ಒಟ್ಟು 18608 ಕಡೆಗಳಲ್ಲಿ , 136 ದಾಸರು , 8432 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರ ನಿನ್ನದೊ ಪ ಭಾರ ನಿನ್ನದಯ್ಯ ಹರಿಯೆ ಘೋರ ಈ ಸಂ ಸಾರದೊಳಗೆ ಪಾರುಮಾಡಿ ಪೊರೆವುದೆನ್ನ ಅ.ಪ ಕರುಣಾ ನಿಲಯನೆಂದು ನಿನ್ನ ಮೊರೆಯ ಹೊಕ್ಕು ಬೇಡಿಕೊಂಬೆ ನರನ ಭವದಗುಣಗÀಳಳಿದು ಹರಿಯೆ ನಿಮ್ಮ ಚರಣಸ್ಮರಣೆ ಕರುಣದಿಂದ ನೀಡಿ ಪೊರೆಯೊ ಶರಣಜನರ ಅಸಹಾಯಕರ 1 ಶ್ರೀಶ ಶ್ರೀನಿವಾಸ ನೀನೆ ದಾಸನ ಮನದಾಸೆಯ ಪೂರೈಸುವ ದಾತನೆಂದು ನಿನ್ನ ದಾಸತ್ವ ಬೇಡ್ವೆ ದೋಷದೂರ ಘಾಸಿಮಾಡದೆ ಹೇಸಿ ಭವದಿ ಪೋಷಿಸಯ್ಯ ಬೇಗ ಈಶ 2 ಚಿಂತೆ ಭ್ರಾಂತಿ ದೂರಮಾಡಿ ಸಂತಸ ಸುಖವನ್ನು ನೀಡಿ ಕಂತುಜನಕ ನಿಮ್ಮ ಭಕ್ತಿ ಅಂತ್ಯದಲ್ಲಿ ನಿಲ್ಲಿಸಿ ಎ ನ್ನಂತರಂಗದೊಳಗೆ ತೋರೊ ಸಂತರೊಡೆಯ ಸೀತಾರಾಮ 3
--------------
ರಾಮದಾಸರು
ಭಾರ ನಿನ್ನದು ದೇವಾ ಭಕುತ ಸಂಜೀವಾ ಪ ದೂರ ನೋಡದೆ ಪೊರೆಯೊ ದುರಿತಗಳ ತರಿಯೊ ಅ.ಪ. ಮೂರನೆ ಗುಣದಿಂದ ಮತ್ತನಾಗಿ ಬಹಳ ಮೂರು ವಿಧ ವಿಷಯದಲಿ ಮಗ್ನನಾದೆ ಮೂರುಖಾಗ್ರೇಸರಿಗೆ ಮುಂದಾವಗತಿಯೈಯ ಮೂರಾವತಾರವುಳ್ಳ ಮರುತಾತ್ಮಜನೆ 1 ಆರು ಮೂರರ ದ್ವಾರದ ಸ್ಥಿರದ ಮನೆಯೊಳಗೆ ಆರು ವೈರಿಗಳು ಕಂಡಾವಾಗಲೂ ಆರು ಬಿಡಿಸದ ಬವಣೆ ಬಡಿಸುತಲೈದಾವರೆ ಆರೆರಡು ಪೆಸರುಳ್ಳ ಅಂಜನಾತ್ಮಜನೆ 2 ಪಂಚೇಂದ್ರಿಯಗಳು ಕೂಡೆ ಪರಿಪರಿ ಬಗೆಯಿಂದ ಪಂಚಮಹಾ ಪಾತಕಕೆ ಎಳೆಯುತಾರೆ ಪಂಚಕಷ್ಟಕೆ ಗುರಿಯು ಆಗಲಾರೆನು ಪ್ರಾಣ ಪಂಚಪದಕವೇ Pದರುಂಡಲಗಿ ಹನುಮಯ್ಯ 3
--------------
ಕದರುಂಡಲಗಿ ಹನುಮಯ್ಯ
ಭಾರತಿ ಗುರುವರ ಗುರುಮಾರುತಿ ಕರುಣಿಸೊ ಸಾರಿದೆ ತವ ಪದ ಸಾರಸವ ಪ ದಾಶರಧಿಗೆ ನಿಜ ದಾಸನೆನಿಸಿ | ಕಮಲಾ ಸನ ಪದವಿಯ ಪೊಂದಿದ್ಯೋ ನೀ ಭೂಸುತೆ ಚೋರನ ಭಾಸುರ ಪುರವ ಹು ಕೀಶ ನಮೋ 1 ಪುನಃ ದ್ವಾಪರದಲಿ ಜನಿಸಿ ಧ ರ್ಮಾನುಜನೆನಿಸಿ | ಭೂಭಾರ ದನುಜರ ರಣದಿ ಹೂಂಕಾರದಿ ಕುಣಿದು ಹರಿ ಮನ ಘನ ಮೆಚ್ಚಿಸಿದ ಭೀಮ ನಮೋ 2 ಶ್ರೀಮದಾನಂದ ಮುನಿ ನಾಮದಿ ಪರಾತ್ವರ ನೇಮದಿ ಭಜಪರ ಕಾಮಿತ ಗರಿಯುವ ಧಾಮ ನಮೋ 3
--------------
ಶಾಮಸುಂದರ ವಿಠಲ
ಭಾರತಿ ದೇವಿಯೆ ಮಾರುತಿ ರಾಣಿಯೆ ಪ. ಮಂದಿ ನಾಲ್ವರನು ಹೊಂದಿಸಿ ಉದರÀದಿಒಂದೆ ರೂಪದಿ ಜನರಿಗೆ ತೋರುವ ಸತಿ1 ಸೀತಾಕಾಂತನ ದೂತನಾಗಿ ಪ್ರ-ಖ್ಯಾತಿಯ ಪಡೆದನ ಪ್ರೀತಿಯ ಸತಿಯಳೆ 2 ದುಷ್ಟ ಕಲಿಯ ಕುಲಕುಟ್ಟಿ ಕೆಡಹಿದ ಭಲಕಟ್ಟಾಳು ಭೀಮನ ಪಟ್ಟದಸತಿಯಳೆ 3 ಮೂರುಏಳುಕುಲ ಮಾಯಿಗಳನು ಗೆದ್ದುಬೋರೆಮರದ ಕೆಳಗಿರುವನ ಸತಿಯಳೆ 4 ಹಗಲಿರುಳೆನ್ನದೆ ಹಯವದನನ ಪದಹೃದಯ ಕಮಲದೊಳು ಭಜಿಪನ ಸತಿಯಳೆ 5
--------------
ವಾದಿರಾಜ
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಭಾರತಿ ಮರುತನ ರಾಣಿ ಶುಭ ವಾಣಿಯಾಗಿರುವಿ ಕಲ್ಯಾಣಿ ನಾರಸಿಂಹನ ಸೊಸೆಯಾದಿ ಸರ್ವ ನಾರಿಯರಿಗೂ ನೀ ಮೇಲಾದಿ ಪ ಭೀಮನು ಶೂದ್ರನೆಂದಿರಲು ನೀನು ಶೂದ್ರೆಯೆಂದೆನಿಸುತಲಿರುವಿ ಕಾಮಿ ಕೀಚಕನಿಗೆ ಮೃತ್ಯುವಾಗಿ ನಿನ್ನ ಪ್ರೇಮವನೇನು ಬಣ್ಣಿಸಲಿ 1 ಜುಟ್ಟನು ಕೈಯೊಳು ಸೆಳೆದ ದುಷ್ಟ ದೈತ್ಯನ ಪಂಥದಿ ಮಥಿಸಿ ಪಟ್ಟದರಸನು ತೋರಿದುದದ್ಭುತವು ಸಿಟ್ಟು ನಿನಗಾಗಿ ತೋರ್ದುದಾಶ್ಚರ್ಯ 2 ರಾಜಧರ್ಮನು ಸುಮ್ಮನಿರಲು ರಾಜನಾಥ ಶ್ರೀಹಯಮುಖ ದಾಸ ರಾಜ ಭೀಮನು ತೋರ್ದ ಶಾಂತತೆಯ ರಾಜೀವಾಕ್ಷ ನಿನ್ನೊಳು ತೋರಿದ ಕರುಣ 3
--------------
ವಿಶ್ವೇಂದ್ರತೀರ್ಥ
ಭಾರತಿ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ಪ ಭವ ಸಂಹಾರಣ ಪರಾಶರ ಮತ ವಿಸ್ತರಣಅ.ಪ. ತ್ರೇತೆಯೊಳಂಜನೆ ಉದರದಿ ಜನಿಸಿ ಸೀತಾನಾಥನ ಪಾದಕೆ ನಮಿಸಿ ದೌತ್ಯವ ವಹಿಸಿ ಕೀರ್ತಿಯ ಗಳಿಸಿ ಭಕ್ತಾಗ್ರಣಿಯೆನಿಸಿದ ಗುರುವೆ 1 ದ್ವಾಪರದಲಿ ನೃಪ ಕುಲದಲಿ ಬಂದು ಪಾಪಿ ಮಾರ್ಗದ ಪ್ರಮುಖರ ಕೊಂದು ದ್ರೌಪದಿ ಬೇಡಿದ ಸುಮವನು ತಂದು ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2 ಕಲಿಯೊಳು ಕುಜನರ ಮತಗಳ ಜರಿದು ಸುಲಲಿತ ಭಕ್ತಿಯ ಮತವನು ಒರೆದು ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ ತುಳುವ ವಿಪ್ರನಲಿ ಉದಿಸಿದೆ ಗುರುವೆ 3
--------------
ಲಕ್ಷ್ಮೀನಾರಯಣರಾಯರು
ಭಾರತಿ ವಂದಿತೆ ಮನಸಿಜ ಮಾತೇ |ಕೋರುವೆ ತವಪದ ವನಜ ವಿಖ್ಯಾತೇ ಪ ನೀರಜ ಜಾತೆ ಅ.ಪ. ಪತಿ ಪರಿ ಸತಿ ಕೃತಿ ಸತಿ 1 ಖಗ ಗಮನನ ಪ್ರಿಯೆಬಗೆ ಬಗೆ ಹರಿಲೀಲೆ | ಲಗು ಬಗೆಯಲಿ ಪೇಳೆಸುಗುಣ ಮಣಿಯಮಾಲೆ | ಮಿಗಿಲು ಪೇಳೆ ಸುಶೀಲೆ 2 ಚಿನುಮಯ ಪ್ರಕೃತಿಯೆ | ಅಣು ಮಹದ್ರೂಪಿಯೆಇನಯನಗನುಸಾರಿ | ಕುಣಿಯುವೆ ಸುಂದರಿ |ಪ್ರಣತರ ಪಾಲ ಗುರು | ಗೋವಿಂದ ವಿಠಲನಗುಣಮಣಿ ಮಾಲೆ ಸದಾ | ಎಣಿಸುವೆ ಮೋದಾ 3
--------------
ಗುರುಗೋವಿಂದವಿಠಲರು
ಭಾರತಿದೇವಿ ಭಕ್ತಿಯನು ನೀಡಮ್ಮ ಭಾರತೀದೇವಿ ಪ. ಭಕ್ತಿ ದಾತೆಯು ಎಂದು ಶ್ರುತಿ ಶಾಸ್ತ್ರ ಸಾರುತಿವೆಅ.ಪ. ಕಾಮ ಕ್ರೋಧಗಳೆಲ್ಲ ಮನೆಮಾಡಿಕೊಂಡುತಾವೆನೇಮದಿಂ ಪರಿಪರಿ ಕಾಡುತಿಹವುಪ್ರೇಮಿ ನಿನ್ನಯ ಪಾದಕಮಲದಲಿ ಮತಿ ಕೊಟ್ಟುಕಾಮನಯ್ಯನ ತೋರು ಸೋಮಶೇಖರ ಜನನಿ 1 ಮಧ್ವಮತದಲಿ ಎನಗೆ ಶ್ರದ್ಧೆ ಪುಟ್ಟದೆ ಪೋಯ್ತುಸಿದ್ಧವಾಗಿಹುದು ಮನ ದುರ್ವಿಷಯಕೆಬುದ್ಧಿವಂತಳೆ ನಿನ್ನ ಮುದ್ದು ಮುಖವನು ತೋರಿಉದ್ಧಾರ ಮಾಡೆ ಶ್ರೀ ಹದ್ದುವಾಹನ ತನಯೆ 2 ಕರುಣವಾರಿಧಿಯೆಂದು ಮರೆಯ ಪೊಕ್ಕೆನು ತಾಯೆಕರಪಿಡಿದು ಕಾಪಾಡೆ ಉರಗವೇಣಿಕರುಣಸಾಗರ ತಂದೆವರದವಿಠಲನನ್ನುನಿರುತದಿ ಭಜಿಸುವ ಭರತರಾಜನ ರಾಣಿ 3
--------------
ಸಿರಿಗುರುತಂದೆವರದವಿಠಲರು
ಭಾರತಿದೇವಿ ಭಕ್ತರತಾಯಿಭಾರತಿ ದೇವಿ ನಿಮ್ಮ ಆರಾಧಿಸುವೆವಮ್ಮನಾರಿಯರ ಸೋಲಿಸಮ್ಮಮಾರಿ ಮೇಲಾಗಿಸಮ್ಮ ಪ. ಮದನನತ್ತಿಗೆ ರಂಭೆ ಮೊದಲಿಗೆ ಬಲಗೊಂಬೆ ಮುದದಿಂದ ಗೆಲಿಸೆಂಬೆ ಸುದತೆ ಪುತ್ಥಳಿಗೊಂಬೆ1 ಸುಪ್ಪಾಣಿ ಕಲ್ಯಾಣಿ ನಿನ್ನನುಗಾಣೆ 2 ಪ್ರದ್ಯುಮ್ನನ ಮಗಳೆ ರುದ್ರಾದಿವಂದ್ಯಳೆಮುದ್ದು ರಾಮೇಶನ ಪ್ರವಾಳೆ ಶುದ್ಧಪಾತ್ರಳೆ ಕೇಳೆ 3
--------------
ಗಲಗಲಿಅವ್ವನವರು
ಭಾರತಿದೇವಿ ಭಕ್ತಸಂಜೀವಿ ಪ ಮಾರುತನರಾಣಿ ಮಾಮಮ ಕಲ್ಯಾಣಿ ಅ.ಪ ಭಕುತಿ ವಿದೂರ ಕುಯುಕುತಿಗಳ ತರಿದು ಯುಕುತ ಮಾರ್ಗದೊಳಗಿರಿಸುವದೆಮ್ಮನು | ಜನನಿ 1 ಬುದ್ಧಿಯನು ಪರಿಶುದ್ಧಮಾಡಿಯನಿ- ರುದ್ಧನ ತೋರಿಸೆ ಪ್ರದ್ಯುಮ್ನನ ಸುಕುಮಾರಿ 2 ಸ್ಮರಿಸುವ ಶರಣರ ಚರಣಸೇವೆಯ ಕೊಡುವುದು 3
--------------
ಗುರುರಾಮವಿಠಲ
ಭಾರತಿದೇವಿ ಭರತನ ರಾಣಿ ಭಾರವು ನಿನ್ನದು ತಾಯೆ ಧಾರುಣಿಯೊಳು ನಿನ್ನಾ ಕೀರುತಿ ಕೇಳಿ ಸಾರಿದೆ ನಿನ್ನನು ಸಾರಭಕುತಿಯನಿತ್ತು ಪಾರುಗಾಣಿಸು ವೈ ಕಾರಿಕಸುರಕರವಾರಿಜ ಪೂಜಿತ ಚಾರುಚರಣಯುಗ ತೋರಿಸಿ ಎನ ಮನೋ- ನೀರಜದಲಿ ನಿಂದು ಮಾರಮಣನ ಪಾದ ಸೇರಿಪ ಭಕ್ತಿಯ ದಾರಿಯನಿತ್ತು ಭವ ದÀೂರನ ಮಾಡೆಂದು ಸಾರಿದೆ ಸಾರಿದೆ ಮಾರಜನಕ ಗುರು ಜಗನ್ನಾಥವಿಠಲನ ತೋರಿಸು ತೋರಿಸು ದೂರಮಾಡದಲೆ
--------------
ಗುರುಜಗನ್ನಾಥದಾಸರು
ಭಾರತೀ ದೇವಿ ಪಾಲಿಸಮ್ಮ ಭಾರತಾದೇವಿ ಪ ಶೀಲಮತಿಯ ಎನಗೆ ಕೊಟ್ಟು ಅ.ಪ ಭಾರನಿಮ್ಮದಮ್ಮಕಾಯೆ ಮಾರುತಿ ಮನಪೂರ್ಣ ಪ್ರಿಯೆ ಕೋರುವೆ ನಿನ್ನ ಪಾದವನ್ನು ತೋರಿ ನೀಡೆ ಜ್ಞಾನವನ್ನು 1 ಪಂಚÀಭೇದ ತಾರತಮ್ಯ ಸಂಚಿಂತನೆಯನ್ನೆ ಕೊಟ್ಟು ಪಂಚಬಾಣನ ಪಿತನ ಚರಿತೆ ವಂಚಿಸದಲೆ ಪೇಳಿಸಮ್ಮ 2 ನಿನ್ನನಂಬಿದ ಭಕ್ತಜನಕೆ ಘನ್ನಸುಖವ ಕೊಟ್ಟು ಪರಕೆ ಸನ್ನುತಾಂಗ ಶೇಷವಿಠಲನನ್ನು ತೋರಿ ಸಲಹಿದಾಪರಿ 3
--------------
ಬಾಗೇಪಲ್ಲಿ ಶೇಷದಾಸರು
ಭಾರತೀ ದೇವಿ ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ ಪ ಶ್ರದ್ಧಾ ಮೂರುತಿ ತಾಯೆ ಕಾಯೆ ಪ್ರದ್ಯುಮ್ನ ಕುವರಿಯೆ ಶ್ರದ್ಧಾನಾಮಕಳೆ ನೀ ಶ್ರದ್ಧಾಭಕುತಿ ಕೊಟ್ಟು ಶುದ್ಧ ಮುಗ್ಧನೆನ್ನ ಉದ್ಧರಿಸುವುದೀಗಾ 1 ಚಿತ್ತ ವೃತ್ತಿಯ ಬಲ್ಲೆ ಎನಗೆ ನೀ ಉತ್ತಮಗತಿ ಈಯೆ ಚಿತ್ತಶುದ್ದ ಬುದ್ಧಿಯಿತ್ತು ನೀ ಪಾಲಿಸಿ ಚಿತ್ತಜನಯ್ಯನಾ ಹತ್ತಿರಕೊಯ್ಯೆ 2 ಪಂಕಜ ಭವನ ರಾಣಿ ಗುಣಮಣಿ ಶಂಕರನಾ ಜನನಿ ಕಿಂಕರನೆಂದು ಮನ ಶಂಕೆಯ ಹರಿಸಿ ಶ್ರೀ ವೆಂಕಟೇಶನ ಪಾದಪಂಕಜ ತೋರಿಸೆ3
--------------
ಉರಗಾದ್ರಿವಾಸವಿಠಲದಾಸರು
ಭಾರತೀ ನೀ ಪರಿಪಾಲಿಸೇ ಪ ನಾರಿ ಶಿರೋಮಣಿ | ನಿರುತ ನಿನ್ನಯ ಪದವಾರಿಜ ಭಕುತಿಯ | ಗಾರು ಮಾಡದೆ ಕೊಡು ಅ.ಪ. ಉರು ವಿಕ್ರಮನಲಿ | ವರ ಭಕ್ತ್ಯುದಯಕೆಪರಮ ಕಾರಣಳೆಂ | ದರಿತು ನಿನ್ನ ಪದ |ಸರಸಿಜ ಭಜಿಸುವೆ | ಪರಮ ಕೃಪಾಕರೆತ್ವರ ಹರಿ ಭಕುತಿಯ | ಪಾರಿಪಾಲಿಪುದು 1 ವಿಪರೀತದ ಮತಿ | ಅಪಹರಿಸುತ ಬಲುಕೃಪೆಗೈದೆನ್ನಲಿ | ಅಪ ವರ್ಗದ ಹರಿವಿಪಗಮನನ ಸ | ದ್ದಪರೋಕ್ಷವ ಕೊಡುವಿಪ ಅಹಿಪತಿ ನುತೆ | ಅಪ್ರತಿ ಮಾತೆಯೆ 2 ಭೂವಲಯದಿ ನಿನಗಾವರಿಲ್ಲ ಸಮನೀ ವೊಲಿಯದಲಿ | ನಿನ್ನಾವರ ಕಾಣೆನುಮಾ ವಿನೋದಿ ಗುರು | ಗೋವಿಂದ ವಿಠಲನಪಾವನ ಪದವನು | ತೀವರ ತೋರಿಸು 3
--------------
ಗುರುಗೋವಿಂದವಿಠಲರು