ಒಟ್ಟು 619 ಕಡೆಗಳಲ್ಲಿ , 88 ದಾಸರು , 455 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಂಚು ಬಲ್ಲುದೆ ಹಲ್ಲ ತೆಗೆದರಪಕಾರವನುಮಿಂಚುಳ್ಳ ಕಂಚು - ಕನ್ನಡಿಯಲ್ಲದೆ ಪ.ಕಳ್ಳ ಬಲ್ಲನೆ ತನ್ನ ಕರುಣದುಪಕಾರವನು ?ಕೊಳ್ಳಿ ಬಲ್ಲುದೆ ತನ್ನ ಮನೆಯೆಂಬುದ ?ಸುಳ್ಳಿ ಬಲ್ಲನೆ ಗ್ರಾಮದೊಳಗಣಾ ಸುದ್ದಿಯನು ?ಬಳ್ಳಿಬಲೆ ಬಲ್ಲುದೇ ತನ್ನ ವನವೆಂಬುದನು ? 1ಬಾಳಬಲ್ಲುದೆ ತಾನು ಮೇಲೊಗೆವ ಫಲಗಳನು ?ಸೂಳೆ ಬಲ್ಲುಳೆ ಮನೆಯ ಬಡತನಗಳ ?ಖೂಳ ಬಲ್ಲನೆ ಜಾಣರೊಳಗೊಂದು ಸವಿನುಡಿಯ ?ಕೇಳಬಲ್ಲನೆ ಕಿವುಡ ಏಕಾಂತವ ? 2ಯೋಗಿ ಬಲ್ಲನೆ ಭೋಗದೊಳಗಣಾ ಸುದ್ದಿಯನು ?ಭೋಗಿ ಬಲ್ಲನೆ ಕೆಲಸ - ಉದ್ಯೋಗವ ?ಕಾಗೆಬಲ್ಲುದೆ ಕೋಗಿಲಂತೆ ಸ್ವರಗೈವುದನು ?ಗೂಗೆ ಬಲ್ಲುದೆ ಹಗಲ ಹರಿದಾಟವ ? 3ಕೋಣ ಬಲ್ಲುದೆ ಕುದುರೆಯಂತೆ ವೈಹಾಳಿಯನು ?ಕಾಣಬಲ್ಲನೆ ಕುರುಡ ಕನ್ನಡಿಯನು ?ದೀನವತ್ಸಲ ನಮ್ಮ ಪುರಂದರವಿಠಲನನುಕಾಣಬಲ್ಲನೆ ಜಾÕನವಿಲ್ಲದವನು ? 4
--------------
ಪುರಂದರದಾಸರು
ಹೆಸರು ತಂದಿರ್ಯಾ ಭಿಕ್ಷಕೆ |ಹೆಸರು ತಂದಿರ್ಯಾಪಅಸಮವೀರರೆಂಬ ಹೆಸರು |ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು |ಕುಲಕೆ ಯೋಗ್ಯನೆಂಬ ಹೆಸರು ||ಹೆಸರು||1ದಾನಶೀಲರೆಂಬ ಹೆಸರು |ಮಾನವಂತರೆಂಬ ಹೆಸರು |ಸಾನುರಾಗದಲ್ಲೂ ಆತ್ಮ |ಜ್ಞಾನಿಗಳೆಂದೆಂಬ ಹೆಸರು2ಹಿರಿಯ ಮನೆತನದ ಹೆಸರು |ಗುರುಗಳಾ ಭಕ್ತಿಯಲಿ ಹೆಸರು |ಪರಮಭಾಗವತರ ತೆರದಿ |ಹರಿಯ ಶರಣರೆಂಬ ಹೆಸರು3ಪುತ್ರವತಿಯರೆಂಬ ಹೆಸರು |ಸತ್ಯಶೀಲೆಯರೆಂಬ ಹೆಸರು |ಪತಿಯ ಸೇವೆಯಲ್ಲಿನಿರತ|ಪತಿವ್ರತೇಯರೆಂಬ ಹೆಸರು4ಸತ್ಯಸಂಧರೆಂಬ ಹೆಸರು |ತತ್ವಜÕರೆಂದೆಂಬ ಹೆಸರು |ಚಿತ್ತ ಶುದ್ಧರೆನಿಸಿ | ಗೋವಿಂದಾನ |ದಾಸರೆಂಬ ಹೆಸರು5
--------------
ಗೋವಿಂದದಾಸ
ಹೇ ದಯಾಬ್ಧೇ ಪಾಲಿಸೆನ್ನನು | ಶ್ರೀದ ಹನುಮಂತ ಪಭೂಧವಜ ನದಿಯಲ್ಲಿ ನಿಂತಾ ಕಾಳೀಕಾಂತ ವೀತಚಿಂತಾ ಅ.ಪ.ರಾವಣಾನುಜನಂತೆ ಮತ್ತಾ ಶೈಲಸುತನಂತೆ |ದೇವತೆಗಳೀಶನಂತೆ ದೇವತೆಗಳಂತೆ ||ಆವವಿಕ್ರಮಪಾರ್ಥನಂತೆ ಕಾದಿ ಬಿದ್ದಾ ಕಪಿಕುಲದಂತೆ |ತಾವರೆಯಸಖಸೂರ್ಯನಂತೆ ತತ್ಸುತ ಸುಗ್ರೀವನಂತೆ 1ಭೂವರಾಧಿಪ ಧರ್ಮನಂತೆ ದ್ರೌಪದಿಯಂತೆ |ಭೂವಿ ಬುಧಸುತನಂತೆ ರಾಕ್ಷಸಿಯಂತೆ ಫಣಿಯಂತೆ ||ಆ ವಿರಾಟರಾಯನಂತೆ ಪಾರ್ವತಿಯ ನಾಥನಂತೆ |ನೀ ವಿಜಯನಾಗಲು ಸಹಿಸದಲೆ ಕೋಪಿಸಿದ ಧೃತರಾಷ್ಟ್ರನಂತೆ ||ಮೋದದಿಂದ ನಿನ್ನ ಪಡೆದಾ ಮಧ್ಯಗೃಹನಂತೆ |ಆದರದಿ ಹರಿಪೂಜೆ ಮಾಳ್ಪಾಸೂರಿಜನರಂತೆ ||ಆ ದಿನ ಕಡಲಲ್ಲಿ ಮುಳುಗಿ ಪೋಗುತ್ತಿದ್ದಾ ನಾವೆಯಂತೆ |ಪಾದಹಿಡಿದಾ ಕಾಳೀಸರ್ಪನ ಕಾಯ್ದ ಪ್ರಾಣೇಶ ವಿಠ್ಠಲನಂತೆ 3
--------------
ಪ್ರಾಣೇಶದಾಸರು
ಹೇಗಿಹನು ಹಾಗಿಹನು ಪರಿಪೂರ್ಣ ಬ್ರಹ್ಮಹೇಗಿಹನು ಹಾಗಿಹನುಹೇಗಿಹನು ಎಂತೆಂದು ಕೇಳುವರು ಯಾರುಹೀಗಿಹನು ಎಂತೆಂದು ಹೇಳುವರು ಯಾರುಪಹಸಿವೆಯಾಗಿರಲು ಹಸಿವೆಯಂತಿಹನುತೃಷೆಯು ತಾನಾಗಿರಲು ತೃಷೆಯಂತೆ ಇಹನು1ದುಃಖಿಯಾಗಿರಲು ದುಃಖಿಯಂತಿಹನುಸುಖಿಯು ತಾನಾಗಿರಲು ಸುಖಿಯಂತೆ ಇಹನು2ದುಷ್ಟ ತಾನಾಗಿರಲು ಅವ ದುಷ್ಟನಾಗಿಹನುಶಿಷ್ಟನಾಗಿರಲು ಅವ ಶಿಷ್ಟನಾಗಿಹನು3ಜೀವನಾಗಿರಲು ಅವ ಜೀವನಾಗಿಹನುಶಿವನಾಗಿರಲು ಅವ ಶಿವನಾಗಿ ಇಹನು4ಚಿತ್ತಕ್ಕೆ ಬುದ್ಧಿಗೆ ತಾನಿಹನು ದೂರಸತ್ಯ ಚಿದಾನಂದ ಗುರುವೆಂಬಾತನು5
--------------
ಚಿದಾನಂದ ಅವಧೂತರು
ಹೇಮದ ತೊಟ್ಟಿಲ ಭಾಮೆಯರ್ಹೂಡಿಕೋಮಲ ಕಾಂಚನಧಾಮವ ಮಾಡಿಕಾಮಜನಕನೊಳು ಕಾಮಿತ ಬೇಡಿಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ 1ಚೆನ್ನಿಗರರಸ ಮೋಹನ್ನ ಸುಶೀಲಕನ್ನಡಿ ಕದಪಿನಕಮನೀಯಬಾಲಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ 2ಕೆಂದಾವರೆಯಂತೆ ಚೆಂದುಳ್ಳಚರಣಚಂದಿರವದನ ಗೋವಿಂದನ ಶರಣಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣಕಂದ ಕಂದರ್ಪನ ಸುಂದರಾಭರಣ ಜೊ ಜೋ 3ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣನ್ಯಾಯ ನೀತಿ ಸದುಪಾಯ ಸಂಪನ್ನಪ್ರೀಯನೆ ಕರ್ಣಾಂತಾಯತನಯನಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ