ಒಟ್ಟು 1050 ಕಡೆಗಳಲ್ಲಿ , 96 ದಾಸರು , 850 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಿ ಕಡದೀತು ಎನ್ನ ಬೇಡಿ ಕಡದೀತು ಪ ಮೂಢ ಜನರ ಸಂಗ ತ್ಯಜಿಸಿ ಗೂಢವಾದ ಸಾಧುವೆನಿಸಿ ಅ.ಪ. ಘೋರ ಸಂಸಾರ ಬೇಡಿ ಆರು ಅಹಿತರೆನ್ನ ಕಾಡಿ ಗಾರು ಮಾಡಿ ಜಡಿಯ ಕೂಡಿ ಪಾರ ಮಾಡಿದೆನ್ನ ನೋಡಿ1 ಮೋಹಪಾಶದೊಂದು ಕಟ್ಟು ದೇಹವೆಲ್ಲ ತೊಡರಿ ಬಿಟ್ಟು ಗೇಹ ತೊಲಗದಂದ ಬಿಟ್ಟ ನೇಹ ತವಿಸೆ ಕರುಣವಿಟ್ಟು 2 ಭವ ಮೋಹ ಸುಡಲಿ ಉರಿವ ಕ್ಲೇಶಗಳು ಸಿಡೀಲಿ ಕೊರೆವ ಸಂಸ್ಕøತಿ ಜಾಲಕ ತೇಲಿ ನರಸಿಂಹವಿಠಲಾ ಕೊಡಲಿ 3
--------------
ನರಸಿಂಹವಿಠಲರು
ಬೇಡಿಕೆಗೆ ಮಿತಿಯಿಲ್ಲ ಬೇಡಿಕೆಗೆ ಕೊನೆಯಿಲ್ಲ ಬೇಡಿ ಬದುಕುವುದೊಂದು ರೋಗವಯ್ಯ ಪ ರೂಢಿಗೊಡೆಯನ ದಿವ್ಯನಾಮಗಳ ಕೊಂಡಾಡಿ ಹಾಡುವವಗೆ ರೋಗಭಯವಿಲ್ಲವಯ್ಯಾ ಅ.ಪ ಬೇಡುವವ ಮನೆಮನೆಗೆ ಓಡೋಡಿ ನಿಲಬೇಕು ನಾಡಿಗರ ನೋಡಿ ಕೈ ನೀಡಬೇಕು ನೋಡಿದರೆ ಕಟ್ಟಾಳು ಬೇಡುವೆ ಹೋಗತ್ತ ದುಡಿ ಗೇಡಿ ಎಂದಾಗ ಗೋಳಾಡಲೇಕಯ್ಯ 1 ಕಂಡ ಕಂಡವರಿಗೆಲ್ಲ ಕೈಮುಗಿದು ಮಂಡೆಯ ಬಾಗಿ ಭಂಡನೆಂದೆನಿಸುವುದು ಮಾನಭಂಗ ಪುಂಡರೀಕಾಕ್ಷ ಗೋವಿಂದ ನಾಮವ ಹಾಡಿ ಕೊಂಡಾಡಲೊದಗುವನು ಮಾಂಗಿರಿಯರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಿಕೊಂಬುವೆನಯ್ಯ ಬೇಗ ಬಾರಯ್ಯ ಮಾಡು ಎನ್ನೊಳೂ ದಯ ಪಂಢರಿರಾಯ ಪ ನಾಶನ ಜಗದೊಳಗೆ ಭಾಷಗಡಕನು ಆಗಿ ಸಾಸಿರೊರುಷಿರ್ದೇನು ಹೇ ಈ ಜನುಮ ಶೇಷನಯನನೆ ನಿನ್ನ ದಾಸನ ಅತಿಶಯ ದೋಷವನು ಗಣಿಸದೆ ಪೋಷಿಸೈ ಈಶ 1 ಅರಿದರಿದು ಪತಂಗ ಉರಿಯೊಳಗೆ ಬೀಳ್ವಂತೆ ಖರೆಯ ಈ ಸಂಸಾರ ಸ್ಥಿರವೆಂದು ನಂಬಿ ಪರಿಪರಿಯ ಪಾಪಂಗಳಿರಯದೆ ಮಾಡಿ ನಾ ನರಕಕ್ಕೆ ಗುರಿಯಾದೆ ಪೊರೆಯೊ ಶ್ರೀ ಹರಿಯೆ 2 ಸಿಂಧುಶಯನನೆ ಎನ್ನ ಮಂದಮತಿಯತನದ ಲಿಂದ ಮಾಡಿದ ಪಾಪ ಚಿಂದಿಸೈ ಬೇಗ ಹಿಂದಕಾದದ್ದಾಯ್ತು ಮುಂದೆ ಎನ್ನಯ ಬವಣಿ ಚಂದಾಗಿ ತಿದ್ದಯ್ಯ ತಂದೆ ಶ್ರೀರಾಮ 3
--------------
ರಾಮದಾಸರು
ಬೇಡಿಕೊಂಬೆಗೋಪಾಲ ಬೇಡುವೆನೈ ದಯ ಪ ಮಾಡಿ ಎನ್ನೊಳು ಬೇಗ ಗಾಢ ಮಹಿಮ ವರ ನೀಡೋ ಕೃಪಾಂಬುಧೇ ಅ.ಪ ಮರುಳನಾಗಿ ನಾನು ತಿರುಗುವೆ ಧರೆಯೊಳು ಸಿರಿವರ ನಿಮ್ಮಯ ಚರಣವ ಸ್ಮರಿಸದೆ ಪರಿ ನರಕಕ್ಕೆ ಗುರಿಯಾದೆ ಮುರಹರ ಕರುಣದಿಂ ಮನ್ನಿಸಿ ಪೊರೆ ಸುರವರ 1 ದೀನದಯಾಪರ ಜಾನಕೀ ಮನೋಹರ ನೀನೆ ಗತಿಯೆಂದು ಧ್ಯಾನಿಸಿ ಬೇಡುವೆ ಹೀನನ ಮಾಡದೆ ಧ್ಯಾನಿಪ ಭಕ್ತನಂ ಮಾನದಿಂ ರಕ್ಷಿಸು ವೇಣುಧರಹರಿ2 ಸುರುಪರೀಶ ಹರಿ ಚರಣದಾಸರ ಮೊರೆ ಕರುಣದಿ ಆಲಿಸಿ ಕರಪಿಡಿದು ಪೊರೆ ನೆರೆನಂಬಿದೆ ನಿಮ್ಮ ಚರಣವ ಪರಿಪರಿ ಪರಮಪಾವನ ಮಾಡು ಸಿರಿವರ ಶ್ರೀರಾಮ 3
--------------
ರಾಮದಾಸರು
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ ಕದಿಮೋಸ ಮನವನು ನಂಬಿ ಬಾಳುವೆನೆಂತು ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1 ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2
--------------
ಸಂಪತ್ತಯ್ಯಂಗಾರ್
ಬೇಡಿಕೊಂಬೆನೊ ಗೋಪಾಲ ನಿನ್ನ ಬೇಡಿಕೊಂಬೆ ಕರಗಳೆರೆಡ ಪ ಜೋಡಿಸಿ ನಿನ್ನೊಳು ಸುದೃಢ ಭಕುತಿ ಮಾಡಿ ಸತತ ಭಜಿಸುವಂಥ ರೂಢಿ ಎನಗೆ ಕೊಡು ನೀನೆಂದು ಅ.ಪ ಕ್ಲೇಶಪಡಿಸದೆ ಸಲಹೆನ್ನ ಜಗಂಗಧೀಶ ಮರೆಯದೆ ಬಾರದ್ಯಾಕೊ ಕರುಣ ಲೇಶಗುಣನಿಧೆ ಆಶಾಪಾಶ ಬದ್ಧನಾಗಿ ದೇಶ ದೇಶ ತಿರುಗಿ ಕರುಣ ದುರುಳ ವಸುಮತೀಶರೊಳ್ ಬೇಡಿಸದಂತೆ 1 ಇಂದುವzನÀನೆ ಮುನಿವರ್ಯಹೃದರ ವಿಂದಸದನೆ ವರಗೋಪಯುವತಿ ಬೃಂದಮದನನೆ ಇಂದಿರೇಶ ನಿನ್ನ ಪಾದಾರವೃಂದಗಳನು ಹೃದಯವೆಂಬೊ ಮಂದಿರದೊಳಗೆ ನಿಲ್ಲಿಸಿ ಚಿದಾ- ನಂದಮೂರ್ತಿಯ ಪೂಜಿಪೆನೆಂದು 2 ಧೀರ ಚರಣನೆ ಮುರಾರಿ ಧರಣಿ ಭಾರಹರಣನೆ ಭುಜಗೇಶಫಣಿ ವಿದಾರಿ ಚರಣನೆ ಮಾರಜನಕ ನೀರಜಾಕ್ಷ ನಾರಸಿಹ್ಮ ನಾಮಗಿರೀಶ ಸಾರ ಎನಗೆ ತಿಳಿಬೇಕೆಂದು 3
--------------
ವಿದ್ಯಾರತ್ನಾಕರತೀರ್ಥರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು
ಬೇಡಿಕೋತೆ ಕೇಳಿ ನೋಡಿ ನಿಜಬಾಳಿ ಗೂಢಗುರುತವ ಮನಗಂಡು ನೆಲೆಗೊಳ್ಳಿ 1 ಒಂದಕೊಂದು ಮಾಡಿ ಒಂದು ಪಥಗೂಡಿ ಹಿಂದ ಮುಂದೆ ನೋಡುವ ಸಂದೇಹವೀಡಾಡಿ 2 ಅರ್ತುಕೊಳ್ಳಿ ಖೂನ ತ್ವರಿತ ಗುರುಜ್ಞಾನ ಕರ್ತು ಮಹಿಪತಿಸ್ವಾಮಿದೋರುವ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಡಿಗೊಂಬೆನೊ ದೇವ ಮಹಾನುಭಾವ ಪ ಮೂಡಲುಗಿರಿವಾಸ ಶ್ರೀ ಶ್ರೀನಿವಾಸ ಅ.ಪ ನಾನಾ ಯೋನಿಗಳಲಿ ನಾ ಬಂದು ನೊಂದೆನೋ ನೀನೇ ಸಲಹಬೇಕೋ ಎನಗೆ ಜನುಮವು ಸಾಕೊ 1 ತನುವೂ ಮನಗಳನ್ನೂ ನಿನಗರ್ಪಿಸಿದೆನೊ ವನಜಾಕ್ಷ ಬಿಡಿಸು ಸಿಕ್ಕುಯೆನಗೆ ನೀನೇ ದಿಕ್ಕು 2 ಮಾನಾಪಮಾನವು ನಿನ್ನದು ಎನಗೇನೊ ದೀನ ಜನರ ಪಾಲ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಬೇಡಿದರೆ ನೀಡುವುದೇನು ಹಿರಿದೆ ಗೋವಿಂದ ಬೇಡದೆ ನೀಡೆ ನಿನ್ನಂತಸ್ತಿಗತಿಚೆಂದ ಪ ನೀಡುವನು ನೀನಿರಲು ಬೇಡಿಕೆಗೆ ಕೊನೆಯುಂಟೆ ಬೇಡಿ ಬೇಸತ್ತರೂ ಆಸೆಯಿಂಗುವುದುಂಟೆ ಬೇಡಿದಮಣಿ ನೂರುಜನುಮ ಸಾಕಹುದುಂಟೆ ಬೇಡದೇ ಭಜಿಪವಗೆ ಹುಟ್ಟು ಸಾವುಗಳುಂಟೆ 1 ಹಿಂದೆ ನೀನಿತ್ತುದನು ಇಂದುಣುತಲಿಹೆವಯ್ಯ ಮುಂದೆ ನಾನುಣಲೇನು ಬೇಡವಯ್ಯ ಸಂದಿರ್ಪುವೈ ಸಾಲಸೋಲಂಗಳೇನಯ್ಯ ಮುಂದೇನು ಬೇಡ ಮಾಂಗಿರಿವಾಸ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಿದವರಿಗೆ ದೊರೆವುದೇನೆಲೊ ಸಜ್ಜನರ ಸಂಗ ಬೇಡಿದವರಿಗೆ ದೊರೆವುದೇನೆಲೊ ಪ ಬೇಡಿದವರಿಗೆ ದೊರೆವುದೇನೆಲೊ ಗಾಢಮಹಿಮನ ಭಕ್ತರಾವಾಸ ಸುಕೃತ ಫಲವು ಕೂಡಿಬಂದ ಕೋವಿದರಿಗಲ್ಲದೆ ಅ.ಪ ದೃಢಕರಡಿಯಿಟ್ಟ ಭುವನವೆ ಕ್ಷೇತ್ರ ದೃಢಕ ಜನರಡಿಯೇ ಸುಯಾತ್ರಾ ಸಿದ್ಧ್ದಾಂತ ಮಾತಿದು ದೃಢಕರಾಡಿದ ಮಾತೆ ನಿಜಮಂತ್ರ ಇದೆ ಮೂಲಶಾಸ್ತ್ರ ದೃಢಕರು ನಿಂತ ಸ್ಥಳವೆ ಬದರಿ ದೃಢಕರು ಕೂತಸ್ಥಾನ ಮಧುರೆ ದೃಢಕರೊಟನಾಟ ಲಭ್ಯವೆಂದರೆ ಪಡೆದ ಪುಣ್ಯ ಮಹಭಾಗ್ಯಗಲ್ಲದೆ 1 ಭಕ್ತ ಜನಮಿಂದದೆ ತೀರ್ಥವು ನಿಖಿಲರರಿವುದೆ ಭಕ್ತ ಜನರುಂಡಸ್ಥಳ ಸಿರಿಯಾವಾಸವು ದೊರೆಯದಾರಿಗೆ ಭಕ್ತ ದರ್ಶನ ಪರಮ ಮಂಗಲವೋ ಶುಭಕೆ ಶುಭಕರವು ಭಕ್ತಜನರಿಹ್ಯ ಸಭೆಯೆ ಹರಿಸಭೆ ಭಕ್ತರೊಪ್ಪಿಗೆ ಹರಿಯ ಒಪ್ಪಿಗೆ ಮೃತ್ಯುದೂರ ಮಾಳ್ಪ ಸರ್ವೋತ್ತಮನ ಭಕ್ತರ ಪ್ರೇಮದೊಲುಮೆ 2 ದಾಸರ್ವಾಸವೆ ಕಾಶಿಕೇಂದ್ರವು ಸತ್ಯ ಸತ್ಯವಿದು ದಾಸರಿರುವುದೆ ಪರಮ ವೈಕುಂಠವು ಮತ್ರ್ಯರರಿವುದೆ ದಾಸಗಿತ್ತದ್ದು ಹರಿಗೆ ಅರ್ಪಣವು ಪರಮ ಸುಖಕರವು ದಾಸರೊರ್ಣವು ತೀರದಾರಿಗೆ ಶ್ರೀಶ ಶ್ರೀರಾಮನಡಿಯಕಮಲ ದಾಸರಿಜನರಡಿ ಪಿಡಿದು ಸುಸಹ ವಾಸದಿರುವುದೆ ಮುಕ್ತಿಸಂಪದ3
--------------
ರಾಮದಾಸರು
ಬೇಡಿದೆನು ಕೊಡುಕಂಡ್ಯ ಬೇಡಿದೆನು ಕೊಡುಕಂಡ್ಯಬೇಡಿದೆನು ನೀ ನೀಡು ಕಂಡ್ಯಾ ಪ ನಿನ್ನ ಹಾಡನು ಹಾಡಿ ನಿನ್ನ ನಿಜದೊಳಗಾಡಿನಿನ್ನನೇ ಕಾಡಿ ನಿನ್ನನೇ ಬೇಡಿನಿನ್ನ ಓಲಗವ ಮಾಡಿ ನಿನ್ನ ನಿಟ್ಟಿಸಿ ನೋಡಿನಿನ್ನ ಲೀಲೆಯೊಳು ನಾನಿರುತಿಹುದದನಾ 1 ನೋಟದೊಳಗಿನ ನೋಟ ಕೂಟದೊಳಗಿನ ಕೂಟಆಟದೊಳಗಿನ ಆಟ ಇಂಥ ಆಟನೀಟದೊಳಗಿನ ನೀಟ ನಿನ್ನಲ್ಲಿ ಬೆರೆದಾಟಪಾಟ ಮಾಡಿಯೆ ಎನಗೆ ಪಾಲಿಸುವುದನ2 ಶರೀರದಿಚ್ಚೆಯನುಳಿದು ಶರೀರ ವಾಸನೆ ಕಳೆದುಶರೀರ ವಿಷಯದ ಹೊಲಬೆಲ್ಲ ಬಳಿದುಶರೀರದ ನೆಲೆಯು ತಿಳಿದು ಶರೀರದೊಳೊಬ್ಬನನುಳಿದುಶರೀರದ ಸಂಗ ದೊರಕದಿಹದದನಾ 3 ನಾದಲಕ್ಷಿಸಿ ಹಿಡಿದು ನಾದ ಸಂಗವ ಪಡೆದುನಾದಾಮೃತವ ಕಿವಿತುಂಬ ಕುಡಿದುನಾದ ದಾರಿಯ ನಡೆದು ನಾದ ದೊಳ್ವೆಳ ಗೊಡದುನಾದವನೆ ಮರೆತು ಸುಖಿಸುತಿಹದದನ 4 ನಿನ್ನ ನೀನುಳಿದಿಲ್ಲ ನೀ ದೈವ ಜಗಕೆಲ್ಲನಿನ್ನಂತೆ ಆಪ್ತರಿಲ್ಲ ನಿನ್ನ ನಂಬಿದೆನಲ್ಲನೀ ಕಾಯಬೇಕಲ್ಲ ಚೆನ್ನ ಚಿದಾನಂದನೆನೆಹಂಬತಾತ್ವಿಕ ಹಿನ್ನೆಲೆಯ ಕೀರ್ತನೆಗಳುದದನಾ 5
--------------
ಚಿದಾನಂದ ಅವಧೂತರು
ಬೇಡಿದ್ದು ಕೊಡಬಾರದೇನೊ ಬ್ಯಾಡಾದದ್ದು ಕೊಟ್ಟರೆ ಮಾಡಬೇಕೇನೊ ಪ ಯೆನಗದು ಬೇಕಾಗಿಲ್ಲ ಹಂಸರೂಪವ ಕಾಣಲಿಲ್ಲ 1 ಶ್ರಮ ಪಡಲಾರೆನಿನ್ನು ಅಡಿಗಳಿಗೆರಗುವೆ ಕೊಡು ಮತಿಯನ್ನು2 ಮಾಡಿಕೊಂಡು ಮೆರೆವೆನೆಂಬುವರೊ ನಿನ್ನ ಮುಖವನ್ನು ತೋರೊ 3 ಚಾರು ತೋರದಿರುವರೆ ಮುಕುಂದ ಮುರಾರೆ 4 ಅನುಭವಿಸಿದ್ದು ಸಾಕಿನ್ನು ವಿಠಲನೆ ಕೊಡು ಮುಕ್ತಿಯನ್ನು5
--------------
ಹನುಮೇಶವಿಠಲ
ಬೇಡುವರೋ ಬೇಡುಣುತಿಹ್ಯರೋ ಬೇಡಿ ಬೇಡದಂತೆ ನಾಡೊಳ್ಹರಿದಾಸರು ಪ ಕೊಟ್ಟರೆ ಶ್ಲಾಘನೆ ಮಾಡರೊ ಕೊಡದಿದ್ದರೆ ಸಿಟ್ಟಿಗೆ ಬಾರರೊ ಕೊಟ್ಟಕೊಡವದರೆಲ್ಲ ಅಷ್ಟೆಯೆಂದೆನ್ನುತ ಸೃಷ್ಟಿಗೀಶನ ಘಟ್ಟ ತಿಳಿದಿಹ್ಯರೂ 1 ಸಂಚಿತದಿಂ ಜನ್ಮ ತಾಳಿಹ್ಯರೂ ವಿ ರಂಚಿಪಿತಗೆ ಭಾರಹೊರಿಸಿಹ್ಯರೊ ಹಂಚಿಕಿಯಿಂದ ನಿರ್ವಂಚಿತರಾಗಿ ಬಂದ ಸಂಚಿತಾದಡಾಗಮ ಗೆಲಿಯುವರೊ 2 ಕಾಮಿತಗಳೆಲ್ಲ ಕಡೆದಿಹ್ಯರು ಈ ಭೂಮಿಸುಖಕೆ ಮನಮೋಹಿಸರೊ ನೇಮದಿಂದ ಮಹ ಕ್ಷೇಮವಾರಿಧಿ ಸ್ವಾಮಿ ಶ್ರೀರಾಮ ಪಾದಕ್ಹೊಂದಿಹ್ಯರೊ 3
--------------
ರಾಮದಾಸರು
ಬೇಡುವೆ ನಾ ಯಾದವಾ ಬÉೂೀತಿ ಮನದ ಮೋಹವಾ ಓಡಿಸುತಲಿ ಮಾಧವಾ ನಿನ್ನ ಸೇರಿಕೊಂಬುವಾ ನೀಡು ಇನಿತು ಭಾಗ್ಯವಾ ನಾನು ಇದುವೆ ನನ್ನದು ಮಾನವಗಿದು ಪಾಶವು ದೀನಬಂಧು ಇವನು ನೀ ಮಾಣದೆ ಬಿತಿಸೈ ಪ್ರಭೋ ಬೇಡಿಕೊಂಬೆ ಹೇ ವಿಭೋ ನೀನೆ ಪರಮಸದ್ಗುರು ಹೃದಯದಲ್ಲಿ ನೆಲೆಸಿದಾ ಆತ್ಮರೂಪವನು ಸದಾ ಮುದದಿ ತಿಳಿಯುವಂತೆ ನೀ ಸನ್ಮತಿ ದಯಪಾಲಿಸೈ ಸದಮಲಾತ್ಮಶಂಕರಾ ಬೇಡುವೆ ನಿನಗೀಶ್ವರಾ
--------------
ಶಂಕರಭಟ್ಟ ಅಗ್ನಿಹೋತ್ರಿ