ಒಟ್ಟು 19445 ಕಡೆಗಳಲ್ಲಿ , 133 ದಾಸರು , 8422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಮಂಗಳ ಜಯಮಂಗಳ ಶುಭ ದೇವದೇವೋತ್ತಮಗೆ ಧ್ರುವ ಕೇಶವ ನಾರಾಯಣಗೆ ಮಂಗಳ ವಾಸುದೇವ ವಾಮನಗೆ ಮಂಗಳ ಹೃಷೀಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ 1 ಅಚ್ಯುತ ಜನಾರ್ಧನಗೆ ಮಂಗಳ ಮತ್ಸ್ಯಕೂರ್ಮ ವರಾಹಿಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚುಕುಂದವರದ ವಿಷ್ಣುಗೆ ಮಂಗಳ2 ಮಾಧವ ಮಧುಸೂದನಗೆ ಮಂಗಳ ಸಾಧು ಹೃದಯುವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ 3 ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಂಕರುಷಣಿಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ 4 ಪರಮ ಪಾವನ ಭಾರ್ಗವಗೆ ಮಂಗಳ ಕರುಣಾಕರ ಶ್ರೀ ರಾಮಗೆ ಮಂಗಳ ಧರಿಯೊಳು ಭೌದ್ಧ ಕಲ್ಕಿಗೆ ಮಂಗಳ ತರಳ ಮಹಿಪತಿಸ್ವಾಮಿಗೆ ಮಂಗಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳ ಮಂಗಳ ಜಯಮಂಗಳ ಶುಭಮಂಗಳ ಸುರಗುರು ಮೂರುತಿಗೆ ಸಹಸ್ರ ಮಂಗಳ ಶ್ರೀನಿಧಿ ಶ್ರೀಪತಿಗೆ ಧ್ರುವ ವಿದುರವಂದಿತ ವಿಶ್ವಪಾಲಗ ಮಂಗಳ ಬುಧಜನ ಸಹಕಾರಗ ಮಂಗಳ ಯದುಕುಲೋತ್ತಮ ಶ್ರೀಧರಗ ಮಂಗಳ ಮದನಮೋಹನ ಮೂರುತಿಗೆ ಮಂಗಳ 1 ಕಸ್ತುರಿಯ ತಿಲಕ ಕಾರುಣ್ಯಗ ಮಂಗಳ ಮಸ್ತಕಲಿಹ್ಯ ಮಣಿಮುಗಟಗ ಮಂಗಳ ಕೌಸ್ತುಭಧರ ಭೂಷಣಗ ಮಂಗಳ ಹಸ್ತಿಗೊಲಿದು ಸುವಸ್ತುಗ ಮಂಗಳ 2 ಭಾಸ್ಕರಕೋಟಿ ಪ್ರಕಾಶಗ ಮಂಗಳ ಭಾಸುವ ಭಾವಭೋಕ್ತಗ ಮಂಗಳ ವಾಸವಾಗಿ ಹ್ಯ ಸದೋದಿತಗ ಮಂಗಳ ದಾಸ ಮಹಿಪತಿ ಸ್ವಾಮಿಗ ಮಂಗಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಂ ಮಂಗಳಂ ದಯಾನಿಧೆಮಂಗಳಂ ಮಂಗಳಂ ಪ. ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶ್ರಿಂಗರ ಶ್ರೀ ಶ್ರೀನಿವಾಸ 1 ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ 2 ರಾಜರಾಜಿತ ಗೋಪಾಲವಿಠಲ ಮಹಾ ರಾಜ ಭೋಜ ಕಲ್ಪರಾಜ ಸುತೇಜ 3
--------------
ಗೋಪಾಲದಾಸರು
ಮಂಗಳಂ ಮಂಗಳಂ ದಯಾಬ್ಧೆ ಜಯ ಮಂಗಳಂ ಶ್ರೀರಂಗವೊಲಿದ ದಾಸಾರ್ಯ ಪ ಪ್ರಹ್ಲಾದನನುಜ ತಾ | ಸಹ್ಲಾದ ವಿಖ್ಯಾತ ಬಲ್ಲಿದ ಬಲ್ಲಾಳು ಶಲ್ಯ ನೃಪಾಲ 1 ನಾರದ ಗುರು ಭಾವಿ | ಮಾರುತ ಭೃಗು ವಿಘ್ನ ದೂರಗೈಸುವ ರತಿ | ಕಾರುಣ್ಯಪಾತ್ರ 2 ಇಂದಿರಾಧವ ಶಾಮಸುಂದರ ಪ್ರಿಯ ಭಕ್ತ ಮಂದಾರ ಮಾನವಿ ಮಂದಿರ ಧೀರ 3
--------------
ಶಾಮಸುಂದರ ವಿಠಲ
ಮಂಗಳಂ ಮಂಗಳಂ ಪ ಮಂಗಳಂ ಮಂಗಳಂ | ಪರಿಮಾಳಾರ್ಯರಿಗೆ ತುಂಗೆ ತೀರಗ ಯತಿ | ಪುಂಗರೀಗೇ ಅ.ಪ. ವೈರಿ ಭೃಂಗ | ಸುಧೀಂದ್ರ ಚರಣಾಬ್ಜಮಧುಕರರೆನಿಸುತ್ತ | ಸುಧೆಯ ಸೌರಭವ |ಬುಧ ಜನ ಕುಣಿಸುತ್ತ | ವಿಧ ವಿಧ ಮೆರೆಯುವತ್ರಿದಶ ಭೂರುಹವೆನಿಸಿ | ಸದಯದಿ ಪೊರೆವಗೇ 1 ಮಧ್ವ ಮತಾಬ್ಧಿಗೆ | ಶುದ್ಧ ಪೂರ್ಣೇಂದ್ವಿಗೆಅದ್ವೈತ ಕಲಿಮಲ | ದಾವಾಗ್ನಿಗೇ |ಸದ್ವೈಷ್ಣ್ವ ಕುಮುದೇಂದು | ವಿದ್ವಾಂಸನತ ಪಾದಶೌದ್ಧೋದನಿಯ ಮತ | ವಿಧ್ವಂಸಕಗೇ 2 ಕರದೆಡೆ ಬರುವಂಥ | ಪರಮ ದಯಾಳುಗೆಧರೆಯೊಳೆಲ್ಲೆಲ್ಲೂ | ಮೆರೆಯುತಿಹಗೇ |ಶರಣರ ಹೃತ್ಕಮಲ | ವರ ಮಿತ್ರನೆಂದೆನಿಸಿಗುರು ಗೋವಿಂದ ವಿಠಲ | ಚರಣಾಬ್ಜಧೇನಿಪಗೇ 3
--------------
ಗುರುಗೋವಿಂದವಿಠಲರು
ಮಂಗಳಂ ಮಂಗಳಂ ಭವತು ತೇ ರಮಾಪತೆ ಪ. ಮಧುವೈರಿ ಮಾರಜನಕ ದಿವ್ಯಸಾರ ಸುಂದರದೇಹವಾರಿಜದಳನೇತ್ರ ಕಾರುಣ್ಯಗುಣನಿಧೆ 1 ಮಣಿಮಯ ಶುಭಕರ ಕನಕಕುಂಡಲಧರಮಿನುಗುವ ಮಕುಟಶೋಭನಕರಮೂರ್ತೆ2 ವೇದವಿಬುಧವಂದ್ಯ ಗೋಪಾಲವಿಠಲಸಾಧುಸಜ್ಜನಪಾಲ ಶ್ರೀದೇವಿಲೋಲ 3
--------------
ಗೋಪಾಲದಾಸರು
ಮಂಗಳಂ ಮಂಗಳಂ ಮಾರಮಣಗೆ ಪ ಕುಂಡಲಿ ಶಯನಗೆ ಗುಣನಿಧಿಗೆ ಪುಂಡರೀಕಾಕ್ಷ ಶ್ರೀ ಪುರುಷೋತ್ತಮಗೆ 1 ಸರ್ವಪ್ರಾಣಿಗಳ ಹೃತ್ಕಮಲನಿವಾಸಗೆ ಉರ್ವಿಭಾರವ ಪರಿಹರಿಸಿ ಭಕ್ತರ ಕಾಯ್ವ ಸಾರ್ವಭೌಮ ಹರಿಸರ್ವೋತ್ತಮಗೆ 2 ಭಾಗ್ಯವಲ್ಲಿ ಹನುಮನೊಡೆಯನಮ್ಮ ಗುರುರಾಮ ವಿಠಲ ಶ್ರೀ ಕೃಷ್ಣಮೂರುತಿಗೆ3
--------------
ಗುರುರಾಮವಿಠಲ
ಮಂಗಳಂ ಮಂಗಳಂ ರಂಗನಿಗೇ | ಜಯಮಂಗಳವೆನ್ನಿ ಶ್ರೀ ವೆಂಕಟಗೇ ಪ ಪತಿ ಮಾಧವ ಹರಿಗೇ 1 ನೀರಜಜ ಗೋರೂಪಿ | ಸಾರಿ ಪುತ್ತಾಶ್ರಿತಗೆಕ್ಷೀರಾಭಿಷೇಚಿಸಿ | ಸಾರುತಿರೆ ನೃಪ ಗೃಹ |ಮಾರನೆ ದಿನ ಗೋ | ಚಾರ ಕೊಡಲಿ ಹತಿಗೆದೂರ ಸರಿಸಿ ಗೋವ | ಶಿರವನೊಡ್ಡಿದಗೇ 2 ನಗ ವೆಂಕಟಾದ್ರೀಲಿಅಘಹರ ಲೀಲೆಗಳ್ | ಸೊಗಸಾಗಿ ತೋರ್ವಗೇ 3 ಆವಾವ ಬಗೆಯಿಂದ | ಜೀವನಧ್ಯಾತ್ಮದಿಓಧಿ ಸಾಧನೆಗೈದು | ದೇವನ ಪದ ಸಾರುವಭಾವವನರುಹುಲು | ಊರ್ವಿಯೊಳವತರಿಸಿಮಾವಾರಿ ನಟಿಸುತ್ತ | ಜೀವರ ಪೊರೆವಗೇ 4 ದೇವ ದೇವ ನಮ್ಮ | ಗೋವ ಪರಿಪಾಲಕಮಾವಿನೋದಿಯು ಗುರು | ಗೋವಿಂದ ವಿಠಲಭೂವೈಕುಂಠಸ್ಥನು | ಕಾವ ಭಕ್ತರನೆಲ್ಲ ಈ ವಿದಧಿ ತುತಿಪರ್ಗೆ | ಭಾವದಿ ಒದಗುವಗೇ5
--------------
ಗುರುಗೋವಿಂದವಿಠಲರು
ಮಂಗಳಂ ಮಂಗಳಂ ಲಕ್ಷ್ಮೀಶಗೆ ಮಂಗಳಂ ಮಾಕಮಲಾಸನ ವಂದಿತ ಶೃಂಗಾರಶೇಖರ ತುಂಗಗಿರೀಶ ಪ. ಶ್ರೀಲೋಲ ಶುಭಗುಣಜಾಲಪಾಲಿತ ಸತ್ವ ಶೀಲ ಸುಂದರ ವನಮಾಲ ನೀಲಕುಂತಲ ನಿರ್ಜಿತಾಳಿ ಕುಲಾನನ ಕಪೋಲ ಗೋಪಾಲ 1 ಶರಣಾಗತ ರಕ್ಷಕರಣ ಧುರೀಮ ಮ- ದ್ಫರಣ ತ್ರಿಲೋಕೀ ಧಾರಣ ಕರುಣಾಮೃತ ಹರ ತರುಣಾರ್ಕ ಕೋಟಿಭಾ ಭರಣ ರಮಾಧೃತ ಚರಣಾರವಿಂದ 2 ನಿತ್ಯ ಪದ್ಮ ಸರೋವರ ಪದ್ಮ ನಿರಂತರ ಸಂಚಾರ ಪದ್ಮನಾಭ ಹೃತ್ಪದ್ಮ ಸುಸಂಸ್ಥಿತ ಪದ್ಮ ಪತ್ರ ನೇತ್ರ ಪದ್ಮಜ ಜನಕ 3 ಇಂದಿರಾವರ ಪೂರ್ಣೇಂದು ನಿಭಾನನ ವಂದನೀಯ ವಾಸುದೇವ ಮಂದಿರೆ ಮಮ ನಿತ್ಯಾನಂದದಾಯಿ ನಿಜ ಬಂಧುತಯಾಸ್ಥಿತ ಮಂದಹಸಿತೆ 4 ದಾಸೀಕೃತ ಕಂಜಜೇಶಾಹೀಶ ವಿ- ವೇಶಾಮರೇಶ ರಮೇಶಾ ಶೇಷ ಭೂಧರ ನಿಜ ವಾಸ ದಯಾರಸ ಮಾಶುಪ್ರವರ್ಷಯ ಹೇ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಂ ಮಧುಕೈಟ ಭಾರಿಗೇ - ಜಯಮಂಗಳ ಯದುಕುಲಾಂಬುಧಿ ಚಂದ್ರಗೇ ಪ ಗೋಕುಲದೊಳು ಪುಟ್ಟಿ ಗೋಗಣಂಗಳ ಕಾಯ್ದುರಾಕೇಂದು ವದನೇರ ಕೂಡಿದ ಸರಸಿಗೇ 1 ಪಾಲನ ಲಯ | ಒಟ್ಟಾಗಿ ಮಾಳ್ಪಂಥಕೃಷ್ಣೆ ಗಕ್ಷಯಫಲ ಕೊಟ್ಟಂಥ ಹರಿಗೇ2 ಬೃಹತೀ ಸಹಸ್ರನ್ನ ಬಹುವಾಗಿ ಉಂಡಗೇಮಹ ಋಷಿಗ್ವರವಿತ್ತ | ಶ್ರೀ ಉಪೇಂದ್ರಗೆ 3 ಲಕ್ಕುಮಿಯನು ತಾನು | ಲೆಕ್ಕಿಸದಲೆ ವೇಗಪೊಕ್ಕುಳಿಂದಲಿ ಅಜನ | ಪಡೆದ ಶ್ರೀಹರಿಗೇ 4 ಗರುಡ ಗಮನನಾಗಿ | ಕರಿಯ ಕಾಯಲಿ ಬಂದುಹರುಷವ ಪಡಿಸೀದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಂಗಳಂ ಮಹಿಜಾತಗೆ ಇಂಗಡಲ ಮಂದಿರಗೆ ಪ ಬಂಗಾರದೊಡಲ ಮುಖ್ಯ ಪದಂಗಳನೆಲ್ಲ ಕಂಗಳ ಭ್ರೂಭಂಗಾದಿ ಕರುಣಿಪ ದೇವಿಗೆ 1 ರಂಗು ಮಾಣಿಕದಾಭರಣಂಗಳನಿಟ್ಟು ಡಿಂಗರೀಕರಂತರಂಗದಿ ನಲಿಯುವ ದೇವಿಗೆ 2 ರಂಗೇಶವಿಠಲನರ್ಧಾಂಗಿಯೆನಿಸಿಕೊಂಡು ಹಿಂಗದೆ ಭಜಿಪರ್ಗೆ ಶುಭಗಳ ನೀಡುವ ದೇವಿಗೆ 3
--------------
ರಂಗೇಶವಿಠಲದಾಸರು
ಮಂಗಳ ಮಹಿಮ ಶುಭಾಂಗಗ ಮಂಗಳ ಅಂಗಜ ಜನಕ ಶ್ರೀರಂಗಗ ಮಂಗಳ ಪ ಸಿರಿದೇವಿ ಮುಖಪದ್ಮ ಭಂಗಗ ಮಂಗಳ ಸುರ ಮುನಿಜನ ರಂಗ ಸಂಗಗ ಮಂಗಳ ಶರಣಾಗತರ ಭವಭಂಗಗ ಮಂಗಳ ದುರಿತಾಳಿವ್ಯಾಳ ವಿಹಂಗಗ ಮಂಗಳ 1 ಯಾದವ ಕುಲಾಂಬುದಿ ಚಂದ್ರಗ ಮಂಗಳ ಕೈಟಭಾರಿ ಮಹೀಂದ್ರಗ ಮಂಗಳ ವಿಧಿಭವ ವಂದ್ಯ ನಾದುಪೇಂದ್ರಗ ಮಂಗಳ ಸದಮಲಸದ್ಗುಣಸಾಂದ್ರಗ ಮಂಗಳ 2 ನಾರದಗಾಯನ ಪ್ರೇಮಿಗೆ ಮಂಗಳ ಸುರಸಾದಾಸಾಸಿರ ನಾಮಿಗೆ ಮಂಗಳ ಗುರುವರ ಮಹಿಪತಿಸ್ವಾಮಿಗೆ ಮಂಗಳ ಕರುಣಾಳು ಜಗದಂತ್ರಯಾಮಿಗೆ ಮಂಗಳ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ಮಾರುತಿಯೆ ಸತತಮಸ್ತು ಮಂಗಳಂ ಶ್ರೀಮತಿಯೆ ಶರಣರಕ್ಷಕ ರಾಮದೂತನೆ ಪ ಭಾರ ನಿವೃತ ದೇವ 1 ಕಾನನಸಂಪ್ರಿಯ ಮಾನಿರಾಮದೂತ 2 ಮೃತ್ಯು ಪಶುಪತಿರೂಪನೆ 3 ಶ್ರೀ ಹನುಮಂತ ಜ್ಞಾನಿ ಸುಗುಣವಂತ 4
--------------
ಬೇಟೆರಾಯ ದೀಕ್ಷಿತರು
ಮಂಗಳ ಮುಖ್ಯ ಪ್ರಾಣೇಶಗೆ ಪ ಜಯ ಮಂಗಳ ಶುಭಮಂಗಳ ವಾಯುಕುಮಾರನಿಗೆ ಅ.ಪ ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳಸಂಜೀವನವ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ1 ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದಗೆ ಮಂಗಳಸತಿಯ ಸೀರೆಯ ಸೆಳೆದ ದೈತ್ಯನ ಕೊಂದುಪೃಥ್ವಿ ಮೇಲೆ ಚೆಂಡನಾಡಿದಗೆ 2 ಸೀತಾದೇವಿಯ ಬಾಲಗೆ ಮಂಗಳಶ್ರೀರಾಮನ ಭಂಟಗೆ ಮಂಗಳಗೋಪಾಲ ಕೃಷ್ಣನ ಪೂಜೆಯಮಾಡುವಗುರು ಮಧ್ವ ಮುನಿರಾಯಗೆ ಮಂಗಳ3
--------------
ವ್ಯಾಸರಾಯರು