತ್ರಿಯ ವಿಮಲ ಕುಚಾಗ್ರದಿ ಸತಿಯನು ಹಿಂಸಿಸಿ ಅಮರವಂದಿತ ಶ್ರಿತಜನ ರಕ್ಷಕ ಸಮರವಿಕ್ರಮ ಸಕಲಾಗಮಸುತ್ತ್ಯಾ ಸಾಮಗಾನ ಲೋಲ 2 ಸನ್ನುತ ಶಾಶ್ವತ ಗುಣಭಾಸ ಪರಮ ಪುರುಷಹರಿವಾಕ್ಕುಠಾರ ಪುರಾಣ ಪುರುಷದೇವ ದುರಿತಭಂಜನ ದಶರಥ ಸುಕುಮಾರ ಧಾರುಣಿಧರರಾಮ ಕರಿದೇಹ ವಿಮೋಚನ ಹೆಳವನಕಟ್ಟೆ ವೆಂಕಟರಮಣ 3
--------------
ಹೆಳವನಕಟ್ಟೆ ಗಿರಿಯಮ್ಮ
ಯೇಸು ಧನ್ಯನೊ ಹರ ತಾನೇಸು ಧನ್ಯನೊ ವಾಸವಾದಿ ಸುರರಿಗಿಂತ ಕೇಶವನ ಕರುಣ ಪಾತ್ರ ಪ. ವೇದವಿನುತನಮಲ ಪದ್ಮ ಪಾದ ಮೋದಿಸ್ವರ್ಧುನಿಯ ಸಾದರದಿ ಶಿರದಿ ಧರಿಸಿ ಮೋದ ಬಡುವ ಮುಕ್ಕಣ್ಣಾ 1 ಶ್ರೀಶನನ್ನು ಭಜಿಪ ಮುಖ್ಯ ದಾಸತಾನೆಂದರಿಯಿರೆಂದು ಹಾಸಿಕೆಯ ಹೆಗಲ ಮೇಲೆ ಭೂಷಣಗೊಂಡಮಿತ ಮಹಿಮ 2 ಅಂಹೊಮೋಪಾಹನರ ಸಿಂಹನನ್ನು ಹೃದಯಕಮಲ ಸಿಂಹಾಸನದೊಳಿರಿಸಿ ದಿವ್ಯ ಜಿಂಹ್ಮೆಯಿದ್ದನವಗೈವ 3 ಘೋರ ಸಂಸಾರಾಬ್ಧಿ ಭಯ ತಾರಕವಾಗಿರುವ ರಾಮ ತಾರಕ ಮಂತ್ರೋಪದೇಶ ತಾರಕ ರಘುವಾರ ದೇವ 4 ಪಂಕಜಾಕ್ಷ ಪರಮ ಕರುಣಿ ವೆಂಕಟಾದ್ರಿವಾಸ ಹರಿಯಾ ಕಿಂಕರ ಭಕ್ತಿ ಜನರಾ ತಂಕವಾರಾ ಶಂಕರ 5
--------------
ತುಪಾಕಿ ವೆಂಕಟರಮಣಾಚಾರ್ಯ
ಯೋಗದರ್ಶನ ಎಂತುಗೂಡುವದೊ ನಿಜ ಹರಿಯೆ ಧ್ರುವ ನಿದ್ರ್ವಂದ್ವದಲಿದ್ದ ಒಂದೆ ವಸ್ತುವೆ ನೀನು ದ್ವಂದ್ವಾಭೇದದ ಸಂದೇಹಿ ನಾನು ಅಂದಿಗಿಂದಿಗೆ ಪೂರ್ಣ ಎಂದೆಂದಿಗೆ ನೀನು ಹೊಂದಲರಿಯದಾ ತಿಮಿರಾಂಧ ನಾನು ಹರಿ 1 ನಿಃಪ್ರಪಂಚದ ನಿರ್ಮಳ ನಿರ್ಗುಣನು ನೀನು ಪ್ರಾಪಂಚಿಕ ಪರಮ ನಾನು ಕೃಪೆಯುಳ್ಳ ಕರುಣಾಕಾರ ಪರಿಪೂರ್ಣ ನೀನು ಕಪಟ ಕುಟಿಲಲಿಹ ಪ್ರಾಣಿ ನಾನು ಹರಿ 2 ಮಹಿಗೆ ಪತಿಯಾದ ಸ್ವಾಮಿ ಶ್ರೀಪತಿ ನೀನು ಸೋಹ್ಯ ತಿಳಿಯದಾ ಮಂದಮತಿ ನಾನು ಸಾಹ್ಯ ಮಾಡುವ ಸಹಕಾರ ಸದ್ಗತಿ ನೀನು ಮಹಾಮಹಿಮೆಯುಳ್ಳ ಮೂರುತಿ ನೀನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯೋಗನಿದ್ರೆಯ ಮಾಡುತಿಹನು ಕ್ಷೀರಸಾಗರಮಧ್ಯದಿ ಭೋಗಿಶಯನನು ಪಏಳು ಸುತ್ತಿನ ಪುರವಿದನೂ ಎಂಟುಪಾಲಾಗಿ ರಮಣಿ ತಾ ಕಾದಿರಲದನುಬಾಲಕನೊಬ್ಬ ಪಾಲಿಪನೂ ಮಂತ್ರಿನಾಲುವರೊಪ್ಪಿರೆ ಶ್ರೀಹರಿ ತಾನು 1ಕಾಲಜ್ಞಾನಿಗಳೈವರಿಹರೂ ಅವರೂಳಿಗಕೈವರು ಕಾದುಕೊಂಡಿಹರುವೇಳೆ ವೇಳೆಯ ಬಲ್ಲ ಭಟರು ತಮ್ಮಊಳಿಗವನು ಬಂದು ಪೇಳುತ್ತಲಿಹರು 2ಸಕಲ ಲೋಕಂಗಳ ಸೃಜಿಸಿ ಅಲ್ಲಿ ಸಕಲ ಲೋಕೇಶನು ತಾನೆ ವಿಶ್ರಮಿಸಿಸಕಲವ ತನ್ನೊಳಗಿರಿಸಿುೀಗಮುಕುತಿದಾಯಕ ವೆಂಕಟೇಶ ಶ್ರೀ ವೆರಸಿ 3ಕಂ||ಹರಿ ಪವಡಿಸೆ ಹರೆದೋಲಗಸುರರೆಲ್ಲರ್ ಸ್ಥಾನಕೈದಲಾನಂದಾಂಬುಧಿತೆರೆುಳಿದು ತಿರುಪತೀಶನಚರಣವೆ ತಾನಾಗಿ ನಿಂದುದೆನ್ನೆದೆಮನೆಯೊಳ್ ಓಂ ವೇದವೇದ್ಯಾಯ ನಮಃ
--------------
ತಿಮ್ಮಪ್ಪದಾಸರು
ಯೋಗಿ ವರ್ಯಾ ಪ ಯೋಗಿ ದಶಮತಿ ಬ್ರಾತೃ | ವಂಶ ಸಂಭೂತಾ ಅ.ಪ. ಭಾವಿ ವಾಯ್ದೆನಿಸಿದ್ದು | ಆವಿಪರು ಶೇಷಾದಿದೇವ ಸದ್ವಂದ್ಯರೆನೆ | ಶ್ರೀ ವಾದಿರಾಜಾ |ಆವ ವಂಶಾಬ್ದಿಯಲಿ | ದಿವ್ಯ ಸೋಮನು ಎನಿಸಿ |ದೈವ ವಿಭವದಿ ಮೆರೆವ | ವಿಶ್ವೋತ್ತಮಾಖ್ಯಾ 1 ವಿಭವ ನಾನೋಡ್ದೆ 2 ಸುಜನ | ವೃಂದದಲಿ ಭೋಧಿಸುತಇಂದಿಲ್ಲಿ ಸಿದ್ದಾರ್ಥಿ | ಸಂದ ಅಯ ನವಮೀ |ಮಂದಿರಕೆ ಬಂದುತವ | ನಂದ ಪದ ಪೂಜಿಸುವಸಂದು ಇತ್ತಿಹ ಗುರೂ | ಗೋವಿಂದ ಭಜಕಾ 3
--------------
ಗುರುಗೋವಿಂದವಿಠಲರು
ಯೋಗಿ ಕುಲಪುಂಗವ ಕಾಯೋ ಕೋಲ ತನಯ ತಟಿ ಸದನಾ ವಿಬುಧವೃಂದ ನುತ ಪ್ರೇಮಸಾಗರ ಪ ಸುಜನ ಪಾಲಾ ವಿಜಿತಾನಂಗನ ಭಾಸುರ ಮಹಿಮ1 ಪಾವನಾತ್ಮಕ ಪಾಪ ವಿದೂರ ಕಾವುದೈ ಸದಾ ಕೋವಿದರೊಡೆಯ2 ಶಾಮಸುಂದರ ಪ್ರೇಮ ಸುಪಾತ್ರ ಸ್ವಾಮಿ ಶ್ರೀಗುರು ರಾಘವೇಂದ್ರಾರ್ಯ 3
--------------
ಶಾಮಸುಂದರ ವಿಠಲ
ಯೋಗಿ ಭಾವ್ಯ ಪದ್ಮಮುಖದಿವ್ಯ ಲಕ್ಷಣಾಂಚಿತ ಪದಯುಗಳ 1ಚಂದ್ರ ಕುಲಾವತಂಸ ದ'ುತ ಕಂಸಪರಮಹಂಸ ಚಿದಾವರ್ಣ'ತೇಂದ್ರಮುಖ್ಯ 'ಹಗೇಂದ್ರ ವಾಹನೋಪೇಂದ್ರಕಾಳಿಯೋರಗ ಮದಹರಣ 2ಕಂಜದಳನಿಭಾಕ್ಷ ಸುಜನರಕ್ಷದನುಜಶಿಕ್ಷಾ ಪ್ರ'ೀಣ ಧನಂಜಯಾರ್ತಿಹರಮಂಜುಭಾಷಣ ನಿರಂಜನಾಗಣಿತನಿರುಪಮಲೀಲಾ 3ನಂದಕ ಪ್ರಹರಣ ಭೂರಿಕರಣಾವಾಲ್ಯಶರಣಾ ಗತಾವನನಂದನಂದನ ಸನಂದನಾದಿ ಮುನಿ ಬೃಂದವಂದ್ಯ ಸಕಲಜನ ಶರಣ್ಯಾ 4ದಂತಿರಾಜವರದಾ ರಾತ್ರಿ ಚರದಾವಾಗ್ನಿ ಶರದವ್ರಜಶ್ರೀಕಾಂತ ಮೌನಿಘನ ಚಿಂತನೀಯವೇದಾಂತವೇದ್ಯಕೋಸಲಪುರ ನಿಲಯಾ 5
--------------
ತಿಮ್ಮಪ್ಪದಾಸರು
ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ ಪ ಹಾಗೂ ಹೀಗೂ ಆಗದೆ ಭವ ರೋಗಿಯೆನಿಸದರೆಲೆ ಗೂಗಿ ಅ.ಪ ಮಾತುಮಾತಿಗೆ ನೀತಿವಚನ ಆತುರಕ್ಕಾಗಿ ಕೂಗಿ ಕೂಗಿ ಪಾತಕದೊಳಗೆ ಬಿದ್ದು ಯಮನ ಯಾತನಕಿಳಿಯಬೇಡ ಭವಿ 1 ಕಾವಿಕಪನಿಲಾಂಛನ್ಹೊದ್ದು ಸೇವೆಗೊಂಡು ಭಾವಗೆಟ್ಟು ಸಾವುಹುಟ್ಟು ಬಲೆಗೆ ಬಿದ್ದು ನೋಯಬೇಡೆಲೆ ನೀಚಮತಿ2 ನಿತ್ಯ ನಿತ್ಯವೆನಿಪ ಪರ ಮಾರ್ಥತತ್ತ್ವಗುರ್ತುಯಿಲ್ಲದೆ ಕತ್ತೆಯಂತೆ ಒದರಿ ವ್ಯರ್ಥ ಮೃತ್ಯುಹೊಂದ ಬೇಡ ಮೂರ್ಖ 3 ಸೋಗುಹಾಕಿ ಸಾಧುಯೆನಿಸಿ ಕಾಗೆಯಂದದಿ ತೀರ್ಥಮುಳುಗಿ ಜಾಗರ ಮಾಡಿ ಪೋಗದಿರಲೆ ನರಕಕಧಮ 4 ಭೂಮಿ ಪ್ರೇಮ ತಾಮಸ ನೀಗಿ ಕಾಮ ಕ್ರೋಧ ಲೋಭ ಜೈಸಿ ಭೂಮಿತ್ರಯಂಗಳೊಡೆಯ ಶ್ರೀ ರಾಮನಾಮ ಭಜಿಸಿ ಮುಕ್ತನಾಗೆಲೊ 5
--------------
ರಾಮದಾಸರು